ವಿಷ್ಣುಸ್ವರೂಪ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮಾಧ್ಯಮದಿಂದ ಕಾರ್ಯನಿರತ ಶ್ರೀವಿಷ್ಣುವಿನ ಇಚ್ಛೆ, ಕ್ರಿಯಾ ಮತ್ತು ಜ್ಞಾನ ಶಕ್ತಿಗಳ ಆಧ್ಯಾತ್ಮಿಕ ಗುಣವೈಶಿಷ್ಟ್ಯಗಳು !

೧. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮಾಧ್ಯಮದಿಂದ ಶ್ರೀವಿಷ್ಣುವಿನ ಇಚ್ಛಾ, ಕ್ರಿಯಾ ಮತ್ತು ಜ್ಞಾನ ಶಕ್ತಿಗಳು ಕಾರ್ಯನಿರತವಾಗಿರುವುದು

ವಿಷ್ಣುಸ್ವರೂಪ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಪೃಥ್ವಿಯಲ್ಲಿ ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಕಾರ್ಯನಿರತರಾಗಿದ್ದಾರೆ. ಅದಕ್ಕಾಗಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಬ್ರಹ್ಮಾಂಡದಲ್ಲಿನ ಸಂಪೂರ್ಣ ದೈವೀ ಶಕ್ತಿಗಳ ಬಲವು ಪ್ರಾಪ್ತವಾಗಿದ್ದು ಅವರು ಶ್ರೀವಿಷ್ಣುವಿನ ಇಚ್ಛಾ, ಕ್ರಿಯಾ ಮತ್ತು ಜ್ಞಾನ ಈ ಮೂರು ರೀತಿಯ ಶಕ್ತಿಗಳ ರೂಪದಲ್ಲಿ ಪೃಥ್ವಿಯಲ್ಲಿ ಕಾರ್ಯನಿರತವಾಗಿವೆ.

೧ ಅ. ವಿವಿಧ ದೇವತೆಗಳ ಮಾರಕ ಶಕ್ತಿಯು ಶ್ರೀವಿಷ್ಣುವಿನ ಇಚ್ಛಾಶಕ್ತಿಯೊಂದಿಗೆ ಜೊತೆಗೂಡಿ ಪಾತಾಳದಲ್ಲಿನ ಕೆಟ್ಟ ಶಕ್ತಿಗಳೊಂದಿಗೆ ಸೂಕ್ಷ್ಮದಿಂದ ಘೋರ ಯುದ್ಧ ಮಾಡುತ್ತಿವೆ : ಈ ಅವತಾರಿ ಕಾರ್ಯಕ್ಕೆ ಪಾತಾಳ ಮತ್ತು ನರಕದಲ್ಲಿನ ಬಲಿಷ್ಠ ಕೆಟ್ಟ ಶಕ್ತಿಗಳು ಸೂಕ್ಷ್ಮ ಸ್ತರದಲ್ಲಿ ಬಹಳಷ್ಟು ಪ್ರಮಾಣದಲ್ಲಿ ವಿರೋಧಿಸುತ್ತಿವೆ. ಅವುಗಳೊಂದಿಗೆ ಹೋರಾಡಲು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಲ್ಲಿ ವಿವಿಧ ದೇವತೆಗಳ ಮಾರಕ ಶಕ್ತಿಯು ಶ್ರೀವಿಷ್ಣುವಿನ ಇಚ್ಛಾಶಕ್ತಿಯೊಂದಿಗೆ ಜೊತೆಗೂಡಿ ಅವು ಪಾತಾಳದಲ್ಲಿನ ಕೆಟ್ಟ ಶಕ್ತಿಗಳೊಂದಿಗೆ ಸೂಕ್ಷ್ಮದಿಂದ ಘೋರ ಯುದ್ಧವನ್ನು ಮಾಡುತ್ತಿವೆ.

ಸುಶ್ರೀ (ಕು.) ಮಧುರಾ ಭೋಸಲೆ

೧ ಆ. ಶ್ರೀವಿಷ್ಣುವಿನ ಕ್ರಿಯಾಶಕ್ತಿಯಿಂದ ವಿವಿಧ ದೇವತೆಗಳ ಆರಾಧಕರಾಗಿರುವ ಪೃಥ್ವಿ ಮತ್ತು ವಿವಿಧ ಲೋಕಗಳಲ್ಲಿನ ಸಾತ್ತ್ವಿಕ ಜೀವಗಳಿಂದ ಸನಾತನ ಸಂಸ್ಥೆ ಮತ್ತು ಅವುಗಳಿಗೆ ಸಂಬಂಧಿಸಿದ ಸಂಸ್ಥೆಗಳೊಂದಿಗೆ ಜೊತೆಗೂಡಿ ಪೃಥ್ವಿಯಲ್ಲಿ ವಿಹಂಗಮ ಗತಿಯಿಂದ ಧರ್ಮಪ್ರಸಾರ ಮತ್ತು ಅಧ್ಯಾತ್ಮಪ್ರಸಾರವಾಗುತ್ತಿದೆ ಮತ್ತು ಹಿಂದೂ ರಾಷ್ಟ್ರದ ಅಡಿಪಾಯ ಸಿದ್ಧವಾಗುತ್ತಿದೆ : ಅದೇ ರೀತಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಂದ ಶ್ರೀವಿಷ್ಣುವಿನ ಕ್ರಿಯಾಶಕ್ತಿಯೂ ಕಾರ್ಯನಿರತವಾಗಿದೆ. ಆದ್ದರಿಂದ ವಿವಿಧ ದೇವತೆಗಳ ಉಪಾಸನೆ ಮಾಡುವ ಪೃಥ್ವಿಯ ಮನುಷ್ಯರು ಮತ್ತು ಬ್ರಹ್ಮಾಂಡದಲ್ಲಿನ ವಿವಿಧ ಉಚ್ಚ ಲೋಕಗಳಲ್ಲಿ ವಾಸಿಸುವ ಸಾತ್ತ್ವಿಕ ಜೀವಗಳು ಮತ್ತು ಆಧ್ಯಾತ್ಮಿಕ ಉನ್ನತವಾಗಿರುವ ಸನಾತನ ಸಂಸ್ಥೆಗೆ ಸಂಬಂಧಿಸಿದ ಮತ್ತು ಸಮವಿಚಾರಿ ಸಂಸ್ಥೆಗಳೊಂದಿಗೆ ಜೊತೆಗೂಡುತ್ತಿದ್ದಾರೆ. ಆದ್ದರಿಂದ ಪೃಥ್ವಿಯಲ್ಲಿ ಧರ್ಮಪ್ರಸಾರ ಮತ್ತು ಅಧ್ಯಾತ್ಮಪ್ರಸಾರವು ವಿಹಂಗಮ ಪದ್ಧತಿಯಿಂದ ನಡೆಯುತ್ತಿದೆ. ಅದರ ಪರಿಣಾಮದಿಂದ  ಸಂಪೂರ್ಣ ಪೃಥ್ವಿಯಲ್ಲಿ ಧರ್ಮಾಧಿಷ್ಠಿತ ಮತ್ತು ಆಧ್ಯಾತ್ಮಿಕ ಸ್ತರಗಳಲ್ಲಿ ಸ್ಥಾಪಿಸಲಾಗುವ ಹಿಂದೂ ರಾಷ್ಟ್ರದ ಅಡಿಪಾಯವು ಸಿದ್ಧವಾಗುತ್ತಿದೆ.

೧ ಇ. ಶ್ರೀವಿಷ್ಣುವಿನ ಜ್ಞಾನಶಕ್ತಿಯಿಂದ ವಿವಿಧ ದೇವತೆಗಳ ಜ್ಞಾನಶಕ್ತಿ ಪೃಥ್ವಿಯಲ್ಲಿ ಕಾರ್ಯನಿರತವಾಗಿ ಸನಾತನ ಸಂಸ್ಥೆಯ ಗ್ರಂಥಸಂಪತ್ತಿನ ರೂಪದಲ್ಲಿ ಸಾಕಾರಗೊಂಡು ಪೃಥ್ವಿಯಲ್ಲಿ ದಿವ್ಯ ಜ್ಞಾನಗಂಗೆ ಪ್ರವಹಿಸುತ್ತಿದೆ : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಲ್ಲಿ ಶಿವ, ಶ್ರೀ ಸರಸ್ವತಿ ದೇವಿ, ಬ್ರಹ್ಮದೇವ ಮತ್ತು ಶ್ರೀವಿಷ್ಣು ಇವರ ಜ್ಞಾನಶಕ್ತಿಯು ನಿರ್ಗುಣ ಸ್ತರದಲ್ಲಿ ಕಾರ್ಯನಿರತವಾಗಿದೆ. ಆದ್ದರಿಂದ ಸನಾತನ ಸಂಸ್ಥೆಯಿಂದ ಧರ್ಮಶಾಸ್ತ್ರ ಮತ್ತು ಅಧ್ಯಾತ್ಮಶಾಸ್ತ್ರದ ಬಗೆಗಿನ ಸ್ಥೂಲ ಮತ್ತು ಸೂಕ್ಷ್ಮ ಹೀಗೆ ಎರಡೂ ಸ್ತರಗಳಲ್ಲಿನ ಜ್ಞಾನದಿಂದ ಪರಿಪೂರ್ಣವಾಗಿರುವ ಗ್ರಂಥಗಳು ರಚನೆಯಾಗುತ್ತಿವೆ. ಸನಾತನದ ಗ್ರಂಥರೂಪಿ ಜ್ಞಾನಸಂಪತ್ತಿನ ಮಾಧ್ಯಮದಿಂದ ಪೃಥ್ವಿಯಲ್ಲಿ ಸರಸ್ವತಿದೇವಿಯ ದಿವ್ಯ ಜ್ಞಾನದಿಂದ ಪರಿಪೂರ್ಣವಾಗಿರುವ ಜ್ಞಾನಗಂಗೆಯೇ ಪ್ರವಹಿಸುತ್ತಿದ್ದಾಳೆನೋ, ಎನ್ನುವಂತಾಗಿದೆ !

೨. ವಿಷ್ಣುಸ್ವರೂಪ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಲ್ಲಿ ಕಾರ್ಯನಿರತ ೩ ರೀತಿಯ ಶಕ್ತಿಗಳ ಆಧ್ಯಾತ್ಮಿಕ ಗುಣವೈಶಿಷ್ಟ್ಯಗಳು !

೩. ಕೃತಜ್ಞತೆ

‘ಶ್ರೀವಿಷ್ಣುಸ್ವರೂಪ ಗುರುದೇವರ ಕೃಪೆಯಿಂದ ಶ್ರೀವಿಷ್ಣುವಿನ ಇಚ್ಛೆ, ಕ್ರಿಯೆ ಮತ್ತು ಜ್ಞಾನ ಈ ಮೂರೂ ಶಕ್ತಿಗಳ ಸಂದರ್ಭದಲ್ಲಿನ ಅಮೂಲ್ಯ ಜ್ಞಾನಅಂಶಗಳು ಪ್ರಾಪ್ತವಾದವು. ಅದಕ್ಕಾಗಿ ನಾರಾಯಣಸ್ವರೂಪ ಗುರುಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆ ಅರ್ಪಿಸುತ್ತೇನೆ.’

– ಸುಶ್ರೀ ಮಧುರಾ ಭೋಸಲೆ (ಆಧ್ಯಾತ್ಮಿಕ ಮಟ್ಟ ಶೇ. ೬೫), ಸನಾತನ ಆಶ್ರಮ, ರಾಮನಾಥಿ, ಗೋವಾ. (ಜ್ಞಾನ ದೊರಕಿದ ಮತ್ತು ಬೆರಳಚ್ಚು ಮಾಡಿದ ದಿನಾಂಕ ಮತ್ತು ಸಮಯ ೫.೧೦.೨೦೨೫, ಬೆಳಗ್ಗೆ ೯.೫೦ ರಿಂದ ೧೦))