
ಆಗ್ರಾ (ಉತ್ತರ ಪ್ರದೇಶ): ಭಾರತೀಯ ನೌಕಾಪಡೆಯಲ್ಲಿ ಲಾನ್ಸ್ ನಾಯಕ್ ಆಗಿರುವ ಆದರ್ಶ ಕುಮಾರ ಅಲಿಯಾಸ್ ಲಕ್ಕಿ ಎಂಬಾತನನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ.ಗಾಗಿ (‘ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್’) ಗೂಢಚರ್ಯೆ ನಡೆಸಿದ ಆರೋಪದ ಮೇಲೆ ಬಂಧಿಸಲಾಗಿದೆ. ಆಗ್ರಾದ ಕಾಗಾರೌಲ್‌ನ ಚೀತಪುರ ಗ್ರಾಮದಲ್ಲಿ ಈತನನ್ನು ಬಂಧಿಸಲಾಗಿದೆ. ಪ್ರಸ್ತುತ ಈತ ಕೇರಳದ ಕೊಚ್ಚಿಯಲ್ಲಿರುವ ದಕ್ಷಿಣ ನೌಕಾ ಕಮಾಂಡ್‌ನಲ್ಲಿ ನಿಯೋಜಿತನಾಗಿದ್ದನು. ಈತನ ಮದುವೆಯು ಕೇವಲ ೨೨ ದಿನಗಳ ಹಿಂದೆಯಷ್ಟೇ ನಡೆದಿತ್ತು.
🚨 Spy Within the Forces? Serious Threat to National Security! 🇮🇳
Adarsh Kumar, a Lance Naik in the Indian Navy, has been arrested by UP ATS for allegedly spying for Pakistan.
If such traitors operate within the Indian armed forces, it poses a grave threat to India’s national… pic.twitter.com/cwDOEMKPbM
— Sanatan Prabhat (@SanatanPrabhat) March 11, 2026
೧. ಮದುವೆಯ ನಂತರ ಆದರ್ಶ ಕುಮಾರ ತನ್ನ ಪತ್ನಿಯನ್ನು ದುಬೈ ಪ್ರವಾಸಕ್ಕೆ ಕರೆದೊಯ್ದಿದ್ದನು. ಆತ ಗ್ರಾಮಕ್ಕೆ ಮರಳಿದ ಕೂಡಲೇ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆದರ್ಶ ಸುಮಾರು ೭ ವರ್ಷಗಳ ಹಿಂದೆ ನೌಕಾಪಡೆಗೆ ಸೇರ್ಪಡೆಗೊಂಡಿದ್ದನು.
೨. ಆದರ್ಶ ಕುಮಾರ ದೇಶದ ಯುದ್ಧನೌಕೆಗಳ ಛಾಯಾಚಿತ್ರಗಳು ಮತ್ತು ವಿವರಗಳನ್ನು ಐ.ಎಸ್.ಐ. ಏಜೆಂಟ್‌ಗೆ ರವಾನಿಸಿದ್ದಾನೆ. ಆತನ ಬಳಿ ಪತ್ತೆಯಾದ ದಾಖಲೆಗಳಿಂದ ಈ ವಿಷಯ ದೃಢಪಟ್ಟಿದೆ.
೩. ಆದರ್ಶ ಕುಮಾರ ಅನೇಕ ದಿನಗಳಿಂದ ಪಾಕಿಸ್ತಾನಕ್ಕಾಗಿ ಗೂಢಚರ್ಯೆ ನಡೆಸುತ್ತಿದ್ದಾನೆ ಎಂಬ ಮಾಹಿತಿ ಭದ್ರತಾ ಸಂಸ್ಥೆಗಳಿಗೆ ಲಭಿಸಿತ್ತು. ಆ ನಂತರ ಆತನ ಚಲನವಲನಗಳ ಮೇಲೆ ನಿಗಾ ಇರಿಸಲಾಗಿತ್ತು.
೪. ಆದರ್ಶ ಕುಮಾರನನ್ನು ಬಂಧಿಸಿದ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈ ಗೂಢಚರ್ಯೆಯ ಜಾಲದಲ್ಲಿ ಇನ್ನು ಎಷ್ಟು ಜನರು ಭಾಗಿಯಾಗಿದ್ದಾರೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
೫. ಸುಮಾರು ೧ ವರ್ಷದ ಹಿಂದೆ ಆಗ್ರಾದ ರವೀಂದ್ರ ಕುಮಾರ ಎಂಬಾತನನ್ನು ಪಾಕಿಸ್ತಾನಕ್ಕಾಗಿ ಗೂಢಚರ್ಯೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿತ್ತು. ಆತ ಫೇಸ್‌ಬುಕ್ ಮೂಲಕ ನೇಹಾ ಶರ್ಮಾ ಎಂಬ ಮಹಿಳೆಯ ಸಂಪರ್ಕಕ್ಕೆ ಬಂದಿದ್ದನು. ಆದರ್ಶ ಕುಮಾರ ಕೂಡ ರವೀಂದ್ರ ಕುಮಾರನಂತೆಯೇ ‘ಹನಿ ಟ್ರ್ಯಾಪ್’ನಲ್ಲಿ (ಮಹಿಳೆಯ ಮೂಲಕ ವ್ಯಕ್ತಿಯನ್ನು ಜಾಲಕ್ಕೆ ಸಿಲುಕಿಸುವುದು) ಸಿಲುಕಿರಬಹುದು ಎಂದು ಭದ್ರತಾ ಸಂಸ್ಥೆಗಳು ಶಂಕೆ ವ್ಯಕ್ತಪಡಿಸಿವೆ.
ಸಂಪಾದಕೀಯ ನಿಲುವುಭಾರತೀಯ ಸೈನ್ಯದಲ್ಲಿ ಈ ರೀತಿ ದೇಶದ್ರೋಹಿಗಳು ಕಾರ್ಯನಿರ್ವಹಿಸುತ್ತಿದ್ದರೆ, ಅದು ಭಾರತದ ಭದ್ರತೆಯ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ! ಇಂತಹವರ ವಿರುದ್ಧ ತ್ವರಿತಗತಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಅವರನ್ನು ನಡುಬೀದಿಯಲ್ಲಿ ಗಲ್ಲಿಗೇರಿಸುವುದು ಅವಶ್ಯಕ! |
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ