
೧. ಸ್ಥಳೀಯ ಕ್ರಿಕೆಟ್ ಪಂದ್ಯದಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದವನ ಮೇಲೆ ಜನಸಮೂಹದಿಂದ ಹಲ್ಲೆ ಮತ್ತು ಅದರಲ್ಲಿ ಅವನ ಸಾವು
ಏಪ್ರಿಲ್ ೨೭ ರಂದು ಮಂಗಳೂರಿನಲ್ಲಿ ಸ್ಥಳೀಯ ಕ್ರಿಕೆಟ್ ಪಂದ್ಯ ನಡೆಯುವಾಗ ಓರ್ವ ಮತಾಂಧನು ಮೈದಾನದಲ್ಲಿ ನುಗ್ಗಿ ‘ಪಾಕಿಸ್ತಾನ ಜಿಂದಾಬಾದ್’ ಎಂಬ ಘೋಷಣೆ ಕೂಗಲು ಪ್ರಾರಂಭಿಸಿದನು. ಇದನ್ನು ಅಲ್ಲಿ ನೆರೆದಿದ್ದ ಜನರು ವಿರೋಧಿಸಿದರು. ಶತ್ರು ರಾಷ್ಟ್ರದ ಜಯಘೋಷವನ್ನು ಮಾಡುವವರ ವಿರುದ್ಧ ಭಾರತೀಯರಲ್ಲಿ ಸ್ವಾಭಾವಿಕವಾಗಿಯೇ ಆಕ್ರೋಶ ನಿರ್ಮಾಣವಾಗುತ್ತದೆ. ಆದ್ದರಿಂದ ಜನಸಮೂಹವು ಅವನ ಮೇಲೆ ಹಲ್ಲೆ ಮಾಡಿತು. ಈ ಘಟನೆಯಲ್ಲಿ ಅವನು ಮೃತಪಟ್ಟನು. ಇದರಲ್ಲಿ ಯಾವುದೇ ಪಿತೂರಿ ಇರಲಿಲ್ಲ. ಈ ಪ್ರಕರಣದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಯಿತು.

೨. ಆರೋಪಿಗೆ ಕರ್ನಾಟಕ ಉಚ್ಚ ನ್ಯಾಯಾಲಯದಿಂದ ಜಾಮೀನು ಸಮ್ಮತ
ಈ ಪ್ರಕರಣದ ಆರೋಪಿಗೆ ಕರ್ನಾಟಕ ಉಚ್ಚ ನ್ಯಾಯಾಲಯವು ಇತ್ತೀಚೆಗೆ ಜಾಮೀನು ಸಮ್ಮತ ಮಾಡಿದೆ. ನ್ಯಾಯಮೂರ್ತಿಗಳು ತಮ್ಮ ತೀರ್ಪಿನಲ್ಲಿ, ‘ಆರೋಪಿಯು ಮೃತಪಟ್ಟ ವ್ಯಕ್ತಿಗೆ ಮುಷ್ಟಿಯಿಂದ ಹೊಡೆದಿದ್ದಾನೆ, ಕಾಲಿನಿಂದ ಒದ್ದಿದ್ದಾನೆ ಎಂಬ ಆರೋಪವಿದೆ. ಅದರಲ್ಲಿ ಅವನ ಜೀವ ತೆಗೆಯುವ ಉದ್ದೇಶವಿರಲಿಲ್ಲ. ದೋಷಾರೋಪದ ಪಟ್ಟಿಯಲ್ಲಿ ೨೧೬ ಸಾಕ್ಷಿ ಮತ್ತು ಪುರಾವೆಗಳ ಉಲ್ಲೇಖವಿದೆ. ಆದ್ದರಿಂದ ಅವರ ಸಾಕ್ಷಿ ಮತ್ತು ಪುರಾವೆಗಳನ್ನು ದಾಖಲಿಸಲು ಹಾಗೆಯೇ ವಿಚಾರಣೆಯನ್ನು ಪೂರ್ಣಗೊಳಿಸಲು ಬಹಳ ಸಮಯ ಬೇಕಾಗುತ್ತದೆ. ಆದ್ದರಿಂದ ಆರೋಪಿಯನ್ನು ತಿಂಗಳುಗಟ್ಟಲೆ ಕಾರಾಗೃಹದಲ್ಲಿಡುವುದು ಸರಿಯಲ್ಲ’ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈ ಕಾರಣಗಳಿಂದ ನ್ಯಾಯಾಲಯವು ಅವನಿಗೆ ತಕ್ಷಣವೇ ಜಾಮೀನು ನೀಡಿತು.
೩. ಮತಾಂಧರ ಮಾನಸಿಕತೆಗೆ ದೇಶವಿರೋಧಿ ಕಲಿಕೆಯೇ ಕಾರಣ
ಮಂಗಳೂರಿನಲ್ಲಿ ಮತಾಂಧನೊಬ್ಬ ಅನಾವಶ್ಯಕವಾಗಿ ಶತ್ರು ರಾಷ್ಟ್ರ ಪಾಕಿಸ್ತಾನವನ್ನು ಸ್ತುತಿಸಿ ಪ್ರಾಣ ಕಳೆದುಕೊಂಡನು. ಈ ಜನರಿಗೆ ಶತ್ರುರಾಷ್ಟ್ರದ ಬಗ್ಗೆ ಇಷ್ಟೊಂದು ಒಲವು ಎಲ್ಲಿಂದ ಬರುತ್ತದೆ ಎಂಬುದನ್ನು ನೋಡಬೇಕು. ಅವರಿಗೆ ಮಸೀದಿ ಮತ್ತು ಮದರಸಾಗಳಲ್ಲಿ ನೀಡುವ ಕಲಿಕೆಯೇ ಇದಕ್ಕೆ ಕಾರಣ ಎಂಬುದು ಗಮನಕ್ಕೆ ಬರುತ್ತದೆ. ಇದರೊಂದಿಗೆ ಅವರ ಪ್ರತಿಯೊಂದು ದುಷ್ಕ್ರತ್ಯವನ್ನು ಬೆಂಬಲಿಸುವ ಕಾಂಗ್ರೆಸ್ ಕೂಡ ಇದಕ್ಕೆ ಅಷ್ಟೇ ಜವಾಬ್ದಾರಿಯಾಗಿದೆ ಎಂಬುದೂ ಅಷ್ಟೇ ಸತ್ಯವಾಗಿದೆ.
ಶ್ರೀಕೃಷ್ಣಾರ್ಪಣಮಸ್ತು |
– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ (೨೨.೨.೨೦೨೬)
‘ಜೀವುತ್ತಮ ವಿದ್ಯಾಪೀಠ’ : ಭಾರತೀಯ ಜ್ಞಾನ ಪರಂಪರೆಯ ಆಧುನಿಕ ಪುನರುಜ್ಜೀವನ!
೧೨ ಸೂರ್ಯನಮಸ್ಕಾರಗಳಿಂದ ಸಾಧಕನ ೪ ಕುಂಡಲಿನಿ ಚಕ್ರಗಳು ಈಶ್ವರೀ ತತ್ತ್ವವನ್ನು ಗ್ರಹಿಸಲು ಪೂರಕವಾಗುವುದು
ಎರಡೂವರೆ ಸ್ತರದಲ್ಲಿನ ಯುದ್ಧ ಮತ್ತು ಭಾರತದ ಸಿದ್ಧತೆ !
ಭಾರತೀಯ ಚಲನಚಿತ್ರ ಮತ್ತು ಅದರ ಪ್ರಭಾವದ ಜವಾಬ್ದಾರಿ !
ಅಡುಗೆಮನೆ
ಗಾಂಧಿವಾದದ ಮುಖವಾಡ ಕಳಚಿದ ಭಾರತ !