‘ಆಹಾರವೇ ಮದ್ದು’ ಅಭಿಯಾನಕ್ಕೆ ಉತ್ತೇಜನ
ಭವಿಷ್ಯದ ವೈದ್ಯರಿಗೆ ಪೌಷ್ಟಿಕ ಆಹಾರ ತಯಾರಿಸುವ ತರಬೇತಿ

ವಾಷಿಂಗ್ಟನ್ (ಅಮೇರಿಕಾ) – ಅಮೇರಿಕಾದ ೬೦ಕ್ಕೂ ಹೆಚ್ಚು ವೈದ್ಯಕೀಯ ಸಂಸ್ಥೆಗಳಲ್ಲಿ ‘ಕಲಿನರಿ ಮೆಡಿಸಿನ್’ (ಪಾಕಕಲೆ ಔಷಧ) ಎಂಬ ಪಠ್ಯಕ್ರಮವನ್ನು ಬೋಧಿಸಲಾಗುತ್ತಿದೆ. ಅಲ್ಲಿನ ಟಫ್ಟ್ಸ್ ವಿಶ್ವವಿದ್ಯಾಲಯವೂ ಕೂಡ ಈ ಹೊಸ ಪಠ್ಯಕ್ರಮವನ್ನು ಅಳವಡಿಸಿಕೊಂಡಿದೆ. ಭವಿಷ್ಯದ ವೈದ್ಯರಿಗೆ ಕೇವಲ ಪುಸ್ತಕದ ಪೋಷಕಾಂಶಗಳ ಬಗ್ಗೆ ಮಾತ್ರವಲ್ಲದೆ, ‘ಅಡುಗೆಮನೆಯ ಸಾಕ್ಷರತೆ’ಯನ್ನೂ ಕಲಿಸಲಾಗುತ್ತಿದೆ. ಈ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆಯುತ್ತಿರುವವರು ಭವಿಷ್ಯದ ವೈದ್ಯರು, ದಂತವೈದ್ಯರು ಮತ್ತು ಆಹಾರತಜ್ಞರಾಗಿದ್ದಾರೆ. ಇವರು ವಿಶ್ವವಿದ್ಯಾಲಯದ ಅಡುಗೆಮನೆಯಲ್ಲಿ ಉತ್ತಮವಾಗಿ ಅಡುಗೆ ಮಾಡುವುದನ್ನು ಕಲಿಯುತ್ತಿದ್ದಾರೆ. ಇದರ ಮುಖ್ಯ ಪರಿಕಲ್ಪನೆಯು ‘ಫುಡ್ ಈಸ್ ಮೆಡಿಸಿನ್’ (ಆಹಾರವೇ ಔಷಧ) ಎಂಬ ಅಭಿಯಾನಕ್ಕೆ ಉತ್ತೇಜನ ನೀಡುವುದಾಗಿದೆ. ಇದರಿಂದ ವೈದ್ಯರು ಕೇವಲ ಆಹಾರ ಬದಲಾಯಿಸಲು ಸಲಹೆ ನೀಡುವುದು ಮಾತ್ರವಲ್ಲದೆ, ರೋಗಿಗಳಿಗೆ ‘ಪೌಷ್ಟಿಕ ಆಹಾರವನ್ನು ತಯಾರಿಸುವುದು ಹೇಗೆ?’ ಎಂಬುದನ್ನು ಕೂಡ ವಿವರಿಸಬಹುದಾಗಿದೆ.
೧. ಈ ಅಭಿಯಾನದ ಅಡಿಯಲ್ಲಿ ವೈದ್ಯರು ‘ಮಧುಮೇಹ, ಮೂತ್ರಪಿಂಡ ಮತ್ತು ಹೃದ್ರೋಗಗಳಂತಹ ಕಾಯಿಲೆಗಳ ಮೇಲೆ ಯಾವ ತರಕಾರಿಯು ಔಷಧಿಯಂತೆ ಕೆಲಸ ಮಾಡುತ್ತದೆ?’ ಎಂಬುದನ್ನು ಉದಾಹರಣೆಗಳೊಂದಿಗೆ ಕಲಿಯುವುದು ಕಡ್ಡಾಯವಾಗಿದೆ.
೨. ವಿಶ್ವವಿದ್ಯಾಲಯದ ‘ಕಲಿನರಿ ಮೆಡಿಸಿನ್’ ನಿರ್ದೇಶಕಿ ನಾಡಿನ್ ತಾಸಾಬೇಜಿ ಅವರು, ರೋಗಿಗೆ ಪ್ರೊಟೀನ್ ಸೇವಿಸುವಂತೆ ಸಲಹೆ ನೀಡಿದರೆ ಮಾತ್ರ ಸಾಲದು. ವೈದ್ಯರಿಗೆ ಆ ವಸ್ತುವಿನ ಬೆಲೆ, ಅದನ್ನು ಬೇಯಿಸಲು ಬೇಕಾದ ಸಮಯ, ಹಾಗೆಯೇ ರೋಗಿಗೆ ಏನು ಇಷ್ಟ ಮತ್ತು ಸಂಪ್ರದಾಯಗಳ ಬಗ್ಗೆಯೂ ತಿಳಿದಿರಬೇಕು, ಎಂದು ನಾಡಿನ್ ಹೇಳುತ್ತಾರೆ.
೩. ಈ ಉಪಕ್ರಮದ ಅಡಿಯಲ್ಲಿ ವೈದ್ಯರು ಕೇವಲ ಕಾಯಿಲೆಗೆ ಮಾತ್ರ ಚಿಕಿತ್ಸೆ ನೀಡದೆ ಸಂಪೂರ್ಣ ಆರೋಗ್ಯ ನಿರ್ಮಾಣಕ್ಕೆ ಸಹಾಯ ಮಾಡಲಿದ್ದಾರೆ. ಈ ಯೋಜನೆಯ ಮೂಲಕ ಅಂತಹ ಒಂದು ವೈದ್ಯಕೀಯ ವ್ಯವಸ್ಥೆ ಆರಂಭವಾಗಲಿದೆ.
೪. ವೈದ್ಯರಿಗೆ ಸ್ವತಃ ಅಡುಗೆ ಮಾಡುವುದು ಹೇಗೆ ಎಂದು ತಿಳಿದಿದ್ದರೆ, ಚಿಕಿತ್ಸೆಯಲ್ಲಿ ಆಹಾರವನ್ನು ಒಂದು ಪರಿಣಾಮಕಾರಿ ಸಾಧನವಾಗಿ ಬಳಸುವ ಬಗ್ಗೆ ಅವರು ಹೆಚ್ಚಿನ ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ ಎಂದು ಸಂಶೋಧನೆಗಳು ಸಹ ತೋರಿಸುತ್ತವೆ.
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !
ಟೆಕ್ಸಾಸ್ (ಅಮೆರಿಕ) ನಲ್ಲಿ ಭಾರತದ ರಾಷ್ಟ್ರಧ್ವಜ ಹರಿದ ಅಮೆರಿಕನ್ ಯುವಕ