ಕಲೆಗಳ ಆಧ್ಯಾತ್ಮಿಕ ಇತಿಹಾಸದ ಪ್ರಾಸ್ತಾವಿಕ !
(ಲೇಖನ ೧೩)

ಕಲೆಗಳ ಮಾಧ್ಯಮದಿಂದ ಈಶ್ವರಪ್ರಾಪ್ತಿಯ ಮಾರ್ಗವನ್ನು ಆಚರಣೆ ಮಾಡಿದ ಮಹಾನ ಭಾರತೀಯ ಸಂತರು !
ಈ ಹಿಂದಿನ ಲೇಖನಗಳಿಂದ ನಾವು ದೇವಿದೇವತೆಗಳಿಂದ ಹಿಡಿದು ಋಷಿಮುನಿಗಳ ವರೆಗೆ ಸಂಗೀತದ ದೈವೀ ಪರಂಪರೆಯ ಬಗ್ಗೆ ತಿಳಿದುಕೊಂಡೆವು. ಇದೇ ಪರಂಪರೆಯಲ್ಲಿನ ಮುಂದಿನ ಪುಷ್ಪವೆಂದರೆ ಈಶ್ವರನ ದೇಹಧಾರಿ ರೂಪವಾಗಿರುವ ಸಂತರು ! ಸಂತ ನಾಮದೇವ ಮಹಾರಾಜರು, ‘ಕೀರ್ತನೆಯಲ್ಲಿ ತಲ್ಲೀನರಾಗೋಣ ಮತ್ತು ಆ ಮಾಧ್ಯಮದಿಂದ ಸಂತರ ಉಪದೇಶವನ್ನು ಇಡೀ ಜಗತ್ತಿನಾದ್ಯಂತ ತಲುಪಿಸೋಣ,’ ಎಂದು ಹೇಳುತ್ತಾರೆ. ಸಂತರ ಅಭಂಗ, ದ್ವಿಪದಿಗಳಂತಹ ಈಶ್ವರ ಭಕ್ತಿಯಲ್ಲಿ ಮುಳುಗಿಸುವಂತಹ ರಚನೆಗಳ ಮೇಲೆ ಸಮಾಜವಷ್ಟೆ ಅಲ್ಲ, ಈಶ್ವರನೂ ತಲೆದೂಗುತ್ತಾನೆ ಮತ್ತು ನರ್ತನೆ ಮಾಡುತ್ತಾನೆ !

ಇದು ಸಂತರು ರಚಿಸಿದ ಕಾವ್ಯಗಳ ಮತ್ತು ಗಾಯನ ಹಾಗೂ ನರ್ತನೆಯ ಮಾಧ್ಯಮದಿಂದ ಈಶ್ವರನಿಗೆ ಮೊರೆಯಿಡುವ ಸಂತ ವಿಭೂತಿಗಳ ಮಹಿಮೆಯಾಗಿದೆ !
ಭಾರತವು ಸಂತರ ಭೂಮಿಯಾಗಿದೆ. ಸಂಗೀತದ ಮಾಧ್ಯಮವನ್ನು ಬಳಸಿ ಸಂತರು ಸ್ವತಃ ಈಶ್ವರನನ್ನು ಆರಾಧಿಸಿದರು, ಅಲ್ಲದೇ ಅವರು ಸಂಗೀತ ಮತ್ತು ನೃತ್ಯಗಳ ಮಾಧ್ಯಮದಿಂದ ಸಮಾಜಕ್ಕೂ ಭಗವದ್‌ಭಕ್ತಿಯ ಮಾರ್ಗವನ್ನು ತೋರಿಸಿದರು. ಭಾರತದಲ್ಲಿ ಸಂಗೀತದಿಂದ ಈಶ್ವರಪ್ರಾಪ್ತಿ ಮಾಡಿಕೊಂಡ ಸಂತರ ಸಮೂಹವೇ ಇದೆ, ಉದಾ. ಮಹಾರಾಷ್ಟ್ರದಲ್ಲಿನ ಸಂತ ತುಕಾರಾಮ ಮಹಾರಾಜರು, ಸಂತ ನಾಮದೇವರು, ಸಂತ ಕಾನ್ಹೋಪಾತ್ರ ಇತ್ಯಾದಿ, ರಾಜಸ್ಥಾನದಲ್ಲಿನ ಸಂತ ಮೀರಾಬಾಯಿ, ಉತ್ತರಪ್ರದೇಶದಲ್ಲಿನ ಸ್ವಾಮಿ ಹರಿದಾಸರು ಮತ್ತು ಸಂತ ಸೂರದಾಸರು; ಗುಜರಾತನ ಸಂತ ನರಸಿ ಮೇಹತಾ; ಬಂಗಾಲದ ಸಂತ ಚೈತನ್ಯ ಮಹಾಪ್ರಭುಗಳು ಮತ್ತು ಸ್ವಾಮೀ ವಿವೇಕಾನಂದರು, ಕರ್ನಾಟಕದ ಸಂತ ಪುರಂದರದಾಸರು, ಹಾಗೆಯೇ ತಮಿಳುನಾಡಿನ ಸಂತ ತ್ಯಾಗರಾಜರು, ಸಂತ ಆಂಡಾಳ ಮೊದಲಾದವರು. ಈ ಲೇಖನದಿಂದ ನಾವು ಸಂತರು ಮಾಡಿದ ಸಂಗೀತ-ಸಾಧನೆಯ ಬಗ್ಗೆ ತಿಳಿದುಕೊಳ್ಳಲಿದ್ದೇವೆ. ಇಂದು ನಾವು ಉತ್ತರಪ್ರದೇಶ, ರಾಜಸ್ಥಾನ ಮತ್ತು ದಕ್ಷಿಣ ಭಾರತದ ಕೆಲವು ಸಂತರ ಸಂಗೀತ-ಸಾಧನೆಯ ಬಗ್ಗೆ ತಿಳಿದುಕೊಳ್ಳಲಿದ್ದೇವೆ. (ಭಾಗ ೨)
೪. ಉತ್ತರಪ್ರದೇಶದ ಸಂತರು
೪ ಅ. ಅಂತಃಚಕ್ಷುಗಳಿಂದ ಗಾಯನದ ಮೂಲಕ ಶ್ರೀಕೃಷ್ಣನನ್ನು ಅನುಭವಿಸುವ ಸಂತ ಸೂರದಾಸರು ! : ‘ಸೂರದಾಸರು ಹುಟ್ಟು ಕುರುಡರಾಗಿದ್ದರು; ಆದರೆ ಅವರು ಸಂಗೀತದಿಂದ ಭಕ್ತಿಯನ್ನು ಮಾಡುವ ಒಬ್ಬ ಮಹಾನ ಕವಿ, ಗಾಯಕ ಮತ್ತು ಕೃಷ್ಣನ ಭಕ್ತರಾಗಿದ್ದರು. ಪುಷ್ಟಿಮಾರ್ಗದ (ಟಿಪ್ಪಣಿ ೧) ಸಂಸ್ಥಾಪಕ ವಲ್ಲಭಾಚಾರ್ಯರು ಪುಷ್ಟಿಮಾರ್ಗದ ದೀಕ್ಷೆಯನ್ನು ನೀಡಿದರು ಮತ್ತು ಶ್ರೀಕೃಷ್ಣನ ಭಕ್ತಿಯನ್ನು ಉಪದೇಶಿಸಿದರು. ವಲ್ಲಭಾಚಾರ್ಯರು ಅವರಿಗೆ ಕೃಷ್ಣಭಕ್ತಿಯನ್ನು ವರ್ಣಿಸುವ ಭಕ್ತಿಪದಗಳನ್ನು ರಚಿಸಲು ಆಜ್ಞಾಪಿಸಿದರು.
ಟಿಪ್ಪಣಿ ೧ – ಪುಷ್ಟಿಮಾರ್ಗ : ಇದೊಂದು ಮುಖ್ಯ ವೈಷ್ಣವ ಭಕ್ತಿಮಾರ್ಗದ ಸಂಪ್ರದಾಯವಾಗಿದೆ. ಇದರಲ್ಲಿ ಕೃಷ್ಣನನ್ನು ಅತ್ಯುಚ್ಚ ದೇವತೆ ಮತ್ತು ಎಲ್ಲ ವಿಷಯಗಳ ಉಗಮಸ್ಥಾನವೆಂದು ಪರಿಗಣಿಸಲಾಗುತ್ತದೆ.
ಸೂರದಾಸರು ಸ್ಥೂಲದಿಂದ ಕುರುಡರಾಗಿದ್ದರೂ ಅಂತಃರ್ದೃಷ್ಟಿಯಿಂದ ಅವರು ಸಾವಿರಾರು ಶ್ರೀಕೃಷ್ಣನ ಭಕ್ತಿಯ ಪದಗಳನ್ನು ರಚಿಸಿದರು. ಈ ರಚನೆಗಳಲ್ಲಿ ಶ್ರೀಕೃಷ್ಣಲೀಲೆ, ಗೋಪಿಯರ ಭಕ್ತಿ, ಶ್ರೀಕೃಷ್ಣನ ಭಕ್ತಿ ಇತ್ಯಾದಿಗಳು ಮುಖ್ಯವಾಗಿ ಕಂಡುಬರುತ್ತವೆ. ಸೂರದಾಸರ ಗೀತಾಮಾಧುರ್ಯ ಮತ್ತು ಗಾನಕೌಶಲ್ಯದಿಂದ ಸಾವಿರಾರು ಕೃಷ್ಣಭಕ್ತರನ್ನು ಮಂತ್ರ ಮುಗ್ಧರನ್ನಾಗಿ ಮಾಡಿದೆ. ಸೂರದಾಸರಿಗಾಗಿ ಸಂಗೀತವು ಕೃಷ್ಣನ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುವ ಸಾಧನವಾಗಿತ್ತು. ಅವರ ಭಾವಪೂರ್ಣ ಗಾಯನÀವನ್ನು ಕೇಳಲು ಸಾಕ್ಷಾತ್ ಭಗವಾನ ಶ್ರೀಕೃಷ್ಣನು ಬರುತ್ತಿದ್ದನು. ಸೂರದಾಸರ ಹಾಡುಗಳು ಭಕ್ತಿಸಂಗೀತವನ್ನು ಸಮೃದ್ಧಗೊಳಿಸಿತು. ಸಂತ ಸೂರದಾಸರ ರಚನೆಗಳ ಕೆಲವು ಉದಾಹರಣೆಗಳನ್ನು ಮುಂದೆ ನೀಡಲಾಗಿದೆ.
೧. ಮೈ ನಹಿ ಮಾಖನ ಖಾಯೋ | (ಅರ್ಥ : ಶ್ರೀಕೃಷ್ಣನು ಯಶೋದಾಮಾತೆಗೆ, ‘ನಾನು ಬೆಣ್ಣೆ ತಿನ್ನಲಿಲ್ಲ.’) ಎನ್ನುತ್ತಾನೆ.
೨. ಪ್ರಭುಜಿ ಮೆರೆ ಅವಗುಣ ಚಿತ ನಾ ಧರೋ |
ಸಮದರ್ಶಿ ಹೈ ನಾಮ ತುಮ್ಹಾರೋ ಸೋಯೀ ಪಾರ ಕರೋ ||
ಅರ್ಥ : ಸಂತ ಸೂರದಾಸರು ದೇವರಲ್ಲಿ, ‘ದೇವಾ, ನನ್ನ ಕೆಟ್ಟ ಗುಣಗಳನ್ನು ನೋಡಬೇಡ. ನಿನ್ನ ಹೆಸರು ‘ಸಮದರ್ಶಿ (ಎಲ್ಲೆಡೆ ಸಮಾನವಾಗಿ ನೋಡುವವನು)’ ಎಂದಾಗಿದೆ. ಆದ್ದರಿಂದ ನೀನು ನಮ್ಮನ್ನು ಭವಸಾಗರದಿಂದ ಪಾರು ಮಾಡು’ ಎಂದು ಹೇಳುತ್ತಾರೆ.
೪ ಆ. ತಮ್ಮ ಭಕ್ತಿ ಮತ್ತು ಗಾಯನದ ಮೂಲಕ ಶ್ರೀಕೃಷ್ಣನನ್ನು (ಬಾಂಕೆಬಿಹಾರಿ) ವೃಂದಾವನದಲ್ಲಿ ಸಾಕ್ಷಾತ್ಕಾರ ಮಾಡಿಕೊಂಡ ಸಂತ ಸ್ವಾಮಿ ಹರಿದಾಸರು : ತಮ್ಮ ಗಾಯನ ಭಕ್ತಿಯಿಂದ ಶ್ರೀಕೃಷ್ಣನನ್ನು ಒಲಿಸಿಕೊಂಡವರು ಸ್ವಾಮಿ ಹರಿದಾಸರು. ಅವರು ಕೃಷ್ಣನ ಮೇಲಿರುವ ಅಪಾರ ಭಕ್ತಿ ಮತ್ತು ಸಂಗೀತದ ಆರಾಧನೆಗೆ ಒಂದು ಜೀವಂತ ರೂಪದಂತಿದ್ದರು !
ಸ್ವಾಮಿ ಹರಿದಾಸರು ಗಾಯನಕ್ಕಾಗಿ ಪ್ರಸಿದ್ಧರಾಗಿದ್ದರು. ಖ್ಯಾತ ಗಾಯಕರಾದ ತಾನಸೇನ, ಬೈಜು ಬಾವರಾ ಮುಂತಾದವರು ಅವರ ಗಾಯನದÀ ಉನ್ನತ ಶಿಷ್ಯರಾಗಿದ್ದರು. ವೃಂದಾವನದ ನಿಧಿಬನದಲ್ಲಿ ಶ್ರೀಕೃಷ್ಣ ಮತ್ತು ಗೋಪಿಯರು ರಾಸಲೀಲೆಯನ್ನು ಆಡಿದರು. ಸ್ವಾಮಿ ಹರಿದಾಸರು ಸಾಧನೆಗಾಗಿ ಈ ಸ್ಥಳವನ್ನು ಆಯ್ದು ಅಲ್ಲಿದ್ದು ಅವರು ಗಾಯನದ ಮೂಲಕ ಶ್ರೀ ಬಾಂಕೆಬಿಹಾರಿಯ ಸಾಧನೆಯನ್ನು ಮಾಡತೊಡಗಿದರು. ಅವರ ಗಾಯನವು ದೈವಿಕ ಮತ್ತು ಅಲೌಕಿಕವಾಗಿತ್ತು. ಅವರು ಕೇವಲ ಪರಮೇಶ್ವರನಿಗಾಗಿ ಹಾಡುತ್ತಿದ್ದರು. ಆದ್ದರಿಂದಲೇ ಸ್ವಾಮಿ ಹರಿದಾಸರಿಗೆ ಹಿಂದುಸ್ಥಾನಿ ಸಂಗೀತದ ಗುರುಪರಂಪರೆಯಲ್ಲಿ ಮಹತ್ವದ ಸ್ಥಾನವಿದೆ.
ಒಮ್ಮೆ ಅಕಬರ್‌ನ ಮನಸ್ಸಿನಲ್ಲಿ ತಾನಸೇನನ ಗುರುಗಳ, ಅಂದರೆ ಸ್ವಾಮಿ ಹರಿದಾಸರ ಗಾಯನವನ್ನು ಕೇಳುವ ಇಚ್ಛೆಯಾಯಿತು. ತಾನಸೇನನು ಬಾದಶಹಾನಿಗೆ ಸ್ವಾಮಿ ಹರಿದಾಸರ ಆಶ್ರಮಕ್ಕೆ ಕರೆದುಕೊಂಡು ಹೋದನು. ಆಗ ಭಗವಾನ ಶ್ರೀಕೃಷ್ಣನ ಆಜ್ಞೆಯಂತೆ ಗಾಯನ ಮಾಡುವ ಸ್ವಾಮಿ ಹರಿದಾಸರ ಗಾಯನದಿಂದ ಅಕಬರ್‌ನು ಭಾವಸಮಾಧಿಗೆ ತಲುಪಿದನು. ಇಂತಹ ದಿವ್ಯತೆಯು ಅವರ ಭಕ್ತಿಪೂರ್ಣ ಗಾಯನದಲ್ಲಿತ್ತು.
ಸ್ವಾಮಿ ಹರಿದಾಸರು ಸಂಗೀತದಿಂದ ಭಕ್ತಿಯ ಸವಿಯನ್ನು ಜಗತ್ತಿನಾದ್ಯಂತ ಪಸರಿಸಿದರು. ಅವರ ಭಜನೆಗಳು ಮತ್ತು ಹಾಡುಗಳು ಕೇಳುಗರ ಹೃದಯವನ್ನು ಕೃಷ್ಣಭಕ್ತಿಯ ಸಾಗರದಲ್ಲಿ ಮುಳುಗಿಸುವಂತಿದ್ದವು. ಅವರ ಭಜನೆಗಳು ವ್ರಜ ಭಾಷೆಯಲ್ಲಿವೆ.
೫. ಭಜನೆಗಳ ಮಾಧ್ಯಮದಿಂದ ಕೃಷ್ಣಭಕ್ತಿಯಲ್ಲಿ ಮಗ್ನರಾಗುವ ರಾಜಸ್ಥಾನದ ಸಂತ ಮೀರಾಬಾಯಿ !
ಮೇವಾಡ (ರಾಜಸ್ಥಾನ) ದಲ್ಲಿ ಬಾಲ್ಯದಿಂದಲೇ ಕೃಷ್ಣನಲ್ಲಿ ಸಂತ ಮೀರಾಬಾಯಿಯವರಿಗಿದ್ದ ಭಕ್ತಿಯು ಎಲ್ಲರಿಗೂ ಗೊತ್ತಿದೆ. ಅವರು ಶ್ರೀಕೃಷ್ಣನ ಅನೇಕ ಭಜನೆಗಳನ್ನು ರಚಿಸಿದ್ದಾರೆ. ಇಂದಿಗೂ ಅವರ ಭಜನೆಗಳನ್ನು ಹಾಡುವವರು ಕೃಷ್ಣಮಯರಾಗುತ್ತಾರೆ. ಸಂತ ಮೀರಾಬಾಯಿಯವರು ಸಂಗೀತತಜ್ಞರಿದ್ದರು. ಅವರು ‘ಮೀರಾ ಮಲ್ಹಾರ’, ‘ಮೀರಾ ಸಾರಂಗ’ದಂತಹ ರಾಗಗಳನ್ನು ನಿರ್ಮಿಸಿದರು.
ಒಮ್ಮೆ ಮೀರಾಬಾಯಿಯವರು ಭಕ್ತಿಯಲ್ಲಿ ತಲ್ಲೀನರಾಗಿ ಶ್ರೀಕೃಷ್ಣನ ಭಜನೆಯನ್ನು ಹಾಡುತ್ತಿದ್ದರು. ಆ ಸಮಯದಲ್ಲಿ ಅಲ್ಲಿಂದ ಹಾದುಹೋಗುತ್ತಿದ್ದ ಸಂಗೀತದ ಪಂಡಿತರಾಗಿದ್ದ ಕೆಲವರು, ಮೀರಾಬಾಯಿಯವರ ಹಾಡು ಕೇಳಿ ಅವರಿಗೆ ಸ್ವರಬದ್ಧವಾಗಿ ಹಾಡಲು ಹೇಳಿದರು. ಆಗ ಸಂತ ಮೀರಾಬಾಯಿಯವರು ಅವರಿಗೆ, ‘ನಾನು ಸ್ವರದಲ್ಲಿ ಅಲ್ಲ; ಬದಲಾಗಿ ಅನುರಾಗದಲ್ಲಿ ಹಾಡುತ್ತಿದ್ದೇನೆ’, ಎಂದರು ಅಂದರೆ ಭಗವಂತನಿಗಾಗಿ ಹಾಡು ಹಾಡುವಾಗ ಸ್ವರಕ್ಕಿಂತ ಅದನ್ನು ಅನುರಾಗದಲ್ಲಿ ಹಾಡುವುದು (ಈಶ್ವರನ ಪ್ರೇಮಭಕ್ತಿಯಲ್ಲಿ ಹಾಡುವುದು) ಹೆಚ್ಚು ಶ್ರೇಷ್ಠವಾಗಿದೆ.
‘ಭಗವಂತನ ಭಕ್ತಿಯಲ್ಲಿ ಹೇಗೆ ಹಾಡಬೇಕು ?’, ಎಂಬುದರ ಬಗ್ಗೆ ಸಂತ ಮೀರಾಬಾಯಿಯವರು ಪಂಡಿತರಿಗೆ ಮಾಡಿದ ಈ ಉಪದೇಶವು ಸಾಧಕ-ಕಲಾವಿದರಿಗಾಗಿ ಮಾರ್ಗದರ್ಶಕವಾಗಿದೆ.
೬. ದಕ್ಷಿಣ ಭಾರತದಲ್ಲಿನ ಸಂತರು
೬ ಅ. ಸಂಗೀತದ ಮಾಧ್ಯಮದಿಂದ ವಿಠ್ಠಲನ ಕರುಣೆಯನ್ನು ಬೇಡಿದ ‘ಕರ್ನಾಟಕ ಸಂಗೀತದ ಪಿತಾಮಹ’ – ಸಂತ ಪುರಂದರದಾಸರು ! :
ಕರ್ನಾಟಕದ ಸಂತ ಪುರಂದರದಾಸರು ಕನ್ನಡ, ಸಂಸ್ಕೃತ ಮತ್ತು ಸಂಗೀತದ ವಿಷಯಗಳ ಶಾಸ್ತ್ರೋಕ್ತ ಜ್ಞಾನವನ್ನು ಪಡೆದಿದ್ದರು. – ಸೌ. ಅನಘಾ ಜೋಶಿ
ಅವರನ್ನು ‘ಕರ್ನಾಟಕ ಸಂಗೀತದ ಪಿತಾಮಹ’, ಎಂದು ಗೌರವಿಸಲಾಯಿತು. ಅವರ ಭಕ್ತಿಮಯ ರಚನೆ ಮತ್ತು ಶಿಸ್ತುಬದ್ಧ ಸಂಗೀತ ಶಿಕ್ಷಣಪದ್ಧತಿಯಿಂದ ಕರ್ನಾಟಕ ಸಂಗೀತದಲ್ಲಿ ಒಂದು ಹೊಸ ಅಧ್ಯಾಯವು ಪ್ರಾರಂಭವಾಯಿತು. ಅವರು ಈಶ್ವರನ ಭಕ್ತಿಯ ಮೇಲೆ ೪ ಲಕ್ಷಕ್ಕೂ ಹೆಚ್ಚು ಭಕ್ತಿಗೀತೆÀಗಳನ್ನು ರಚಿಸಿದ್ದಾರೆ. ಸಂತ ಪುರಂದರದಾಸರು ಕೇವಲ ಶ್ರೇಷ್ಠ ಸಂಗೀತಕಾರರಷ್ಟೇ ಅಲ್ಲ, ಸಂಗೀತವನ್ನು ಸಾಧನೆಯ ಅತ್ಯುನ್ನತ ಮಾಧ್ಯಮವನ್ನಾಗಿ ಮಾಡಿಕೊಂಡ ಸಂತರಾಗಿದ್ದರು. ಅವರ ರಚನೆಗಳಲ್ಲಿ ಪಾಂಡಿತ್ಯದ ಪ್ರದರ್ಶನಕ್ಕಿಂತ ವಿನಮ್ರ ಭಕ್ತನ ಕರೆಯಿದೆ. ಅವರ ಒಂದು ಪದದಲ್ಲಿ ಅವರು ಪಾಂಡುರಂಗನಲ್ಲಿ ಆರ್ತತೆಯಿಂದ, ‘ಹೇ ವಿಠ್ಠಲಾ, ‘ನನ್ನ ಹಾಡು ಸುಂದರವಾಗಿದೆಯೋ, ಇಲ್ಲವೋ ?’, ಎಂಬುದು ನನಗೆ ತಿಳಿಯದು; ಆದರೆ ನನ್ನ ಹೃದಯ ಮಾತ್ರ ನಿನ್ನಲ್ಲಿ ತಲುಪಲಿ,’ ಎಂದು ಹೇಳಿದರು. ಸಂತ ಪುರಂದರದಾಸರ ಸಂಗೀತ-ಆರಾಧನೆಯಿಂದ ವಿಠ್ಠಲನ ಕರುಣೆಯನ್ನು ಬೇಡುವಾಗ, ‘ಸ್ವರಗಳು ನನ್ನನ್ನು ನಿನ್ನ ಬಾಗಿಲಿನ ವರೆಗೆ ತಂದಿವೆ. ಈಗ ನೀನೇ ನನ್ನನ್ನು ಒಳಗೆ ಕರೆದುಕೊಂಡು ಹೋಗು’ ಎಂದು ಹೇಳುತ್ತಾರೆ. ಮಹಾರಾಷ್ಟ್ರದ ಸಂತ ತುಕಾರಾಮ ಮಹಾರಾಜರು ಮತ್ತು ಸಂತ ಜ್ಞಾನೇಶ್ವರರಂತೆ ಸಂತ ಪುರಂದರದಾಸರು ಕರ್ನಾಟಕದಲ್ಲಿ ಸಂಗೀತ, ಭಜನೆ ಮತ್ತು ಕೀರ್ತನೆಯ ಮಾಧ್ಯಮದಿಂದ ಭಕ್ತಿ ಪರಂಪರೆಯ ಪ್ರಸಾರ ಮಾಡಿದರು.
೬ ಆ. ಭಾವಪೂರ್ಣ ಗಾಯನದಿಂದ ರಾಮಭಕ್ತಿ ಮೆರೆದ ಸಂತ ತ್ಯಾಗರಾಜರು. ! : ತಮಿಳುನಾಡಿನ ಸಂತ ತ್ಯಾಗರಾಜರು ದಕ್ಷಿಣ ಸಂಗೀತದ ಶ್ರೇಷ್ಠ ಸಂತರಲ್ಲಿ ಒಬ್ಬರು ! ಈ ಮಹಾನ ಸಂಗೀತಗಾರರಲ್ಲಿ ಭಕ್ತಿ ಮತ್ತು ಸ್ವರಗಳ ಅದ್ವಿತೀಯ ಸಂಗಮವಿತ್ತು. ಅವರ ಹೃದಯದಲ್ಲಿ ಪ್ರಜ್ವಲಿಸುವ ರಾಮಭಕ್ತಿಯ ಜ್ಯೋತಿಯಿಂದಲೇ ಸ್ವರಗಳ ನಿರ್ಮಲ ಗಂಗೆಯು ಅವತರಿಸಿದಳು.
ಒಮ್ಮೆ ತಂಜಾವುರ (ತಮಿಳುನಾಡು)ನಲ್ಲಿನ ಸರೊಬೋಜಿ ಮಹಾರಾಜರ ದರಬಾರಿನಲ್ಲಿ ಸಂತ ತ್ಯಾಗರಾಜರ ರಚನೆಯನ್ನು ಅವರ ಗುರುಗಳಾದ ವೆಂಕಟರಮಣಯ್ಯ ಇವರು ಹಾಡಿದರು. ಆ ರಚನೆಯು ರಾಜನಿಗೆ ಇಷ್ಟವಾಗಿ ಅವರು ಸಂತ ತ್ಯಾಗರಾಜರನ್ನು ‘ರಾಜಗಾಯಕ’ರೆಂದು ನೇಮಿಸಿ, ಧನ ಮತ್ತು ಉಪಹಾರವನ್ನು ಕಳುಹಿಸಿದನು. ಆ ಸಮಯದಲ್ಲಿ ಸಂತ ತ್ಯಾಗರಾಜರು ‘ಶ್ರೀರಾಮನನ್ನು ಸ್ತುತಿಸುವ ನಾಲಿಗೆಯಿಂದ ಮಾನವನ (ರಾಜನ)ನ್ನು ಸ್ತುತಿಸಲು ಸಾಧ್ಯವಿಲ್ಲ’, ಎಂದು ನಿರಾಕರಿಸಿದರು. ಇದು ಸಂತ ತ್ಯಾಗರಾಜರ ವೈರಾಗ್ಯವೃತ್ತಿಯನ್ನು ಎತ್ತಿ ತೋರಿಸುತ್ತದೆ.
ಒಮ್ಮೆ ತ್ಯಾಗರಾಜರ ಸಹೋದರನು ಸಿಟ್ಟಿನಿಂದ ಅವರ ಶ್ರೀರಾಮನ ಮೂರ್ತಿಯನ್ನು ನದಿಯಲ್ಲಿ ವಿಸರ್ಜಿಸಿದರು. ಆಗ ಸಂತ ತ್ಯಾಗರಾಜರು ಶ್ರೀರಾಮನ ಮೂರ್ತಿಯ ದರ್ಶನಕ್ಕಾಗಿ ವ್ಯಾಕುಲರಾಗಿ ವಿವಿಧ ಭಕ್ತಿಗೀತೆಗಳನ್ನು ರಚಿಸಿದರು. ೩ ತಿಂಗಳ ನಂತರ ಒಂದು ರಾತ್ರಿ ಸಂತ ತ್ಯಾಗರಾಜರು ಮಲಗಿದ್ದಾಗ ಒಂದು ಆಕಾಶವಾಣಿ ಆಯಿತು. ಪ್ರಭು ಶ್ರೀರಾಮನು ತ್ಯಾಗರಾಜರಿಗೆ, ‘ತ್ಯಾಗರಾಜಾ, ನೀನು ನನ್ನನ್ನು ಮೂರು ತಿಂಗಳಿಂದ ಹುಡುಕುತ್ತಾ ೩೦ ಹಾಡುಗಳನ್ನು ಹಾಡಿರುವೆ. ನನಗೆ ನಿನ್ನ ಭಾವಪೂರ್ಣ ಹಾಡುಗಳನ್ನು ಕೇಳುವ ಇಚ್ಛೆಯಾಗಿ ನಾನು ಈ ಲೀಲೆಯನ್ನು ಮಾಡಿದೆನು. ಈಗ ನನ್ನ ಈ ಇಚ್ಛೆಯು ಈಡೇರಿತು. ನಾನು ಕಾವೇರಿ ನದಿಯಲ್ಲಿದ್ದೇನೆ. ಇಲ್ಲಿಗೆ ಬಂದು ನನ್ನನ್ನು ಬೇಗ ಕರೆದುಕೊಂಡು ಹೋಗು’ ಎಂದು ಹೇಳಿದನು. ಈ ರೀತಿ ಸಂತ ತ್ಯಾಗರಾಜರಿಗೆ ಆ ಮೂರ್ತಿಯು ೩ ತಿಂಗಳ ನಂತರ ಸಿಕ್ಕಿತು.
ಸಂತ ತ್ಯಾಗರಾಜರಿಗಾಗಿ ಸಂಗೀತವು ಮನೋರಂಜನೆಗಾಗಿ ಆಗಿರದೇ, ಈಶ್ವರನೊಂದಿಗೆ ಸಂವಾದ ಸಾಧಿಸುವ ಒಂದು ಪವಿತ್ರ ಮಾಧ್ಯಮ ಮತ್ತು ಶ್ರೀರಾಮನ ಭಕ್ತಿಯ ಮಾರ್ಗವಾಗಿತ್ತು. ಅವರ ಪ್ರತಿಯೊಂದು ಕೃತಿಯಲ್ಲಿ (ಟಿಪ್ಪಣಿ ೨) ರಾಮಭಕ್ತಿಯ ಪರಿಮಳ ಹರಡುತ್ತಿತ್ತು. ಅವರ ಭಕ್ತಿಯಿಂದ ಪ್ರತ್ಯಕ್ಷ ಶ್ರೀರಾಮನು ಮತ್ತು ಸೀತಾಮಾತೆಯು ಅವರಿಗೆ ದರ್ಶನವನ್ನು ನೀಡಿದರು.
ಟಿಪ್ಪಣಿ ೨ – ಕೃತಿ : ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿನ ಹಾಡು, ರಾಗ ಮತ್ತು ತಾಳದ ಸಮನ್ವಯದ ಭಕ್ತಿಪೂರ್ಣ ರಚನೆ.
೬ ಇ. ಇತರ ಸಂತರು : ಸಂತ ತ್ಯಾಗರಾಜರಂತೆಯೇ ಸಂಗೀತದಿಂದ ಭಗವಂತನನ್ನು ಮೊರೆಯಿಡುವ ಅನೇಕ ಸಂತರು ದಕ್ಷಿಣ ಭಾರತದಲ್ಲಿದ್ದರು, ಉದಾ. ತಿರುಪತಿ ಬಾಲಾಜಿಯ ಪರಮ ಭಕ್ತನಾದ ಸಂತ ಅಣ್ಣಾಮಲೈ, ಶ್ರೀಕೃಷ್ಣಭಕ್ತನಾದ ಸಂತ ಕನಕದಾಸರು, ಶ್ರೀರಂಗನಾಥನ ಮೇಲೆ ಭಕ್ತಿಪೂರ್ಣ ಪ್ರೇಮಕಾವ್ಯವನ್ನು ರಚಿಸಿ ಹಾಡುವ ಸಂತ ಆಂಡಾಳ.
ಸಂತರ ಕಲಾಭಕ್ತಿಯು ಸಾಧಕ-ಕಲಾವಿದರಿಗಾಗಿ ಆದರ್ಶವಾಗಿದೆ. ಸಂತರ ಸಾಧನೆಯಿಂದಾಗಿಯೇ ಅವರ ಹೆಸರುಗಳು ಅಜರಾಮರವಾಗಿವೆ. ಪ್ರಸಿದ್ಧ ಕಲಾವಿದನನ್ನು ಕಾಲಾನಂತರದಲ್ಲಿ ಸಮಾಜವು ಮರೆಯುತ್ತದೆ; ಆದರೆ ಭಗವದ್ಭಕ್ತಿಯಿಂದ ಸಂತರು ಮಾತ್ರ ನಿರಂತರವಾಗಿ ಸಮಾಜದ ಸ್ಮರಣೆಯಲ್ಲಿದ್ದಾರೆ. ಇದರಿಂದ ನಮಗೆ ಗಮನಕ್ಕೆ ಬರುವುದೇನೆಂದರೆ, ‘ಕಲಾವಿದನು ತಾತ್ಕಾಲಿಕ ಪ್ರಸಿದ್ಧಿ ಪಡೆಯುವ ದೃಷ್ಟಿಯಲ್ಲಿ ಪ್ರಯತ್ನಿಸದೇ ಕಲೆಯಿಂದ ಭಗವದ್ಭಕ್ತಿಯಲ್ಲಿ ತನ್ನನ್ನು ಮರೆಯಲು ಪ್ರಯತ್ನಿಸಬೇಕು. ಆಗ ಭಗವಂತನೇ ತನ್ನ ಭಕ್ತನ ಕೀರ್ತಿಯನ್ನು ಅಜರಾಮರಗೊಳಿಸುತ್ತಾನೆ.’ (ಮುಕ್ತಾಯ.)
– ಸೌ. ಅನಘಾ ಜ್ಯೋಶಿ (ಬಿ.ಎ. (ಸಂಗೀತ), ಆಧ್ಯಾತ್ಮಿಕ ಮಟ್ಟ ಶೇ. ೬೨, ವಯಸ್ಸು ೪೫ ವರ್ಷ), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಫೋಂಡಾ, ಗೋವಾ. (೧೧.೧.೨೦೨೬)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !