ದೇಶಾದ್ಯಂತ ಸರಣಿ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದ ೪ ಮಂದಿ ಭಯೋತ್ಪಾದಕರ ಬಂಧನ!

  • ದೇಶದ ಪ್ರತಿಷ್ಠಿತ ಸಂಸ್ಥೆಗಳು, ಜನನಿಬಿಡ ಪ್ರದೇಶಗಳು, ವಾಹನಗಳು ಮತ್ತು ರೈಲ್ವೆ ನಿಲ್ದಾಣಗಳನ್ನು ಉಡಾಯಿಸಲು ನಡೆಸಿದ್ದರು ಸಂಚು

  • ಪಾಕಿಸ್ತಾನದಿಂದ ಸಿಗುತ್ತಿತ್ತು ಸೂಚನೆ!

ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ದಳವು (ಎಟಿಎಸ್) ಏಪ್ರಿಲ್ ೨ ರಂದು ಇಲ್ಲಿ ಕಾರ್ಯಾಚರಣೆ ನಡೆಸಿ ೪ ಮಂದಿ ಭಯೋತ್ಪಾದಕರನ್ನು ಬಂಧಿಸಿದೆ. ಈ ವಿಷಯವನ್ನು ಏಪ್ರಿಲ್ ೩ ರಂದು ಬಹಿರಂಗಪಡಿಸಲಾಯಿತು. ಈ ಭಯೋತ್ಪಾದಕರು ಉತ್ತರಪ್ರದೇಶದ ನಿವಾಸಿಗಳಾಗಿದ್ದು, ಇವರಿಗೆ ಪಾಕಿಸ್ತಾನದಿಂದ ಭಯೋತ್ಪಾದಕ ದಾಳಿ ನಡೆಸಲು ಸೂಚನೆಗಳನ್ನು ನೀಡಲಾಗುತ್ತಿತ್ತು. ಈ ಭಯೋತ್ಪಾದಕರು ಭಾರತದ ಕೆಲವು ಸ್ಥಳಗಳಲ್ಲಿ ಬೆಂಕಿ ಹಚ್ಚುವ ಘಟನೆಗಳನ್ನು ನಡೆಸಿರುವುದು ಇದುವರೆಗೆ ಬೆಳಕಿಗೆ ಬಂದಿದೆ. ‘ಟೆಲಿಗ್ರಾಂ’, ‘ಇನ್‌ ಸ್ಟಾಗ್ರಾಮ್’ ಮತ್ತು ‘ಸಿಗ್ನಲ್’ ನಂತಹ ಸುರಕ್ಷಿತವೆಂದು ಪರಿಗಣಿಸಲಾದ ಸಾಮಾಜಿಕ ಮಾಧ್ಯಮಗಳ ಮೂಲಕ ಪಾಕಿಸ್ತಾನದ ಭಯೋತ್ಪಾದಕರು ಇವರ ಸಂಪರ್ಕದಲ್ಲಿದ್ದರು. ದೇಶದ ಪ್ರತಿಷ್ಠಿತ ಸಂಸ್ಥೆಗಳು, ರೈಲ್ವೆ ನಿಲ್ದಾಣಗಳು ಮತ್ತು ರೈಲುಗಳಲ್ಲಿ ಸ್ಫೋಟ ನಡೆಸಲು ಈ ನಾಲ್ವರು ಸಿದ್ಧತೆ ನಡೆಸುತ್ತಿದ್ದರು. ಬಂಧಿತರನ್ನು ಸಾಕಿಬ್ ಅಲಿಯಾಸ್ ‘ಡೆವಿಲ್’, ಅರ್ಬಾಬ್, ವಿಕಾಸ್ ಗೆಹ್ಲಾವತ್ ಉರ್ಫ್ ರೌನಕ್ ಮತ್ತು ಲೋಕೇಶ ಉರ್ಫ್ ಬಾಬು ಉರ್ಫ್ ಪಪಲಾ ಪಂಡಿತ್ ಎಂದು ಗುರುತಿಸಲಾಗಿದೆ.

ವಿಚಾರಣೆಯಿಂದ ಹೊರಬಂದ ಪ್ರಮುಖ ಅಂಶಗಳು!

೧. ಭಯೋತ್ಪಾದಕರಿಂದ ರಾಸಾಯನಿಕ ತುಂಬಿದ ಕ್ಯಾನ್, ೭ ಮೊಬೈಲ್ ಫೋನ್‌ ಗಳು, ೨೪ ಭಿತ್ತಿಪತ್ರಗಳು ಮತ್ತು ಆಧಾರ್ ಕಾರ್ಡ್‌ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಏಪ್ರಿಲ್ ೨ ರಂದು ಲಕ್ಷ್ಮಣಪುರಿಯ ರೈಲ್ವೆ ನಿಲ್ದಾಣವನ್ನು ಉಡಾಯಿಸಲು ಇವರು ಸಂಚು ರೂಪಿಸಿದ್ದರು. ಆದರೆ ಪೊಲೀಸರಿಗೆ ಸಮಯಕ್ಕೆ ಸರಿಯಾಗಿ ಮಾಹಿತಿ ಲಭ್ಯವಾಗಿ ಕಾರ್ಯಾಚರಣೆ ನಡೆಸಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ.

೨. ಸಾಕಿಬ್ ಈ ತಂಡದ ಮುಖ್ಯಸ್ಥನಾಗಿದ್ದನು. ಈತ ಮೂಲತಃ ರಾಜ್ಯದ ಮೀರತ್ ಜಿಲ್ಲೆಯ ಅಗವಾನಪುರ ಗ್ರಾಮದ ನಿವಾಸಿಯಾಗಿದ್ದಾನೆ. ಈತ ಕ್ಷೌರಿಕನಾಗಿ ಕೆಲಸ ಮಾಡುತ್ತಿದ್ದಾನೆ. ಸಾಮಾಜಿಕ ಮಾಧ್ಯಮಗಳ ಮೂಲಕ ಈತ ಪಾಕಿಸ್ತಾನದ ‘ಹ್ಯಾಂಡ್ಲರ್ಸ್’ (ಭಯೋತ್ಪಾದಕ ಸಂಯೋಜಕರು) ಸಂಪರ್ಕಕ್ಕೆ ಬಂದಿದ್ದನು.

೩. ಟೆಲಿಗ್ರಾಂ, ಇನ್‌ ಸ್ಟಾಗ್ರಾಮ್ ಮತ್ತು ಸಿಗ್ನಲ್ ಮಾಧ್ಯಮಗಳ ಮೂಲಕ ಈತ ಪಾಕಿಸ್ತಾನದ ಜಾಲಗಳು, ಕಟ್ಟರವಾದಿ ಗುಂಪುಗಳು ಮತ್ತು ಅಫ್ಘಾನಿಸ್ತಾನದ ಕೆಲವು ಸಂಶಯಾಸ್ಪದ ಸಂಖ್ಯೆಗಳೊಂದಿಗೆ ಸಂಪರ್ಕ ಹೊಂದಿದ್ದನು. ಸಾಕಿಬ್ ತನ್ನದೇ ಗ್ರಾಮದ ಅರ್ಬಾಬ್‌ ನನ್ನು ಈ ವ್ಯವಸ್ಥೆಯಲ್ಲಿ ಸೇರಿಸಿಕೊಂಡನು. ಆನಂತರ ಗೌತಮಬುದ್ಧ ನಗರದ ವಿಕಾಸ್ ಗೆಹ್ಲಾವತ್ ಉರ್ಫ್ ರೌನಕ್ ಮತ್ತು ಲೋಕೇಶನನ್ನು ತಂಡಕ್ಕೆ ಸೇರಿಸಿಕೊಂಡನು.

೪. ಈ ಎಲ್ಲಾ ಆರೋಪಿಗಳು ಹಣದ ಆಸೆಗಾಗಿ ಮತ್ತು ಕಟ್ಟರವಾದದ ಪ್ರಭಾವಕ್ಕೆ ಒಳಗಾಗಿ ಈ ಸಂಚಿನ ಭಾಗವಾಗಿದ್ದರು. ಇವರು ವಿವಿಧ ಸ್ಥಳಗಳಲ್ಲಿ ರೇಕಿ(ಪರಿಶೀಲನೆ) ಮತ್ತು ಇತರ ಚಟುವಟಿಕೆಗಳನ್ನು ನಡೆಸುತ್ತಿದ್ದರು.

೫. ಭಾರತದಲ್ಲಿ ಭಯ ಮತ್ತು ಅಸ್ಥಿರತೆಯ ವಾತಾವರಣವನ್ನು ನಿರ್ಮಿಸುವುದು ಈ ತಂಡದ ಮುಖ್ಯ ಉದ್ದೇಶವಾಗಿತ್ತು. ಇವರು ಗಾಜಿಯಾಬಾದ್, ಅಲಿಗಢ ಮತ್ತು ಲಕ್ಷ್ಮಣಪುರಿಯಂತಹ ನಗರಗಳ ಅನೇಕ ಸ್ಥಳಗಳಲ್ಲಿ ರೇಕಿ (ಪರಿಶೀಲನೆ)ನಡೆಸಿದ್ದರು.

೬. ಈ ತಂಡದ ಸದಸ್ಯರು ಸಣ್ಣಪುಟ್ಟ ಬೆಂಕಿ ಹಚ್ಚುವ ಘಟನೆಗಳನ್ನು ನಡೆಸಿ ಅದರ ವಿಡಿಯೋಗಳನ್ನು ಮಾಡಿ ಪಾಕಿಸ್ತಾನದ ಭಯೋತ್ಪಾದಕರಿಗೆ ಕಳುಹಿಸುವ ಮೂಲಕ ಅವರ ವಿಶ್ವಾಸ ಗಳಿಸುತ್ತಿದ್ದರು. ಇದಕ್ಕಾಗಿ ಅವರಿಗೆ ಹಣವನ್ನು ಕಳುಹಿಸಲಾಗುತ್ತಿತ್ತು.

೭. ಈ ನಾಲ್ವರನ್ನು ಪ್ರಚೋದಿಸಲು ಧರ್ಮದ ಹೆಸರಿನಲ್ಲಿ ಹಿಂಸಾಚಾರ ಮತ್ತು ಬೆಂಕಿ ಹಚ್ಚುವ ಕೃತ್ಯಗಳನ್ನು ನಡೆಸಲು ಪ್ರೇರೇಪಿಸಲಾಗುತ್ತಿತ್ತು.

ಸಂಪಾದಕೀಯ ನಿಲುವು

  • ಭಾರತೀಯ ಗುಪ್ತಚರರು ಪಾಕಿಸ್ತಾನದಲ್ಲಿ ನಡೆಸಿದ ಸಾಹಸವನ್ನು ತೋರಿಸುವ ‘ಧುರಂಧರ್: ದ ರಿವೇಂಜ್’ ಚಲನ ಚಿತ್ರವನ್ನು ‘ಪ್ರೊಪಗಾಂಡ’ (ಕುಪ್ರಚಾರ) ಎಂದು ಬೊಬ್ಬೆ ಹೊಡೆಯುವವರನ್ನು ಈಗ ಈ ಘಟನೆಯ ಕುರಿತು ಹಿಂದೂ ಜನತೆಯು ಪ್ರಶ್ನಿಸಬೇಕಿದೆ!
  • ಭಾರತವನ್ನು ಮತ್ತೆ ಭಯೋತ್ಪಾದಕ ಆಕ್ರಮಣಗಳ ಬೆಂಕಿಗೆ ತಳ್ಳಲು ಯತ್ನಿಸುತ್ತಿರುವ ಜಿಹಾದಿ ಭಯೋತ್ಪಾದಕರಿಗೆ ಗಲ್ಲು ಶಿಕ್ಷೆ ವಿಧಿಸಿ, ಅವರ ಮೃತದೇಹಗಳನ್ನು ದಹಿಸಬೇಕು ಮತ್ತು ಅದರ ವಿಡಿಯೋಗಳನ್ನು ಎಲ್ಲೆಡೆ ಪ್ರಸಾರ ಮಾಡಬೇಕು. ಇಸ್ಲಾಂನಲ್ಲಿ ದಹನ ಮಾಡುವುದು ಹರಾಮ್ (ನಿಷಿದ್ಧ) ಆಗಿದ್ದು, ಅಂತಹವರು ನರಕಕ್ಕೆ ಹೋಗುತ್ತಾರೆ ಎಂಬ ನಂಬಿಕೆ ಇರುವುದರಿಂದ, ಭಾರತದಲ್ಲಿ ಭಯೋತ್ಪಾದನೆ ಹರಡುವ ಮೊದಲು ಯಾರೇ ಆದರೂ ಹತ್ತು ಬಾರಿ ಯೋಚಿಸುವಂತಾಗಬೇಕು!