ಭಾರತ-ಪಾಕ್ ಯುದ್ಧದ ಕುರಿತು ಟ್ರಂಪ್ ಹೊಸ ಹೇಳಿಕೆ !

ವಾಷಿಂಗ್ಟನ್ ಡಿಸಿ (ಅಮೆರಿಕ) – ಪದವಿ ಸ್ವೀಕರಿಸಿದ ಮೊದಲ ೧೦ ತಿಂಗಳಲ್ಲಿ ನಾನು ಭಾರತ-ಪಾಕಿಸ್ತಾನ ಸೇರಿದಂತೆ ೮ ಯುದ್ಧಗಳನ್ನು ತಡೆದಿದ್ದೇನೆ. ನಾನು ಮಧ್ಯ ಪ್ರವೇಶಿಸದಿದ್ದರೆ, ಪಾಕಿಸ್ತಾನದ ಪ್ರಧಾನಿ (ಶಹಬಾಜ್ ಶರೀಫ್) ಹತರಾಗುತ್ತಿದ್ದರು. ಪಾಕಿಸ್ತಾನದ ಮೂರೂವರೆ ಕೋಟಿ ಜನರು ಸಾಯುತ್ತಿದ್ದರು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಟ್ರಂಪ್ ಅವರು ತಮ್ಮ ಎರಡನೇ ಅವಧಿಯ ‘ಸ್ಟೇಟ್ ಆಫ್ ದಿ ಯೂನಿಯನ್’ (ಅಮೆರಿಕದ ಅಧ್ಯಕ್ಷರು ಸಂಸತ್ತಿನಲ್ಲಿ ಮಾಡುವ ವರ್ಷದ ಮೊದಲ ಭಾಷಣ) ಉದ್ದೇಶಿಸಿ ಮಾತನಾಡುವಾಗ ಈ ಹೇಳಿಕೆ ನೀಡಿದರು. ಕಳೆದ ವರ್ಷ ಕಾಶ್ಮೀರದ ಪಹಲ್ಗಾಮ್ ನಲ್ಲಿ ಹಿಂದೂಗಳ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ೨೬ ಜನರು ಮೃತಪಟ್ಟ ನಂತರ, ಭಾರತೀಯ ಸೈನ್ಯವು ಪಾಕಿಸ್ತಾನದ ಭಯೋತ್ಪಾದಕ ನೆಲೆಗಳನ್ನು ‘ಆಪರೇಷನ್ ಸಿಂದೂರ್’ ಮೂಲಕ ಗುರಿಯಾಗಿಸಿಕೊಂಡು ಧ್ವಂಸಗೊಳಿಸಿತ್ತು. ಆಗ ಪಾಕಿಸ್ತಾನವು ಹಿಂದೆ ಸರಿದಿದ್ದರಿಂದ ಭಾರತವು ಈ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತು. ಆದರೆ, ಈ ಕಾರ್ಯಾಚರಣೆಯನ್ನು ನಾನು ಹೇಳಿದ್ದಕ್ಕಾಗಿ ನಿಲ್ಲಿಸಲಾಗಿದೆ ಎಂದು ಟ್ರಂಪ್ ಅಂದಿನಿಂದ ನಿರಂತರವಾಗಿ ಹೇಳುತ್ತಿದ್ದಾರೆ ಮತ್ತು ಭಾರತವು ಈ ಹೇಳಿಕೆಯನ್ನು ಪದೇ ಪದೇ ತಿರಸ್ಕರಿಸುತ್ತಾ ಬಂದಿದೆ.
“If I hadn't intervened, 35 million people, including the Pakistan Prime Minister, would’ve been killed in a nuclear war!”
Trump drops a new claim about the India-Pak war. But honestly, who believes his daily ‘revelations’ anymore?
Would India ever do this?
Maybe not. Would… pic.twitter.com/inkSBN08Qs— Sanatan Prabhat (@SanatanPrabhat) February 25, 2026
ಟ್ರಂಪ್ ಯಾವ ೮ ಯುದ್ಧಗಳನ್ನು ತಡೆದಿದ್ದಾರೆ?
ಇಸ್ರೇಲ್ – ಹಮಾಸ್, ಇಸ್ರೇಲ್ – ಇರಾನ್, ಈಜಿಪ್ಟ್ – ಇಥಿಯೋಪಿಯಾ, ಭಾರತ – ಪಾಕಿಸ್ತಾನ, ಸರ್ಬಿಯಾ – ಕೊಸೊವೊ, ರುವಾಂಡಾ – ಕಾಂಗೋ, ಅರ್ಮೇನಿಯಾ – ಅಜೆರ್ಬೈಜಾನ್ ಮತ್ತು ಕಾಂಬೋಡಿಯಾ – ಥೈಲ್ಯಾಂಡ್ ನಡುವಿನ ಸಂಘರ್ಷಗಳು ನನ್ನಿಂದಾಗಿ ನಿಂತವು ಎಂದು ಟ್ರಂಪ್ ಹೇಳುತ್ತಿರುತ್ತಾರೆ.
ಸಂಪಾದಕೀಯ ನಿಲುವುಪ್ರತಿದಿನ ಹೊಸ ಹೊಸ ಹೇಳಿಕೆಗಳನ್ನು ನೀಡುವ ಟ್ರಂಪ್ ಅವರ ಮಾತುಗಳನ್ನು ಯಾರು ನಂಬುತ್ತಾರೆ? ಭಾರತದ ಕಡೆಯಿಂದ ಎಂದಾದರೂ ಇಂತಹ (ಸಾಮೂಹಿಕ ಹತ್ಯೆಯ) ದಾಳಿ ನಡೆಯಲು ಸಾಧ್ಯವೇ? ಒಂದು ವೇಳೆ ಭಾರತ ಇಂತಹದ್ದೇನನ್ನಾದರೂ ಮಾಡಿದ್ದರೆ, ಭಾರತೀಯರಿಗೆ ಖಂಡಿತವಾಗಿಯೂ ಆನಂದವಾಗುತ್ತಿತ್ತು ಎಂಬುದು ಅಷ್ಟೇ ಸತ್ಯ . |
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !
ಟೆಕ್ಸಾಸ್ (ಅಮೆರಿಕ) ನಲ್ಲಿ ಭಾರತದ ರಾಷ್ಟ್ರಧ್ವಜ ಹರಿದ ಅಮೆರಿಕನ್ ಯುವಕ