ಸನಾತನದ ಸಾಧಕಿ ಆಧುನಿಕ ವೈದ್ಯೆ (ಸೌ.) ಮಧುವಂತಿ ಪಿಂಗಳೆ ಇವರು ಸನಾತನದ ೧೦೧ ನೇ ಸಂತರಾದ ಜ್ಞಾನಯೋಗಿ ಪೂ. ಅನಂತ ಆಠವಲೆ (ಪೂ. ಭಾವುಕಾಕಾ, ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಹಿರಿಯ ಸಹೋದರ, ವಯಸ್ಸು ೯೦ ವರ್ಷ) ಇವರಿಗೆ ಜಿಜ್ಞಾಸೆಯಿಂದ ಕೆಲವು ಪ್ರಶ್ನೆಗಳನ್ನು ಕೇಳಿದರು. ಅವರ ಆ ಪ್ರಶ್ನೆಗಳಿಗೆ ಪೂ. ಅನಂತ ಆಠವಲೆಯವರು ನೀಡಿದ ಉತ್ತರಗಳನ್ನು ಮುಂದೆ ಕೊಡಲಾಗಿದೆ.

ಆಧುನಿಕ ವೈದ್ಯೆ (ಸೌ.) ಮಧುವಂತಿ ಪಿಂಗಳೆ ಇವರು ಕೇಳಿದ ಪ್ರಶ್ನೆಗಳು
ನೀವು ನಿಮ್ಮ ಕೆಲವು ಲೇಖನಗಳಲ್ಲಿ ‘ನಾನು’ ಅಂದರೆ ದೇಹ, ಮನಸ್ಸು ಮತ್ತು ಬುದ್ಧಿ ಅಲ್ಲ ಮತ್ತು ‘ನಾನು’ ಅಂದರೆ ಯಾರು ?’, ಎಂಬ ಬಗ್ಗೆ ವಿಶ್ಲೇಷಣೆ ಮಾಡಿದ್ದೀರಿ; ಆದರೆ ಅದರಂತೆ ನನಗೆ ನನ್ನನ್ನು ಆ ರೀತಿ ನೋಡಲು ಬರುವುದಿಲ್ಲ. ನನ್ನ ಮನಸ್ಸಿನಲ್ಲಿ ಸತತವಾಗಿ ಬೇರೆ ಬೇರೆ ವಿಚಾರಗಳು ಮತ್ತು ಕೆಟ್ಟ ನೆನಪುಗಳು ಕೂಡ ಬರುತ್ತಿರುತ್ತವೆ. ಆದ್ದರಿಂದ ನನಗೆ ಮನಸ್ಸಿನ ಏಕಾಗ್ರತೆ ಸಾಧಿಸಲಾಗುವುದಿಲ್ಲ, ಹಾಗೆಯೇ ಕೆಲವೊಮ್ಮೆ ನನಗೆ ಈ ವಿಚಾರಗಳಿಂದ ತೊಂದರೆಯಾಗುತ್ತದೆ. ಇದಕ್ಕೆ ಪರಿಹಾರವೇನು ?
ಪೂ. ಅನಂತ ಆಠವಲೆಯವರು ನೀಡಿದ ಉತ್ತರ :
೧. ಮನಸ್ಸಿನ ಮೇಲೆ ನಿಯಂತ್ರಣದಲ್ಲಿಡಲು ಸಾಧ್ಯವಾಗದಿರುವುದು ಮತ್ತು ಭಗವಾನ ಶ್ರೀಕೃಷ್ಣನು ಹೇಳಿದ ಪರಿಹಾರ
“ನನ್ನ ಮನಸ್ಸಿನಲ್ಲಿ ಸತತವಾಗಿ ಬೇರೆ ಬೇರೆ ವಿಚಾರಗಳು ಬರುತ್ತಿರುತ್ತವೆ. ಆದ್ದರಿಂದ ನನ್ನ ಮನಸ್ಸಿನ ಏಕಾಗ್ರತೆಯನ್ನು ಸಾಧಿಸಲು ಸಾಧ್ಯವಾಗುವುದಿಲ್ಲ, ಮತ್ತು ಕೆಲವೊಮ್ಮೆ ನನಗೆ ಈ ವಿಚಾರಗಳ ತೊಂದರೆಯಾಗುತ್ತದೆ,” ಎಂದು ನೀವು ಹೇಳುತ್ತೀರಿ. ಅರ್ಜುನನು ಕೂಡ ಭಗವಾನ ಶ್ರೀಕೃಷ್ಣನಿಗೆ ಹೀಗೆಯೇ ಹೇಳಿದ್ದನು –
ಚಞ್ಚಲಂ ಹಿ ಮನಃ ಕೃಷ್ಣ ಪ್ರಮಾಥಿ ಬಲವದ್ದೃಢಮ್ |
ತಸ್ಯಾಹಂ ನಿಗ್ರಹಂ ಮನ್ಯೇ ವಾಯೋರಿವ ಸುದುಷ್ಕರಮ್ ||
– ಭಗವದ್ಗೀತೆ ಅಧ್ಯಾಯ ೬ ಶ್ಲೋಕ ೩೪
ಅರ್ಥ – ಹೇ ಕೃಷ್ಣಾ, ಮನಸ್ಸು ಚಂಚಲ, ವಿದ್ರೋಹಿ, ಶಕ್ತಿಶಾಲಿ ಮತ್ತು ದೃಢವಾಗಿರುತ್ತದೆ. ಇದನ್ನು ನಿಯಂತ್ರಿಸುವುದು ಗಾಳಿಯನ್ನು ಹಿಡಿಯುವುದಕ್ಕಿಂತಲೂ ಕಠಿಣವಾಗಿದೆ ಎಂದು ನಾನು ಭಾವಿಸುತ್ತೇನೆ.
ಇದನ್ನು ಒಪ್ಪಿಕೊಂಡು ಭಗವಾನ ಶ್ರೀಕೃಷ್ಣನು ಮುಂದಿನಂತೆ ಪರಿಹಾರವನ್ನು ಹೇಳಿದನು –
ಅಸಂಶಯಂ ಮಹಾಬಾಹೋ ಮನೋ ದುರ್ನಿಗ್ರಹಂ ಚಲಮ್ |
ಅಭ್ಯಾಸೇನ ತು ಕೌನ್ತೇಯ ವೈರಾಗ್ಯೇಣ ಚ ಗೃಹ್ಯತೇ ||
– ಭಗವದ್ಗೀತೆ ಅಧ್ಯಾಯ ೬ ಶ್ಲೋಕ ೩೫
ಅರ್ಥ – ಮಹಾಬಾಹು ಅರ್ಜುನಾ, ಮನಸ್ಸನ್ನು ನಿಯಂತ್ರಣದಲ್ಲಿ ಇಡುವುದು ತುಂಬಾ ಕಠಿಣವಾಗಿದೆ ಮತ್ತು ಚಂಚಲವಾಗಿದೆ ಇದರಲ್ಲಿ ಸಂದೇಹವಿಲ್ಲ. ಆದರೆ ಅಭ್ಯಾಸ ಮಾಡುವುದರಿಂದ ಮತ್ತು ವೈರಾಗ್ಯದಿಂದ ಅದನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಸಿಟ್ಟು ಎಂದರೆ ಅನುರಾಗ, ಪ್ರೀತಿ ಮತ್ತು ಸುಖ ನೀಡುವ ವಿಷಯಗಳ ಅಭಿಲಾಷೆ (ಆಸೆ). ಇಂತಹ ಸುಖಗಳ ಆಕರ್ಷಣೆಯಿಂದ ಅವುಗಳನ್ನು ಪಡೆಯಲು ಮನುಷ್ಯನು ಒಳ್ಳೆಯ ಮತ್ತು ಕೆಟ್ಟ ಕರ್ಮಗಳನ್ನು ಮಾಡುತ್ತಲೇ ಇರುತ್ತಾನೆ. ಇಂತಹ ಅಭಿಲಾಷೆಗಳನ್ನು ಅಥವಾ ಆಕರ್ಷಣೆಗಳನ್ನು ಬಿಡುವುದು ಮತ್ತು ಭೋಗಗಳಲ್ಲಿ ಆಸಕ್ತಿ ಇಲ್ಲದಿರುವುದೇ ‘ವೈರಾಗ್ಯ’. ಇದು ನಮಗೆ ತಿಳಿದಿದ್ದರೂ, ಒಂದೇ ಕ್ಷಣದಲ್ಲಿ ಇವೆಲ್ಲವನ್ನೂ ಬಿಡಲು ಸಾಧ್ಯವಿಲ್ಲ; ಆದ್ದರಿಂದ ಇದನ್ನು ನಿರಂತರವಾಗಿ ಅಭ್ಯಾಸ ಮಾಡಬೇಕಾಗುತ್ತದೆ.
೨. ಇತರ ಪರಿಹಾರಗಳ ಅವಶ್ಯಕತೆ

ಮನಸ್ಸಿನಲ್ಲಿ ಸತತವಾಗಿ ಏನಾದರೊಂದು ವಿಚಾರಗಳು ಬರುತ್ತಲೇ ಇರುತ್ತವೆ, ಹಳೆಯ ಒಳ್ಳೆಯ-ಕೆಟ್ಟ ನೆನಪುಗಳು ಬರುತ್ತಲೇ ಇರುತ್ತವೆ. ಅವುಗಳನ್ನು ತಡೆಯಲು ಸಾಧ್ಯವಾಗುವುದಿಲ್ಲ. ಈಶ್ವರಪ್ರಾಪ್ತಿ ಮಾಡಿಕೊಳ್ಳುವುದಾದರೆ ಅಥವಾ ಮೋಕ್ಷವನ್ನು ಪಡೆಯಬೇಕಾದರೆ, ಮನಸ್ಸನ್ನು ನಿಯಂತ್ರಿಸಲೇಬೇಕು ಮತ್ತು ಅದಕ್ಕಾಗಿ ಭಗವಾನ ಶ್ರೀಕೃಷ್ಣನು ಉತ್ತಮ ಪರಿಹಾರವನ್ನು ನೀಡಿದ್ದಾನೆ. ಆದರೆ ಈ ಪರಿಹಾರವು ಅತ್ಯಂತ ಕಠಿಣವಾಗಿದೆ. ಪುರಾಣಗಳಲ್ಲಿ ನಾವು ಅನೇಕ ಕಥೆಗಳನ್ನು ಓದುತ್ತೇವೆ, ಮಹಾನ ಋಷಿ-ಮುನಿಗಳಿಗೆ, ಅತ್ಯಂತ ಕಠಿಣ ತಪಶ್ಚರ್ಯದಿಂದ ಸಿದ್ಧಿಯನ್ನು ಗಳಿಸಿದ ಮಹಾತ್ಮರಿಗೂ ಮನಸ್ಸನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಸ್ವಲ್ಪ ಮಟ್ಟಿಗೆ ಮನಸ್ಸಿನ ವಿರುದ್ಧ ಘಟಿಸಿದರೂ, ಅವರು ಇತರರಿಗೆ ಶಾಪವನ್ನು ಕೊಡುತ್ತಿದ್ದರು. ಅಂದರೆ ಕ್ರೋಧ ಇತ್ಯಾದಿಗಳು ಮನಸ್ಸಿನ ವಿಕಾರಗಳ ಮೇಲೆ ಅವರಿಗೆ ನಿಯಂತ್ರಣವನ್ನಿಡಲು ಸಾಧ್ಯವಾಗಲಿಲ್ಲ, ಹೀಗಿರುವಾಗ ಸಾಮಾನ್ಯ ಮನುಷ್ಯರಿಗಂತೂ ಅದು ತುಂಬಾ ಕಠಿಣವೇ ಆಗಿದೆ. ಇಡೀ ಆಯುಷ್ಯವು ಮನಸ್ಸನ್ನು ವಶಪಡಿಸಿಕೊಳ್ಳುವುದರಲ್ಲಿಯೇ ಕಳೆಯುವುದು, ಹಾಗಾದರೆ ಈಶ್ವರಪ್ರಾಪ್ತಿಗಾಗಿ ಪ್ರಯತ್ನಿಸುವುದು ಯಾವಾಗ ? ಆದ್ದರಿಂದ ಈ ವಿಷಯದ ಬಗ್ಗೆ ಸ್ವಲ್ಪ ಭಿನ್ನವಾಗಿ ವಿಚಾರ ಮಾಡೋಣ.
ಮನಸ್ಸು, ಬುದ್ಧಿ ಮತ್ತು ಅಹಂಕಾರ ಈ ಮೂರು ಕೇವಲ ಕರಣಗಳಾಗಿವೆ. ನಾವು ಅವುಗಳ ನಿಯಂತ್ರಣದಲ್ಲಿರದೇ ಅವು ನಮ್ಮ ನಿಯಂತ್ರಣದಲ್ಲಿರಬೇಕು. ಹೇಗೆ ಎಂಬುದನ್ನು ನೋಡೋಣ.
೩. ಮನಸ್ಸು, ಬುದ್ಧಿ ಮತ್ತು ಅಹಂಕಾರ
೩ ಅ. ಮನಸ್ಸಿನ ಸ್ವರೂಪ
ಮೊದಲು ‘ಮನಸ್ಸು’ ಅಂದರೇನು, ಎಂಬುದನ್ನು ತಿಳಿದುಕೊಳ್ಳೋಣ.
‘ಮನಸ್ಸು’ ಶಬ್ದದ ವ್ಯಾಖ್ಯೆ : ‘ಸಙ್ಕಲ್ಪವಿಕಲ್ಪಾತ್ಮಕಂ ಮನಃ |’
ಮನಸ್ಸಿನಲ್ಲಿ ಸತತವಾಗಿ ಸಂಕಲ್ಪ, ವಿಕಲ್ಪಗಳು ಬರುತ್ತಿರುತ್ತವೆ, ಬೇರೆ ಬೇರೆ ವಿಚಾರಗಳು ಬರುತ್ತಿರುತ್ತವೆ. ಸಂಕಲ್ಪ-ವಿಕಲ್ಪ, ವಿಚಾರ ಇವು ಮನಸ್ಸಿನ ಸ್ವರೂಪವಾಗಿವೆ.
೩ ಅ ೧. ಮನಸ್ಸಿಗೆ ಸಂಬಂಧಿಸಿದ ಪರಿಹಾರಗಳು
ಮನಸ್ಸು ಕೇವಲ ಸಾಧನವಾಗಿದೆ, ಸಾಧ್ಯವಲ್ಲ : ನಮ್ಮ ದೇಹದಲ್ಲಿ ಹದಿಮೂರು ಸಾಧನಗಳಿವೆ. ಅವುಗಳನ್ನೇ ‘ಕರಣ’ ಎಂದು ಕರೆಯುತ್ತಾರೆ. ‘ಕರಣ’ವೆಂದರೆ ಕಾರ್ಯ ಮಾಡಲು ಬೇಕಾಗುವ ಉಪಕರಣಗಳು, ಆಯುಧಗಳು. ಉದಾ. ಕೃಷಿ ಮಾಡಲು ನೇಗಿಲು, ಗುದ್ದಲಿ, ಬುಟ್ಟಿ ಇತ್ಯಾದಿಗಳು ಕರಣಗಳಾಗಿವೆ. ಅದೇ ರೀತಿ ಮನುಷ್ಯನ ದೇಹದಲ್ಲಿ ಕಾರ್ಯವನ್ನು ಮಾಡಲು ಐದು ಜ್ಞಾನೇಂದ್ರಿಯಗಳು ಮತ್ತು ಐದು ಕರ್ಮೇಂದ್ರಿಯಗಳು, ಇವು ಹತ್ತು ಹೊರಗಿನ ಕರಣಗಳಾಗಿವೆ. ಅದರ ಹೊರತು ಮನಸ್ಸು, ಬುದ್ಧಿ ಮತ್ತು ಅಹಂಕಾರ ಈ ಮೂರು ಕರಣಗಳು ಆಂತರಿಕವಾಗಿದ್ದು ಅವುಗಳನ್ನು ಅಂತಃಕರಣ ಅನ್ನುತ್ತಾರೆ. ಈ ಒಟ್ಟು ಹದಿಮೂರು ಕರಣಗಳ ಸಹಾಯದಿಂದ ನಾವು ದೈಹಿಕ, ಮಾನಸಿಕ ಮತ್ತು ಬೌದ್ಧಿಕ ಕ್ರಿಯೆಗಳನ್ನು ಮಾಡುತ್ತೇವೆ. ನಾವು ನಮ್ಮ ಕೈ ಮತ್ತು ಕಾಲುಗಳ ಬಗ್ಗೆ ಹೆಚ್ಚು ವಿಚಾರ ಮಾಡುವುದಿಲ್ಲ. ನಾವು ಬಳಸುವಾಗ ಅಷ್ಟೇ ಅವುಗಳ ವಿಚಾರ ಮಾಡುತ್ತೇವೆ; ಆದರೆ ನಮ್ಮ ಮನಸ್ಸಿಗೆ ಹೆಚ್ಚು ಮಹತ್ವ ಕೊಡುತ್ತೇವೆ. ಆದ್ದರಿಂದ ನಮಗೆ ಅದರ ತೊಂದರೆಯಾಗುತ್ತದೆ. ಆದರೆ ಈ ವಿಷಯವನ್ನು ಸರಿಯಾಗಿ ಗಮನಿಸಿಬೇಕು ಏನೆಂದರೆ, ಹದಿಮೂರು ಕರಣಗಳಲ್ಲಿ ಕೇವಲ ಮನಸ್ಸು ಮಾತ್ರ ಕರಣವಾಗಿದೆ. ಅಂದರೆ ಸಾಧನವಾಗಿದೆ, ಸಾಧ್ಯವಲ್ಲ. ಮನಸ್ಸು ಧ್ಯೇಯವಲ್ಲ, ಈಶ್ವರಪ್ರಾಪ್ತಿಯು ಧ್ಯೇಯವಾಗಿದೆ. ವಿಚಾರಗಳ ಬಗ್ಗೆಯೇ ಚಿಂತಿಸುತ್ತಿದ್ದರೆ ಯಾರ ಬಗ್ಗೆ ಚಿಂತನೆಯಾಗುತ್ತದೆ ? ಮನಸ್ಸಿನದ್ದೇ ! ಆದರೆ ಚಿಂತನವು ಈಶ್ವರನದ್ದಾಗಬೇಕು (ಜ್ಞಾನಮಾರ್ಗದಲ್ಲಿ ಬ್ರಹ್ಮಾನುಸಂಧಾನ) !
ಆಗ, ಮನಸ್ಸಿನಲ್ಲಿ ವಿಚಾರಗಳು ಬರುತ್ತಲೇ ಇರುವುವು, ಅವುಗಳಿಗೆ ಮಹತ್ವವನ್ನು ನೀಡದೇ ಅವುಗಳನ್ನು ದುರ್ಲಕ್ಷಿಸಿ ಈಶ್ವರನ ಚಿಂತನೆಯ ಕಡೆಗೆ ಹೊರಳುವುದರಿಂದ ಮನಸ್ಸಿನಲ್ಲಿನ ಇತರ ವಿಷಯಗಳ ಮಹತ್ವವು ಕಡಿಮೆಯಾಗುತ್ತ ಹೋಗುವುದು.
೩ ಆ. ಬುದ್ಧಿಯ ಸ್ವರೂಪ
‘ಬುದ್ಧಿ’ ಶಬ್ದದ ವ್ಯಾಖ್ಯೆ : ‘ನಿಶ್ಚಯಾತ್ಮಿಕಾ ಬುದ್ಧಿಃ’ ನಿಶ್ಚಯಿಸುವುದು, ನಿರ್ಧಾರ ತೆಗೆದುಕೊಳ್ಳುವುದು, ಇದು ಬುದ್ಧಿಯ ಸ್ವರೂಪವಾಗಿದೆ. ಮನಸ್ಸಿನಲ್ಲಿನ ವಿಚಾರಗಳ ಬಗ್ಗೆ ಯೋಗ್ಯ ಅಥವಾ ಅಯೋಗ್ಯ ಯಾವುದು ಎಂಬುದನ್ನು ನಾವು ಬುದ್ಧಿಯಿಂದ ನಿರ್ಧರಿಸುತ್ತೇವೆ, ಯಾವ ಕರ್ಮವನ್ನು ಮಾಡಬೇಕು ಎಂಬುದನ್ನು ನಿರ್ಧರಿಸುತ್ತೇವೆ. ಅಂದರೆ ಮನಸ್ಸಿಗಿಂತ ಬುದ್ಧಿಯು ಶ್ರೇಷ್ಠವಾಗಿದೆ. ಭಗವಾನ ಶ್ರೀಕೃಷ್ಣನು ‘ಮನಸಸ್ತು ಪರಾ ಬುದ್ಧಿಃ’ (ಭಗವದ್ಗೀತೆ ಅಧ್ಯಾಯ ೬ ಶ್ಲೋಕ ೩೫) ಅಂದರೆ ಮನಸ್ಸಿಗಿಂತ ಬುದ್ಧಿಯು ಶ್ರೇಷ್ಠವಾಗಿದೆ ಎಂದು ಹೇಳಿದ್ದಾನೆ.
೩ ಆ ೧. ಬುದ್ಧಿಯಿಂದ ಮಾಡುವ ಉಪಾಯ
ಮನಸ್ಸಿನಲ್ಲಿ ಯಾವುದೇ ವಿಚಾರಗಳು ಬರುತ್ತಿರಲಿ, ಅವುಗಳಲ್ಲಿ ಯಾವುದು ಯೋಗ್ಯವಿದೆ ಎಂಬ ನಿರ್ಧಾರವನ್ನು ನಾವು ಬುದ್ಧಿಯಿಂದ ತೆಗೆದುಕೊಳ್ಳಬೇಕು. ಮನಸ್ಸಿನಲ್ಲಿನ ವಿಚಾರಗಳನ್ನು ಹತ್ತಿಕ್ಕಲು ಪ್ರಯತ್ನಿಸಿದರೆ ಅವು ಇನ್ನಷ್ಟು ಹೆಚ್ಚು ಮೇಲೆದ್ದು ಬರುತ್ತವೆ. ಆಗ ಬುದ್ಧಿಯಿಂದ ಮನಸ್ಸನ್ನು ಗೆದ್ದು ಯಾವುದೇ ಪಾಪ ತಗಲುವಂತಹ ಅನುಚಿತ ಕರ್ಮಗಳನ್ನು ಮಾಡಬಾರದು. ಮನಸ್ಸಿನಲ್ಲಿ ವಿಚಾರಗಳು ಬರುತ್ತಾ-ಹೋಗುತ್ತಿರಲಿ, ಬುದ್ಧಿಯ ಯೋಗ್ಯ ನಿರ್ಧಾರದ ಮೇಲೆ ದೃಢವಾಗಿರಬೇಕು, ಆಗ ಮನಸ್ಸಿನ ವಿಚಾರಗಳಿಂದ ಯಾವುದೇ ಹಾನಿ ಆಗುವುದಿಲ್ಲ. ಯಾವ ವಿಚಾರಗಳು ಹಾನಿ ಮಾಡಲು ಸಾಧ್ಯವೇ ಇಲ್ಲವೋ, ಅವುಗಳಿಗೆ ಏನೂ ಮಹತ್ವವಿರುವುದಿಲ್ಲ.
೩ ಇ. ಅಹಂಕಾರವನ್ನು ಅಂಗೀಕರಿಸದಿರಲು ಉಪಾಯ
ಅಹಂಕಾರ : ಅಹಂಕಾರ ಎಂದರೆ ದೇವರಿಂದ ಅಥವಾ ಬ್ರಹ್ಮನಿಂದ ನಾವು ಬೇರೆ ಎನ್ನುವ ಭಾವನೆ. ಎಲ್ಲಿಯವರೆಗೆ ನಾವು ಜೀವಂತವಾಗಿರುತ್ತೇವೋ, ಅಲ್ಲಿಯವರೆಗೆ ನಮ್ಮ ಅಸ್ತಿತ್ವದ ಅರಿವು ಇರುತ್ತದೆ (ಇದಕ್ಕೆ ಅಪವಾದ ಎಂದರೆ ‘ಉನ್ಮನಿ ಅವಸ್ಥೆ’ಯಾಗಿದೆ, ಈ ಅವಸ್ಥೆಯಲ್ಲಿ ನಮ್ಮ ಅಸ್ತಿತ್ವದ ಅರಿವು ಇರುವುದಿಲ್ಲ). ಈ ಅಹಂಕಾರದಿಂದ ಕರ್ತೃತ್ವ, ದಾರ್ತೃತ್ವ, ಭೋರ್ಕೃತ್ವ, ಜ್ಞಾರ್ತೃತ್ವ ಮುಂತಾದ ಅಹಂಕಾರಗಳು ನಿರ್ಮಾಣವಾಗುತ್ತವೆ. ಅನೇಕ ಬಾರಿ ‘ನಾನು ಇದನ್ನು ಮಾಡಿದ್ದೇನೆ, ನಾನು ಅದನ್ನು ಮಾಡಿದ್ದೇನೆ, ನಾನು ಅವನಿಗೆ ಅಂತಹ ಸಹಾಯ ಮಾಡಿದ್ದೇನೆ, ನನಗೆ ಇತರರಿಗಿಂತ ಹೆಚ್ಚು ತಿಳಿಯುತ್ತದೆ, ನಾನು ಸಾಧನೆ ಮಾಡುತ್ತೇನೆ’, ಎಂಬ ಅಹಂಕಾರದ ವಿಚಾರಗಳು ಮನಸ್ಸಿನಲ್ಲಿ ಬರುತ್ತಲೇ ಇರುತ್ತವೆ. ಇಂತಹ ಅಯೋಗ್ಯ ವಿಚಾರಗಳು ಸತ್ಯವನ್ನು ತಿಳಿದುಕೊಳ್ಳುವುದರಿಂದ ದೂರವಾಗುತ್ತವೆ. ‘ನಾನು ಮಾಡಿದೆ’ ಎಂಬ ಅಹಂಕಾರ, ಕರ್ತೃತ್ವದ ಭಾವನೆ ಇಲ್ಲದಿದ್ದರೆ ನಮಗೆ ಪಾಪ-ಪುಣ್ಯ ತಗಲುವುದಿಲ್ಲ, ಈ ವಿಷಯವನ್ನು ‘ಪುಣ್ಯ-ಪಾಪ’ ಗ್ರಂಥದಲ್ಲಿ ಹೆಚ್ಚು ಸ್ಪಷ್ಟಪಡಿಸಲಾಗಿದೆ.
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !