ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತಮಾಡಿಕೊಂಡ ರಾಮನಾಥಿ ಆಶ್ರಮದ ಶ್ರೀಮತಿ ಕ್ಷಮಾ ರಾಣೆ (ವಯಸ್ಸು ೭೫ ವರ್ಷಗಳು), ಸೌ. ವಿಜಯಲಕ್ಷ್ಮೀ ದಂಡಮುಡಿ (ವಯಸ್ಸು ೬೯ ವರ್ಷಗಳು) ಮತ್ತು ಡಾ. (ಸೌ.) ಸಂಗೀತಾ ಚೌಧರಿ (ವಯಸ್ಸು ೪೫ ವರ್ಷಗಳು) !

ಶ್ರೀಮತಿ ಕ್ಷಮಾ ರಾಣೆ ಇವರ ಸತ್ಕಾರ ಮಾಡುತ್ತಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ (ಎಡಬದಿಗೆ)
ಸೌ. ವಿಜಯಲಕ್ಷ್ಮೀ ದಂಡಮುಡಿ ಇವರ ಸತ್ಕಾರ ಮಾಡುತ್ತಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ (ಎಡಬದಿಗೆ)
ಡಾ. (ಸೌ.) ಸಂಗೀತಾ ಚೌಧರಿ ಇವರ ಸತ್ಕಾರ ಮಾಡುತ್ತಿರುವ ಶ್ರೀಸತ್‌ಶಕ್ತಿ ಬಿಂದಾ ನೀಲೇಶ ಸಿಂಗಬಾಳ (ಎಡಬದಿಗೆ)

ಸೌ. ವಿಜಯಲಕ್ಷ್ಮೀ ಇವರ ಬಗ್ಗೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರ ಪ್ರಶಂಸೆಯ ಮಾತು

ಸೌ. ವಿಜಯಲಕ್ಷ್ಮೀ ದಂಡಮುಡಿ ಇವರ ಆಂತರಿಕ ಸಾಧನೆ

ಸೌ. ವಿಜಯಲಕ್ಷ್ಮೀ ಅಕ್ಕ ಇವರಿಗೆ ಮರಾಠಿ ಭಾಷೆ ಅರ್ಥವಾಗುವುದಿಲ್ಲ, ಆದರೂ ಸತ್ಸಂಗ ಕೇಳುವಾಗ ಅವರ ಮುಖದಲ್ಲಿ ನಗು ಮತ್ತು ಎಲ್ಲವೂ ಅರ್ಥವಾಗುತ್ತಿದೆ ಎಂಬಂತಹ ಭಾವವಿದೆ. ‘ಶಬ್ದಗಳು ಅರ್ಥವಾಗದಿದ್ದರೂ ಶಬ್ದಗಳ ಆಚೆಗಿನ ಚೈತನ್ಯವನ್ನು ಅವರು ಸತ್ಸಂಗದ ಮೂಲಕ ಅನುಭವಿಸುತ್ತಿದ್ದಾರೆ, ಅದರಲ್ಲಿನ ಆನಂದವನ್ನು ಅನುಭವಿಸುತ್ತಿದ್ದಾರೆ’, ಎಂದು ಅರಿವಾಗುತ್ತದೆ. ಸಾಧನೆಯ ತಳಮಳ ಇದ್ದರೆ ಭಾಷೆಯ ಬಂಧನ ಇರುವುದಿಲ್ಲ. ಆಂತರಿಕವಾಗಿ ಸಾಧಕನ ಸಾಧನೆಯು ನಡೆಯುತ್ತಲೇ ಇರುತ್ತದೆ, ಎಂಬುದನ್ನು ಇವರ ಉದಾಹರಣೆಯ ಮೂಲಕ ಶ್ರೀಗುರುಗಳು ಪುನಃ ಒತ್ತಿ ಹೇಳಿದ್ದಾರೆ.

ಶೇ. ೬೧ ರಷ್ಟು ಆಧ್ಯಾತ್ಮಿಕ ಸ್ತರ ಘೋಷಿಸಲ್ಪಟ್ಟ ಸಾಧಕರು ಗುರುಗಳ ಬಗ್ಗೆ ವ್ಯಕ್ತಪಡಿಸಿದ ಮನೋಗತ

ಸೌ. ವಿಜಯಲಕ್ಷ್ಮೀ ದಂಡಮುಡಿ

ಗುರುದೇವರ ಚರಣಗಳ ಸ್ಮರಣೆಯಾಗಿ ಒಳಗಿನಿಂದ ಕೃತಜ್ಞತೆ ತುಂಬಿ ಬರುತ್ತಿದೆ. ಮನಸ್ಸಿನಲ್ಲಿ ಬೇರೆ ಯಾವುದೇ ವಿಚಾರಗಳಿಲ್ಲ. ‘ಶ್ರೀ ಗುರುಗಳಿಗೆ ಅಪೇಕ್ಷಿತ ರೀತಿಯಲ್ಲಿ ನನ್ನ ಸಾಧನೆ ಇನ್ನಷ್ಟು ಹೆಚ್ಚಾಗಲಿ’, ಎಂಬ ಪ್ರಾರ್ಥನೆ ಮನಸ್ಸಿನಲ್ಲಿ ಆಗುತ್ತಿದೆ. ಆನಂದದ ಅನುಭವವಾಗುತ್ತಿದೆ. ಮಾತನಾಡಲು ಪದಗಳೇ ಸಿಗುತ್ತಿಲ್ಲ. ಏನೆಲ್ಲ ಆಗಿದೆಯೋ ಅದೆಲ್ಲವೂ ಗುರುಗಳ ಕೃಪೆಯಿಂದಲೇ ಆಗಿದೆ. ಅವರೇ ಎಲ್ಲವನ್ನೂ ಮಾಡಿದ್ದಾರೆ.

ಶ್ರೀಮತಿ ಕ್ಷಮಾ ರಾಣೆ

ಶ್ರೀಮತಿ ಕ್ಷಮಾ ರಾಣೆ

ವಾಸ್ತವದಲ್ಲಿ ಈ ಆಧ್ಯಾತ್ಮಿಕ ಮಟ್ಟವು ನನ್ನದಲ್ಲ, ಸೌ. ಸುಪ್ರಿಯಾ ಮಾಥುರ ಇವರಿಗೆ ಅದರ ಶ್ರೇಯಸ್ಸು ಸಲ್ಲುತ್ತದೆ. ನನ್ನಲ್ಲಿದ್ದ ಅನೇಕ ಸ್ವಭಾವದೋಷಗಳನ್ನು ದೂರ ಮಾಡುವುದು ನನ್ನಿಂದ ಸಾಧ್ಯವಿರಲಿಲ್ಲ; ಆದರೆ ಸೌ. ಸುಪ್ರಿಯಾ ಇವರು ನನಗೆ ಮಾರ್ಗದರ್ಶನ ಮಾಡಿ ಚಿಂತನ ಮಾಡಿಸಿ, ಆ ಚಿಂತನದಿಂದ ನಾನು ರೂಪುಗೊಂಡೆನು, ಇಂದು ಅದು ನಿಮ್ಮ ಕಣ್ಮುಂದಿದೆ.

ಡಾ. (ಸೌ.) ಸಂಗೀತಾ ಚೌಧರಿ

ಡಾ. (ಸೌ.) ಸಂಗೀತಾ

ನಾನು ಯಾವುದೇ ಪ್ರಯತ್ನ ಮಾಡಿಲ್ಲ, ಕೇವಲ ಗುರುದೇವರು ಪ್ರಯತ್ನ ಮಾಡಿಸಿಕೊಂಡಿದ್ದು ಅವರೇ ಜೀವನದ ಈ ಸುಂದರ ಕ್ಷಣವನ್ನು ಅನುಭವಿಸಲು ಅವಕಾಶ ಮಾಡಿಕೊಟ್ಟಿದ್ದಾರೆ, ಆದುದರಿಂದ ಮನಸ್ಸು  ಕೃತಜ್ಞತೆಯಿಂದ ತುಂಬಿ ಬರುತ್ತಿದೆ. ಮನಸ್ಸಿನಲ್ಲಿ ಬೇರೆ ಯಾವುದೇ ವಿಚಾರಗಳಿಲ್ಲ, ಕೇವಲ ಗುರುದೇವರ ಮತ್ತು ಅವರ ಚರಣಗಳ ಸ್ಮರಣೆಯಾಗುತ್ತಿದೆ.

ರಾಮನಾಥಿ (ಗೋವಾ) – ಫೆಬ್ರವರಿ ೯ ರಂದು ಆಶ್ರಮದಲ್ಲಾದ ಒಂದು ಸತ್ಸಂಗದಲ್ಲಿ ಶ್ರೀಮತಿ ಕ್ಷಮಾ ರಾಣೆ (ವಯಸ್ಸು ೭೫ ವರ್ಷಗಳು), ರಾಯಚೂರಿನ (ಬಾಗಲಕೋಟೆ) ಸೌ. ವಿಜಯಲಕ್ಷ್ಮೀ ದಂಡಮುಡಿ (ವಯಸ್ಸು ೬೯ ವರ್ಷಗಳು) ಮತ್ತು ಅವರ ಮಗಳು ಡಾ. (ಸೌ.) ಸಂಗೀತಾ ಚೌಧರಿ (ವಯಸ್ಸು ೪೫ ವರ್ಷಗಳು) ಇವರು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿದ ಆನಂದವಾರ್ತೆಯನ್ನು ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ನೀಡಿದರು. ಈ ಆನಂದಮಯ ಕ್ಷಣದಲ್ಲಿ ಆಶ್ರಮದಲ್ಲಿ ಅವರೊಂದಿಗೆ ಸೇವೆ ಮಾಡುವ ಕೆಲವು ಸಾಧಕರು ಉಪಸ್ಥಿತರಿದ್ದರು. ಡಾ. (ಸೌ.) ಸಂಗೀತಾ ಚೌಧರಿ ಇವರ ಪತಿ ಶ್ರೀ. ಶ್ರೀಕಾಂತ ಚೌಧರಿ ಮತ್ತು ಸಂಗೀತಾ ಇವರ ತಂಗಿ ಸೌ. ಸೌಮ್ಯಾ ಕುದರವಳ್ಳಿ, ಸೋದರಳಿಯ ಕು. ನಂದನ ಕುದರವಳ್ಳಿ ಇವರು ಸಂಚಾರವಾಣಿಯ ಮೂಲಕ ಸಮಾರಂಭದ ಆನಂದವನ್ನು ಪಡೆದರು.

೧. ಸೌ. ವಿಜಯಲಕ್ಷ್ಮೀ ಅಕ್ಕ ಇವರಲ್ಲಿ ಅಹಂ ಕಡಿಮೆ ಇದೆ

ಸೌ. ವಿಜಯಲಕ್ಷ್ಮೀಯವರನ್ನು ನೋಡಿ ಅವರಲ್ಲಿ ಚಿಕ್ಕ ಮಗುವಿನಂತಹ ಮುಗ್ಧತೆ ಕಂಡುಬರುತ್ತದೆ; ಏಕೆಂದರೆ ಅವರಲ್ಲಿ ಶ್ರೀಗುರುಗಳ ಬಗ್ಗೆ ಬಹಳ ಭಾವವಿದ್ದು ಅಹಂ ಕಡಿಮೆ ಇದೆ. ಅಲ್ಪ ಅಹಂನಿಂದ ಅವರ ಮುಖ ಚಿಕ್ಕ ಮಗುವಿನಂತೆ ಕಾಣಿಸುತ್ತದೆ. ಅನೇಕ ಸಾಧಕರಿಗೆ ಅವರ ಪರಿಚಯ ಅಷ್ಟಾಗಿ ಇಲ್ಲದಿದ್ದರೂ, ಅವರನ್ನು ನೋಡಿದಾಗ ಬಹಳ ಸಂತೋಷವಾಗುತ್ತದೆ. ಅಹಂ ಕಡಿಮೆ ಇದ್ದರೆ, ಮುಖ ಹೇಗೆ ಬದಲಾಗುತ್ತದೆ, ಎಂಬುದನ್ನು ಅವರ ಉದಾಹರಣೆಯಿಂದ ಕಲಿಯಲು ಸಿಗುತ್ತದೆ.

೨. ಸೌ. ವಿಜಯಲಕ್ಷ್ಮೀ ಮತ್ತು ಡಾ. (ಸೌ.) ಸಂಗೀತಾ ಚೌಧರಿ ಇವರ ಪ್ರಗತಿಯ ಘೋಷಣೆಯಾದ ಪರಿ !

ಶ್ರೀಮತಿ ರಾಣೆ ಇವರ ಆಧ್ಯಾತ್ಮಿಕ ಮಟ್ಟವನ್ನು ಘೋಷಿಸಿದ ನಂತರ ‘ಇಂದಿನ ಸತ್ಸಂಗದಿಂದ ಏನು ಕಲಿಯಲು ಸಿಕ್ಕಿತು ?’ ಎಂಬ ಬಗ್ಗೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಸೌ. ದಂಡಮುಡಿ ಇವರಿಗೆ ಕೇಳಿದರು. ಅವರಿಗೆ ಮರಾಠಿ ಭಾಷೆ ಬರದ ಕಾರಣ ಅವರು ತಮ್ಮ ಅಭಿಪ್ರಾಯವನ್ನು ಮಾತೃಭಾಷೆ ತೆಲುಗುವಿನಲ್ಲಿ ವ್ಯಕ್ತಪಡಿಸಿದರು. ಇದರ ಜೊತೆಗೆ ವ್ಯಷ್ಟಿ ವರದಿ ಸತ್ಸಂಗಗಳಲ್ಲಿ ಏನು ಕಲಿಯಲು ಸಿಕ್ಕಿತು, ಎಂಬುದನ್ನೂ ಅವರು ಹೇಳಿದರು. ಅವರ ಮಗಳು ಡಾ. (ಸೌ.) ಸಂಗೀತಾ ಇವರು ಅದನ್ನು ವಿವರಿಸಿದರು. ಆ ಸಮಯದಲ್ಲಿ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರು ‘ಇವರಿಬ್ಬರ ಮಾತುಗಳನ್ನು ಕೇಳಿ ಏನನಿಸಿತು ?’, ಎಂದು ಸಾಧಕರಿಗೆ ಕೇಳಿದರು. ಅವರ ಮಾತುಗಳಿಂದ ಭಾವದ ತರಂಗಗಳು, ಆನಂದ, ಶಾಂತಿ ಮತ್ತು ಭಾವಜಾಗೃತಿಯಾದ ಬಗ್ಗೆ ಸಾಧಕರು ಹೇಳಿದರು. ಅನಂತರ ಶ್ರೀಸತ್‌ಶಕ್ತಿ (ಸೌ.) ಬಿಂದಾ ಅಕ್ಕನವರು ಮುಂದಿನ ಕಾವ್ಯದ ಮೂಲಕ ಅವರಿಬ್ಬರ ಆಧ್ಯಾತ್ಮಿಕ ಉನ್ನತಿಯನ್ನು ಘೋಷಿಸಿದರು. (ಮರಾಠಿ ಕಾವ್ಯದ ಕನ್ನಡ ಅನುವಾದ ಕೆಳಗೆ ನೀಡಲಾಗಿದೆ)

ಜನ್ಮವನಿತ್ತ ತಾಯಿಯು ಮಗಳಿಗೆ ಈ ಜಗವ ತೋರಿಸಿದಳು |

ಆರಂಭವಾಯಿತು ಅಲ್ಲಿಂದಲೇ ಭಗವಂತನ ಭೇಟಿಯ ಪ್ರವಾಸವು ||

ಆಶ್ರಮಕ್ಕೆ ಬಂದಳು ಮಗಳು, ಹಿಂದೆ ತಾಯಿಯೂ ಬಂದಳು |

ಒಂದಾಗಿ ಸಾಧನೆಯ ಹಾದಿಯಲಿ ಆಶ್ರಮದಿ ಹೆಜ್ಜೆಯಿಟ್ಟರು ||

ಗುರುಚರಣವ ಸೇರಲು ತಾಯಿ-ಮಗಳು ಕೈಕೈ ಹಿಡಿದರು |

ಅಧ್ಯಾತ್ಮದ ಈ ದಿವ್ಯ ಪಯಣವ ಜೊತೆಯಾಗಿ ಸಾಗಿದರು ||

ತಾಯಿ-ಮಗಳ ಈ ಸಂಬಂಧಕ್ಕೆ ಗುರುಕೃಪೆಯ ರಕ್ಷೆಯಿದೆ |

ಜೊತೆಯಾಗಿ ಸಾಗುತ್ತಾ ಜನ್ಮ-ಮರಣದ ಚಕ್ರವನ್ನೇ ದಾಟಿದ್ದಾರೆ ||

ಪ್ರಗತಿ ಮಾಡಿಕೊಂಡ ಸಾಧಕರ ಬಗ್ಗೆ ಅವರ ಕುಟುಂಬದವರು ಹೇಳಿದ ಗುಣವೈಶಿಷ್ಟ್ಯಗಳು

೧. ಶ್ರೀ. ಶ್ರೀಕಾಂತ ಚೌಧರಿ (ಡಾ. (ಸೌ.) ಸಂಗೀತಾ ಚೌಧರಿ ಇವರ ಪತಿ ಮತ್ತು ಸೌ. ದಂಡಮುಡಿ ಇವರ ಅಳಿಯ)

ಅತ್ತೆಯವರು (ಸೌ. ವಿಜಯಲಕ್ಷ್ಮೀ ದಂಡಮುಡಿ) ಸಾಧನೆಯ ಪ್ರಯತ್ನವನ್ನು ಹೇಗೆ ಮಾಡುತ್ತಾರೆ ? ಈ ಬಗ್ಗೆ ಸೌ. ಸಂಗೀತಾ ಇವಳು ಯಾವಾಗಲೂ ನನಗೆ ಹೇಳುತ್ತಿರುತ್ತಾಳೆ. ಅದನ್ನು ಕೇಳಿ ನನ್ನ ಭಾವಜಾಗೃತಿಯಾಗುತ್ತದೆ. ಆದ್ದರಿಂದ ‘ಅವರ ಆಧ್ಯಾತ್ಮಿಕ ಪ್ರಗತಿಯಾಗಿದೆ’, ಎಂದು ನನಗೆ ಅನಿಸುತ್ತದೆ. ಅವರ ಮಾಯೆಯ ಸೆಳೆತ ಸಂಪೂರ್ಣ ಕಡಿಮೆಯಾಗಿದೆ. ‘ಸಾಧನೆಯನ್ನೇ ಮಾಡಬೇಕು’, ಎಂಬ ಅವರ ವಿಚಾರ ದೃಢವಾಗಿದೆ. ಸೌ. ಸಂಗೀತಾಳ ಆಧ್ಯಾತ್ಮಿಕ ಪ್ರಗತಿಯ ಬಗ್ಗೆ ಸಹ ನನಗೆ ಬಹಳ ಕೃತಜ್ಞತೆ ಅನಿಸಿತು. ಅವಳಲ್ಲಿ ಬಹಳ ಬದಲಾವಣೆ ಆಗಿದೆ. ಹಿಂದೆ ಸಂಗೀತಾಳಿಗೆ ಕೆಲವು ವಿಚಾರಗಳಲ್ಲಿ ಕೋಪ ಸಹ ಬರುತ್ತಿತ್ತು. ಈ ೧೫ ದಿನಗಳಲ್ಲಿ ಅವಳು ೧ ದಿನ ಸಹ ಯಾವುದೇ ನಕಾರಾತ್ಮಕ ಮಾತುಗಳನ್ನು ಆಡಿಲ್ಲ. ತಾಯಿಯವರ ಬಳಿ ಮತ್ತು ಆಶ್ರಮದ ಸಾಧಕರ ಬಳಿ ಸಕಾರಾತ್ಮಕ ಮತ್ತು ಕಲಿಯುವ ದೃಷ್ಟಿಕೋನ ಇಟ್ಟುಕೊಂಡು ನಡೆದುಕೊಳ್ಳುತ್ತಾಳೆ. ಅವಳ ಸಾಧನೆಯ ಪ್ರಯತ್ನ ಚೆನ್ನಾಗಿ ನಡೆದಿದೆ. ನನ್ನ ತಾಯಿ-ತಂದೆಯ ಜೊತೆಗೆ ಮಾತನಾಡಿ ಅವರಿಗೆ ವೈದ್ಯಕೀಯ ದೃಷ್ಟಿಯಿಂದ ಸಹಾಯ ಮಾಡುತ್ತಾಳೆ. ನನ್ನ ತಾಯಿಯವರು ಮೊದಲು ನನ್ನೊಂದಿಗೆ ಹೆಚ್ಚು ಮಾತನಾಡುತ್ತಿದ್ದರು. ಈಗ ಸಂಗೀತಾಳೊಂದಿಗೆ ಆತ್ಮೀಯತೆ ಹೆಚ್ಚಾದುದರಿಂದ ಅವಳೊಂದಿಗೆ ಹೆಚ್ಚು ಮಾತನಾಡುತ್ತಾರೆ. ಗುರುದೇವರು ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಅಕ್ಕ ಇವರ ಕೃಪೆಯಿಂದಲೇ ಅವಳಲ್ಲಿ ಬದಲಾವಣೆಯಾಗಿದೆ, ಇದಕ್ಕಾಗಿ ಗುರುಚರಣಗಳಲ್ಲಿ ಕೃತಜ್ಞತೆಗಳು !

೨. ಸೌ. ಸೌಮ್ಯ ಕುದರವಳ್ಳಿ (ಸೌ. ದಂಡಮುಡಿ ಇವರ ಮಗಳು ಮತ್ತು ಡಾ. (ಸೌ.) ಸಂಗೀತಾ ಚೌಧರಿ ಇವರ ತಂಗಿ)

ಬಹಳ ಕೃತಜ್ಞತೆ ಎನಿಸಿತು. ತಾಯಿಯವರು ಮಾತನಾಡುತ್ತಿರುವಾಗ ಕೃತಜ್ಞತೆಯಿಂದ ಕಣ್ಣುಗಳು ತುಂಬಿ ಬರುತ್ತಿದ್ದವು. ಸಾಧನೆಯ ಮೊದಲ ದಿನದಿಂದ ಅವರ ಮನಸ್ಸಿನಲ್ಲಿ ಗುರುದೇವರ ಬಗ್ಗೆ ಭಾವ ಹೆಚ್ಚಾಗುತ್ತಲೇ ಹೋಯಿತು. ಸೌ. ಸಂಗೀತಾ ಅಕ್ಕನವರು ಮಾತನಾಡುವಾಗ ಬಹಳ ಆನಂದವೆನಿಸುತ್ತಿತ್ತು. ಸಾಧನೆಗಾಗಿ ಅವರು ನನಗೆ ಬಹಳ ಸಹಾಯ ಮಾಡಿದ್ದಾರೆ. ದಿನದಲ್ಲಿ ಒಂದು ಬಾರಿಯಾದರೂ ನಾನು ಅವರೊಂದಿಗೆ ಮಾತನಾಡುತ್ತೇನೆ. ಅವರು ಹೇಳಿದ್ದನ್ನು ಕೇಳಿ ಮಾಡಬೇಕು, ಎಂಬುದಷ್ಟೇ ಮನಸ್ಸಿನಲ್ಲಿ ಇರುತ್ತದೆ. ಅಕ್ಕನವರು ಸಾಧನೆಯಲ್ಲಿ ಬಹಳ ಶ್ರಮಿಸಿದ್ದಾರೆ. ಮನೆಯಲ್ಲಿ ನನಗೆ ಏನಾದರೂ ಅಡಚಣೆ ಬಂದರೆ ಅಥವಾ ನನಗೆ ತೊಂದರೆಯಾಗುತ್ತಿದ್ದರೆ, ನಂದನ (ಸೌ. ಸೌಮ್ಯ ಕುದರವಳ್ಳಿ ಇವರ ಮಗ) ‘ಮೊದಲು ಸಂಗೀತಾ ದೊಡ್ಡಮ್ಮನಿಗೆ ದೂರವಾಣಿ ಕರೆ ಮಾಡು’, ಎಂದು ಹೇಳುತ್ತಾನೆ. ಏಕೆಂದರೆ ಅವರೊಂದಿಗೆ ಮಾತನಾಡಿದಾಗಲೇ ನನಗೆ ಸಮಾಧಾನವಾಗುತ್ತದೆ ಎಂಬುದು ಅವನಿಗೆ ಗೊತ್ತಿದೆ. ಮನೆಯಲ್ಲಿನ ಎಲ್ಲರನ್ನು ಅವಳು ಸಂಭಾಳಿಸುತ್ತಾಳೆ. ಇವಳಂತಹ ಸಾಧಕಿಯನ್ನು ನಾನು ನೋಡಿಲ್ಲ. ಅವಳ ಬಗ್ಗೆ ನನಗೆ ಹೆಮ್ಮೆ ಎನಿಸುತ್ತದೆ.

೩. ಕು. ನಂದನ ಕುದರವಳ್ಳಿ

(ಸೌ. ದಂಡಮುಡಿ ಇವರ ಮೊಮ್ಮಗ ಮತ್ತು ಡಾ. (ಸೌ.) ಸಂಗೀತಾ ಚೌಧರಿ ಇವರ ತಂಗಿಯ ಮಗ)

ಅಜ್ಜಿಯವರು ಯಾರೊಂದಿಗೆ ಮಾತನಾಡಿದರೂ ಸಕಾರಾತ್ಮಕವಾಗಿ ಮತ್ತು ಆನಂದವಾಗಿರುತ್ತಾರೆ. ಯಾರಿಗಾದರೂ ಸಹಾಯದ ಅವಶ್ಯಕತೆ ಇದ್ದರೆ ಅವರು ತಕ್ಷಣವೇ ಸ್ಪಂದಿಸುತ್ತಾರೆ. ಸಂಗೀತಾ ದೊಡ್ಡಮ್ಮನ ತಳಮಳ ಬಹಳಷ್ಟಿದೆ. ದೊಡ್ಡಮ್ಮ ಗುರುದೇವರಿಗೆ ಸಂಬಂಧಿಸಿದ ಕೆಲವು ಅನುಭೂತಿಗಳನ್ನು ಹೇಳುವಾಗ, ಅದನ್ನು ಕೇಳುತ್ತಲೇ ಇರಬೇಕು ಎಂದೆನಿಸುತ್ತದೆ. ಅವರ ಮಾತುಗಳಲ್ಲಿ ಚೈತನ್ಯದ ಅರಿವಾಗುತ್ತದೆ.