ಹಿಂದೂಗಳ ಮೇಲೆ ಮಾಡಲಾಗುತ್ತಿರುವ ತಾರತಮ್ಯವು ನೌಕರರ ಪರಿಚಯಾತ್ಮಕ ದಾಖಲೆಗಳಿಂದ ಬಯಲಾಗಿದೆ!
(ಹಿಜಾಬ್ ಎಂದರೆ ಮುಸ್ಲಿಂ ಮಹಿಳೆಯರು ತಲೆ ಮತ್ತು ಕುತ್ತಿಗೆಯನ್ನು ಮುಚ್ಚಲು ಬಳಸುವ ವಸ್ತ್ರ)

ನವದೆಹಲಿ – ಮಾಹಿತಿ ತಂತ್ರಜ್ಞಾನ ಸಂಸ್ಥೆ ‘ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್’ನಲ್ಲಿ ಹಿಂದೂ ನೌಕರರ ಮತಾಂತರದ ಪ್ರಕರಣಗಳು ಮುನ್ನೆಲೆಗೆ ಬಂದ ನಂತರ ಈಗ ಈ ‘ಕಾರ್ಪೊರೇಟ್’ ಜಗತ್ತಿನಲ್ಲಿ ಹಿಂದೂ ದ್ವೇಷದ ಬಗ್ಗೆ ಚರ್ಚೆ ಆರಂಭವಾಗಿದೆ. ಇಂತಹ ಸಂದರ್ಭದಲ್ಲಿ ಕನ್ನಡಕಗಳು, ಗಾಗಲ್ ಇತ್ಯಾದಿ ಉತ್ಪನ್ನಗಳನ್ನು ತಯಾರಿಸುವ ‘ಲೆನ್ಸ್‌ಕಾರ್ಟ್’ ಎಂಬ ಪ್ರಸಿದ್ಧ ಸಂಸ್ಥೆಯ ಹಿಂದೂ ದ್ವೇಷ ಬಯಲಾಗಿದೆ. ಸಂಸ್ಥೆಯ ನೌಕರರಿಗಾಗಿ ಇರುವ ಪರಿಚಯಾತ್ಮಕ ದಾಖಲೆಯಲ್ಲಿ ‘ವವಸ್ತ್ರಸಂಹಿತೆ’ ಮತ್ತು ‘ಸಮವಸ್ತ್ರ’ದ ನಿಯಮಗಳ ಮೂಲಕ ಈ ಹಿಂದೂ ದ್ವೇಷವು ಸ್ಪಷ್ಟವಾಗಿ ಎದ್ದು ಕಾಣುತ್ತದೆ. ಇದರ ಅಡಿಯಲ್ಲಿ ಕೆಲಸದ ಸಮಯದಲ್ಲಿ ಯಾರಾದರೂ ನೌಕರರು ‘ಕಲಾವ’ (ಕೈಗೆ ಕಟ್ಟುವ ಪವಿತ್ರ ದಾರ) ಅಥವಾ ಹಣೆಯ ಮೇಲೆ ಕುಂಕುಮ-ಬಿಂದಿ ಹಚ್ಚಿದರೆ ಅವರನ್ನು ಮನೆಗೆ ಕಳುಹಿಸಲಾಗುವುದು. ಸಂಕ್ಷಿಪ್ತವಾಗಿ ಹೇಳುವುದಾದರೆ ಕಚೇರಿಯಲ್ಲಿ ಇವುಗಳಿಗೆ ಅನುಮತಿ ಇಲ್ಲ. ಇನ್ನೊಂದೆಡೆ ಇದೇ ನಿಯಮಗಳಲ್ಲಿ ಹಿಜಾಬ್ ಧರಿಸಲು ಪೂರ್ಣ ಅನುಮತಿ ನೀಡಲಾಗಿದೆ. ಸಂಸ್ಥೆಯ ಈ ಹಿಂದೂ ದ್ವೇಷದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ.
Lenskart's employee handbook reveals employees are allowed to wear hijab, but bans kumkum/bindi.
Such discriminatory rules by an Indian company in a Hindu majority Nation is a disgrace.
Hindus should boycott such firms as these have only grown due to Hindus customers.
Because… pic.twitter.com/A1pYjWiWSZ
— Sanatan Prabhat (@SanatanPrabhat) April 16, 2026
1. ಪ್ರಸಿದ್ಧ ಹಿಂದುತ್ವವಾದಿ ಲೇಖಕಿ ಶೆಫಾಲಿ ವೈದ್ಯ ಅವರು ‘ಲೆನ್ಸ್‌ಕಾರ್ಟ್’ ಅನ್ನು ಖಂಡಿಸಿದ್ದಾರೆ. ಅವರು ‘ಎಕ್ಸ್’ನಲ್ಲಿ ಹೀಗೆ ಬರೆದಿದ್ದಾರೆ, ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತು ಎಲ್ಲಿ ಬಹುತೇಕ ನೌಕರರು ಹಾಗೂ ಗ್ರಾಹಕರು ಹಿಂದೂಗಳೇ ಆಗಿದ್ದಾರೋ, ಅಂತಹ ‘ಲೆನ್ಸ್‌ಕಾರ್ಟ್’ನಂತಹ ಸಂಸ್ಥೆಯು ಇಂತಹ ನಿಲುವು ತಳೆದಿರುವುದು ಖಂಡನೀಯ. ನಾನು ಎಂದಿಗೂ ‘ಲೆನ್ಸ್‌ಕಾರ್ಟ್’ನಿಂದ ಏನನ್ನೂ ಖರೀದಿಸುವುದಿಲ್ಲ.
Sorry, does NOT cut it. Who drafted this atrocious document? How did it even pass the first cut in the internal meeting? Who drafts your policy? What is the current policy document? Why are you not making it public? How about a simple, clean, clear apology saying that you are… https://t.co/3ssJ7sSCzf
— Shefali Vaidya. 🇮🇳 (@ShefVaidya) April 16, 2026
2. ಅನೇಕ ಸಾಮಾನ್ಯ ಹಿಂದೂಗಳು ಲೆನ್ಸ್‌ಕಾರ್ಟ್ ಬಹಿಷ್ಕರಿಸಲು ಕರೆ ನೀಡಿದ್ದಾರೆ.
ಒಬ್ಬ ಹಿಂದೂ ಕೇಳಿದ್ದಾರೆ, ಪಿಯೂಷ್ ಬನ್ಸಲ್ ರೇ(ಲೆನ್ಸ್‌ಕಾರ್ಟ್ ಮಾಲೀಕ), ಇದೇನು ಹಾಸ್ಯಾಸ್ಪದ ನಿಯಮ? ಬಿಂದಿ, ಮಣಿಕಟ್ಟಿನ ದಾರ ಅಥವಾ ಕುಂಕುಮದಿಂದ ಕೆಲಸದ ಸ್ಥಳದ ವೃತ್ತಿಪರ ವಾತಾವರಣ ಹೇಗೆ ಹದಗೆಡುತ್ತದೆ? ಅಥವಾ ಇವುಗಳಿಂದ ತಾರತಮ್ಯ ಹೇಗೆ ಉಂಟಾಗುತ್ತದೆ? ಇಂತಹ ನಿರ್ಬಂಧಗಳನ್ನು ಏಕೆ ಹೇರಲಾಗುತ್ತಿದೆ?
3. ಇನ್ನೊಬ್ಬ ಹಿಂದೂ ಬರೆದಿದ್ದಾರೆ, ನಾನು ಲೆನ್ಸ್‌ಕಾರ್ಟ್‌ನಿಂದ ಎಂದಿಗೂ ಕನ್ನಡಕಗಳನ್ನು ಖರೀದಿಸುವುದಿಲ್ಲ. ಇನ್ನು ಮುಂದೆ ಕೇವಲ ಹಿಜಾಬ್ ಧರಿಸುವ ಮಹಿಳೆಯರೇ ಅವರಿಂದ ಕನ್ನಡಕಗಳನ್ನು ಖರೀದಿಸಲಿ. ಈಗ ದಯವಿಟ್ಟು ನಿಮ್ಮ ನೌಕರರಿಗೆ ನಮಾಜ್ ಮಾಡುವುದು ಹೇಗೆ? ಮತ್ತು ರಂಜಾನ್ ಸಮಯದಲ್ಲಿ ಉಪವಾಸವನ್ನು ಹೇಗೆ ಪಾಲಿಸಬೇಕು? ಎಂಬುದನ್ನೂ ಕಲಿಸುವ ಕೆಲಸ ಮಾಡಿ.
4. ‘ಆಪ್ ಇಂಡಿಯಾ’ ಎಂಬ ಹಿಂದುತ್ವವಾದಿ ಮಾಧ್ಯಮವು ತನ್ನ ಪ್ರತಿನಿಧಿಗಳು ದೆಹಲಿಯ ‘ಲೆನ್ಸ್‌ಕಾರ್ಟ್’ನ ಕೆಲವು ಶಾಖೆಗಳಿಗೆ ಭೇಟಿ ನೀಡಿದ್ದಾರೆ ಎಂದು ಹೇಳಿಕೊಂಡಿದೆ. ಅಲ್ಲಿನ ನೌಕರರು ಹೆಸರು ಬಹಿರಂಗಪಡಿಸದ ಶರತ್ತಿನ ಮೇಲೆ ಸಂಸ್ಥೆಯ ನಿಯಮಗಳು ಹಿಂದೂ ನೌಕರರ ವಿರುದ್ಧ ತಾರತಮ್ಯ ಮಾಡುವಂತಿವೆ ಎಂದು ಹೇಳಿದ್ದಾರೆ.
कलावा-बिंदी को ना, हिजाब को हाँ; Lenskart के हिंदू विरोधी नियमों का हुआ पर्दाफाश
कर्मचारियों का दावा; कलावा पहनने या तिलक लगाने पर लिया जाता है एक्शन; कमर्चारियों को स्टोर से भेजा जाता है वापस
पहले TCS में ग्रूमिंग गैंग और अब Lenskart के हिंदू विरोधी नियम
आखिर कॉर्पोरेट में चल… pic.twitter.com/figuCbpTvc
— ऑपइंडिया (@OpIndia_in) April 16, 2026
‘ಲೆನ್ಸ್‌ಕಾರ್ಟ್’ ಮಾಲೀಕರಿಂದ ಹಾಸ್ಯಾಸ್ಪದ ಸ್ಪಷ್ಟೀಕರಣ!
‘ಲೆನ್ಸ್‌ಕಾರ್ಟ್’ ಮಾಲೀಕ ಪಿಯೂಷ್ ಬನ್ಸಲ್ ಅವರು ಈ ಬಗ್ಗೆ ಸ್ಪಷ್ಟನೆ ನೀಡುತ್ತಾ, ಈಗ ಹೊರಬಂದಿರುವ ನಮ್ಮ ದಾಖಲೆಯು ನಮ್ಮ ಪ್ರಸ್ತುತ ಮಾರ್ಗಸೂಚಿಗಳ ಪ್ರತಿಬಿಂಬವಲ್ಲ ಎಂದು ನಾನು ನೇರವಾಗಿ ಹೇಳಲು ಬಯಸುತ್ತೇನೆ. ನಮ್ಮ ನೀತಿಯಲ್ಲಿ ಕುಂಕುಮ ಮತ್ತು ತಿಲಕ ಹಚ್ಚುವುದು ಸೇರಿದಂತೆ ಯಾವುದೇ ರೀತಿಯ ಧಾರ್ಮಿಕ ಅಭಿವ್ಯಕ್ತಿಯ ಮೇಲೆ ಯಾವುದೇ ನಿರ್ಬಂಧಗಳಿಲ್ಲ.
Hi, all. I’ve been seeing an inaccurate policy document going viral about Lenskart.
I want to speak directly that this document does not reflect our present guidelines.
Our policy has no restrictions on any form of religious expression, including bindi and tilak, and we…
— Peyush Bansal (@peyushbansal) April 15, 2026
ನಮ್ಮ ಹಳೆಯ ಆವೃತ್ತಿಯು ‘ಇಂದು ನಾವು ಯಾರು?’ ಎಂಬುದನ್ನು ಪ್ರತಿನಿಧಿಸುವುದಿಲ್ಲ ಎಂದು ಹೇಳಿದ್ದಾರೆ. (ಇದನ್ನು ನಂಬುವುದಾದರೆ, ಹಿಂದೆ ‘ಲೆನ್ಸ್‌ಕಾರ್ಟ್’ ಈ ರೀತಿ ಹಿಂದೂ ನೌಕರರ ವಿರುದ್ಧ ತಾರತಮ್ಯ ಮಾಡುತ್ತಿತ್ತು ಎಂಬುದು ಸ್ಪಷ್ಟವಾಗುತ್ತದೆ. ‘ನಾನು ಮೊದಲು ಇಷ್ಟು ಕಳ್ಳತನಗಳನ್ನು ಮಾಡಿದ್ದೇನೆ, ಆದರೆ ಈಗ ನಾನು ಕಳ್ಳನಲ್ಲ’ ಎಂದು ಕಳ್ಳನೊಬ್ಬ ಸ್ಪಷ್ಟನೆ ನೀಡಿದರೆ ಪೋಲಿಸರು ಅವನನ್ನು ಬಿಡುತ್ತಾರೆಯೇ? ಆದ್ದರಿಂದ ಈಗ ಪೋಲಿಸರು ಪಿಯೂಷ್ ಬನ್ಸಲ್ ಅವರ ಮೇಲೆ ಧಾರ್ಮಿಕ ತಾರತಮ್ಯಕ್ಕೆ ಉತ್ತೇಜನ ನೀಡಿದ ಕಾರಣಕ್ಕಾಗಿ ಭಾರತೀಯ ಸಂವಿಧಾನದ 14 ರಿಂದ 16 ನೇ ವಿಧಿಯ ಉಲ್ಲಂಘನೆಗಾಗಿ ಏಕೆ ಬಂಧನ ಕ್ರಮ ಕೈಗೊಳ್ಳಬಾರದು? – ಸಂಪಾದಕರು)

ಹಿಂದೂಗಳೇ, ‘ಲೆನ್ಸ್‌ಕಾರ್ಟ್’ ಅನ್ನು ಹಳಿಗೆ ತರಲು ಇದನ್ನು ಮಾಡಿ!ಹತ್ತಿರದ ‘ಲೆನ್ಸ್‌ಕಾರ್ಟ್ ಸ್ಟೋರ್’ಗೆ ಭೇಟಿ ನೀಡಿ ಸಂಸ್ಥೆಯು ನೌಕರರೊಂದಿಗೆ ಮಾಡಿದ ಈ ಧಾರ್ಮಿಕ ತಾರತಮ್ಯವನ್ನು ಸ್ಪಷ್ಟ ಮಾತುಗಳಲ್ಲಿ ಕಾನೂನುಬದ್ಧವಾಗಿ ಪ್ರತಿಭಟಿಸಿ. |
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !