ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ದೈವೀ ವಾಣಿಯಿಂದ ಭಕ್ತಿಸತ್ಸಂಗದಲ್ಲಿ ಹರಿದುಬಂದ ಅಮೃತಬಿಂದು !

೧. ಕೇಳಿಸಿಕೊಳ್ಳುವ ವೃತ್ತಿಯು ಸಾಧಕನ ಬಹುದೊಡ್ಡ ಶಕ್ತಿಯಾಗಿರುವುದು
ವಿವಿಧ ಸತ್ಸಂಗಗಳು, ಸಭೆಗಳು, ವ್ಯಷ್ಟಿ ವರದಿಗಳು, ಕಾರ್ಯ ವರದಿಗಳು ಇವುಗಳಲ್ಲಿ ಹೇಳಲಾಗುವ ಅಂಶಗಳನ್ನು ‘ಕೇಳಿಸಿಕೊಳ್ಳುವುದು ಮತ್ತು ಅದರಂತೆ ಕೃತಿ ಮಾಡುವುದು’ ಮಹತ್ವದ್ದಾಗಿದೆ; ಏಕೆಂದರೆ ‘ಕೇಳಿಸಿಕೊಳ್ಳುವುದು’ ಅಥವಾ ‘ಕೇಳಿಸಿಕೊಳ್ಳುವ ವೃತ್ತಿ’ಯು ಸಾಧಕನ ಬಹುದೊಡ್ಡ ಶಕ್ತಿ ಆಗಿದೆ. ಈ ಶಕ್ತಿಯ ಬಲದಿಂದ ಸಾಧಕನಿಗೆ ಅಧ್ಯಾತ್ಮದ ಹಾದಿಯಲ್ಲಿ ನಡೆಯುವುದು ಸುಲಭವಾಗುತ್ತದೆ.
೨. ಕೇಳಿಸಿಕೊಳ್ಳುವ ವೃತ್ತಿಯಿಂದ ತೋರಿಸಿದ ಮಾರ್ಗವನ್ನು ಮೈಗೂಡಿಸಿಕೊಳ್ಳಲು ಬರುತ್ತದೆ !
ಸಾಧನೆಯಲ್ಲಿ ‘ಕೇಳುವುದು’ ಎಷ್ಟು ಮುಖ್ಯವೋ, ಅಷ್ಟೇ ‘ಹೇಳಿದ್ದನ್ನು ಕೇಳಿಸಿಕೊಳ್ಳುವುದು’ ಕೂಡ ಮಹತ್ವದ್ದಾಗಿದೆ. ಅಡಚಣೆ ಅಥವಾ ಸಂದೇಹಗಳನ್ನು ಕೇಳುವುದರಿಂದ ನಮಗೆ ದಿಶೆ ಸಿಗುತ್ತದೆ. ಆದರೆ ಹೇಳಿದ್ದನ್ನು ಕೇಳಿಸಿಕೊಳ್ಳುವುದರಿಂದ ತೋರಿಸಿಕೊಟ್ಟ ಮಾರ್ಗ ಅಥವಾ ದಿಶೆಯನ್ನು ಮೈಗೂಡಿಸಿ ಕೊಳ್ಳಲು ಸಾಧ್ಯವಾಗುತ್ತದೆ.
೩. ಗುರುಗಳು ಹೇಳಿದ್ದನ್ನು ಮನಃಪೂರ್ವಕವಾಗಿ ಕೇಳಿಸಿಕೊಳ್ಳುವುದರ ಮಹತ್ವ
ಗುರುಗಳು ಅಥವಾ ಸಂತರು ಹೇಳಿದ್ದನ್ನು ಮನಃಪೂರ್ವಕ ವಾಗಿ ಕೇಳಿಸಿಕೊಂಡು, ಅದನ್ನು ಕೃತಿಯಲ್ಲಿ ತಂದರೆ, ಅವರ ಮಾತುಗಳು ಕೇವಲ ಮಾತುಗಳಾಗಿ ಉಳಿಯದೆ ‘ದಿವ್ಯ ಮಂತ್ರ’ವಾಗುತ್ತವೆ ಮತ್ತು ನಮ್ಮ ಜೀವನದಲ್ಲಿ ಆಮೂಲಾಗ್ರ ಬದಲಾವಣೆಯನ್ನು ತರುತ್ತವೆ.
೪. ಕೇಳಿಸಿಕೊಳ್ಳುವುದರಿಂದ ಗುರುಗಳೊಂದಿಗಿನ ನಮ್ಮ ಸಂಬಂಧವು ಹೆಚ್ಚು ದೃಢವಾಗುತ್ತದೆ !
ಈಶ್ವರ, ಗುರು ಮತ್ತು ಸಂತರೊಂದಿಗೆ ಸಂಬಂಧವನ್ನು ದೃಢಪಡಿಸಿಕೊಳ್ಳಲು ‘ಕೇಳಿಸಿಕೊಳ್ಳುವುದು’ ಅತ್ಯುತ್ತಮ ಸೇತುವೆ ಆಗಿದೆ. ನಮ್ಮ ಮಾತನ್ನು ಕೇಳಿಸಿಕೊಳ್ಳುವ ಜೀವವು ನಮಗೆ ಹೇಗೆ ಹತ್ತಿರದೆನಿಸುತ್ತದೆಯೋ, ಹಾಗೆಯೇ ಗುರುಗಳ ಮಾತನ್ನು ಕೇಳಿಸಿಕೊಳ್ಳುವ ಜೀವವು ಅವರ ಸ್ಮರಣೆಯಲ್ಲಿ ಹೆಚ್ಚು ಇರುತ್ತದೆ. ಆದ್ದರಿಂದ ಕೇಳಿಸಿಕೊಳ್ಳುವ ಮಾಧ್ಯಮದಿಂದ ಗುರುಗಳೊಂದಿಗಿನ ನಮ್ಮ ಸಂಬಂಧವು ತಾನಾಗಿಯೇ ದೃಢವಾಗುತ್ತದೆ.
೫. ‘ಕೇಳಿಸಿಕೊಳ್ಳುವುದು’ ಎಂದರೆ ಗುರುಕೃಪೆಯ ಮಾರ್ಗ
ಗುರುಗಳು ಅಥವಾ ಅವರ ಸಮಷ್ಟಿ ರೂಪವಾದ ಸಂತರು, ಜವಾಬ್ದಾರ ಸಾಧಕರು ಮತ್ತು ಸಹಸಾಧಕರು ಹೇಳಿದ್ದನ್ನು ಕೇಳಿಸಿಕೊಂಡು ತಕ್ಷಣ ಕೃತಿಯಲ್ಲಿ ತಂದರೆ, ಸಾಧಕನ ಮೇಲೆ ಅಪಾರ ಗುರುಕೃಪೆ ಆಗುತ್ತದೆ.
೬. ಗುರುಗಳ ಒಂದು ವಾಕ್ಯದಲ್ಲಿ ಸಂಪೂರ್ಣ ಸಾಧನೆಯ ಮಾರ್ಗ ಅಡಗಿರುವುದು
ಮೋಕ್ಷಗುರು ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಸಾಧಕರಿಗೆ ‘ಸನಾತನ ಪ್ರಭಾತ’ ನಿಯತಕಾಲಿಕೆ ಮತ್ತು ಗ್ರಂಥಗಳ ಮಾಧ್ಯಮದಿಂದ ಸತತವಾಗಿ ಮಾರ್ಗದರ್ಶನ ನೀಡುತ್ತಿರುತ್ತಾರೆ. ಶ್ರೀ ಗುರುಗಳು ಸಾಧಕರಿಗೆ ನೀಡುವ ಈ ಮಾರ್ಗದರ್ಶನವು ಯಶಸ್ವಿ ಜೀವನಕ್ಕೆ ದಿಶಾದರ್ಶನವಾಗಿದೆ. ಗುರುಗಳ ಒಂದು ವಾಕ್ಯದಲ್ಲಿ ಸಂಪೂರ್ಣ ಸಾಧನೆಯ ಮಾರ್ಗ ಅಡಗಿರುತ್ತದೆ. ಅವರು ಹೇಳಿದ್ದನ್ನು ಯಾರು ಕೇಳಿಸಿಕೊಳ್ಳುತ್ತಾರೋ, ಅವರಿಗೆ ಮಾತ್ರ ಆ ಮಾರ್ಗವು ಗೋಚರಿಸುತ್ತದೆ.
೭. ನಿಜವಾದ ಶಿಷ್ಯ
ಯಾರು ಗುರುಗಳು ಮತ್ತು ಅವರ ಸಮಷ್ಟಿ ರೂಪ ಹೇಳಿದ್ದನ್ನು ಮನಃಪೂರ್ವಕವಾಗಿ ಕೇಳಿಸಿಕೊಳ್ಳುತ್ತಾರೋ ಮತ್ತು ಅದರಂತೆ ಕೃತಿ ಮಾಡುತ್ತಾ ಜೀವನ ನಡೆಸುತ್ತಾರೋ, ಅವರೇ ನಿಜವಾದ ಶಿಷ್ಯ ! – ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ (೧೦.೧೨.೨೦೨೫)
ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !