ಯುದ್ಧ ಪ್ರಾರಂಭಿಸಲು ಟ್ರಂಪ್ ನೀಡಿದ ಕಾರಣ

ವಾಷಿಂಗ್ಟನ್ (ಅಮೆರಿಕಾ) – ಅಮೆರಿಕಾ ಮತ್ತು ಇಸ್ರೇಲ್ ಸೇರಿ ಇರಾನ್ ಮೇಲೆ ದಾಳಿ ಮಾಡಿದ ನಂತರ ಇರಾನ್ ಪ್ರತ್ಯುತ್ತರ ನೀಡಲು ಆರಂಭಿಸಿದೆ. ಈ ಯುದ್ಧಕ್ಕೆ ಈಗ ೧೮ ದಿನಗಳಾಗಿವೆ. ಇವೆಲ್ಲದರ ನಡುವೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲಿನ ದಾಳಿಯ ಹಿಂದಿರುವ ಕಾರಣಗಳನ್ನು ಹೇಳಿದ್ದಾರೆ. ಇರಾನ್ ಮೇಲೆ ದಾಳಿ ಮಾಡದಿದ್ದರೆ, ಭವಿಷ್ಯದಲ್ಲಿ ಮೂರನೇ ಮಹಾಯುದ್ಧ ಅಥವಾ ಪರಮಾಣು ದಾಳಿ ಸಂಭವಿಸಬಹುದಿತ್ತು ಎಂದು ಅವರು ಹೇಳಿದ್ದಾರೆ. ಇರಾನ್‌ನಿಂದ ಕೊಲ್ಲಿ ದೇಶಗಳ ಮೇಲೆ ನಡೆಯಬಹುದಾದ ಪ್ರತಿದಾಳಿಗಳ ಬಗ್ಗೆ, ಹಾಗೂ ಹಾರ್ಮುಜ್ ಜಲಸಂಧಿ ಮುಚ್ಚುವ ಸಾಧ್ಯತೆಯ ಬಗ್ಗೆ ನನಗೆ ಮೊದಲೇ ಮಾಹಿತಿ ನೀಡಲಾಗಿತ್ತು. ಆದರೂ ನಾನು ಯುದ್ಧಕ್ಕೆ ಇಳಿಯುವ ನಿರ್ಧಾರ ತೆಗೆದುಕೊಂಡೆ ಎಂದು ಟ್ರಂಪ್ ಹೇಳಿದರು.
ಯುದ್ಧ ಪ್ರಾರಂಭಿಸುವ ನಿರ್ಧಾರವನ್ನು ಸಮರ್ಥಿಸಿಕೊಂಡ ಟ್ರಂಪ್ ಅವರು ಮುಂದೆ ಮಾತನಾಡಿ, ಭವಿಷ್ಯದಲ್ಲಿ ಸಂಭವಿಸಬಹುದಾದ ಗಂಭೀರ ಪರಿಣಾಮಗಳಿಗೆ ಹೋಲಿಸಿದರೆ ಆರ್ಥಿಕ ಪರಿಣಾಮಗಳು ಗೌಣವಾಗಿವೆ ಎಂದು ಹೇಳಿದರು. ಮಾರುಕಟ್ಟೆಯ ಮೇಲಿನ ಪರಿಣಾಮವು ತೀರಾ ಸಣ್ಣ ಬೆಲೆಯಾಗಿದೆ. ಶೇರು ಮಾರುಕಟ್ಟೆಯನ್ನು ಕುಸಿತದಿಂದ ರಕ್ಷಿಸುವ ಸಲುವಾಗಿ ಪರಮಾಣು ದಾಳಿಯ ಅಪಾಯವನ್ನು ಎದುರಿಸಲು ಸಾಧ್ಯವಿಲ್ಲ ಎಂದೂ ಅವರು ಹೇಳಿದರು.
ಮಾರ್ಚ್ ೧೬ ರಂದು ಟ್ರಂಪ್ ಅವರು ಮಾತನಾಡುತ್ತಾ, ಕತಾರ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಬಹ್ರೇನ್ ಮತ್ತು ಕುವೈತ್ ಮೇಲಿನ ಇರಾನ್‌ನ ಪ್ರತಿದಾಳಿ ಅನಿರೀಕ್ಷಿತವಾಗಿತ್ತು ಎಂದು ನುಡಿದರು. ಅಮೆರಿಕಾ ಇಂತಹ ಪ್ರತಿಕ್ರಿಯೆಯನ್ನು ನಿರೀಕ್ಷಿಸಿರಲಿಲ್ಲ ಮತ್ತು ಅದರಿಂದ ನಮಗೆ ಆಘಾತವಾಗಿದೆ ಎಂದು ಟ್ರಂಪ್ ಕಳವಳ ವ್ಯಕ್ತಪಡಿಸಿದರು .
Ford News : ಎಐಗಿಂತ ಮನುಷ್ಯರೇ ಮೇಲು? ಫೋರ್ಡ್ನ ಹೊಸ ಹೆಜ್ಜೆ!
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation
ಇರಾನ್‌ನ ಆತ್ಮರಕ್ಷಣೆಗೆ ಅಣುಬಾಂಬ್ ತಯಾರಿಸುವುದು ಬಿಟ್ಟರೆ ಬೇರೆ ದಾರಿಯಿಲ್ಲ!
ಅಮೆರಿಕ ಮತ್ತು ಇರಾನ್ ನಡುವೆ ಪರಸ್ಪರರ ಮೇಲಿನ ದಾಳಿಗಳನ್ನು ನಿಲ್ಲಿಸಲು ಸಿದ್ಧತೆ : US-Iran War
ಪಾಕಿಸ್ತಾನ: ಲಷ್ಕರ್-ಎ-ತೊಯ್ಬಾದ ಮೂವರು ಉಗ್ರರ ಸಂಶಯಾಸ್ಪದ ಸಾವು
…ಇರಾನ್‌ನ ಅಸ್ತಿತ್ವವನ್ನೇ ಅಳಿಸಿಹಾಕುತ್ತೇವೆ!