ಇಂದು ದೇಶದ ೫ ಸಾವಿರ ತಾಲೂಕುಗಳಲ್ಲಿ ರಾಷ್ಟ್ರವ್ಯಾಪಿ ಗೋಹತ್ಯೆ ನಿಷೇಧ ಕಾಯ್ದೆಗಾಗಿ ಮನವಿ ಸಲ್ಲಿಕೆ!

ಮಥುರಾ (ಉತ್ತರ ಪ್ರದೇಶ) – ಜಿಲ್ಲೆಯ ವೃಂದಾವನದಲ್ಲಿ ಏಪ್ರಿಲ್ ೨೬ ರಂದು ಗೋಸಮ್ಮಾನ್ ಆವಾಹನ್ ಅಭಿಯಾನದ ನೇತೃತ್ವದಲ್ಲಿ ಪ್ರಮುಖ ಪತ್ರಿಕಾಗೋಷ್ಠಿಯನ್ನು ಆಯೋಜಿಸಲಾಗಿತ್ತು. ನಾಳೆ, ಏಪ್ರಿಲ್ ೨೭ ರಂದು ಗೋಹತ್ಯೆಯನ್ನು ನಿಷೇಧಿಸುವ ರಾಷ್ಟ್ರವ್ಯಾಪಿ ಕಾಯ್ದೆಯನ್ನು ಜಾರಿಗೆ ತರುವಂತೆ ಕೋರಿ ದೇಶಾದ್ಯಂತ ೫ ಸಾವಿರ ತಾಲೂಕು ಕಚೇರಿಗಳಲ್ಲಿ ಬೆಳಿಗ್ಗೆ ೧೦ ರಿಂದ ೧೧ ರವರೆಗೆ ಮನವಿಗಳನ್ನು ಸಲ್ಲಿಸಲಾಗುವುದು. ಪ್ರತಿಯೊಂದು ತಾಲೂಕಿನ ಸ್ಥಳೀಯ ನಾಗರಿಕರು, ಸಂತ-ಮಹಂತರು, ಸಮಾಜ ಸೇವಕರು, ಗಣ್ಯರು, ಗೋಪಾಲಕರು ಮತ್ತು ಗೋಭಕ್ತರ ಸಹಿ ಇರುವ ಮನವಿ ಪತ್ರಗಳನ್ನು ಸಂಬಂಧಪಟ್ಟ ಉಪವಿಭಾಗಾಧಿಕಾರಿಗಳ ಮೂಲಕ ರಾಷ್ಟ್ರಪತಿ, ಪ್ರಧಾನ ಮಂತ್ರಿ, ರಾಜ್ಯಪಾಲರು ಹಾಗೂ ರಾಜ್ಯದ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ವಕ್ತಾರರು!
ಪ. ಪೂ. ಶ್ರೀ ಬಲರಾಮದಾಸ್ ಮಹಾರಾಜ್, ಶ್ರೀ ಸನತ್ ಕುಮಾರ್ ಶರಣ್ ದಾಸ್ ಜಿ, ಚತುರ್ ಸಂಪ್ರದಾಯದ ಅಧ್ಯಕ್ಷರಾದ ಮಹಂತ್ ಶ್ರೀ ಸಚ್ಚಿದಾನಂದ್ ಜಿ, ಚಿತ್ರ ಸಂಪ್ರದಾಯದ ಮಾಜಿ ಅಧ್ಯಕ್ಷರಾದ ಮಹಂತ್ ಶ್ರೀ ಸುಂದರ್ ದಾಸ್ ಜಿ, ಸಿಂಹಪೋರ್ ಹನುಮಾನ್ ಮಂದಿರದ ಮಹಂತ್ ಶ್ರೀ ಭಾಸ್ಕರ್ ಆನಂದ್ ಜಿ, ಶ್ರೀ ಗೋಪೇಶ್ ನಾಥ್ ಚತುರ್ವೇದಿ ಜಿ, ಬಾಬಾ ಸುಖದೇವ್ ದಾಸ್ ಜಿ, ಭಾಗವತ್ ನಿವಾಸ್ ನೀಲಮಣಿ ದಾಸ್ ಜಿ. ಇದಲ್ಲದೆ ಹಲವಾರು ಸಂತರು, ಮಹಂತರು, ಸಾಮಾಜಿಕ ಕಾರ್ಯಕರ್ತರು, ಗೋರಕ್ಷಕರು ಮತ್ತು ಗೋಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!