೫ ದಿನ ಇಂಧನ ಯೋಜನೆಗಳ ಮೇಲಿನ ದಾಳಿಗಳಿಗೆ ವಿರಾಮ ನೀಡಿದ್ದ ಟ್ರಂಪ್ ಅವರ ಆದೇಶಕ್ಕೆ ಬ್ರೇಕ್ !

ನವದೆಹಲಿ – ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ೨೫ ನೇ ದಿನವೂ ಪರಸ್ಪರ ದಾಳಿಗಳು ಮುಂದುವರಿದಿವೆ. ಹಾರ್ಮುಜ್ ಜಲಸಂಧಿಯನ್ನು ೪೮ ಗಂಟೆಗಳಲ್ಲಿ ತೆರೆಯುವಂತೆ ಟ್ರಂಪ್ ಇರಾನ್‌ಗೆ ಎಚ್ಚರಿಕೆ ನೀಡಿದ್ದರು. ಆ ಬಳಿಕ ಅವರೇ ಸ್ವತಃ ಇಂಧನ ಯೋಜನೆಗಳ ಮೇಲೆ ದಾಳಿ ಮಾಡುವುದಕ್ಕೆ ೫ ದಿನಗಳ ವಿರಾಮ ನೀಡುವುದಾಗಿ ಘೋಷಣೆ ಮಾಡಿದ್ದರು; ಆದರೆ ಇದರ ನಂತರವೂ ಇಸ್ರೇಲ್ ಮಾರ್ಚ್ ೨೪ ರಂದು ಇರಾನ್‌ನ ಇಂಧನ ಯೋಜನೆಗಳ ಮೇಲೆ ದಾಳಿ ಮಾಡಿದೆ. ಇರಾನ್‌ನ ಇಸ್ಫಹಾನ್ ನಗರದ ಒಂದು ಗ್ಯಾಸ್ ಯೋಜನೆ ಮತ್ತು ಗ್ಯಾಸ್ ನಿಯಂತ್ರಣ ಕೇಂದ್ರವನ್ನು ಗುರಿಯಾಗಿಸಲಾಯಿತು. ಹಾಗೆಯೇ ಖೋರಮ್ ನಗರದ ಒಂದು ವಿದ್ಯುತ್ ಯೋಜನೆ ಮತ್ತು ಅದರ ಗ್ಯಾಸ್ ಪೈಪ್‌ಲೈನ್ ಮೇಲೂ ದಾಳಿ ಮಾಡಲಾಯಿತು.
ಇನ್ನೊಂದೆಡೆ ಇಸ್ರೇಲ್‌ನಿಂದ ಲೆಬನಾನ್‌ನಲ್ಲಿರುವ ಇರಾನ್ ಬೆಂಬಲಿತ ಭಯೋತ್ಪಾದಕ ಸಂಘಟನೆ ಹಿಜ್ಬುಲ್ಲಾದ ನೆಲೆಗಳ ಮೇಲೆ ದಾಳಿಗಳು ಮುಂದುವರಿದಿವೆ. ಹಿಜ್ಬುಲ್ಲಾವು ಇಸ್ರೇಲ್‌ನ ೫ ಸ್ಥಳಗಳ ಮೇಲೆ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಮೂಲಕ ದಾಳಿ ಮಾಡಿದೆ.
ಯುದ್ಧ ಒಂದು ವಾರದಲ್ಲಿ ಕೊನೆಗೊಳ್ಳಬಹುದಿತ್ತು; ಆದರೆ ಇಸ್ರೇಲ್‌ನಿಂದಾಗಿ ಮುಂದುವರಿದಿದೆ ! – ಇರಾನ್
ಇರಾನ್‌ನ ಸರ್ವೋಚ್ಚ ಧಾರ್ಮಿಕ ನಾಯಕ ಮೊಜ್ತಬಾ ಖಮೇನಿ ಅವರ ಹಿರಿಯ ಸೇನಾ ಸಲಹೆಗಾರ ಮೊಹ್ಸಿನ್ ರಜಾಯಿ ಅವರು, ಈ ಯುದ್ಧವು ಒಂದು ವಾರದೊಳಗೆ ಕೊನೆಗೊಳ್ಳಬಹುದಿತ್ತು; ಆದರೆ ಇಸ್ರೇಲ್‌ನಿಂದಾಗಿ ಅದು ಮುಂದುವರಿಯಿತು ಎಂದು ಹೇಳಿದರು. ಅಮೆರಿಕ ಕದನ ವಿರಾಮಕ್ಕೆ ಸಿದ್ಧವಾಗಿತ್ತು ಮತ್ತು ಸಂಘರ್ಷವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಮುನ್ನಡೆಯುತ್ತಿತ್ತು ಎಂದು ಅವರು ಹೇಳಿದರು. ಯುದ್ಧದ ೧೫ ನೇ ದಿನದ ನಂತರ, ಈ ಸಂಘರ್ಷದಲ್ಲಿ ಗೆಲುವಿನ ಯಾವುದೇ ಮಾರ್ಗವಿಲ್ಲ ಎಂಬುದು ಅಮೆರಿಕಕ್ಕೂ ಅರ್ಥವಾಗಿತ್ತು; ಆದರೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರು ದಾಳಿಯನ್ನು ಮುಂದುವರಿಸಲು ಒತ್ತು ನೀಡಿದರು, ಇದರಿಂದಾಗಿ ಯುದ್ಧವು ದೀರ್ಘವಾಯಿತು.
ಟ್ರಂಪ್ ಅವರು ಇರಾನ್ ಮೇಲಿನ ದಾಳಿಯ ಹೊಣೆಯನ್ನು ರಕ್ಷಣಾ ಸಚಿವ ಹೆಗ್ಸೆತ್ ಮೇಲೆ ಹೊರಿಸಿದರು !
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ತಮ್ಮ ರಕ್ಷಣಾ ಸಚಿವ ಪೀಟ್ ಹೆಗ್ಸೆತ್ ಅವರು ಇರಾನ್ ವಿರುದ್ಧದ ಸೇನಾ ಕಾರ್ಯಾಚರಣೆಗೆ ಮೊದಲು ಬೆಂಬಲ ನೀಡಿದ್ದರು ಎಂದು ಹೇಳಿದರು. ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವುದನ್ನು ತಡೆಯುವುದು ಅತ್ಯಗತ್ಯ ಮತ್ತು ಆದ್ದರಿಂದ ಕ್ರಮ ಕೈಗೊಳ್ಳಲೇಬೇಕು ಎಂದು ಹೆಗ್ಸೆತ್ ಹೇಳಿದ್ದರು. ಇರಾನ್‌ನ ಕ್ಷಿಪಣಿಗಳು, ಡ್ರೋನ್‌ಗಳು ಮತ್ತು ನೌಕಾಪಡೆಯ ಶಕ್ತಿಯನ್ನು ನಾಶಪಡಿಸುವುದು ಅಮೆರಿಕದ ಗುರಿಯಾಗಿದೆ ಎಂದು ಅವರು ಹೇಳಿದ್ದಾರೆ. ಆದಾಗ್ಯೂ ‘ಈ ಯುದ್ಧ ಯಾವಾಗ ಕೊನೆಗೊಳ್ಳುತ್ತದೆ ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ’, ಎಂದು ಟ್ರಂಪ್ ಹೇಳಿದರು.
ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ದಾಳಿಯ ನಿರ್ಧಾರದಿಂದ ಸಂಪೂರ್ಣವಾಗಿ ಸಂತೋಷಗೊಂಡಿರಲಿಲ್ಲ ಎಂಬುದನ್ನು ಟ್ರಂಪ್ ಒಪ್ಪಿಕೊಂಡರು; ಆದರೆ ಅವರು ಬಹಿರಂಗವಾಗಿ ವಿರೋಧಿಸಲಿಲ್ಲ. ಕೆಲವು ಅಧಿಕಾರಿಗಳು ಯುದ್ಧವನ್ನು ಬೆಂಬಲಿಸಿದರೆ, ಇನ್ನು ಕೆಲವರು ವಿರೋಧಿಸಿದರು. ಓರ್ವ ಹಿರಿಯ ಅಧಿಕಾರಿಯು ರಾಜೀನಾಮೆ ನೀಡಿದರು.
ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಖಾಲಿಬಾಫ್ ಅಮೆರಿಕದೊಂದಿಗೆ ಮಾತುಕತೆ ನಡೆಸುವ ನಾಯಕರಾಗಿರಬಹುದು !
ಟ್ರಂಪ್ ಅವರು, ‘ನಾನು ಓರ್ವ ಪ್ರಮುಖ ಇರಾನ್ ನಾಯಕನೊಂದಿಗೆ ಕದನ ವಿರಾಮಕ್ಕಾಗಿ ಮಾತುಕತೆ ನಡೆಸುತ್ತಿದ್ದೇನೆ’ ಎಂದು ಹೇಳಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ ಈ ಪ್ರಮುಖ ನಾಯಕ ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘೇರ್ ಖಾಲಿಬಾಫ್ ಆಗಿರಬಹುದು. ಅಮೆರಿಕದೊಂದಿಗೆ ಇನ್ನೂ ಯಾವುದೇ ಮಾತುಕತೆ ನಡೆದಿಲ್ಲ ಎಂದು ಖಾಲಿಬಾಫ್ ಹೇಳಿದ್ದಾರೆ. ಅವರು ಟ್ರಂಪ್ ಅವರ ನೀತಿಗಳನ್ನು ಟೀಕಿಸಿದರು. ಖಾಲಿಬಾಫ್ ಅವರು ಹಲವು ಬಾರಿ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದ್ದಾರೆ; ಆದರೆ ಅವರು ಎಂದಿಗೂ ಗೆದ್ದಿಲ್ಲ. ಮಸೌದ್ ಪೆಜೆಶ್ಕಿಯಾನ್ ಗೆದ್ದಿದ್ದ ೨೦೨೪ ರ ಚುನಾವಣೆಯಲ್ಲಿ ಅವರು ಮೂರನೇ ಸ್ಥಾನದಲ್ಲಿದ್ದರು.
ಟ್ರಂಪ್ ಸುಳ್ಳುಗಾರರಾಗಿರುವುದರಿಂದ ಅವರ ಮೇಲೆ ನಂಬಿಕೆ ಇಡಲು ಸಾಧ್ಯವಿಲ್ಲ ! – ಇರಾನ್
ಇರಾನ್ ಸಂಸತ್ತಿನ ಉಪಸಭಾಪತಿ ಅಲಿ ನಿಕ್ಜಾದ್ ಅವರು, ದೇಶವು ಅಮೆರಿಕದ ವಿರುದ್ಧ ಕಠಿಣ ನಿಲುವು ತಾಳಬೇಕು ಮತ್ತು ಟ್ರಂಪ್ ಅವರೊಂದಿಗೆ ಮಾತುಕತೆ ನಡೆಸಬಾರದು ಎಂದು ಹೇಳಿದರು. ಒಂದು ವೇಳೆ ಅವರು ಸತ್ಯ ಹೇಳುತ್ತಿದ್ದರೆ, ಅವರು ‘ಯಾರೊಂದಿಗೆ ಮಾತುಕತೆ ನಡೆಸಿದ್ದಾರೆ ?’, ಎಂಬುದನ್ನು ಸ್ಪಷ್ಟಪಡಿಸಬೇಕು. ಇರಾನ್ ತನ್ನ ಸೇನೆಯ ಬೆನ್ನಿಗೆ ದೃಢವಾಗಿ ನಿಂತಿದೆ. ಇರಾನ್ ಒತ್ತಡಕ್ಕೆ ಮಣಿದು ಮಾತುಕತೆ ನಡೆಸಬಾರದು. ಮಾತುಕತೆ ನಡೆಯುತ್ತಿರುವಾಗಲೇ ಅಮೆರಿಕ ಈ ಹಿಂದೆ ಜೂನ್ ೨೦೨೫ ಮತ್ತು ಫೆಬ್ರವರಿ ೨೦೨೫ ರಲ್ಲಿ ಇರಾನ್ ಮೇಲೆ ಎರಡು ಬಾರಿ ದಾಳಿ ಮಾಡಿತ್ತು. ಇಂತಹ ಪರಿಸ್ಥಿತಿಯಲ್ಲಿ ಅಮೆರಿಕವನ್ನು ನಂಬುವುದು ಕಷ್ಟ ಮತ್ತು ಇರಾನ್ ಎಚ್ಚರಿಕೆಯಿಂದಿರಬೇಕು ಎಂದು ಅವರು ಒತ್ತಿ ಹೇಳಿದರು.
ಪಾಕಿಸ್ತಾನದಿಂದ ಅಮೆರಿಕ ಮತ್ತು ಇರಾನ್ ನಡುವೆ ಮಧ್ಯಸ್ಥಿಕೆ ವಹಿಸುವ ಪ್ರಯತ್ನ !
ಪಾಕಿಸ್ತಾನ, ಈಜಿಪ್ಟ್ ಮತ್ತು ಟರ್ಕಿಯೆ ದೇಶಗಳು ಒಟ್ಟಾಗಿ ಇರಾನ್ ಮತ್ತು ಅಮೆರಿಕ ನಡುವೆ ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸುತ್ತಿವೆ. ಪಾಕಿಸ್ತಾನಿ ದಿನಪತ್ರಿಕೆ ‘ಡಾನ್’ ವರದಿಯ ಪ್ರಕಾರ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ, ಹಾಗೆಯೇ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಅಮೆರಿಕದ ವಿಶೇಷ ದೂತ ಸ್ಟೀವ್ ವಿಟ್ಕಾಫ್ ಮತ್ತು ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅವರೂ ಪಾತ್ರ ವಹಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಹಾರ್ಮುಜ್ ಜಲಸಂಧಿಯ ಸಮಸ್ಯೆಯನ್ನು ಪರಿಹರಿಸಲು ಮಾತುಕತೆಯ ಮಾರ್ಗವನ್ನು ಸೂಚಿಸಲಾಗಿದೆ ! – ಪ್ರಧಾನಿ ಮೋದಿ

ಮಧ್ಯಪ್ರಾಚ್ಯದ ಯುದ್ಧದಿಂದ ಭಾರತದ ಮೇಲಾಗುವ ಪರಿಣಾಮಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ ೨೩ ರಂದು ಲೋಕಸಭೆಯಲ್ಲಿ ಮತ್ತು ಮಾರ್ಚ್ ೨೪ ರಂದು ರಾಜ್ಯಸಭೆಯಲ್ಲಿ ಮಾಹಿತಿ ನೀಡಿದರು. ಈ ಬಿಕ್ಕಟ್ಟಿನಿಂದಾಗಿ ನಮ್ಮ ವ್ಯಾಪಾರ ಮಾರ್ಗಗಳ ಮೇಲೆ ಪರಿಣಾಮ ಬೀರಲಾಗುತ್ತಿದೆ ಎಂದು ಅವರು ಹೇಳಿದರು. ಗ್ಯಾಸ್ ಮತ್ತು ತೈಲದಂತಹ ಅಗತ್ಯ ವಸ್ತುಗಳ ಪೂರೈಕೆಯ ಮೇಲೆ ಪರಿಣಾಮ ಬೀರುತ್ತಿದೆ. ನಾವು ಹಾರ್ಮುಜ್ ಜಲಸಂಧಿಯನ್ನು ತೆರೆಯುವ ಬಗ್ಗೆ ಚರ್ಚಿಸಿದ್ದೇವೆ. ವಾಣಿಜ್ಯ ಹಡಗುಗಳ ಮೇಲಿನ ದಾಳಿಗಳು ಸ್ವೀಕಾರಾರ್ಹವಲ್ಲ. ಭಾರತವು ಈ ಸಮಸ್ಯೆಯನ್ನು ಪರಿಹರಿಸಲು ಮಾತುಕತೆಯ ಮಾರ್ಗವನ್ನು ಸೂಚಿಸಿದೆ. ಯಾರದೇ ಜೀವವನ್ನು ಅಪಾಯಕ್ಕೆ ಸಿಲುಕಿಸುವುದು ಮಾನವೀಯತೆಯ ಹಿತದೃಷ್ಟಿಯಿಂದ ಸರಿಯಲ್ಲ, ಎಂದು ಹೇಳಿದರು.
ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವ ನಮ್ಮ ನಿರ್ಧಾರ ಸರಿಯಾಗಿತ್ತು ಎಂಬುದನ್ನು ಇರಾನ್ ಯುದ್ಧ ಸಾಬೀತುಪಡಿಸಿದೆ ! – ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್
ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ಮಾಡಿದ ದಾಳಿಗಳಿಂದ, ನಾವು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವ ಬಗ್ಗೆ ತೆಗೆದುಕೊಂಡ ನಿರ್ಧಾರವು ಸರಿಯಾಗಿತ್ತು ಎಂಬುದು ಸಾಬೀತಾಗುತ್ತದೆ ಎಂದು ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಹೇಳಿದ್ದಾರೆ. ಇಂದಿನ ಜಗತ್ತಿನಲ್ಲಿ ಕೇವಲ ಬಲಿಷ್ಠ ಸೇನಾ ಶಕ್ತಿ ಮಾತ್ರವೇ ದೇಶವನ್ನು ಸುರಕ್ಷಿತವಾಗಿಡಬಲ್ಲದು ಎಂಬುದನ್ನು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವು ತೋರಿಸುತ್ತದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ಭಾರತದ ನೂತನ ಭೂಸೇನಾ ಮುಖ್ಯಸ್ಥರಾಗಿ ಜನರಲ್ ಧೀರಜ್ ಸೇಠ್
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಚೀನಾದ ಸೇನೆಯೊಂದಿಗೆ ಪ್ರತಿ ವರ್ಷ ೧ ಸಾವಿರದ, ೧೦೦ ಬಾರಿ ಮುಖಾಮುಖಿ ಮಾತುಕತೆ!
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ