
‘ಹಿಂದೂ ಧರ್ಮವನ್ನು ಟೀಕಿಸುವವರು ‘ಹಿಂದೂ ಧರ್ಮದಲ್ಲಿ ೩೩ ಕೋಟಿ ದೇವರಿದ್ದಾರೆ’, ಎಂದು ಚೇಷ್ಟೆ ಮಾಡುತ್ತಾರೆ. ಆ ಕುರಿತು ಮಾಡಿದ ವಿವೇಚನೆಯನ್ನು ಮುಂದೆ ಕೊಡಲಾಗಿದೆ. ಅನೇಕ ಜನರಿಗೆ ‘ಮುವತ್ತ್ಮೂರು ಕೋಟಿ’ಯ ಅರ್ಥ ‘ಮುವತ್ತ್ಮೂರು ಕೋಟಿ’, ಎಂದೆನಿಸುತ್ತದೆ; ಆದರೆ ಇಲ್ಲಿ ‘ಕೋಟಿ’ ಈ ಶಬ್ದದಲ್ಲಿನ ‘ಟಿ’ಗೆ ‘ಇ’ ಕಾರದ ಚಿಹ್ನೆಯಿದೆ. ಮೂಲದಲ್ಲಿ ಸಂಸ್ಕೃತದಲ್ಲಿನ ‘ಕೋಟಿ’ ಈ ಶಬ್ದದ ಅರ್ಥವು ‘ಕೋಟಿ’ ಎಂದಾಗದೇ ‘ಪ್ರಕಾರ’, ಎಂದಾಗುತ್ತದೆ. ಈಶ್ವರನು ನಿಸರ್ಗದ ವ್ಯವಸ್ಥಾಪನೆಯನ್ನು ನೋಡಿಕೊಳ್ಳಲು ೩೩ ಪ್ರಕಾರದ ದೇವತೆಗಳಿಗೆ ವಿವಿಧ ಕಾರುಬಾರುಗಳನ್ನು ಒಪ್ಪಿಸಿದ್ದಾನೆ. ಅವರಲ್ಲಿ ‘೮ ವಸುಗಳು, ೧೧ ರುದ್ರರು, ೧೨ ಆದಿತ್ಯರು, ೧ ಇಂದ್ರ ಮತ್ತು ೧ ಪ್ರಜಾಪತಿ’, ಹೀಗೆ ೫ ಹಂತಗಳಿವೆ. ಪ್ರತಿಯೊಬ್ಬರ ಕಾರುಬಾರು (ಖಾತೆ) ಭಿನ್ನವಾಗಿರುವುದರಿಂದ ಪ್ರತಿಯೊಬ್ಬರಿಗೆ ಬೇರೆ ‘ಕೋಟಿ’ (ಕ್ಯಾಟೆಗರಿ) (ಅಂದರೆ ಪ್ರಕಾರಗಳನ್ನು) ಕೊಡಲಾಗಿದೆ.
೧. ಅಷ್ಟವಸು
ಆಪ, ಧೃವ, ಸೋಮ, ಧರ, ಅನಿಲ, ಅನಲ, ಪ್ರತ್ಯೂಷ ಮತ್ತು ಪ್ರಭಾಸ
೨. ಹನ್ನೊಂದು ರುದ್ರರು
ಮನು, ಮಯು, ಮಹತ, ಶಿವ, ಋತುಧ್ವಜ, ಮಹೀನಸ, ಉಮ್ರತೇರಸ, ಕಾಲ, ವಾಮದೇವ, ಭವ ಮತ್ತು ಧೃತ-ಧ್ವಜ
೩. ಹನ್ನೆರಡು ಆದಿತ್ಯರು
ಅಂಶುಮಾನ, ಅರ್ಯಮನ, ಇಂದ್ರ, ತ್ವಷ್ಟಾ, ಧಾನು, ಪರ್ಜಯ, ಪೂಷನ, ಭಗ, ಮಿತ್ರ, ವರುಣ, ವೈವತ್ಸವ ಮತ್ತು ವಿಷ್ಣು
೪. ೧ ಇಂದ್ರ ಮತ್ತು ೧ ಪ್ರಜಾಪತಿ
ಈ ರೀತಿ ೮ + ೧೧ + ೧೨ + ೧ + ೧ = ೩೩. ಈ ಮಾಹಿತಿ ಎಲ್ಲರಿಗೂ ತಿಳಿಯಬೇಕು; ಒಟ್ಟು ‘೩೩ ಕೋಟಿ’ಯ ಅರ್ಥವನ್ನು ತಪ್ಪಾಗಿ ಮಾಡಿಕೊಳ್ಳುವುದು ನಿಲ್ಲುತ್ತದೆ.’
(ಆಧಾರ : ವಿವಿಧ ಜಾಲತಾಣಗಳು)
ಸಪ್ತರ್ಷಿ ಮಹಾತ್ಮೆ ವಿಶೇಷಾಂಕದ ನಿಮಿತ್ತ…
ಸಪ್ತರ್ಷಿಗಳ ನಕ್ಷತ್ರಪುಂಜ !
ಮಹರ್ಷಿ ಜಮದಗ್ನಿ ಮಹಾತ್ಮೆ !
ಸೃಷ್ಟಿಯ ನಿರ್ಮಿತಿ ಮತ್ತು ಆಯಾ ಯುಗಗಳಲ್ಲಿನ ಸಪ್ತರ್ಷಿಗಳು !
ಗುರುಪೂರ್ಣಿಮೆ ನಿಮಿತ್ತ ಗುರುಕಾರ್ಯಕ್ಕಾಗಿ ಅಂದರೆ ಧರ್ಮಕಾರ್ಯಕ್ಕಾಗಿ ಧನ ಅರ್ಪಿಸಿ !
ಖಗೋಳಶಾಸ್ತ್ರದ ಜನಕ ಮಹರ್ಷಿ ಅತ್ರಿ !