‘ಅಫಘಾನ್ ಡಯಾಸ್ಪೊರಾ ನೆಟ್‌ವರ್ಕ್’ ಸಂಘಟನೆಯ ವರದಿಯಿಂದ ಬಹಿರಂಗ

ಕಾಬೂಲ್ – ಪಾಕಿಸ್ತಾನವು ಭಯೋತ್ಪಾದಕರಿಗೆ ಸುರಕ್ಷಿತ ತಾಣವಾಗಿದೆ ಎಂಬುದು ‘ಅಫಘಾನ್ ಡಯಾಸ್ಪೊರಾ ನೆಟ್‌ವರ್ಕ್’ನ ವರದಿಯಿಂದ ಮತ್ತೊಮ್ಮೆ ಸಾಬೀತಾಗಿದೆ. ಪಾಕಿಸ್ತಾನಿ ಸೈನ್ಯವು ಹಮಾಸ್ ಮತ್ತು ಮುಸ್ಲಿಂ ಬ್ರದರ್‌ಹುಡ್‌ನಂತಹ ಕಟ್ಟರ್ ಇಸ್ಲಾಮಿಕ್ ಸಂಘಟನೆಗಳಿಗೆ ತನ್ನ ದೇಶದಲ್ಲಿ ಕಾರ್ಯನಿರ್ವಹಿಸಲು ಸ್ಥಳಾವಕಾಶ ನೀಡುತ್ತಿದೆ ಮತ್ತು ಸಹಾಯ ಮಾಡುತ್ತಿದೆ. ಹಾಗೆಯೇ ಲಷ್ಕರ್-ಎ-ತೊಯ್ಬಾ ಮತ್ತು ಜೈಶ್-ಎ-ಮೊಹಮ್ಮದ್‌ನಂತಹ ಸ್ಥಳೀಯ ಭಯೋತ್ಪಾದಕ ಸಂಘಟನೆಗಳಿಗೂ ಪಾಕಿಸ್ತಾನಿ ಸೈನ್ಯದಿಂದ ವೈಚಾರಿಕ ಮತ್ತು ಕಾರ್ಯತಂತ್ರದ ಬೆಂಬಲ ಸಿಗುತ್ತಿದೆ ಎಂದು ‘ಅಫಘಾನ್ ಡಯಾಸ್ಪೊರಾ ನೆಟ್‌ವರ್ಕ್’ ವರದಿಯಲ್ಲಿ ದಾವೆ ಮಾಡಲಾಗಿದೆ. (ಇದರಿಂದ ಪಾಕಿಸ್ತಾನದ ಸುಳ್ಳುಗಾರಿಕೆ ಮತ್ತೊಮ್ಮೆ ಎಲ್ಲರ ಮುಂದೆ ಬಂದಿದೆ. ಈಗಲಾದರೂ ಜಾಗತಿಕ ಸಮುದಾಯವು ಪಾಕಿಸ್ತಾನವನ್ನು ಭಯೋತ್ಪಾದಕ ದೇಶ ಎಂದು ಘೋಷಿಸುತ್ತದೆಯೇ? – ಸಂಪಾದಕರು)
ದಕ್ಷಿಣ ಏಷ್ಯಾದ ಅಸ್ಥಿರತೆಯ ಬಗ್ಗೆ ಎಚ್ಚರಿಕೆ
ಪಾಕಿಸ್ತಾನದ ಈ ಧೋರಣೆಯಿಂದ ದಕ್ಷಿಣ ಏಷ್ಯಾದಲ್ಲಿ ಈಗಾಗಲೇ ಇರುವ ಅಸ್ಥಿರ ಪರಿಸ್ಥಿತಿ ಇನ್ನಷ್ಟು ಸಂಕೀರ್ಣವಾಗಬಹುದು. ಇದರಿಂದ ಎರಡೂ ಪ್ರದೇಶಗಳಲ್ಲಿ ಹೊಸ ಸಂಘರ್ಷ ಮತ್ತು ಹಿಂಸಾಚಾರದ ಸಾಧ್ಯತೆಗಳು ನಿರ್ಮಾಣವಾಗಬಹುದು ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಭಯೋತ್ಪಾದಕ ಸಂಘಟನೆಗಳ ಮೇಲಿನ ನಿಷೇಧದ ಪಾಕಿಸ್ತಾನದ ದಾವೆಗಳ ಮೇಲೆ ಪ್ರಶ್ನಾರ್ಥಕ ಚಿಹ್ನೆ!
ಅಂತರಾಷ್ಟ್ರೀಯ ಒತ್ತಡದ ಮೇರೆಗೆ ಪಾಕಿಸ್ತಾನವು ಲಷ್ಕರ್-ಎ-ತೊಯ್ಬಾ ಮತ್ತು ಜೈಶ್-ಎ-ಮೊಹಮ್ಮದ್ ಸಂಘಟನೆಗಳನ್ನು ನಿಷೇಧಿಸಿರುವುದಾಗಿ ಹೇಳಿಕೊಂಡಿದ್ದರೂ, ಸಹವರ್ತಿ ಸಂಸ್ಥೆಗಳು ಮತ್ತು ಮೈತ್ರಿ ಸಂಘಟನೆಗಳ ಮೂಲಕ ಈ ಗುಂಪುಗಳು ಇಂದಿಗೂ ಸಕ್ರಿಯವಾಗಿವೆ ಎಂದು ವರದಿ ಹೇಳಿದೆ. ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದ ರಾಜಕೀಯ ಮತ್ತು ಧಾರ್ಮಿಕ ವೇದಿಕೆಗಳಲ್ಲಿ ಹಮಾಸ್ ಪ್ರತಿನಿಧಿಗಳ ಉಪಸ್ಥಿತಿ ಕಂಡುಬರುತ್ತಿದೆ. ಇದರಿಂದ ಅವರಿಗೆ ಕೇವಲ ಪ್ರಚಾರಕ್ಕಾಗಿ ವೇದಿಕೆ ನೀಡಲಾಗುತ್ತಿಲ್ಲ, ಬದಲಿಗೆ ವ್ಯಾಪಕ ಜಾಲವನ್ನು ನಿರ್ಮಿಸಲು ಪಾಕಿಸ್ತಾನದ ಸಹಾಯ ಸಿಗುತ್ತಿದೆ ಎಂಬ ಸಂಕೇತಗಳು ಸಿಗುತ್ತಿವೆ. (ಈ ವರದಿಯನ್ನು ವಿಶ್ವಸಂಸ್ಥೆಯ ಮುಂದೆ ಮಂಡಿಸಿ ಭಾರತವು ಪಾಕಿಸ್ತಾನದ ಸುಳ್ಳುಗಾರಿಕೆಯನ್ನು ಬಯಲಿಗೆಳೆಯಬೇಕು ಮತ್ತು ಪಾಕಿಸ್ತಾನವನ್ನು ಭಯೋತ್ಪಾದಕ ದೇಶ ಎಂದು ಘೋಷಿಸಲು ಒತ್ತಾಯಿಸಬೇಕು! – ಸಂಪಾದಕರು)
ಸಂಪಾದಕೀಯ ನಿಲುವುಈ ವರದಿಯಲ್ಲಿ ಹೊಸದೇನೂ ಇಲ್ಲ. ಇಲ್ಲಿಯವರೆಗೆ ವಿಶ್ವದಾದ್ಯಂತ ಅನೇಕ ಸಂಘಟನೆಗಳು ಹೀಗೆ ಹೇಳಿವೆ; ಆದರೆ ಮಹಾಶಕ್ತಿಗಳೆಂದು ಕರೆಸಿಕೊಳ್ಳುವ ಅಮೆರಿಕಾ ಮತ್ತು ಚೀನಾದಂತಹ ದೇಶಗಳು ಪಾಕಿಸ್ತಾನವನ್ನು ಬೆಂಬಲಿಸುತ್ತಿರುವುದು ಜಗತ್ತಿಗೆ ಪ್ರಮುಖ ಸಮಸ್ಯೆಯಾಗಿದೆ! |
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !