
ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆಯು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ತಾಯಿಯ ಬಗ್ಗೆ ಅಶ್ಲೀಲ ಮತ್ತು ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಮೌಲಾನಾ ಅಬ್ದುಲ್ಲಾ ಸಲೀಂ ಎಂಬಾತನನ್ನು ಬಿಹಾರದಿಂದ ಬಂಧಿಸಿದೆ. ರಮಜಾನ್ ಸಮಯದಲ್ಲಿ ಧಾರ್ಮಿಕ ಸಭೆಯೊಂದರಲ್ಲಿ ಮೌಲಾನಾ ನೀಡಿದ್ದ ವಿವಾದಾತ್ಮಕ ಹೇಳಿಕೆಯ ವೀಡಿಯೊ ಪ್ರಸಾರವಾದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಮೌಲಾನಾ ಅಬ್ದುಲ್ಲಾ ಸಲೀಂ ಬಿಹಾರದ ಜೋಕಿಹತ್ ಪ್ರದೇಶದ ನಿವಾಸಿಯಾಗಿದ್ದಾನೆ. ಬಂಧನದ ನಂತರ ಅಗತ್ಯ ಪ್ರಕ್ರಿಯೆಗಳನ್ನು ಪೂರೈಸಿ, ಬಿಗಿ ಭದ್ರತೆಯಲ್ಲಿ ಆತನನ್ನು ಉತ್ತರ ಪ್ರದೇಶಕ್ಕೆ ಕರೆತರಲಾಗಿದೆ. (ಇಸ್ಲಾಂ ಧರ್ಮದ ಅಭ್ಯಾಸಕನಾಗಿರುವ ಮೌಲಾನಾನಿಗೆ ಇತರರ ತಾಯಿಯ ಬಗ್ಗೆ ಆಕ್ಷೇಪಾರ್ಹವಾಗಿ ಮಾತನಾಡುವುದು ಅಸಭ್ಯತೆಯ ಲಕ್ಷಣ ಎಂಬುದು ತಿಳಿಯುವುದಿಲ್ಲವೇ? ಹಾಗಿದ್ದಲ್ಲಿ ಸಾಮಾನ್ಯ ಮತಾಂಧರು ಹೇಗೆ ವರ್ತಿಸಬಹುದು ಎಂಬುದನ್ನು ಊಹಿಸದಿರುವುದೇ ಲೇಸು! – ಸಂಪಾದಕರು)
🚨 Hate Speech Meets the Law 🚨
Maulana Abdullah Salim Chaturvedi been arrested in Bihar for making derogatory remarks against the mother of Yogi Adityanath during a Ramadan sermon
⚖️ Over 80 FIRs have been filed across multiple locations
🚔 Arrest carried out by UP STF in… pic.twitter.com/4vs4nMjCFh
— Sanatan Prabhat (@SanatanPrabhat) March 31, 2026
ರಮಜಾನ್ ಅವಧಿಯಲ್ಲಿ ಮೌಲಾನಾನ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿತ್ತು. ಉತ್ತರ ಪ್ರದೇಶದ ಗೋಹತ್ಯೆ ನಿಷೇಧ ಕಾಯ್ದೆಯನ್ನು ಟೀಕಿಸುವಾಗ ಆತ ಮುಖ್ಯಮಂತ್ರಿಯವರ ತಾಯಿಯನ್ನು ಉಲ್ಲೇಖಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದನು. ಈ ವೀಡಿಯೊ ವೈರಲ್ ಆದ ನಂತರ, ಹಲವಾರು ಸಂಘಟನೆಗಳ ಕಾರ್ಯಕರ್ತರು ಮೌಲಾನಾ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೌಲಾನಾ ವಿರುದ್ಧ ಉತ್ತರ ಪ್ರದೇಶದಲ್ಲಿ 120 ಕ್ಕೂ ಹೆಚ್ಚು ದೂರುಗಳು ದಾಖಲಾಗಿದ್ದವು. ಪ್ರಸ್ತುತ ಪೊಲೀಸರು ಈ ಬಗ್ಗೆ ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವು‘ಮೌಲಾನಾ’ ಎಂದರೆ ಇಸ್ಲಾಂ ಧರ್ಮದ ಅಭ್ಯಾಸಕ. ಇಂತಹ ಅಭ್ಯಾಸಕನೇ ಕೀಳು ಭಾಷೆಯನ್ನು ಬಳಸುತ್ತಿದ್ದರೆ, ಇನ್ನು ಸಾಮಾನ್ಯ ಮತಾಂಧ ಮುಸಲ್ಮಾನರು ಹಿಂದೂಗಳ ಬಗ್ಗೆ ಎಂತಹ ವಿಚಾರಗಳನ್ನು ಹೊಂದಿರುತ್ತಾರೆ ಎಂಬ ಕಲ್ಪನೆಯೂ ಬೇಡ! ಇಂತವರಿಗೆ ಕಠಿಣ ಶಿಕ್ಷೆಯಾಗುವುದು ಅತ್ಯಗತ್ಯ! |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ