|

ನವದೆಹಲಿ – ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಏಪ್ರಿಲ್‌ನಲ್ಲಿ ಮಂಗಳನು ಮೀನ ರಾಶಿಯಲ್ಲಿ ಸಂಚರಿಸುವಾಗ ಶನಿಯ ಮೇಲೆ ಕ್ರೂರ ದೃಷ್ಟಿ ಬೀರುತ್ತಿದ್ದಾನೆ, ಇದು ಸಂಘರ್ಷದ ಯೋಗವನ್ನು ಸೃಷ್ಟಿಸುತ್ತದೆ. ಇದೇ ರೀತಿಯ ಗ್ರಹಗತಿಗಳು 1917ರ ಮೊದಲ ಮಹಾಯುದ್ಧ ಮತ್ತು 1939ರ ಎರಡನೇ ಮಹಾಯುದ್ಧದ ಸಮಯದಲ್ಲಿ ನಿರ್ಮಾಣವಾಗಿದ್ದವು. ಆದ್ದರಿಂದ, ಈಗಲೂ ಅಂತಹದೇ ಪರಿಸ್ಥಿತಿ ಇರುವುದರಿಂದ ಮೂರನೇ ಮಹಾಯುದ್ಧ ನಡೆಯುವ ಸಾಧ್ಯತೆಯಿದೆ ಎಂದು ಜ್ಯೋತಿಷಿಗಳು ಎಚ್ಚರಿಸುತ್ತಿದ್ದಾರೆ. ಶನಿ ಮತ್ತು ಮಂಗಳನ ಮುಖಾಮುಖಿಯು ದೊಡ್ಡ ಮಟ್ಟದ ರಕ್ತಪಾತದ ಸೂಚನೆ ನೀಡುತ್ತಿದೆ ಎಂಬುದು ಜ್ಯೋತಿಷಿಗಳ ಅಭಿಮತ. ಇನ್ನೊಂದೆಡೆ, ಶನಿ ಮತ್ತು ರಾಹುವಿನ ಯುತಿಯು ವಿನಾಶಕಾರಿ ಎಂದು ಪರಿಗಣಿಸಲಾಗಿದ್ದು, ಇದು ಪರಮಾಣು ಶಸ್ತ್ರಾಸ್ತ್ರ ಬಳಕೆಯ ಸಾಧ್ಯತೆಯನ್ನು ಸೂಚಿಸುತ್ತದೆ ಎಂದು ಹೇಳಲಾಗಿದೆ. ಅಲ್ಲದೆ, ಸೂರ್ಯನು ಮೇಷ ರಾಶಿಯನ್ನು ಪ್ರವೇಶಿಸುವುದರಿಂದ ಪ್ರಬಲ ರಾಷ್ಟ್ರಗಳ ನಡುವಿನ ಅಧಿಕಾರ ಸಂಘರ್ಷ ತೀವ್ರಗೊಳ್ಳಬಹುದು ಎಂದು ಹೇಳಲಾಗುತ್ತಿದೆ. ಈ ಕುರಿತು ‘ಝೀ ನ್ಯೂಸ್’ ಜಾಲತಾಣದಲ್ಲಿ ವರದಿ ಪ್ರಕಟವಾಗಿದೆ.
🚨 World War III fears in April? Astrologers warn of volatile planetary alignments 🌍⚠️
🔴 Saturn-Mars conjunction could lead to horrific bloodshed
☢️ Concerns raised over possible nuclear escalation
📅 Key dates: April 17-19 – “Highly sensitive period”
🗣️ Expert views:
•… pic.twitter.com/7r6Qb70Kd7— Sanatan Prabhat (@SanatanPrabhat) April 1, 2026
ಏಪ್ರಿಲ್ 17, 18 ಮತ್ತು 19 ರಂದು ದೊಡ್ಡ ಘಟನೆ ಸಂಭವಿಸುವ ಸಾಧ್ಯತೆಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, ಏಪ್ರಿಲ್ 17, 18 ಮತ್ತು 19 ರ ಅವಧಿಯಲ್ಲಿ ಗ್ರಹಗಳ ಸ್ಥಿತಿಯು ಅತ್ಯಂತ ಸೂಕ್ಷ್ಮವಾಗಲಿದ್ದು, ಈ ಸಮಯದಲ್ಲಿ ದೊಡ್ಡ ಅನಾಹುತ ಅಥವಾ ಘಟನೆ ಸಂಭವಿಸಬಹುದು ಎಂದು ಹೇಳಲಾಗುತ್ತಿದೆ. |
ಹಾರ್ಮುಜ್ ಜಲಸಂಧಿಯಲ್ಲಿ ಹೆಚ್ಚಲಿದೆ ಉದ್ವಿಗ್ನತೆ! – ಜ್ಯೋತಿಷಾಚಾರ್ಯ ನೀತಿ ಶರ್ಮಾ

ಜ್ಯೋತಿಷಾಚಾರ್ಯ ನೀತಿ ಶರ್ಮಾ ಅವರ ಪ್ರಕಾರ, ಶನಿ, ರಾಹು, ಮಂಗಳ ಮತ್ತು ಕೇತು ಎಂಬ ಅಶುಭ ಗ್ರಹಗಳು ಒಂದಾದಾಗ ವಿನಾಶಕಾರಿ ಘಟನೆಗಳು ಜರುಗುತ್ತವೆ. ಪ್ರಸ್ತುತ ಶನಿಯು ಮೀನ ರಾಶಿಯಲ್ಲಿದ್ದು, ಇದು ಹಾನಿಯನ್ನು ಸೂಚಿಸುವ ರಾಶಿಯಾಗಿದೆ. ಮಂಗಳ ಮತ್ತು ರಾಹುವಿನ ಯುತಿಯು ಸ್ಫೋಟಕ ಪರಿಸ್ಥಿತಿಯನ್ನು ನಿರ್ಮಿಸುತ್ತದೆ. ಅಗ್ನಿತತ್ವದ ಮಂಗಳ ಮತ್ತು ಜಲತತ್ವದ ರಾಶಿ ಒಂದಾದಾಗ ತೀವ್ರ ಸಂಘರ್ಷ ಉಂಟಾಗುತ್ತದೆ. ಇದರಿಂದಾಗಿ ಹಾರ್ಮುಜ್ ಜಲಸಂಧಿ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗುವ ಸಾಧ್ಯತೆಯನ್ನು ವ್ಯಕ್ತಪಡಿಸಲಾಗಿದೆ.
ಏಪ್ರಿಲ್ 20 ರಿಂದ 22 ರ ಅವಧಿಯಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರ! – ಜ್ಯೋತಿಷಾಚಾರ್ಯ ಎಂ.ಎಂ. ಠಾಕೂರ್
ಜ್ಯೋತಿಷಾಚಾರ್ಯ ಎಂ.ಎಂ. ಠಾಕೂರ್ ಅವರ ಪ್ರಕಾರ, ಶನಿ, ಸೂರ್ಯ ಮತ್ತು ಮಂಗಳ ಈ ಮೂರು ಗ್ರಹಗಳನ್ನು ಸ್ಫೋಟಕ ಸ್ವಭಾವದವು ಎಂದು ಪರಿಗಣಿಸಲಾಗುತ್ತದೆ. ಮೀನ ರಾಶಿಯಲ್ಲಿ ಶನಿಯ ಸಂಚಾರ ಮತ್ತು ಅಲ್ಲಿಗೆ ಮಂಗಳನ ಪ್ರವೇಶದಿಂದಾಗಿ ಸಮುದ್ರಕ್ಕೆ ಸಂಬಂಧಿಸಿದ ಭಾಗಗಳಲ್ಲಿ ಚಟುವಟಿಕೆಗಳು ಹೆಚ್ಚಾಗಬಹುದು. ಏಪ್ರಿಲ್ 2 ರಿಂದಲೇ ಉದ್ವಿಗ್ನತೆ ಆರಂಭವಾಗಲಿದ್ದು, ಏಪ್ರಿಲ್ 20 ರಿಂದ 22 ರ ಅವಧಿಯಲ್ಲಿ ಪರಿಸ್ಥಿತಿ ಇನ್ನಷ್ಟು ತೀವ್ರಗೊಳ್ಳಬಹುದು.
ಪರಮಾಣು ಶಸ್ತ್ರಾಸ್ತ್ರ ದಾಳಿಯ ಸಾಧ್ಯತೆ ಅತ್ಯಂತ ಗಂಭೀರ! – ಮಾಜಿ ರಾಜತಾಂತ್ರಿಕ ಅಧಿಕಾರಿ ಜೆ.ಕೆ. ತ್ರಿಪಾಠಿ
ಮಾಜಿ ರಾಜತಾಂತ್ರಿಕ ಅಧಿಕಾರಿ ಜೆ.ಕೆ. ತ್ರಿಪಾಠಿ ಅವರ ಪ್ರಕಾರ, ಪರಮಾಣು ಶಸ್ತ್ರಾಸ್ತ್ರ ದಾಳಿಯ ಸಾಧ್ಯತೆಯು ಅತ್ಯಂತ ಗಂಭೀರವಾದ ವಿಷಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸಣ್ಣ ಮಟ್ಟದ ದಾಳಿಗಳೂ ಸಹ ಭೀಕರ ಪರಿಣಾಮ ಬೀರಬಹುದು. 1945ರ ನಂತರ ಪರಮಾಣುಬಾಂಬ್ ಬಳಕೆ ಆಗಿಲ್ಲ. ಆದರೆ ಪ್ರಸ್ತುತ ನಡೆಯುತ್ತಿರುವ ಸಂಘರ್ಷಗಳು ಇನ್ನಷ್ಟು ಹೆಚ್ಚಾಗುವ ಮತ್ತು ತೀವ್ರಗೊಳ್ಳುವ ಸಾಧ್ಯತೆಯಿದೆ.
ನೆತನ್ಯಾಹು ಅವರಿಗೆ ಅಮೆರಿಕದ ಬೆಂಬಲ ಎಷ್ಟು ದಿನ ಎಂಬುದು ಅನಿಶ್ಚಿತ! – ವಿದೇಶಾಂಗ ತಜ್ಞ ರೋಬಿಂದರ್ ಸಚದೇವ್
ವಿದೇಶಾಂಗ ವ್ಯವಹಾರಗಳ ತಜ್ಞ ರೋಬಿಂದರ್ ಸಚದೇವ್ ಅವರ ಪ್ರಕಾರ, ಸಮುದ್ರ ತೀರ ಮತ್ತು ಸಾಗರ ಭಾಗಗಳಲ್ಲಿ ಸಂಘರ್ಷ ಹೆಚ್ಚಾಗಿ ಕಂಡುಬರಬಹುದು. ಅಮೆರಿಕ ಒಂದು ಹಂತದಲ್ಲಿ ಹಿಂದೆ ಸರಿಯುವ ನಿಲುವು ತಳೆಯಬಹುದು; ಆದರೆ ಇಸ್ರೇಲ್ ತನ್ನ ದೀರ್ಘಕಾಲೀನ ಗುರಿಗಳಿಗಾಗಿ ಸಂಘರ್ಷವನ್ನು ಮುಂದುವರಿಸಬಹುದು. ಬೆಂಜಮಿನ್ ನೆತನ್ಯಾಹು ಅವರಿಗೆ ಅಮೆರಿಕದ ಬೆಂಬಲ ಮುಂದೆ ಎಷ್ಟು ಕಾಲ ಸಿಗಲಿದೆ ಎಂಬ ವಿಷಯದಲ್ಲಿ ಅನಿಶ್ಚಿತತೆ ಇದೆ.
ಯುಕ್ರೇನ್ ನಿಂದ ರಷ್ಯಾದ 12 ಪ್ರಾಂತ್ಯಗಳ ಮೇಲೆ ನೂರಾರು ಡ್ರೋನ್ ದಾಳಿ ! : Ukraine-Russia War
1985 ರಲ್ಲಿ ಏರ್ ಇಂಡಿಯಾದ ‘ಕನಿಷ್ಕ’ ವಿಮಾನದಲ್ಲಿ ಖಲಿಸ್ತಾನಿ ಭಯೋತ್ಪಾದಕರು ಸ್ಫೋಟ ನಡೆಸಿದ್ದರು! ಭಾರತೀಯ ಮೂಲದ 329 ಪ್ರಯಾಣಿಕರು ಸಾವನ್ನಪ್ಪಿದ್ದರು ! : Kanishka Blast
ಬಾಂಗ್ಲಾದೇಶದಲ್ಲಿ ಕಳೆದ ೫ ತಿಂಗಳಲ್ಲಿ ಹಿಂದೂಗಳ ವಿರುದ್ಧ ೬೪೫ ಅಪರಾಧಗಳು!
೧೦ ಸಾವಿರದಿಂದ ೧ ಲಕ್ಷ ಜನರು ಸಾವನ್ನಪ್ಪಿರುವ ಸಾಧ್ಯತೆ : Venezuela Earthquake
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಹತ್ಯೆಗೆ ‘ಮೊಸಾದ್’ ಸಂಚು ರೂಪಿಸಿತ್ತು!
ರಸ್ತೆಯಲ್ಲಿ ನಮಾಜ್ ಮತ್ತು ಅಜಾನ್ ನಿಷೇಧಿಸುವ ಚಿಂತನೆಯಲ್ಲಿ ಡೆನ್ಮಾರ್ಕ್ ಸರಕಾರ!