ಪೂ. (ಶ್ರೀಮತಿ) ರಾಧಾ ಪ್ರಭು ಅವರ ೮೯ ನೇ ಜನ್ಮದಿನದ ಅಂಗವಾಗಿ ಅವರ ಚರಣಗಳಲ್ಲಿ ಸನಾತನ ಪರಿವಾರದ ಕೃತಜ್ಞತಾಪೂರ್ವಕ ನಮನಗಳು !
ಫಾಲ್ಗುಣ ಕೃಷ್ಣ ತೃತೀಯಾದಂದು (ಮಾರ್ಚ್ ೬ ರಂದು) ಮಂಗಳೂರಿನ ಸನಾತನದ ೪೪ ನೇ ಸಂತ ಪೂ. (ಶ್ರೀಮತಿ) ರಾಧಾ ಪ್ರಭು ಅವರ ಇಂದು ೮೯ ನೇ ಜನ್ಮದಿನವಾಗಿದೆ. ಆ ಪ್ರಯುಕ್ತ ಸಾಪ್ತಾಹಿಕ ಕನ್ನಡ ‘ಸನಾತನ ಪ್ರಭಾತ’ದ ಬಗ್ಗೆ ಅವರಿಗೆ ಬಂದ ಅನುಭೂತಿಗಳನ್ನು ಇಲ್ಲಿ ನೀಡಲಾಗಿದೆ.

೧. ಕನ್ನಡ ಸಾಪ್ತಾಹಿಕ ‘ಸನಾತನ ಪ್ರಭಾತ’ದ ೨೬ ನೇ ವರ್ಧಂತ್ಯುತ್ಸವದ ಸಂಚಿಕೆಯಲ್ಲಿನ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಸುಂದರ ಛಾಯಾಚಿತ್ರವನ್ನು ನೋಡಿದಾಗ ಪ್ರಕಾಶವು ಕಾಣಿಸುವುದು
‘೨೧.೧.೨೦೨೫ ರಂದು ನನಗೆ ಕನ್ನಡ ವಾರಪತ್ರಿಕೆ ‘ಸನಾತನ ಪ್ರಭಾತ’ದ ೨೬ ನೇ ವಧಂತ್ಯುತ್ಸವದ ಸಂಚಿಕೆ ಲಭಿಸಿತು. ಆ ಸಂಚಿಕೆಯ ಮೊದಲ ಪುಟದಲ್ಲಿರುವ ಪ.ಪೂ. ಗುರುದೇವರ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ) ಸುಂದರ ಛಾಯಾಚಿತ್ರವನ್ನು ನೋಡಿದಾಗ ನನಗೆ ತುಂಬ ಪ್ರಕಾಶವು ಕಾಣಿಸಿತು. ‘ಆ ಛಾಯಾಚಿತ್ರದ ಬಳಿ ಸಾತ್ತ್ವಿಕ ವಸ್ತ್ರ ಧರಿಸಿದ ಒಬ್ಬ ಸಾಧಕನು ಭಕ್ತಿಭಾವದಿಂದ ಕೈಮುಗಿದು ನಿಂತಿದ್ದಾನೆ’, ಎಂದು ನನಗೆ ಕಂಡಿತು. ಆಗ ನನಗೆ ಅನಿಸಿತು, ‘ಈ ಸಂಚಿಕೆಯು ಎಷ್ಟು ಪವಿತ್ರವಾಗಿದೆ! ಇದರ ಕೂಡಲೇ ಆರತಿ ಮಾಡಬೇಕು.’ ನಾನು ಆ ಸಂಚಿಕೆಯನ್ನು ದೇವರ ಮನೆಯಲ್ಲಿಟ್ಟು ಅದಕ್ಕೆ ಆರತಿ ಮಾಡಿದೆನು. ನನ್ನ ಮೊಮ್ಮಗ ಶ್ರೀ. ಭರತ ಪ್ರಭು ಮತ್ತು ಅವನ ಪತ್ನಿ ಸೌ. ಭವಾನಿ ಪ್ರಭು ಇವರು ನನ್ನೊಂದಿಗೆ ನಿಂತು ಕೈಮುಗಿದು ಆರತಿಯನ್ನು ನೋಡುತ್ತಿದ್ದರು.
೨. ಮನಸ್ಸಿನಲ್ಲಿ ಹಿಂದೆ ಕನ್ನಡ ಸಾಪ್ತಾಹಿಕ ‘ಸನಾತನ ಪ್ರಭಾತ’ಕ್ಕೆ ಸಂಬಂಧಿಸಿದಂತೆ ಮಾಡಿದ ಸೇವೆಯ ಸ್ಮರಣೆಗಳು ಜಾಗೃತವಾಗುವುದು
೨ ಅ. ದಿನವಿಡೀ ‘ಸನಾತನ ಪ್ರಭಾತ’ದ ವಿತರಣೆ ಮಾಡಿದರೂ ಆಯಾಸವಾಗದೆ ಉತ್ಸಾಹದ ಅರಿವಾಗುವುದು ಮತ್ತು ಸಮಾಜದ ವ್ಯಕ್ತಿಗಳಿಂದ ಪ್ರಶಂಸೆ ವ್ಯಕ್ತವಾಗುವುದು : ಕೆಲವು ವರ್ಷಗಳ ಹಿಂದೆ ನನಗೆ ‘ಸನಾತನ ಪ್ರಭಾತ’ಕ್ಕೆ ಸಂಬಂಧಿಸಿದ ಸೇವೆಯ ಭಾಗ್ಯವು ಲಭಿಸಿತ್ತು. ನಾವು ೫೦ ರಿಂದ ೬೦ ರ ವಯೋಮಾನದ ಮಹಿಳೆಯರು ಒಟ್ಟಾಗಿ ಸೇರಿ ಬಿಸಿಲು ಮತ್ತು ಮಳೆಯಲ್ಲಿ ಮನೆಮನೆಗೆ ತೆರಳಿ ‘ಸನಾತನ ಪ್ರಭಾತ’ ನಿಯತಕಾಲಿಕೆಯನ್ನು ಉತ್ಸಾಹದಿಂದ ವಿತರಿಸುತ್ತಿದ್ದೆವು. ಆರಂಭದಲ್ಲಿ ೪ ಪುಟಗಳ ನಿಯತಕಾಲಿಕೆಯಾಗಿತ್ತು ಮತ್ತು ಪ್ರಸ್ತುತ ೧೬ ಪುಟಗಳ ನಿಯತಕಾಲಿಕೆಯಾಗಿದೆ. ಆ ಸಮಯದಲ್ಲಿ ನಾವು ಮಧ್ಯಾಹ್ನ ೧೨ ಗಂಟೆಯೊಳಗೆ ಅಡುಗೆ ಮುಗಿಸಿ ಧರ್ಮಪ್ರಚಾರಕ್ಕಾಗಿ ಹೊರಡುತ್ತಿದ್ದೆವು ಮತ್ತು ಸಂಜೆ ೭ ಗಂಟೆಗೆ ಮನೆಗೆ ಬರುತ್ತಿದ್ದೆವು. ಗುರುಕೃಪೆಯಿಂದ ನಮಗೆ ಆಯಾಸವಾಗುತ್ತಿರಲಿಲ್ಲ ಮತ್ತು ಯಾವುದೇ ತೊಂದರೆಯಾಗುತ್ತಿರಲಿಲ್ಲ. ಬದಲಾಗಿ ನಮಗೆ ಉತ್ಸಾಹದ ಅರಿವಾಗಿ ಆನಂದದ ಅನುಭೂತಿ ಬರುತ್ತಿತ್ತು ಮತ್ತು ಸನ್ಮಾನವು ಪ್ರಾಪ್ತವಾಗುತ್ತಿತ್ತು. ಸಮಾಜದ ವ್ಯಕ್ತಿಗಳಿಂದ ನಮಗೆ ಸಿಗುತ್ತಿದ್ದ ಪ್ರಶಂಸೆಯನ್ನು ನಾವು ಗುರುಚರಣಗಳಿಗೆ ಅರ್ಪಿಸುತ್ತಿದ್ದೆವು.
೨ ಆ. ಸೇವೆಯಲ್ಲಿ ವ್ಯಾಪಕತೆ ಬಂದು ಅನೇಕ ಅನುಭೂತಿಗಳು ಬರುವುದು : ನಾವು ಪ್ರತಿದಿನ ಪ್ರಾರ್ಥನೆ ಮಾಡುತ್ತಿದ್ದೆವು, ‘ಗುರುದೇವ, ನಮಗೆ ವಿತರಣೆಗಾಗಿ ಹೊಸ ಕಲ್ಪನೆಗಳನ್ನು ಸೂಚಿಸಿ ಮತ್ತು ಈ ಸೇವೆಯನ್ನು ನಮ್ಮಿಂದ ಮಾಡಿಸಿಕೊಳ್ಳಿ.’ ನಾವು ಹಿಂದಿ, ಮರಾಠಿ ಮತ್ತು ಆಂಗ್ಲ ಭಾಷೆಗಳ ‘ಸನಾತನ ಪ್ರಭಾತ’ ನಿಯತಕಾಲಿಕೆಗಳಿಗೂ ಚಂದಾದಾರರನ್ನು ಮಾಡುತ್ತಿದ್ದೆವು. ನಮ್ಮ ಈ ವಿತರಣಾ ಸೇವೆಯ ವ್ಯಾಪ್ತಿಯು ದಿನದಿಂದ ದಿನಕ್ಕೆ ಬೆಳೆಯುತ್ತಾ ಹೋಯಿತು ಮತ್ತು ಅನೇಕ ಅನುಭೂತಿಗಳು ಬರತೊಡಗಿದವು.
೩. ಸಮಾಜದ ಕೆಲವರಿಗೆ ಸಾಧಕರ ಸಂದರ್ಭದಲ್ಲಿ ಬಂದ ಅನುಭೂತಿಗಳು ಕೆಲವರಿಗೆ ಕನಸಿನಲ್ಲಿ ಅಥವಾ ಯಾವುದಾದರೂ ಸಂನ್ಯಾಸಿಯ ಮಾಧ್ಯಮದಿಂದ ಸಾಧಕರ ಸಂದರ್ಭದಲ್ಲಿ ತಿಳಿಯುತ್ತಿತ್ತು.
ಅ. ‘ಇಂದು ಮನೆಗೆ ಇಬ್ಬರು ಮಹಿಳೆಯರು ಬರಲಿದ್ದಾರೆ. ಅವರ ಮಾತನ್ನು ಕೇಳಿ ಮತ್ತು ಅದರಂತೆ ಮಾಡಿ. ನಿಮಗೆ ಲಾಭವಾಗುವುದು.’
ಆ. ‘ಇಂದು ಮನೆಯಲ್ಲಿ ಇಬ್ಬರು ವ್ಯಕ್ತಿಗಳು ಬರಲಿದ್ದಾರೆ. ಅವರು ಏನು ಹೇಳುತ್ತಾರೋ, ಅದರಂತೆ ನೀವು ಮಾಡಿ.’
ಇ. ‘ಇಂದು ನಿಮ್ಮಿಂದ ಆಧ್ಯಾತ್ಮಿಕ ಕಾರ್ಯವು ನಡೆಯಲಿದೆ.’
ಗುರುದೇವ, ನೀವು ನನ್ನಿಂದ ಈ ವಿಷಯಗಳನ್ನು ಬರೆಸಿಕೊಂಡಿದ್ದಕ್ಕಾಗಿ ನಾನು ನಿಮ್ಮ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ‘ನನಗೆ ಸೇವೆ ಮಾಡಲು ಶಕ್ತಿಯನ್ನು ನೀಡಿ’, ಎಂದು ನಾನು ನಿಮ್ಮ ಚರಣಗಳಲ್ಲಿ ಪ್ರಾರ್ಥಿಸುತ್ತೇನೆ.’
– (ಪೂ.) ಶ್ರೀಮತಿ ರಾಧಾ ಪ್ರಭು, ಮಂಗಳೂರು
ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ದೇಶದ ದೇವಾಲಯಗಳಿಗಾಗಿ ಪ್ರತ್ಯೇಕ ‘ಸನಾತನ ಸಂರಕ್ಷಣಾ ಮಂಡಳಿ’ ಅಥವಾ ಸಮಿತಿಯನ್ನು ಸ್ಥಾಪಿಸಬೇಕು! : Shankaracharya Sadanand Saraswati
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !