ನಾಸಿಕ್: ‘ಕಾರ್ಪೊರೇಟ್ ಜಿಹಾದ್’ ಪ್ರಕರಣ

ನಾಸಿಕ್ – ಮಹಿಳೆಯರ ದೌರ್ಜನ್ಯದ ವಿರುದ್ಧ ಧೈರ್ಯದಿಂದ ರಹಸ್ಯ ಕಾರ್ಯಾಚರಣೆ ನಡೆಸಿ ಈ ಪಿತೂರಿಯನ್ನು ಬಯಲಿಗೆಳೆದ ಮಹಿಳಾ ಪೊಲೀಸರನ್ನು ಹಿಂದೂ ಜನಜಾಗೃತಿ ಸಮಿತಿ ಪ್ರೇರಿತ ‘ರಣರಾಗಿಣಿ’ ಶಾಖೆಯ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ರಾವತ್ ಅವರಿಗೆ ಸಮಿತಿಯ ‘ಲವ್ ಜಿಹಾದ್’ ಮತ್ತು ‘ಧರ್ಮಶಿಕ್ಷಣ ಫಲಕ’ ಗ್ರಂಥಗಳನ್ನು ಉಡುಗೊರೆಯಾಗಿ ನೀಡಲಾಯಿತು. ಇದೇ ವೇಳೆ, ರಣರಾಗಿಣಿ ಶಾಖೆ ಮತ್ತು ಹಿಂದೂ ಜನಜಾಗೃತಿ ಸಮಿತಿಯು ಯುವತಿಯರ ಹಾಗೂ ಮಹಿಳೆಯರ ರಕ್ಷಣೆಗಾಗಿ ನಡೆಸುತ್ತಿರುವ ಉಚಿತ ಶೌರ್ಯಜಾಗೃತಿ ಸ್ವರಕ್ಷಣೆ ತರಬೇತಿ ವರ್ಗಗಳು, ಬಾಲಸಂಸ್ಕಾರ ವರ್ಗಗಳು, ಧರ್ಮಶಿಕ್ಷಣ ವರ್ಗಗಳು ಮತ್ತು ಪ್ರಥಮ ಚಿಕಿತ್ಸಾ ತರಬೇತಿ ವರ್ಗಗಳ ಬಗ್ಗೆ ಪೊಲೀಸ್ ಉಪಾಯುಕ್ತ ಮೋನಿಕಾ ರಾವತ್ ಅವರಿಗೆ ಮಾಹಿತಿ ನೀಡಲಾಯಿತು.
ನಾಸಿಕ್‌ನಲ್ಲಿ ಮುಂಬರುವ ಸಿಂಹಸ್ಥ ಕುಂಭಮೇಳದ ಸಂದರ್ಭದಲ್ಲಿ ಸಮಿತಿಯು ವಿಪತ್ತು ನಿರ್ವಹಣೆ, ಪ್ರಥಮ ಚಿಕಿತ್ಸೆ ಮುಂತಾದ ಸಮಾಜ ಸೇವಾ ಕಾರ್ಯಕ್ರಮಗಳನ್ನು ಹೇಗೆ ಹಮ್ಮಿಕೊಳ್ಳಬಹುದು ಎಂಬ ಬಗ್ಗೆಯೂ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ರಣರಾಗಿಣಿ ಶಾಖೆ ಮತ್ತು ಸಮಿತಿಯ ಕಾರ್ಯವನ್ನು ಶ್ಲಾಘಿಸಿದ ಪೊಲೀಸ್ ಉಪಾಯುಕ್ತರು, “ನಾವು ಖಂಡಿತವಾಗಿಯೂ ನಿಮ್ಮನ್ನು ಪೊಲೀಸ್ ಆಡಳಿತದೊಂದಿಗೆ ಕುಂಭಮೇಳದ ತಂಡದ ಜೊತೆ ಸೇರಿಸಿಕೊಳ್ಳುತ್ತೇವೆ” ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಕು. ರಾಗೇಶ್ರಿ ದೇಶಪಾಂಡೆ, ಶ್ರೀಮತಿ ವೈಶಾಲಿ ಕಾತಕಡೆ, ಶ್ರೀಮತಿ ಅನಘಾ ಪಿತ್ರೆ, ಸೌ. ರಿತುಲ್ ಪಾಟೀಲ್, ಸೌ. ಪ್ರಿಯಾಂಕಾ ಸೂರ್ಯವಂಶಿ, ಸೌ. ಮೀನಾಕ್ಷಿ ಕೋಲ್ಹೆ, ಸೌ. ರಂಜನಾ ಅಹೀರರಾವ್, ಕು. ಪ್ರಿಣಲ್ ಸೋನವನೆ, ಕು. ಕಿಂಜಲ್ ಸೋನವನೆ, ಕುಮಾರಿ ವಿಶಾಖಾ ಶಿಂದೆ, ಕು. ಪ್ರಿಯಾಂಕಾ ಶಿಂದೆ, ಕು. ತನಿಷಾ ಬಾಗುಲ್, ಕು. ಪೂಜಾ ಚವಾಣ್ ಹಾಗೂ ಸೌ. ಅರ್ಚನಾ ಸೋನವನೆ ಉಪಸ್ಥಿತರಿದ್ದರು.
ಪೊಲೀಸ್ ಉಪಾಯುಕ್ತ ಮೋನಿಕಾ ರಾವತ್ ಮತ್ತು ಅವರ ತಂಡದ ಧೈರ್ಯದ ಕ್ರಮ ಹೆಮ್ಮೆಯ ವಿಷಯ! – ಕು. ರಾಗೇಶ್ರಿ ದೇಶಪಾಂಡೆ
ಈ ಸಂದರ್ಭದಲ್ಲಿ ಮಾತನಾಡಿದ ಹಿಂದೂ ಜನಜಾಗೃತಿ ಸಮಿತಿಯ ಕು. ರಾಗೇಶ್ರಿ ದೇಶಪಾಂಡೆ, “ಪೊಲೀಸ್ ಉಪಾಯುಕ್ತ ಮೋನಿಕಾ ರಾವತ್ ಮತ್ತು ಅವರ ತಂಡವು ನಾಸಿಕ್‌ನ ‘ಕಾರ್ಪೊರೇಟ್ (ವೃತ್ತಿಪರ) ಜಿಹಾದ್’ ಪ್ರಕರಣದಲ್ಲಿ ಅತ್ಯಂತ ಧೈರ್ಯದಿಂದ ಮತ್ತು ರಹಸ್ಯವಾಗಿ ತನಿಖೆ ನಡೆಸಿ ಮಹಿಳೆಯರ ದೌರ್ಜನ್ಯದ ಗಂಭೀರ ಪಿತೂರಿಯನ್ನು ಬಯಲಿಗೆಳೆದಿದ್ದಾರೆ. ಈ ಕಾರ್ಯಾಚರಣೆ ಮೂಲಕ, ‘ಬೇರೆಡೆ ಇಂತಹ ದೌರ್ಜನ್ಯಗಳನ್ನು ಮೌನವಾಗಿ ಸಹಿಸುತ್ತಿರುವ ಮಹಿಳೆಯರು ಈಗ ಮುಂದೆ ಬಂದು ದೂರು ನೀಡಬೇಕು, ಪೊಲೀಸ್ ದಳದ ಸಹಾಯ ಪಡೆಯಬೇಕು ಮತ್ತು ಸಂಕಷ್ಟದಿಂದ ಮುಕ್ತರಾಗಬೇಕು’ ಎಂಬ ಸಂದೇಶ ರವಾನೆಯಾಗಿದ್ದು, ಉಳಿದ ಮಹಿಳೆಯರಿಗೆ ಬೆಂಬಲ ಸಿಕ್ಕಂತಾಗಿದೆ,” ಎಂದು ಹೇಳಿದರು.
ರಾಗೇಶ್ರಿ ಅವರು ಮಾತು ಮುಂದುವರೆಸಿ, “ಪೊಲೀಸರ ಮಹಿಳಾ ತಂಡವು ಕೈಗೊಂಡ ಈ ಕ್ರಮದಿಂದ ಮಹಿಳೆಯರಲ್ಲಿ ನಿರ್ಭಯದ ವಾತಾವರಣ ನಿರ್ಮಾಣವಾಗಲಿದೆ. ಪೊಲೀಸರು ಅತ್ಯಂತ ನಿಖರವಾಗಿ ಮತ್ತು ರಹಸ್ಯವಾಗಿ ಈ ‘ಮಿಷನ್’ (ಕಾರ್ಯಾಚರಣೆ) ನಡೆಸಿ ಪಿತೂರಿಯನ್ನು ಬಯಲಿಗೆಳೆದಿರುವುದು ನಮ್ಮೆಲ್ಲ ರಣರಾಗಿಣಿಯರಿಗೆ ಸಾರ್ಥಕ ಹೆಮ್ಮೆ ತಂದಿದೆ. ಆದ್ದರಿಂದ ಅವರ ಅಭಿನಂದನೆ ಮತ್ತು ಸನ್ಮಾನಕ್ಕಾಗಿ ನಾವು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ,” ಎಂದು ತಿಳಿಸಿದರು.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”