ಕೈಕೇಯಿಗೆ ನೀಡಿದ ವಚನವನ್ನು ಪೂರೈಸಲು ಪ್ರಭು ರಾಮಚಂದ್ರರು ತಮ್ಮ ಲಕ್ಷ್ಮಣ ಮತ್ತು ಪತ್ನಿ ಸೀತೆ ಸಹಿತ ವನವಾಸಕ್ಕೆ ಹೊರಟರು. ವನ ವಾಸಕ್ಕೆ ಹೋಗುವಾಗ ದಾರಿಯಲ್ಲಿ ಗಂಗಾ ನದಿಯು ಎದುರಾಯಿತು. ರಾಮಪ್ರಭುಗಳು ಬಂದಿರುವುದನ್ನು ತಿಳಿದ ಕೂಡಲೇ ಗುಹಕ ಎಂಬ ನಾವಿಕನ ಮನಸ್ಸು ಆನಂದದಿಂದ ಪುಳಕಿತಗೊಂಡಿತು. ಆತ ಓಡುತ್ತಾ ಅವರ ಬಳಿಗೆ ಬಂದು, ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಹೀಗೆಂದನು, ‘ಪ್ರಭು, ನಿಮ್ಮ ದರ್ಶನದಿಂದ ನಾನು ಧನ್ಯನಾದೆ ! ನಾನು ನಿಮ್ಮ ಏನು ಸೇವೆಯನ್ನು ಮಾಡಲಿ ?’

ರಾಮಪ್ರಭುಗಳು ಹೇಳಿದರು, ‘ಗುಹಕನೇ, ನಿನ್ನಿಂದ ನಾವು ಬೇರೆ ಯಾವುದೇ ರೀತಿಯ ಸೇವೆಯನ್ನು ಅಪೇಕ್ಷಿಸುವುದಿಲ್ಲ. ಕೇವಲ ನಿನ್ನ ದೋಣಿಯಲ್ಲಿ ನಮ್ಮನ್ನು ಗಂಗೆಯ ಆಚೆಯ ದಡಕ್ಕೆ ತಲುಪಿಸು.’ ಅದರಂತೆ ಗುಹಕನು ಆ ಮೂವರನ್ನು ದಡಕ್ಕೆ ಕರೆದೊಯ್ದನು. ಆಚೆಯ ದಡಕ್ಕೆ ತಲುಪಿದ ನಂತರ ಅವರ ನಡುವಿನ ಸಂವಾದ ಹೀಗಿದೆ,
ರಾಮ : ಗುಹಕನೇ, ದೋಣಿಯಲ್ಲಿ ನಮ್ಮನ್ನು ಆಚೆಯ ದಡಕ್ಕೆ ತಲುಪಿಸಿದ್ದಕ್ಕಾಗಿ ನಾನು ನಿನಗೆ ಏನು ನೀಡಲಿ ?
ಗುಹಕ : ಪ್ರಭು, ಒಬ್ಬ ಕ್ಷೌರಿಕನು ಇನ್ನೊಬ್ಬ ಕ್ಷೌರಿಕನಿಗೆ ಕ್ಷೌರ ಮಾಡಿದಾಗ, ಆತ ಅವನಿಂದ ಪ್ರತಿಫಲ ಪಡೆಯುತ್ತಾನೆಯೇ ?

ರಾಮ : ಇಲ್ಲ.
ಗುಹಕ : ಪ್ರಭು, ಒಬ್ಬ ವೈದ್ಯನು ಇನ್ನೊಬ್ಬ ವೈದ್ಯನಿಗೆ ಔಷಧಿ ನೀಡಿದಾಗ, ಆತ ಅವನಿಂದ ಔಷಧಿಯ ಹಣವನ್ನು ಪಡೆಯುತ್ತಾನೆಯೇ ?
ರಾಮ : ಇಲ್ಲ.
ಗುಹಕ : ಹಾಗೆಯೇ ಪ್ರಭು, ನಾವಿಬ್ಬರೂ ನಾವಿಕರಾಗಿರುವಾಗ, ನಾನು ನಿಮ್ಮಿಂದ ಪ್ರತಿಫಲವನ್ನು ಪಡೆಯುವುದು ಹೇಗೆ ?
(ಗುಹಕನ ಈ ಮಾತಿನಿಂದ ರಾಮನು ಆಶ್ಚರ್ಯಚಕಿತನಾದನು)
ರಾಮ : ಗುಹಕನೇ, ನೀನು ನಾವಿಕನೆಂಬುದು ಸ್ಪಷ್ಟವಾಗಿದೆ; ಆದರೆ ನೀನು ನನ್ನನ್ನೂ ನಾವಿಕನನ್ನಾಗಿ ಮಾಡಿದ್ದು ಹೇಗೆ ?
ಗುಹಕ : ಪ್ರಭು, ನಾನು ಜನರನ್ನು ಕೇವಲ ಈ ನದಿಯ ಆಚೆಯ ದಡಕ್ಕೆ ತಲುಪಿಸುತ್ತೇನೆ; ಆದರೆ ನೀವು ಇಚ್ಛೆಯುಳ್ಳ ಪ್ರವಾಸಿಗರನ್ನು ಈ ಭವಸಾಗರದ (ಸಂಸಾರವೆಂಬ ಸಾಗರದ) ಆಚೆಯ ದಡಕ್ಕೆ ತಲುಪಿಸುತ್ತೀರಿ. ಹಾಗಿದ್ದ ಮೇಲೆ ನೀವು ನನಗಿಂತಲೂ ಶ್ರೇಷ್ಠ ನಾವಿಕರಲ್ಲವೇ ?
ಗುಹಕನ ಈ ಯುಕ್ತಿವಾದವನ್ನು ಕೇಳಿ ಮತ್ತು ಅವನ ನಿಸ್ವಾರ್ಥ ಪ್ರೇಮವನ್ನು ಕಂಡು ರಾಮಪ್ರಭುಗಳು ಅವನನ್ನು ಗಟ್ಟಿಯಾಗಿ ಆಲಿಂಗಿಸಿದರು. ರಾಮಪ್ರಭುಗಳ ಆಲಿಂಗನದ ಸುಖವೆಂದರೆ ಸಾಕ್ಷಾತ್ ಜೀವ-ಶಿವನ ಭೇಟಿಯೇ ಸರಿ. ಗುಹಕನಿಗೆ ತನ್ನ ಜೀವನ ಸಾರ್ಥಕವಾಯಿತು ಎನಿಸಿತು. ಗುಹಕನಿಗೆ ರಾಮನು ಒಬ್ಬ ಅವತಾರ ಪುರುಷನೆಂದು ಅರ್ಥವಾಗಿತ್ತು. ಇದರಿಂದಲೇ ಅವನ ಆಧ್ಯಾತ್ಮಿಕ ಮಟ್ಟ ಎಷ್ಟು ಉನ್ನತವಾಗಿರಬೇಕು ಎಂಬುದು ನಮಗೆ ತಿಳಿಯುತ್ತದೆ.
– ದಿ. (ಸದ್ಗುರು) ಡಾ. ವಸಂತ ಆಠವಲೆ
‘ಜೀವುತ್ತಮ ವಿದ್ಯಾಪೀಠ’ : ಭಾರತೀಯ ಜ್ಞಾನ ಪರಂಪರೆಯ ಆಧುನಿಕ ಪುನರುಜ್ಜೀವನ!
ದೇಶದ ದೇವಾಲಯಗಳಿಗಾಗಿ ಪ್ರತ್ಯೇಕ ‘ಸನಾತನ ಸಂರಕ್ಷಣಾ ಮಂಡಳಿ’ ಅಥವಾ ಸಮಿತಿಯನ್ನು ಸ್ಥಾಪಿಸಬೇಕು! : Shankaracharya Sadanand Saraswati
೧೨ ಸೂರ್ಯನಮಸ್ಕಾರಗಳಿಂದ ಸಾಧಕನ ೪ ಕುಂಡಲಿನಿ ಚಕ್ರಗಳು ಈಶ್ವರೀ ತತ್ತ್ವವನ್ನು ಗ್ರಹಿಸಲು ಪೂರಕವಾಗುವುದು
ಎರಡೂವರೆ ಸ್ತರದಲ್ಲಿನ ಯುದ್ಧ ಮತ್ತು ಭಾರತದ ಸಿದ್ಧತೆ !
ಭಾರತೀಯ ಚಲನಚಿತ್ರ ಮತ್ತು ಅದರ ಪ್ರಭಾವದ ಜವಾಬ್ದಾರಿ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !