ಯುದ್ಧ ಸ್ಥಗಿತಗೊಂಡ ೨೪ ಗಂಟೆಗಳ ಒಳಗೇ ಟ್ರಂಪ್ ಎಚ್ಚರಿಕೆ
ಇಂದು ಇಸ್ಲಾಮಾಬಾದ್ ನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಚರ್ಚೆ
ಯುದ್ಧ ಮತ್ತೆ ಆರಂಭವಾಗುವ ಸಾಧ್ಯತೆ!

ವಾಷಿಂಗ್ಟನ್ (ಅಮೆರಿಕ) – ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯುದ್ಧ ಸ್ಥಗಿತಗೊಂಡಿರುವುದಾಗಿ ಘೋಷಿಸಿದ ಕೇವಲ ೨೪ ಗಂಟೆಗಳಲ್ಲಿ ಇರಾನ್ ಗೆ ಅತ್ಯಂತ ಕಠಿಣ ಶಬ್ದಗಳಲ್ಲಿ ಎಚ್ಚರಿಕೆ ನೀಡಿದ್ದಾರೆ. ‘ಒಂದು ವೇಳೆ ಯುದ್ಧ ವಿರಾಮದ ಷರತ್ತುಗಳನ್ನು ಪಾಲಿಸದಿದ್ದರೆ ಮತ್ತು ಹಾರ್ಮುಜ್ ಜಲಸಂಧಿಯನ್ನು ತೆರೆಯದಿದ್ದರೆ, ಇರಾನ್ ಮೇಲೆ ಇದುವರೆಗಿನ ಅತಿದೊಡ್ಡ ದಾಳಿ ಮಾಡಲಾಗುವುದು’, ಎಂದು ಟ್ರಂಪ್ ಎಚ್ಚರಿಸಿದ್ದಾರೆ. ಇಂದು, ಏಪ್ರಿಲ್ ೧೦ ರಂದು ಅಮೆರಿಕ ಮತ್ತು ಇರಾನ್ ನಡುವೆ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ, ಟ್ರಂಪ್ ಅವರು ಕೆಲವು ಗಂಟೆಗಳ ಮುಂಚಿತವಾಗಿ ಈ ಎಚ್ಚರಿಕೆ ನೀಡಿರುವುದು ಯುದ್ಧ ವಿರಾಮದ ಮೇಲೆ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ. ಇನ್ನೊಂದೆಡೆ ಇರಾನ್ ಕೂಡ ‘೧೦ ರಲ್ಲಿ ೩ ಷರತ್ತುಗಳ ಉಲ್ಲಂಘನೆಯಾಗುತ್ತಿರುವುದರಿಂದ ಯುದ್ಧ ಸ್ಥಗಿತಗೊಂಡಿಲ್ಲ’, ಎಂದು ಹೇಳಿಕೆ ನೀಡಿದೆ.
🚨🌍 Major Escalation Warning in Middle East
🇺🇸 Donald Trump issues a strong warning to Iran:
👉 If the Strait of Hormuz is blocked, the U.S. could launch the largest-ever military strike⏱️ Within 24 hours of ceasefire, Trump declares:
“Our Military is Ready!”– U.S.… https://t.co/kCIY7QIlXy pic.twitter.com/vNL4UidGkH
— Sanatan Prabhat (@SanatanPrabhat) April 9, 2026
ನಮ್ಮ ಸೈನ್ಯ ಸನ್ನದ್ಧವಾಗಿದೆ!
ಟ್ರಂಪ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದು, ‘ಎಲ್ಲಿಯವರೆಗೆ ‘ನಿಜವಾದ ಒಪ್ಪಂದ’ದ ಸಂಪೂರ್ಣ ಪಾಲನೆಯಾಗುವುದಿಲ್ಲವೋ, ಅಲ್ಲಿಯವರೆಗೆ ಅಮೆರಿಕದ ಎಲ್ಲಾ ಯುದ್ಧನೌಕೆಗಳು, ಯುದ್ಧ ವಿಮಾನಗಳು ಮತ್ತು ಸೈನ್ಯಾಧಿಕಾರಿಗಳು, ಹಾಗೆಯೇ ಶಸ್ತ್ರಾಸ್ತ್ರ ಸಂಗ್ರಹ ಹಾಗೂ ಈಗಾಗಲೇ ಬಹಳಷ್ಟು ದುರ್ಬಲವಾಗಿರುವ ಶತ್ರುವಿನ ವಿನಾಶಕ್ಕಾಗಿ ಯೋಗ್ಯ ಮತ್ತು ಅವಶ್ಯಕವಾದ ಎಲ್ಲಾ ವಸ್ತುಗಳು ಇರಾನ್ ಮತ್ತು ಅದರ ಸುತ್ತಮುತ್ತ ನಿಯೋಜಿತವಾಗಿರುತ್ತವೆ. ಒಂದು ವೇಳೆ ಯಾವುದಾದರೂ ಕಾರಣದಿಂದ ಅಂತಿಮ ಒಪ್ಪಂದವಾಗದಿದ್ದರೆ, ಆಗದೇ ಇರುವ ಸಾಧ್ಯತೆ ಬಹಳ ಕಡಿಮೆ ಇದೆ, ಆಗ ಗುಂಡಿನ ದಾಳಿ ಆರಂಭವಾಗುವುದು. ಇದುವರೆಗೆ ಯಾರೂ ನೋಡಿರದಷ್ಟು ದೊಡ್ಡದಾಗಿ, ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಹೆಚ್ಚು ತೀವ್ರವಾಗಿ ಇರುವುದು’, ಎಂದು ಟ್ರಂಪ್ ಹೇಳಿದ್ದಾರೆ.
ಲೆಬನಾನ್ ಮೇಲೆ ಇಸ್ರೇಲ್ ನಿಂದ ೧೦ ನಿಮಿಷಗಳಲ್ಲಿ ೧೦೦ ಭೀಕರ ಆಕ್ರಮಣಗಳು: ೨೫೪ ಜನರ ಸಾವುಯುದ್ಧ ವಿರಾಮ ಘೋಷಣೆಯಾದ ಕೆಲವು ಗಂಟೆಗಳಲ್ಲೇ ಲೆಬನಾನ್ ನಲ್ಲಿನ ಭಯೋತ್ಪಾದಕ ಸಂಘಟನೆ ಹಿಜ್ಬುಲ್ಲಾದ ನೆಲೆಗಳ ಮೇಲೆ ಇಸ್ರೇಲ್ ಭೀಕರ ಆಕ್ರಮಣ ಮಾಡಿದೆ. ಲೆಬನಾನ್ ನಲ್ಲಿ ಇಸ್ರೇಲ್ ಕೇವಲ ೧೦ ನಿಮಿಷಗಳಲ್ಲಿ ೧೦೦ ಕ್ಕೂ ಹೆಚ್ಚು ಸ್ಥಳಗಳಲ್ಲಿ ಆಕ್ರಮಣ ಮಾಡಿದೆ. ಈ ದಾಳಿಯಲ್ಲಿ ೨೫೪ ಜನರು ಸಾವನ್ನಪ್ಪಿದ್ದಾರೆ. ಈ ಆಕ್ರಮಣವನ್ನು ಇರಾನ್ ಖಂಡಿಸಿದೆ, ಆದರೆ ಲೆಬನಾನ್ ಮೇಲಿನ ಆಕ್ರಮಣಗಳನ್ನು ನಿಲ್ಲಿಸುವ ಬಗ್ಗೆ ಯುದ್ಧ ವಿರಾಮದಲ್ಲಿ ಹೇಳಿರಲಿಲ್ಲ ಎಂದು ಅಮೆರಿಕ ದಾವೆ ಮಾಡಿದೆ. ಈ ಆಕ್ರಮಣದಿಂದ ಸಿಟ್ಟಿಗೆದ್ದ ಇರಾನ್ ಹಾರ್ಮುಜ್ ಜಲಸಂಧಿಯನ್ನು ಮತ್ತೆ ಮುಚ್ಚಿದೆ. |
ಲೆಬನಾನ್ ಮೇಲಿನ ಆಕ್ರಮಣದಿಂದ ಯುದ್ಧ ವಿರಾಮಕ್ಕೆ ಅಪಾಯ! – ಇರಾನ್
ಇರಾನ್ ಅಮೆರಿಕದ ಮೇಲೆ ಯುದ್ಧ ವಿರಾಮದ ೩ ಮಹತ್ವದ ಷರತ್ತುಗಳನ್ನು ಉಲ್ಲಂಘಿಸಿರುವ ಆರೋಪ ಮಾಡಿದೆ. ಇರಾನ್ ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅವರು, ‘ಇಸ್ರೇಲ್ ಏಪ್ರಿಲ್ ೯ ರಂದು ಲೆಬನಾನ್ ರಾಜಧಾನಿ ಬೈರುತ್ ನಲ್ಲಿ ನಡೆಸಿದ ಭೀಕರ ದಾಳಿಗಳಿಂದಾಗಿ ಈ ಒಪ್ಪಂದಕ್ಕೆ ಅಪಾಯ ಉಂಟಾಗಿದೆ. ಲೆಬನಾನ್ ಮೇಲಿನ ಆಕ್ರಮಣಗಳನ್ನು ನಿಲ್ಲಿಸುವುದು ಒಪ್ಪಂದದ ಷರತ್ತಾಗಿತ್ತು. ಒಂದು ವೇಳೆ ಈ ರೀತಿ ದಾಳಿಗಳು ಮುಂದುವರಿದರೆ, ನಾವು ಯುರೇನಿಯಂ ನಾಶ ಮಾಡುವುದಿಲ್ಲ ಮತ್ತು ಹಾರ್ಮುಜ್ ಜಲಸಂಧಿಯ ಮೇಲಿನ ನಿರ್ಬಂಧಗಳನ್ನೂ ಮುಂದುವರಿಸುತ್ತೇವೆ , ಎಂದು ಹೇಳಿದ್ದಾರೆ.
ಇಂದು ಪಾಕಿಸ್ತಾನದಲ್ಲಿ ಚರ್ಚೆ
ಯುದ್ಧ ವಿರಾಮದ ನಂತರ ಇರಾನ್ ಜೊತೆಗೆ ಚರ್ಚಿಸಲು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರ ನೇತೃತ್ವದಲ್ಲಿ ನಿಯೋಗ ತೆರಳಲಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೇವಿಸ್ ಮಾಹಿತಿ ನೀಡಿದ್ದಾರೆ. ಚರ್ಚೆಯ ಮೊದಲ ಸುತ್ತು ಏಪ್ರಿಲ್ ೧೦ ರಂದು ನಡೆಯಲಿದೆ. ವ್ಯಾನ್ಸ್ ಅವರ ಜೊತೆಗಿನ ನಿಯೋಗದಲ್ಲಿ ಅಮೆರಿಕದ ವಿಶೇಷ ದೂತ ಸ್ಟೀವ್ ವಿಟ್ಕಾಫ್ ಮತ್ತು ಟ್ರಂಪ್ ಅವರ ಅಳಿಯ ಜಾರೆಡ್ ಕುಶ್ನರ್ ಕೂಡ ಇರಲಿದ್ದಾರೆ. ಇರಾನ್ ನಿಯೋಗದ ನೇತೃತ್ವವನ್ನು ಸಂಸತ್ತಿನ ಅಧ್ಯಕ್ಷ ಮಹಮ್ಮದ್ ಬಾಕರ್ ಗಾಲಿಬಾಫ್ ಮತ್ತು ವಿದೇಶಾಂಗ ಸಚಿವ ಸಯೀದ್ ಅಬ್ಬಾಸ್ ಅರಾಗ್ಚಿ ವಹಿಸಲಿದ್ದಾರೆ.
ಇರಾನ್ ನ ೧೦ ಷರತ್ತುಗಳ ಪಟ್ಟಿಯನ್ನು ಟ್ರಂಪ್ ಕಸದ ಬುಟ್ಟಿಗೆ ಎಸೆದರು! – ಶ್ವೇತಭವನ

ಡೊನಾಲ್ಡ್ ಟ್ರಂಪ್ ಅವರು ಇರಾನ್ ನ ೧೦ ಅಂಶಗಳ ಪ್ರಸ್ತಾವನೆಯನ್ನು ಒಪ್ಪಿಕೊಂಡಿದ್ದಾರೆಂಬ ಚರ್ಚೆ ಮಾಧ್ಯಮಗಳಲ್ಲಿ ನಡೆಯುತ್ತಿದೆ. ಈ ಬಗ್ಗೆ ವೈಟ್ ಹೌಸ್ ಸ್ಪಷ್ಟನೆ ನೀಡಿದೆ. ವೈಟ್ ಹೌಸ್ ಮಾಧ್ಯಮ ಕಾರ್ಯದರ್ಶಿ ಕ್ಯಾರೋಲಿನ್ ಲೇವಿಸ್ ಅವರು, ‘ಇರಾನ್ ಮೊದಲು ೧೦ ಅಂಶಗಳ ಪ್ರಸ್ತಾವನೆಯನ್ನು ಕಳುಹಿಸಿತ್ತು. ಆ ಗಂಭೀರ ಷರತ್ತುಗಳು ಸ್ವೀಕಾರಾರ್ಹವಾಗಿರಲಿಲ್ಲ. ಆದ್ದರಿಂದ ಅದನ್ನು ಟ್ರಂಪ್ ರದ್ದುಗೊಳಿಸಿ ಕಸದ ಬುಟ್ಟಿಗೆ ಎಸೆದರು.
🚨🌍 Middle East Tensions Explode Further
🇺🇸 Donald Trump rejects Iran’s 10-point proposal outright
👉 “Thrown into the trash!” – White House sources🇮🇱 Massive Escalation by Israel
– 100+ intense strikes on Lebanon in just 10 minutes
– 250+ casualties reported🔥 Conflict… pic.twitter.com/OJVRbcwuyd
— Sanatan Prabhat (@SanatanPrabhat) April 9, 2026
ಇರಾನ್ ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಸಮ್ಮತಿಸಿದ್ದರಿಂದ ಯುದ್ಧ ಸ್ಥಗಿತಗೊಂಡಿದೆ. ‘ಇರಾನ್ ಗೆ ಏನು ಬೇಕು?’, ಆ ಪಟ್ಟಿಯನ್ನು ರಾಜಿ ಎಂದು ಟ್ರಂಪ್ ಸ್ವೀಕರಿಸಿಲ್ಲ ಮತ್ತು ಮುಂದೆಯೂ ಸ್ವೀಕರಿಸುವುದಿಲ್ಲ. ಟ್ರಂಪ್ ಅಮೆರಿಕದ ಹಿತಾಸಕ್ತಿ ಇರುವಂತಹದ್ದನ್ನು ಮಾತ್ರ ರಾಜಿ ಮಾಡಿಕೊಳ್ಳುತ್ತಾರೆ. ಆದ್ದರಿಂದ ೧೦ ಬೇಡಿಕೆಗಳನ್ನು ಒಪ್ಪಿಕೊಳ್ಳಲಾಗಿದೆ ಎಂಬ ಸುದ್ದಿಗಳ ಮೇಲೆ ನಂಬಿಕೆ ಇಡಬೇಡಿ’, ಎಂದು ಲೆವಿಟ್ ಹೇಳಿದ್ದಾರೆ.
ಲೆಬನಾನ್ ಮೇಲಿನ ದಾಳಿ ಮುಂದುವರಿಯಲಿವೆ! – ಅಮೆರಿಕ ಮತ್ತು ಇಸ್ರೇಲ್ ಘೋಷಣೆಯಿಂದ ಪಾಕಿಸ್ತಾನಕ್ಕೆ ಮುಖಭಂಗ!
ಪಾಕಿಸ್ತಾನದ ಪ್ರಧಾನಿ ಶಹಬಾಜ್ ಶರೀಫ್ ಅವರು ‘ಎಕ್ಸ್’ನಲ್ಲಿ, ‘ಇರಾನ್, ಅಮೆರಿಕ, ಅಮೆರಿಕದ ಮಿತ್ರ ರಾಷ್ಟ್ರಗಳು ಮತ್ತು ಲೆಬನಾನ್ ಸೇರಿದಂತೆ ಎಲ್ಲಾ ದೇಶಗಳು ೨ ವಾರಗಳ ಕಾಲ ಆಕ್ರಮಣಗಳನ್ನು ನಿಲ್ಲಿಸಿ ಚರ್ಚೆಗಾಗಿ ಯುದ್ಧ ವಿರಾಮಕ್ಕೆ ಸಮ್ಮತಿ ಸೂಚಿಸಿವೆ’, ಎಂದು ಹೇಳಿದ್ದರು.
ಪ್ರಧಾನಿ ಶರೀಫ್ ಈ ಮಾಹಿತಿ ನೀಡಿದ ಬಳಿಕ, ‘ಲೆಬನಾನ್ ಎಂದಿಗೂ ಈ ೨ ವಾರಗಳ ಯುದ್ಧ ವಿರಾಮ ಒಪ್ಪಂದದ ಭಾಗವಾಗಿರಲಿಲ್ಲ ಮತ್ತು ಇದರ ಮಾಹಿತಿಯನ್ನು ಎಲ್ಲಾ ಪಕ್ಷಗಳಿಗೆ ಮೊದಲೇ ನೀಡಲಾಗಿತ್ತು’, ಎಂದು ಅಮೆರಿಕ ಹೇಳಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಲೆಬನಾನ್ ನಲ್ಲಿನ ಹಿಜ್ಬುಲ್ಲಾ ಮೇಲಿನ ದಾಳಿಗಳು ಮುಂದುವರಿಯಲಿವೆ ಎಂದು ಸ್ಪಷ್ಟಪಡಿಸಿದ್ದಾರೆ.
ಕೆರಳಿದ ಇರಾನ್ ನಿಂದ ಹಾರ್ಮುಜ್ ಬಂದ್ ಮುಂದುವರಿಸುವ ಘೋಷಣೆ!

ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಾಗ್ಚಿ ಅವರು ಪಾಕಿಸ್ತಾನ ಪ್ರಧಾನಿ ಶಹಬಾಜ್ ಶರೀಫ್ ಅವರ ಈ ಪೋಸ್ಟ್ ಬಗ್ಗೆ ‘ಎಕ್ಸ್’ನಲ್ಲಿ ಪ್ರತಿಕ್ರಿಯೆ ನೀಡುತ್ತಾ, ‘ಇರಾನ್-ಅಮೆರಿಕ ಯುದ್ಧ ವಿರಾಮದ ಷರತ್ತುಗಳು ಸ್ಪಷ್ಟವಾಗಿವೆ ಮತ್ತು ಅಮೆರಿಕ ಇದನ್ನು ನಿರ್ಧರಿಸಬೇಕು; ಅವರು ನಿಜವಾಗಿಯೂ ಯುದ್ಧ ವಿರಾಮವನ್ನು ಜಾರಿಗೆ ತರುತ್ತಾರೆಯೇ ಅಥವಾ ಇಸ್ರೇಲ್ ಮೂಲಕ ಯುದ್ಧವನ್ನು ಮುಂದುವರಿಸುತ್ತಾರೆಯೇ? ಏಕೆಂದರೆ ಈ ಎರಡೂ ವಿಷಯಗಳು ಒಟ್ಟಿಗೆ ನಡೆಯಲು ಸಾಧ್ಯವಿಲ್ಲ’, ಎಂದು ಬರೆದಿದ್ದಾರೆ.
ಇರಾನ್ ಸಂಸತ್ತಿನ ಅಧ್ಯಕ್ಷ ಮಹಮ್ಮದ್ ಬಾಕರ್ ಗಾಲಿಬಾಫ್ ಅವರು, ‘ಚರ್ಚೆಯ ಮೊದಲೇ ೧೦ ರಲ್ಲಿ ೩ ಷರತ್ತುಗಳ ಉಲ್ಲಂಘನೆಯಾಗಿದೆ. ಇದರಲ್ಲಿ ಲೆಬನಾನ್ ನಲ್ಲಿನ ಹಿಂಸಾಚಾರ, ಇರಾನ್ ನಲ್ಲಿನ ಡ್ರೋನ್ ಆಕ್ರಮಣದ ಪ್ರಯತ್ನ ಮತ್ತು ಯುರೇನಿಯಂ ಪುಷ್ಟೀಕರಣದ ಹಕ್ಕನ್ನು ನಿರಾಕರಿಸಿರುವುದು ಸೇರಿವೆ’, ಎಂದು ದಾವೆ ಮಾಡಿದ್ದಾರೆ. ಈಗ ಈ ಇಡೀ ಪ್ರಕರಣದಲ್ಲಿ ಅಮೆರಿಕ ಮತ್ತು ಇಸ್ರೇಲ್ ಇಬ್ಬರೂ ಲೆಬನಾನ್ ಅನ್ನು ಯುದ್ಧ ವಿರಾಮದ ಭಾಗವೆಂದು ಪರಿಗಣಿಸುತ್ತಿಲ್ಲ, ಹಾಗಾದರೆ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಶರೀಫ್ ಅವರು ಬೇಕೆಂದೇ ಇರಾನ್ ನ ಹಾದಿ ತಪ್ಪಿಸಿದ್ದಾರೆಯೇ? ಅಥವಾ ಅಮೆರಿಕ ಒಪ್ಪಂದ ಉಲ್ಲಂಘಿಸಿದೆಯೇ? ಎಂಬ ಪ್ರಶ್ನೆಗಳು ಉದ್ಭವಿಸುತ್ತಿವೆ.
ನಾವು ಪಾಕಿಸ್ತಾನವನ್ನು ಒಂದು ವಿಶ್ವಾಸಾರ್ಹ ದೇಶವಾಗಿ ನೋಡುವುದಿಲ್ಲ! – ಇಸ್ರೇಲ್ ನ ಭಾರತದ ರಾಯಭಾರಿ
ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಯುದ್ಧ ವಿರಾಮವಾಗಿದ್ದರೂ, ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ರೆವುನ್ ಅಜರ್ ಅವರು ಪಾಕಿಸ್ತಾನದ ಮಧ್ಯಸ್ಥಿಕೆಯ ಮೇಲೆ ಸಂಶಯ ವ್ಯಕ್ತಪಡಿಸಿದ್ದಾರೆ. ಅವರು ಮಾತನಾಡಿ, ‘ನಾವು ಪಾಕಿಸ್ತಾನವನ್ನು ವಿಶ್ವಾಸಾರ್ಹ ದೇಶವೆಂದು ನೋಡುವುದಿಲ್ಲ. ಪಾಕಿಸ್ತಾನದೊಂದಿಗೆ ಸಂಬಂಧ ಹೊಂದಲು ಅಮೆರಿಕಾಗೆ ತನ್ನದೇ ಆದ ಕಾರಣಗಳಿರಬಹುದು. ಅಮೆರಿಕ ತನ್ನ ಸ್ವಂತ ಕಾರಣಗಳಿಗಾಗಿ ಪಾಕಿಸ್ತಾನದ ಸಹಾಯವನ್ನು ಬಳಸಿಕೊಳ್ಳಲು ನಿರ್ಧರಿಸಿದೆ’, ಎಂದರು. ಯುದ್ಧ ವಿರಾಮದ ಬಗ್ಗೆ ಅಜರ್ ಅವರು, ‘ಈ ಮಾತುಕತೆಗಳಿಂದ ಇಸ್ರೇಲ್ ನ ಅಸ್ತಿತ್ವಕ್ಕೆ ಅಪಾಯವಾಗಿರುವ ಇರಾನ್ ನ ಪರಮಾಣು ಕಾರ್ಯಕ್ರಮ ಮತ್ತು ಇರಾನ್ ನ ಬ್ಯಾಲಿಸ್ಟಿಕ್ ಕ್ಷಿಪಣಿ ಉತ್ಪಾದನೆಯನ್ನು ನಿಲ್ಲಿಸಲಾಗುತ್ತವೆ ಎಂದು ಇಸ್ರೇಲ್ ಆಶಿಸುತ್ತದೆ’, ಎಂದು ಹೇಳಿದರು.
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ