ಮಾರ್ಚ್ ೧೨ ರಂದು ವಿಶ್ವ ಅಗ್ನಿಹೋತ್ರ ದಿನವಿದೆ, ಆ ನಿಮಿತ್ತ…

೧. ಅಗ್ನಿಯನ್ನು ಪ್ರಜ್ವಲಿಸುವ ಕೃತಿ
‘ಹವನಪಾತ್ರೆಯಲ್ಲಿ ಎಲ್ಲಕ್ಕಿಂತ ಕೆಳಗೆ ಸಣ್ಣ ಆಕಾರದ ಒಂದು ಬೆರಣಿಯ ಚಪ್ಪಟೆ ತುಂಡನ್ನು ಇಡಬೇಕು. ಅದರ ಮೇಲೆ ತುಪ್ಪವನ್ನು ಹಚ್ಚಿದ ಬೆರಣಿಗಳ ತುಂಡುಗಳನ್ನು (ಬೆರಣಿಯ ನೇರ ಮತ್ತು ಅಡ್ಡ ತುಂಡುಗಳ ೨-೩ ಪದರು) ಇಡಬೇಕು. ಎರಡು ಬೆರಣಿಗಳ ನಡುವೆ ಗಾಳಿ ಓಡಾಡುವ ಹಾಗೆ ಟೊಳ್ಳುಗಳಿರಬೇಕು. ನಂತರ ಬೆರಣಿಯ ಒಂದು ತುಂಡಿಗೆ ಆಕಳ ತುಪ್ಪವನ್ನು ಹಚ್ಚಿ ಪ್ರಜ್ವಲಿಸಬೇಕು ಮತ್ತು ಆ ತುಂಡನ್ನು ಹವನಪಾತ್ರೆಯಲ್ಲಿಡಬೇಕು. ಸ್ವಲ್ಪ ಸಮಯದಲ್ಲಿ ಬೆರಣಿಗಳ ಎಲ್ಲ ತುಂಡುಗಳು ಪ್ರಜ್ವಲಿಸುವವು. ಅಗ್ನಿಯನ್ನು ಪ್ರಜ್ವಲಿಸಲು ಗಾಳಿ ಹಾಕಲು ಕೈಬೀಸಣಿಗೆಯನ್ನು ಉಪಯೋಗಿಸಬೇಕು; ಬಾಯಿಯಿಂದ ಊದಿ ಅಗ್ನಿಯನ್ನು ಪ್ರಜ್ವಲಿಸಬಾರದು, ಏಕೆಂದರೆ ಹೀಗೆ ಮಾಡುವುದರಿಂದ ಬಾಯಿಯಲ್ಲಿನ ರೋಗಜಂತುಗಳು ಅಗ್ನಿಯಲ್ಲಿ ಹೋಗುತ್ತವೆ. ಅಗ್ನಿಯನ್ನು ಪ್ರಜ್ವಲಿಸಲು ಸೀಮೆಎಣ್ಣೆಯಂತಹ ಜ್ವಲನಶೀಲ ಪದಾರ್ಥಗಳನ್ನು ಉಪಯೋಗಿಸಬಾರದು. ಅಗ್ನಿಯನ್ನು ಧೂಮರಹಿತವಾಗಿ ಪ್ರಜ್ವಲಿಸಬೇಕು, ಅಂದರೆ ಅದರಿಂದ ಹೊಗೆ ಬರಬಾರದು.’ ಎರಡು ಚಿಟಿಕೆ ಅಕ್ಕಿಯನ್ನು ಅಂಗೈಯಲ್ಲಿ ಅಥವಾ ಒಂದು ತಾಮ್ರದ ತಟ್ಟೆಯಲ್ಲಿ ತೆಗೆದುಕೊಳ್ಳಬೇಕು. ಅದರ ಮೇಲೆ ಕೆಲವು ಹನಿ ಆಕಳ ತುಪ್ಪವನ್ನು ಹಾಕಬೇಕು. ಸೂರ್ಯೋದಯಕ್ಕೆ (ಹಾಗೆಯೇ ಸೂರ್ಯಾಸ್ತದ) ಸರಿಯಾದ ಸಮಯದಲ್ಲಿ ಮೊದಲನೆಯ ಮಂತ್ರವನ್ನು ಒಂದು ಬಾರಿ ಹೇಳಬೇಕು ಮತ್ತು ‘ಸ್ವಾಹಾ’ ಶಬ್ದವನ್ನು ಹೇಳಿದ ನಂತರ ಬಲಗೈಯ ಮಧ್ಯಮಾ (ಮಧ್ಯದ ಬೆರಳು), ಅನಾಮಿಕಾ (ಉಂಗುರ ಬೆರಳು) ಮತ್ತು ಹೆಬ್ಬೆರಳಿನ ಚಿಟಿಕೆಯಲ್ಲಿ ಮೇಲಿನ ಅಕ್ಕಿ-ತುಪ್ಪದ ಮಿಶ್ರಣವನ್ನು ತೆಗೆದುಕೊಂಡು ಅಗ್ನಿಯಲ್ಲಿ ಹಾಕಬೇಕು. (ಬೆರಳುಗಳ ಚಿಟಿಕೆಯಲ್ಲಿ ಹಿಡಿಸುವಷ್ಟು ಅಕ್ಕಿ ಸಾಕಾಗುತ್ತದೆ.) ಆಮೇಲೆ ಎರಡನೇ ಒಂದು ಬಾರಿ ಮಂತ್ರವನ್ನು ಹೇಳಬೇಕು ಮತ್ತು ‘ಸ್ವಾಹಾ’ ಶಬ್ದವನ್ನು ಹೇಳಿದ ನಂತರ ಬಲಗೈಯಿಂದ ಮೇಲಿನ ಅಕ್ಕಿ-ತುಪ್ಪದ ಮಿಶ್ರಣವನ್ನು ಅಗ್ನಿಯಲ್ಲಿ ಹಾಕಬೇಕು.’

ಪಠಿಸಬೇಕಾದ ಮಂತ್ರ
ಅ. ‘ಸೂರ್ಯೋದಯದ ಸಮಯದಲ್ಲಿ
೧. ಸೂರ್ಯಾಯ ಸ್ವಾಹಾ ಸೂರ್ಯಾಯ ಇದಂ ನ ಮಮ |
೨. ಪ್ರಜಾಪತಯೇ ಸ್ವಾಹಾ ಪ್ರಜಾಪತಯೇ ಇದಂ ನ ಮಮ |
ಆ. ಸೂರ್ಯಾಸ್ತದ ಸಮಯದಲ್ಲಿ
೧. ಅಗ್ನಯೇ ಸ್ವಾಹಾ ಅಗ್ನಯೇ ಇದಂ ನ ಮಮ |
೨. ಪ್ರಜಾಪತಯೇ ಸ್ವಾಹಾ ಪ್ರಜಾಪತಯೇ ಇದಂ ನ ಮಮ |’
ಮಂತ್ರದಲ್ಲಿನ ‘ಸೂರ್ಯ’, ‘ಅಗ್ನಿ’, ‘ಪ್ರಜಾಪತಿ’ ಈ ಶಬ್ದಗಳು ಈಶ್ವರವಾಚಕವಾಗಿವೆ. ‘ಸೂರ್ಯ, ಅಗ್ನಿ, ಪ್ರಜಾಪತಿ ಇವರ ಆಂತರ್ಯದಲ್ಲಿರುವ ಪರಮಾತ್ಮನ ಶಕ್ತಿಗೆ ನಾನು ಆಹುತಿಯನ್ನು ಅರ್ಪಿಸುತ್ತಿದ್ದೇನೆ, ‘ಇದು ನನ್ನದಲ್ಲ’ ಎಂಬ ಅರ್ಥದಲ್ಲಿ ಈ ಮಂತ್ರವಿದೆ. ಇಡೀ ಸೃಷ್ಟಿಯನ್ನು ನಿರ್ಮಿಸುವ, ಅದನ್ನು ಧಾರಣೆ ಮಾಡುವ ಮತ್ತು ಅದರ ಪೋಷಣೆ ಮಾಡುವ ಪರಮಾತ್ಮನ ಶಕ್ತಿಯ ಕುರಿತು ಶರಣಾಗತಭಾವವನ್ನು ಈ ಮಂತ್ರದಲ್ಲಿ ಹೇಳಲಾಗಿದೆ; ಆದುದರಿಂದ ಈ ಮಂತ್ರವನ್ನು ಶರಣಾಗತಭಾವದಿಂದ ಹೇಳಬೇಕು
(ಸನಾತನ ನಿರ್ಮಿತ ಗ್ರಂಥ ‘ಅಗ್ನಿಹೋತ್ರ – ಖಂಡ ೧’)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು