
ಮಾಸ್ಕೋ (ರಷ್ಯಾ) – ಅಮೆರಿಕವು ರಷ್ಯಾಕ್ಕೆ ತನ್ನ ತೈಲವನ್ನು ಮಾರಾಟ ಮಾಡಲು ಸಡಿಲಿಕೆ ನೀಡಿತ್ತು; ಆದರೆ ಇದರಿಂದ ಆಕ್ರೋಶಗೊಂಡ ಉಕ್ರೇನ್ ರಷ್ಯಾದ ತೈಲ ಸಂಸ್ಕರಣಾ ಘಟಕಗಳ ಮೇಲೆ ದಾಳಿ ಮಾಡಿದೆ. ಏಪ್ರಿಲ್ ೧೮ ರಂದು ಮುಂಜಾನೆ ಉಕ್ರೇನ್ ರಷ್ಯಾದ ಹಲವು ದೊಡ್ಡ ತೈಲ ಸಂಸ್ಕರಣಾ ಘಟಕಗಳು ಮತ್ತು ಇಂಧನ ಕೇಂದ್ರಗಳ ಮೇಲೆ ಡ್ರೋನ್ ಮೂಲಕ ದಾಳಿ ನಡೆಸಿತು. ಈ ದಾಳಿಗಳಿಂದಾಗಿ ಅನೇಕ ಕಡೆ ಬೆಂಕಿ ಕಾಣಿಸಿಕೊಂಡು ಆತಂಕದ ವಾತಾವರಣ ಉಂಟಾಯಿತು.
🔥 Ukraine strikes Russian oil refineries with drones! 🇺🇦💥🇷🇺
Russia’s Defence Ministry has not directly confirmed the refinery hits, but says its air defence systems intercepted 258 Ukrainian drones overnight. 🚁⚡
Meanwhile, the U.S. had extended concessions allowing Russia… pic.twitter.com/IlMGtkJXt0
— Sanatan Prabhat (@SanatanPrabhat) April 20, 2026
ಉಕ್ರೇನ್‌ನ ‘ಡ್ರೋನ್ ಫೋರ್ಸ್’ನ ಕಮಾಂಡರ್ ರಾಬರ್ಟ್ ಮದ್ಯಾರ್ ಬ್ರೋವ್ಡಿ ಅವರು ಟೆಲಿಗ್ರಾಂನಲ್ಲಿ ಮಾಹಿತಿ ನೀಡುತ್ತಾ, ಈ ದಾಳಿಗಳಲ್ಲಿ ರಷ್ಯಾದ ಸಮರಾ ಪ್ರದೇಶದ ನೊವೊಕುಯಿಬಿಶೇವ್ಸ್ಕ್ ಮತ್ತು ಸಿಜ್ರಾನ್ ತೈಲ ಸಂಸ್ಕರಣಾ ಘಟಕಗಳನ್ನು ಗುರಿಯಾಗಿಸಲಾಗಿದೆ ಎಂದು ತಿಳಿಸಿದರು. ಇದಲ್ಲದೆ, ಕ್ರಾಸ್ನೋದರ್ ಪ್ರದೇಶದ ಟಿಖೋರೆಟ್ಸ್ಕ್ ತೈಲ ಕೇಂದ್ರ, ಬಾಲ್ಟಿಕ್ ಸಮುದ್ರದ ವ್ಯಸೋತ್ಸಕ್ ಬಂದರು ಮತ್ತು ರಷ್ಯಾದ ನಿಯಂತ್ರಣದಲ್ಲಿರುವ ಕ್ರೈಮಿಯಾದ ಸೆವಾಸ್ಟೊಪೋಲ್‌ನಲ್ಲಿನ ತೈಲ ಕೇಂದ್ರದ ಮೇಲೂ ದಾಳಿ ನಡೆಸಲಾಗಿದೆ ಎಂದಿದ್ದಾರೆ.
ರಷ್ಯಾದ ರಕ್ಷಣಾ ಸಚಿವಾಲಯವು ಈ ದಾಳಿಯನ್ನು ಇನ್ನೂ ನೇರವಾಗಿ ದೃಢಪಡಿಸಿಲ್ಲ; ಆದರೆ ತಮ್ಮ ‘ಏರ್ ಡಿಫೆನ್ಸ್ ಸಿಸ್ಟಮ್’ ರಾತ್ರಿಯಿಡೀ ೨೫೮ ಉಕ್ರೇನಿಯನ್ ಡ್ರೋನ್‌ಗಳನ್ನು ಹೊಡೆದುರುಳಿಸಿದೆ ಎಂದು ಅವರು ವಾದ ಮಂಡಿಸಿದ್ದಾರೆ.
ಅಮೆರಿಕವು ರಷ್ಯಾಕ್ಕೆ ನಿರ್ಬಂಧಗಳಿಂದ ಸಡಿಲಿಕೆ ನೀಡಿ, ಸಮುದ್ರ ಮಾರ್ಗದ ಮೂಲಕ ತೈಲ ಮಾರಾಟ ಮಾಡಲು ಅನುಮತಿ ನೀಡುವ ರಿಯಾಯಿತಿಯನ್ನು ವಿಸ್ತರಿಸಿತ್ತು. ಉಕ್ರೇನ್ ಈ ನಿರ್ಧಾರಕ್ಕೆ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದೆ. ಬ್ರೋವ್ಡಿ ಅವರು ಇದನ್ನು ‘ಸಿನಿಸಿಸಮ್’ ಅಂದರೆ ದ್ವಂದ್ವ ನೀತಿ ಎಂದು ಕರೆದಿದ್ದು, ಇಂತಹ ನಿರ್ಧಾರಗಳ ಬೆಲೆಯನ್ನು ಉಕ್ರೇನಿಯನ್ ನಾಗರಿಕರು ತಮ್ಮ ಪ್ರಾಣದ ಮೂಲಕ ತೆರಬೇಕಾಗುತ್ತದೆ ಎಂದು ಹೇಳಿದ್ದಾರೆ.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !