ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೂ ಗ್ಯಾಸ್ ಸಿಲಿಂಡರ್ ಅಭಾವದ ಬಿಸಿ: ಬೆಳಗಿನ ಉಪಾಹಾರದಲ್ಲಿ ಬದಲಾವಣೆ!

ದಕ್ಷಿಣ ಕನ್ನಡ – ರಾಜ್ಯದ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಭೋಜನ ಶಾಲೆಯಲ್ಲಿ ಮಾರ್ಚ್ 11 ರಿಂದ ಬೆಳಗಿನ ಉಪಾಹಾರದ ಸ್ವರೂಪದಲ್ಲಿ ಬದಲಾವಣೆ ಮಾಡಲಾಗಿದೆ. ಗ್ಯಾಸ್ ಸಿಲಿಂಡರ್ ಕೊರತೆಯನ್ನು ಗಮನದಲ್ಲಿಟ್ಟುಕೊಂಡು, ಬೇಯಿಸಿದ ಪದಾರ್ಥಗಳ ಬದಲಿಗೆ ಅವಲಕ್ಕಿ ಮತ್ತು ಮೊಸರನ್ನು ವಿತರಿಸಲಾಗುತ್ತಿದೆ ಎಂಬ ಮಾಹಿತಿ ತಿಳಿದುಬಂದಿದೆ.

ದೇವಸ್ಥಾನದ ಆಡಳಿತ ಮಂಡಳಿಯು ಗ್ಯಾಸ್ ಪೂರೈಕೆ ಮಾಡುವ ಕಂಪನಿಗೆ ಪ್ರತಿದಿನ 20 ಸಿಲಿಂಡರ್‌ಗಳನ್ನು ಪೂರೈಸುವಂತೆ ವಿನಂತಿಸಿ ಪತ್ರ ಬರೆದಿದೆ. ಒಂದು ವೇಳೆ ಸಿಲಿಂಡರ್ ಪೂರೈಕೆ ಸುಗಮವಾಗದಿದ್ದರೆ, ಮಧ್ಯಾಹ್ನದ ಮಹಾಪ್ರಸಾದದಲ್ಲಿಯೂ ಬದಲಾವಣೆ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಈ ಬದಲಾವಣೆಗಳ ಕುರಿತು ದೇವಸ್ಥಾನದ ಆಡಳಿತ ಮಂಡಳಿಯಿಂದ ಶೀಘ್ರದಲ್ಲೇ ಅಧಿಕೃತ ಮಾಹಿತಿ ಹೊರಬೀಳಲಿದೆ.

ಸಂಪಾದಕೀಯ ನಿಲುವು

ಕೇಂದ್ರ ಸರಕಾರವು ಮನೆಗಳಿಗೆ ಮತ್ತು ವಾಹನಗಳಿಗೆ ಎಲ್‌ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ಆದ್ಯತೆ ನೀಡುವಾಗ, ಅನ್ನದಾಸೋಹ ಕೇಂದ್ರಗಳು, ದೇವಸ್ಥಾನಗಳು, ಆಶ್ರಮಗಳು ಮತ್ತು ಧರ್ಮಶಾಲೆಗಳನ್ನೂ ಆದ್ಯತೆಯ ಪಟ್ಟಿಯಲ್ಲಿ ಸೇರಿಸಿಕೊಳ್ಳಬೇಕು!