ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಈ ಜನ್ಮದಲ್ಲಿ ಮತ್ತು ಮುಂದಿನ ಜನ್ಮದಲ್ಲಿ ಅವರ ಸಂಪರ್ಕಕ್ಕೆ ಬರುವ ವ್ಯಕ್ತಿಗಳೊಂದಿಗಿನ ‘ಕೊಡು-ಕೊಳ್ಳುವಿಕೆಯ ಲೆಕ್ಕಾಚಾರದ’ ಬಗ್ಗೆ ಸೂಕ್ಷ್ಮದಿಂದ ದೊರಕಿದ ಜ್ಞಾನ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

೧. ವ್ಯಕ್ತಿಗಳ ನಡುವೆ ‘ಕೊಡು-ಕೊಳ್ಳುವಿಕೆಯ’ ಲೆಕ್ಕಾಚಾರ ಯಾವಾಗ ನಿರ್ಮಾಣವಾಗುತ್ತದೆ ?

“ಯಾವಾಗ ವ್ಯಕ್ತಿಗಳು ಪರಸ್ಪರ ಸಾಪೇಕ್ಷ, ಅಂದರೆ ವಿಶಿಷ್ಟ ಅಪೇಕ್ಷೆ ಪೂರ್ಣವಾಗಲು ಯಾವುದಾದರೂ ಕೃತಿಯನ್ನು ಮಾಡುತ್ತಾರೆಯೋ, ಆಗ ಅವರ ನಡುವೆ ಕೊಡು-ಕೊಳ್ಳುವಿಕೆಯ ಲೆಕ್ಕಾಚಾರ ನಿರ್ಮಾಣವಾಗುತ್ತದೆ. ಯಾವಾಗ ವ್ಯಕ್ತಿಗಳು ನಿರಪೇಕ್ಷ ಭಾವದಿಂದ ಪರಸ್ಪರ ಆಚಾರ-ವಿಚಾರಗಳನ್ನು ಮಾಡಿಕೊಳ್ಳುತ್ತಾರೋ, ಆಗ ಅವರ ನಡುವೆ ಕೊಡು-ಕೊಳ್ಳುವಿಕೆಯ ಲೆಕ್ಕಾಚಾರ ನಿರ್ಮಾಣವಾಗುವುದಿಲ್ಲ. ಎಲ್ಲರೊಂದಿಗೆ ನಿರಪೇಕ್ಷವಾಗಿ ನಡೆದುಕೊಳ್ಳುವುದು ಕರ್ಮಯೋಗದಂತೆ ‘ನಿಷ್ಕಾಮ ಕರ್ಮಯೋಗಿ’ಗೆ, ಭಕ್ತಿಯೋಗದಂತೆ ‘ನಿಷ್ಕಾಮ ಭಕ್ತ’ನಿಗೆ ಮತ್ತು ಜ್ಞಾನಯೋಗದಂತೆ ‘ಸ್ಥಿತಪ್ರಜ್ಞ’ ಅವಸ್ಥೆಯಲ್ಲಿರುವ ವಿದ್ವಾಂಸನಿಗೆ ಮಾತ್ರ ಸಾಧ್ಯವಿದೆ.

೨. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮುಂದಿನ ಜನ್ಮದಲ್ಲಿ ತಮ್ಮ ಸಂಪರ್ಕಕ್ಕೆ ಬರುವ ವ್ಯಕ್ತಿಗಳೊಂದಿಗೆ  ಕೊಡು-ಕೊಳ್ಳುವಿಕೆಯ ಲೆಕ್ಕಾಚಾರ ಎಷ್ಟು ಪ್ರಮಾಣದಲ್ಲಿ ಇರಲಿದೆ ?

‘ಮಾಯೆಯಲ್ಲಿದ್ದುಕೊಂಡೂ ಗುರುಕೃಪಾಯೋಗಾನುಸಾರ ಸಾಧನೆಯನ್ನು ಹೇಗೆ ಮಾಡಬೇಕು ?’, ಎಂಬುದನ್ನು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಇಡೀ ವಿಶ್ವಕ್ಕೆ ಕಲಿಸಿದ್ದಾರೆ. ಇದರ ಮೂಲಕ ಅವರು ತಮ್ಮ ಜೀವನದ ಹಾದಿಯಲ್ಲೇ ‘ಮನುಷ್ಯನು ವೈಯಕ್ತಿಕ (ವ್ಯಷ್ಟಿ) ಸ್ತರದಲ್ಲಿ ಈಶ್ವರಪ್ರಾಪ್ತಿ ಮತ್ತು ಸಮಾಜದ (ಸಮಷ್ಟಿ) ಮಟ್ಟದಲ್ಲಿ ರಾಮರಾಜ್ಯದ ಸ್ಥಾಪನೆಯನ್ನು ಮಾಡಬಲ್ಲನು’ ಎಂಬುದಕ್ಕೆ ಜೀವಂತ ಉದಾಹರಣೆಯನ್ನು ನೀಡಿದ್ದಾರೆ. ಆದ್ದರಿಂದ, ಈ ಪ್ರಸ್ತುತ ಜನ್ಮದಲ್ಲಿ ಅವರ ತಾಯಿ-ತಂದೆ, ಒಡಹುಟ್ಟಿದವರು ಮತ್ತು ಧರ್ಮಪತ್ನಿಯೊಂದಿಗೆ ಕೇವಲ ಶೇ. ೫ ರಿಂದ ೧೦ ದಷ್ಟೇ ಕೊಡು-ಕೊಳ್ಳುವಿಕೆಯ ಲೆಕ್ಕಾಚಾರ ನಿರ್ಮಾಣವಾಗಿತ್ತು. ಅವರ ಕುಟುಂಬದ ಎಲ್ಲ ಜನರೂ (ತಂದೆ, ತಾಯಿ, ಒಡಹುಟ್ಟಿದವರು ಮತ್ತು ಧರ್ಮಪತ್ನಿ ಇವರು) ಈ ಜನ್ಮದಲ್ಲಿ ಧರ್ಮಾಚರಣೆ ಮತ್ತು ವಿವಿಧ ಮಾರ್ಗಗಳಿಗನುಸಾರ ಸಾಧನೆ ಮಾಡಿದ್ದರಿಂದ, ಅವರ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರೊಂದಿಗಿನ ಮಾಯೆಯ (ಲೌಕಿಕ) ಸಂಬಂಧವು ಮುಗಿದು ಆಧ್ಯಾತ್ಮಿಕ ಸಂಬಂಧವು ನಿರ್ಮಾಣವಾಗಿದೆ. ಆದ್ದರಿಂದ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಆಠವಲೆ’ ಕುಲದಲ್ಲಿ ಮನುಷ್ಯಜನ್ಮ ಪಡೆದಿದ್ದರಿಂದ ಅವರ ಹತ್ತಿರದ ಸಂಬಂಧಿಕರೊಂದಿಗೆ ನಿರ್ಮಾಣವಾಗಿದ್ದ ಕೊಡು-ಕೊಳ್ಳುವಿಕೆಯ ಲೆಕ್ಕಾಚಾರವು ಇದೇ ಜನ್ಮದಲ್ಲಿ ಮುಕ್ತಾಯಗೊಂಡಿದೆ. ೫೦೦ ವರ್ಷಗಳ ನಂತರ ಅವರು ಪುನಃ ಭೂಮಿಯ ಮೇಲೆ ಮನುಷ್ಯ ರೂಪದಲ್ಲಿ ಜನ್ಮ ತಾಳಲಿದ್ದಾರೆ. ಆ ಸಮಯದಲ್ಲಿ, ಆ ಜನ್ಮದಲ್ಲಿ ಅವರ ಯಾರೊಂದಿಗೂ ಕೊಡು-ಕೊಳ್ಳುವಿಕೆಯ ಲೆಕ್ಕಾಚಾರ ಇರಲಾರದು. ಆದ್ದರಿಂದ ಆ ಜನ್ಮದಲ್ಲಿ ಅವರು ಹುಟ್ಟಿನಿಂದಲೇ ವಿರಕ್ತ ಮತ್ತು ನಿರಾಸಕ್ತರಾಗಿರುವುದರಿಂದ, ಅವರು ನಿಷ್ಕಾಮ ಕರ್ಮಯೋಗಿಯಂತೆ ಬಾಲಬ್ರಹ್ಮಚಾರಿಯಾಗಿ ಸಂಪೂರ್ಣ ಜೀವನವನ್ನು ಸಂನ್ಯಾಸಿಯಂತೆ ಕಳೆಯಲಿದ್ದಾರೆ.

ಸುಶ್ರೀ (ಕು.) ಮಧುರಾ ಭೋಸಲೆ

೩. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ೫೦೦ ವರ್ಷಗಳ ನಂತರದ ಜನ್ಮವು ಅವರ ಕೊನೆಯ ಜನ್ಮವಾಗಿದ್ದು, ಅದು ಶೇ. ೧೦೦ ರಷ್ಟು ಆಧ್ಯಾತ್ಮಿಕವಾಗಿರಲಿದೆ

ಈ ರೀತಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಈ ಜನ್ಮದಲ್ಲಿ ಹಿಂದೂ ರಾಷ್ಟ್ರದ ಅಡಿಪಾಯವನ್ನು ರಚಿಸಲಿದ್ದು ಅವರು ಮುಂದಿನ ಜನ್ಮದಲ್ಲಿ ಆದಿ ಶಂಕರಾಚಾರ್ಯರಂತೆ ಅಖಂಡ ಬ್ರಹ್ಮಚಾರಿಯಾಗಿ ಉಳಿದು, ಹದಗೆಟ್ಟ ಹಿಂದೂ ರಾಷ್ಟ್ರದ ಸ್ಥಿತಿಯನ್ನು ಪುನಃ ವ್ಯವಸ್ಥಿತಗೊಳಿಸಿ ಧರ್ಮಸಂಸ್ಥಾಪನೆಯ ಕಾರ್ಯವನ್ನು ವೃದ್ಧಿಗೊಳಿಸಲಿದ್ದಾರೆ. ಆದ್ದರಿಂದ ಅವರ ಮುಂದಿನ ಜನ್ಮವು ಸಂಪೂರ್ಣ ಆಧ್ಯಾತ್ಮಿಕ ಮಟ್ಟದ್ದಾಗಿದ್ದು, ಅದು ಅವರ ಕೊನೆಯ ಜನ್ಮವಾಗಿರಲಿದೆ. ಮುಂದಿನ ಜನ್ಮದಲ್ಲಿ ಅವರು ಶ್ರೇಷ್ಠತಮ ಮೋಕ್ಷವನ್ನು ಪಡೆದು ಅನಂತದಲ್ಲಿ, ಅಂದರೆ ಶ್ರೀವಿಷ್ಣುವಿನ ದಿವ್ಯ ರೂಪದIಲ್ಲಿ ಶಾಶ್ವತವಾಗಿ ಲೀನವಾಗಲಿದ್ದಾರೆ.

. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಪ್ರಸ್ತುತ ಜನ್ಮ ಮತ್ತು ಮುಂದಿನ ೫೦೦ ವರ್ಷಗಳ ನಂತರ ಆಗುವ ಜನ್ಮದ ಸಂಕ್ಷಿಪ್ತ ಸಾರಾಂಶ

೫. ಕನಿಷ್ಠ ಮೋಕ್ಷ, ಮಧ್ಯಮ ಮೋಕ್ಷ ಮತ್ತು ಶ್ರೇಷ್ಠ ಮೋಕ್ಷ

೬. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೊನೆಯ ಜನ್ಮದ ವೈಶಿಷ್ಟ್ಯಗಳು

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಇಲ್ಲಿಯ ವರೆಗಿನ ಜನ್ಮಗಳಲ್ಲಿ ಅವರು ಮೊದಲು ಶಿಷ್ಯರಾಗಿದ್ದರು ಮತ್ತು ಸಾಧನೆ ಮಾಡಿ ಅವರು ಗುರುಪದವನ್ನು ಪ್ರಾಪ್ತಮಾಡಿಕೊಂಡರು. ೫೦೦ ವರ್ಷಗಳ ನಂತರ ಆಗುವ ಅವರ ಕೊನೆಯ ಜನ್ಮದಲ್ಲಿ ಅವರು ಜನ್ಮದಿಂದಲೇ ‘ಪರಾತ್ಪರ ಗುರು’ ಇರಲಿದ್ದಾರೆ ಮತ್ತು ಸಂಪೂರ್ಣ ಜೀವನ ‘ಸಮಷ್ಟಿ ಮೋಕ್ಷ ಗುರು’ ಮತ್ತು ‘ಅವತಾರಿ ಗುರು’ ಎಂದು ಕಾರ್ಯನಿರತರಾಗಿರಲಿದ್ದಾರೆ. ಅವರ ಜನ್ಮದ ನಂತರ ಅವರ ತಾಯಿ-ತಂದೆಯರಿಗೆ ಮುಕ್ತಿ ದೊರಕಲಿದೆ. ಅವರಿಗೆ

ಯಾವುದೇ ಸಹೋದರರು ಇರುವುದಿಲ್ಲ, ಹಾಗೆಯೇ ಅವರು ಆಜೀವನ ಬಾಲಬ್ರಹ್ಮಚಾರಿಯಾಗಿ ಇರುವುದರಿಂದ ಅವರಿಗೆ ಯಾರೊಂದಿಗೂ ಕೊಡು-ಕೊಳ್ಳುವಿಕೆಯ ಲೆಕ್ಕಾಚಾರ ಇರದೇ ಅವರು ಸಂಪೂರ್ಣ ಆಧ್ಯಾತ್ಮಿಕ ಸ್ತರದ ಜೀವನವನ್ನು ನಡೆಸಲಿದ್ದಾರೆ.

೭. ಕೃತಜ್ಞತೆ

‘ಶ್ರೀ ಗುರುಗಳ ಕೃಪೆಯಿಂದಲೇ ಅವರ ಈ ಜನ್ಮ ಮತ್ತು ಮುಂದಿನ ಜನ್ಮಕ್ಕೆ ಸಂಬಂಧಿಸಿದ ಆಧ್ಯಾತ್ಮಿಕ ಅಂಶಗಳು ತಿಳಿದವು ಮತ್ತು ಅವುಗಳನ್ನು ಬರವಣಿಗೆಯ ರೂಪದಲ್ಲಿ ಬರೆಯಲು ಸಾಧ್ಯವಾಯಿತು’, ಇದಕ್ಕಾಗಿ ನಾನು ಶ್ರೀ ಗುರುಚರಣಗಳಲ್ಲಿ ಲಕ್ಷ ಲಕ್ಷ ಬಾರಿ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.’

– ಸುಶ್ರೀ ಮಧುರಾ ಭೋಸಲೆ (ಆಧ್ಯಾತ್ಮಿಕ ಮಟ್ಟ ಶೇ. ೬೫), ಸನಾತನ ಆಶ್ರಮ, ರಾಮನಾಥಿ, ಗೋವಾ. (ಜ್ಞಾನ ದೊರಕುವ ಮತ್ತು ಬೆರಳಚ್ಚು ಮಾಡುವ ದಿನಾಂಕ ಮತ್ತು ಸಮಯ : ೫.೮.೨೦೨೫, ಮಧ್ಯಾಹ್ನ ೩.೧೫)