ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನ ಮತ್ತು ಪ.ಪೂ. ಡಾ. ಆಠವಲೆಯವರ ಪರಸ್ಪರರ ವಿಷಯದಲ್ಲಿರುವ ಆಧ್ಯಾತ್ಮಿಕ ಪ್ರೀತಿಯ ಸಂಬಂಧ !
|
|
|
೧. ಪ.ಪೂ. ಡಾ. ಆಠವಲೆಯವರಿಗೆ ಆಗುವ ತೊಂದರೆಗಳನ್ನು ದೂರಗೊಳಿಸಲು ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನ ಇವರು ನಾಶಿಕದಿಂದ ಗೋವಾಕ್ಕೆ ಹೋಗಲು ನಿರ್ಧರಿಸುವುದು
‘ಮಾರ್ಚ್ ೨೦೧೫ ರಲ್ಲಿ ನಾಶಿಕದಲ್ಲಿರುವಾಗ ಯೋಗತಜ್ಞ ದಾದಾಜಿ ವೈಶಂಪಾಯನರಿಗೆ ಪ.ಪೂ. ಡಾಕ್ಟರರ ಬಗ್ಗೆ ಒಂದು ದೈವೀ ಸಂದೇಶವು (ಸೂಕ್ಷ್ಮ ರೀಡಿಂಗ್) ಪ್ರಾಪ್ತವಾಗಿತ್ತು. ಆ ರೀತಿಯ ನೋಂದಣಿಯು ಪ.ಪೂ. ಡಾಕ್ಟರರ ನಾಡಿಪಟ್ಟಿಯಲ್ಲಿಯೂ ಇತ್ತು. ಪ.ಪೂ. ಡಾಕ್ಟರರಿಗೆ ಯಾವುದೇ ರೀತಿಯ ದೋಷಗಳು ತಗಲಬಾರದು (ತೊಂದರೆಯಾಗಬಾರದು), ಎಂದು ಶೀರ್ಘ ಪರಿಹಾರೋಪಾಯಗಳನ್ನು ಮಾಡುವುದು ಆವಶ್ಯಕವಾಗಿತ್ತು. ಅದಕ್ಕಾಗಿ ಮಾಡಲಾಗುವ ಅನುಷ್ಠಾನಕ್ಕಾಗಿ ಪ.ಪೂ. ಡಾಕ್ಟರರು ಸ್ವತಃ ಅಲ್ಲಿ ಉಪಸ್ಥಿತರಿರುವುದು ಆವಶ್ಯಕವಾಗಿತ್ತು. ಪ.ಪೂ. ಡಾಕ್ಟರರ ಪ್ರಾಣಶಕ್ತಿಯು ಅತ್ಯಲ್ಪವಾಗಿರುವುದರಿಂದ ಅವರು ರಾಮನಾಥಿ ಆಶ್ರಮವನ್ನು ಬಿಟ್ಟು ಬೇರೆ ಊರಿಗೆ ಹೋಗಲು ಸಾಧ್ಯವಿರಲಿಲ್ಲ. ಆದ್ದರಿಂದ ಯೋಗತಜ್ಞ ದಾದಾಜಿಯವರು ಸ್ವತಃ ಗೋವಾಕ್ಕೆ ಹೋಗಿ ಪ.ಪೂ. ಡಾಕ್ಟರರಿಗಾಗಿ ಉಪಾಯವನ್ನು ಮಾಡಲು ನಿರ್ಧರಿಸಿದರು. ಆಗ ಓರ್ವ ಭಕ್ತನು ಯೋಗತಜ್ಞ ದಾದಾಜಿಯವರಿಗೆ, “ದಾದಾಜಿ, ಇಷ್ಟೊಂದು ಶ್ರಮಪಟ್ಟು ಅಷ್ಟೊಂದು ದೂರ ಪ್ರವಾಸವನ್ನು ಏಕೆ ಮಾಡುತ್ತೀರಿ ? ಇಲ್ಲಿಂದಲೇ ಅವರಿಗಾಗಿ ಉಪಾಯವನ್ನು ಮಾಡಿ” ಎಂದನು. ಆಗ ದಾದಾಜಿಯವರು, “ಈ ಉಪಾಯಗಳನ್ನು ಪ.ಪೂ. ಡಾಕ್ಟರರ ಕೈಯಿಂದಲೇ ಮಾಡಬೇಕಾಗುತ್ತದೆ. ಆದ್ದರಿಂದ ನನಗೆ ಅಲ್ಲಿ ಹೋಗುವುದು ಆವಶ್ಯಕವಾಗಿದೆ” ಎಂದು ಹೇಳಿದರು.

೨. ಪ್ರವಾಸದ ಮುನ್ನ ಮನೆಯಲ್ಲಿ ಜೇನುನೊಣಗಳು ಸ್ಥೂಲದಿಂದ ದಾಳಿ ಮಾಡುವುದು ಮತ್ತು ಇದು ಕೆಟ್ಟ ಶಕ್ತಿಗಳ ಅಡಚಣೆ ಆಗಿದೆ ಎಂದು ಅರಿವಾಗುವುದು
೨೬.೩.೨೦೧೫ ರಂದು ನಾವು (ನಾನು ಮತ್ತು ಯೋಗತಜ್ಞ ದಾದಾಜಿ) ಗೋವಾಕ್ಕೆ ಹೋಗಲು ಮುಂಜಾನೆ ೪ ಗಂಟೆಗೆ ಎದ್ದೆವು. ಗೋವಾಕ್ಕೆ ಹೋಗಿ ನಮಗೆ ಆ ದಿನವೇ ರಾತ್ರಿ ನಾಶಿಕಕ್ಕೆ ಹಿಂದಿರುಗಲಿಕ್ಕಿತ್ತು. ನಾನು ಮುಂಜಾನೆ ಎದ್ದ ನಂತರ ಪಡಸಾಲೆಗೆ (ಹಾಲ್‌ನಲ್ಲಿ) ಹೋದೆನು. ಆಗ ಅಲ್ಲಿ ಆಕಸ್ಮಿಕವಾಗಿ ದೊಡ್ಡ ಪ್ರಮಾಣದಲ್ಲಿ ಜೇನುನೊಣಗಳು ಬಂದಿರುವುದು ಕಾಣಿಸಿತು. ಅವುಗಳು ಸ್ಥೂಲದಲ್ಲಿ ದಾಳಿಯನ್ನೇ ಮಾಡಿದ್ದವು. ಪಡಸಾಲೆಯ ಕಿಟಕಿಗಳಿಗೆ ಜಾಳಿಗೆ ಇತ್ತು. ‘ಆದರೂ ಅವುಗಳು ಒಳಗೆ ಹೇಗೆ ಬಂದವು ?’, ಎಂಬುದು ತಿಳಿಯಲಿಲ್ಲ. ತುಂಬಾ ಜೇನುನೊಣಗಳು ಬಂದಿರುವುದರಿಂದ ನಾನು ಓಡಿ ದಾದಾಜಿಯವರ ಕೋಣೆಗೆ ಹೋದೆನು ಮತ್ತು ಅವರಿಗೆ, “ಪಡಸಾಲೆಯಲ್ಲಿ ತುಂಬಾ ಜೇನುನೊಣಗಳು ಬಂದಿವೆ” ಎಂದನು. ಅದಕ್ಕೆ ಅವರು ಶಾಂತರೀತಿಯಿಂದ, “೫ ನಿಮಿಷ ಇಲ್ಲಿಯೇ ನಿಲ್ಲು ಅವು ಹೊರಟು ಹೋಗುವವು,” ಎಂದು ಹೇಳಿದರು. ಆಶ್ಚರ್ಯವೆಂದರೆ ೫ ನಿಮಿಷಗಳಲ್ಲಿ ಎಲ್ಲ ಜೇನುನೊಣಗಳು ಇಲ್ಲವಾದವು. ಆಗ ನನಗೆ ‘ನಾವು ಪ.ಪೂ. ಡಾಕ್ಟರಿಗಾಗಿ ಅನುಷ್ಠಾನ ಮಾಡಲು ಹೊರಟಿದ್ದೇವೆ. ಈ ಕಾರ್ಯದಲ್ಲಿ ಕೆಟ್ಟ ಶಕ್ತಿಗಳು ಈ ರೀತಿಯ ಅಡಚಣೆಗಳನ್ನು ತಂದಿರಬಹುದು,’ ಎಂದೆನಿಸಿತು.
೩. ಮುಂಜಾನೆ ೪ ರಿಂದ ರಾತ್ರಿಯ ೧೨.೩೦ ರವರೆಗೆ ವಿಶ್ರಾಂತಿಯನ್ನು ತೆಗೆದುಕೊಳ್ಳದೇ ನಾಶಿಕದಿಂದ ಗೋವಾ ಹೀಗೆ ದೂರದ ಪ್ರವಾಸ ಮಾಡಿ ಯೋಗತಜ್ಞ ಪ.ಪೂ. ದಾದಾಜಿಯವರು ಪ.ಪೂ. ಡಾಕ್ಟರರಿಗಾಗಿ ಅನುಷ್ಠಾನ ಮಾಡುವುದು
ನಾವು ಸ್ನಾನವನ್ನೆಲ್ಲ ಮುಗಿಸಿ ಬೆಳಗ್ಗೆ ೬ ಗಂಟೆಗೆ ನಾಶಿಕದಿಂದ ಕಾರಿನಲ್ಲಿ ಮುಂಬೈ ವಿಮಾನನಿಲ್ದಾಣಕ್ಕೆ ಹೋದೆವು. ನಾವು ಬೆಳಗ್ಗೆ ಸುಮಾರು ೧೦ ಗಂಟೆಗೆ ಮುಂಬೈ ವಿಮಾನನಿಲ್ದಾಣವನ್ನು ತಲುಪಿದೆವು. ಅಲ್ಲಿ ವಾಹನ ನಿಲುಗಡೆಯಲ್ಲಿನ ‘ಪಾರ್ಕಿಂಗ್’ ನಲ್ಲಿ ವಾಹನವನ್ನಿಟ್ಟು ಬೆಳಗ್ಗೆ ೧೧.೪೫ ಗಂಟೆಗೆ ಬಿಡುವ ವಿಮಾನದಲ್ಲಿ ಗೋವಾಕ್ಕೆ ಹೊರಟೆವು. ನಾವು ಮಧ್ಯಾಹ್ನ ೧೨.೪೫ ಗಂಟೆಗೆ ಗೋವಾದ ವಿಮಾನನಿಲ್ದಾಣವನ್ನು ತಲುಪಿದೆವು. ನಂತರ ಪ.ಪೂ. ಡಾಕ್ಟರ ಮತ್ತು ಯೋಗತಜ್ಞ ದಾದಾಜಿಯವರ ಭೇಟಿ ಆಯಿತು. ಅಲ್ಲಿ ಯೋಗತಜ್ಞ ದಾದಾಜಿಯವರು ಪ.ಪೂ. ಡಾಕ್ಟರಿಗಾಗಿ ಅನುಷ್ಠಾನ ಮಾಡಿದರು. ಅನಂತರ ಮುಂಬೈಗೆ ಹೋಗಲು ಸಾಯಂಕಾಲ ೭.೩೦ ಗಂಟೆಗೆ ವಿಮಾನ ಇರುವುದರಿಂದ ಸಾಯಂಕಾಲ ೫.೩೦ ಕ್ಕೆ ನಾವು ಗೋವಾದನ ವಿಮಾನನಿಲ್ದಾಣಕ್ಕೆ ಹೊರಟೆವು. ನಾವು ರಾತ್ರಿ ೮.೪೫ ಗಂಟೆಗೆ ಮುಂಬೈ ವಿಮಾನನಿಲ್ದಾಣವನ್ನು ತಲುಪಿದೆವು. ಅಲ್ಲಿಂದ ಕಾರಿನಲ್ಲಿ ನಾವು ನಾಶಿಕಕ್ಕೆ ಹೊರಟೆವು. ನಾವು ನಾಶಿಕಕ್ಕೆ ರಾತ್ರಿ ೧೨.೩೦ ಗಂಟೆಗೆ ತಲುಪಿದೆವು. ಯೋಗತಜ್ಞ ದಾದಾಜಿಯವರ ವಯಸ್ಸು ೯೬ ವರ್ಷಗಳಿರುವಾಗಲೂ ಅವರು ಮುಂಜಾನೆ ೪ ರಿಂದ ರಾತ್ರಿ ೧೨.೩೦ ರವರೆಗೆ ವಿಶ್ರಾಂತಿಯನ್ನು ತೆಗೆದುಕೊಳ್ಳದೇ ನಾಶಿಕದಿಂದ ಗೋವಾ ಪ್ರಯಾಣ ಮಾಡಿ ಅನುಷ್ಠಾನ ಮಾಡುವುದು, ಸಾಧಕರನ್ನು ಭೇಟಿಯಾಗುವುದು, ಮಾತನಾಡುವುದು ಇತ್ಯಾದಿ ಎಲ್ಲವನ್ನು ನಿರಂತರವಾಗಿ ಮಾಡಿದರು.
೯೬ ನೇ ವಯಸ್ಸಿನಲ್ಲಿ ಸಾಮಾನ್ಯ ವ್ಯಕ್ತಿಯ ಎಲ್ಲ ಸ್ನಾಯುಗಳು ಸಡಿಲವಾಗಿರುತ್ತವೆ ಮತ್ತು ಮನಸ್ಸೂ ಉತ್ಸಾಹವಿರುವುದಿಲ್ಲ. ಯೋಗತಜ್ಞ ದಾದಾಜಿಯವರು ಇದರ ವಿರುದ್ಧವಾಗಿದ್ದರು. ಈ ವಯಸ್ಸಿನಲ್ಲಿಯೂ ಅವರ ಅತೀ ಉತ್ಸಾಹ, ದೃಢನಿಶ್ಚಯ, ಜಿಗುಟುತನ, ತಳಮಳ ಮುಖ್ಯವಾಗಿ ಈ ಗುಣಗಳು ಅವರಲ್ಲಿ ಕಂಡುಬಂದವು. ಆಗ ನನಗೆ ಯೋಗತಜ್ಞ ದಾದಾಜಿ ಮತ್ತು ಪ.ಪೂ. ಡಾಕ್ಟರರ ಪರಸ್ಪರರಲ್ಲಿನ ಆಧ್ಯಾತ್ಮಿಕ ಸಂಬಂಧವು ಗಮನಕ್ಕೆ ಬಂದಿತು.’
– ಶ್ರೀ. ಅತುಲ ಪವಾರ, ಸನಾತನ ಆಶ್ರಮ, ದೇವದ, ಪನವೇಲ್.


ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !