ಮಾರ್ಚ್ ೨ ರಂದು ‘ಹೋಳಿಹಬ್ಬ’ ಇದೆ. ಆ ನಿಮಿತ್ತ…

೧. ಹೋಳಿಯ ಹೆಸರುಗಳು
ಹೋಳಿ ಹಬ್ಬವು ಫಾಲ್ಗುಣ ಮಾಸದ ಹುಣ್ಣಿಮೆಯಂದು ಬರುತ್ತದೆ. ದೇಶದ ವಿವಿಧ ಭಾಗಗಳಲ್ಲಿ ಫಾಲ್ಗುಣ ಹುಣ್ಣಿಮೆಯಿಂದ ಪಂಚಮಿಯವರೆಗಿನ ೫-೬ ದಿನಗಳಲ್ಲಿ, ಕೆಲವು ಕಡೆ ೨ ದಿನಗಳ ಕಾಲ, ಇನ್ನು ಕೆಲವು ಕಡೆ ೫ ದಿನಗಳ ಕಾಲ ಈ ಉತ್ಸವವನ್ನು ಆಚರಿಸಲಾಗುತ್ತದೆ. ಉತ್ತರ ಭಾರತದಲ್ಲಿ ಈ ಉತ್ಸವವನ್ನು ‘ಹೋರಿ’ ಅಥವಾ ‘ದೌಲಾಯಾತ್ರಾ’ ಹೆಸರಿನಿಂದ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ‘ಶಿಮಗಾ’, ‘ಹೋಳಿ’, ‘ಹುತಾಶನಿ ಮಹೋತ್ಸವ’ ಅಥವಾ ‘ಹೋಲಿಕಾದಹನ’ ಎಂಬ ಹೆಸರಿನಿಂದ, ಬಂಗಾಳದಲ್ಲಿ ‘ದೌಲಾಯಾತ್ರಾ’ ಎಂದು, ಹಾಗೂ ದಕ್ಷಿಣ ಭಾರತದಲ್ಲಿ ‘ಕಾಮದಹನ’ ಎಂಬ ಹೆಸರಿನಿಂದ ಗುರುತಿಸಲಾಗುತ್ತದೆ.
೨. ಹೋಳಿಯ ಭಾವಾರ್ಥ
ದುಷ್ಟ ಪ್ರವೃತ್ತಿ ಮತ್ತು ಅಮಂಗಲಕಾರಿ ವಿಚಾರಗಳನ್ನು ನಾಶಮಾಡಿ, ಸತ್ಪ್ರವೃತ್ತಿಯ ಮಾರ್ಗವನ್ನು ತೋರಿಸುವ ಉತ್ಸವವೇ ಹೋಳಿ !
೩. ವಿಧಿ
‘ಸಾಯಂಕಾಲ ಅಥವಾ ರಾತ್ರಿ ಹೋಳಿ ಮಾಡುವಾಗ, ಶ್ರೀ ಹೋಲಿಕಾ ಪೂಜೆಯ ಸ್ಥಾನವನ್ನು ಸಗಣಿಯಿಂದ ಸಾರಿಸಿ, ರಂಗೋಲಿ ಹಾಕಿ ಸುಶೋಭಿತಗೊಳಿಸಬೇಕು. ಮಧ್ಯದಲ್ಲಿ ಎರೆಂಡ (ಔಡಲ), ತೆಂಗು, ಅಡಿಕೆ ಅಥವಾ ಕಬ್ಬಿನ ಜಲ್ಲೆಯನ್ನು ನೆಟ್ಟು, ಅದರ ಸುತ್ತಲೂ ಬೆರಣಿ ಮತ್ತು ಒಣಗಿದ ಕಟ್ಟಿಗೆಗಳನ್ನು ಜೋಡಿಸಬೇಕು. ಪೂಜೆ ಮಾಡುವವರು ಶುಚಿರ್ಭೂತರಾಗಿ, ದೇಶ-ಕಾಲಗಳನ್ನು ಉಚ್ಚರಿಸಿ ಸಂಕಲ್ಪ ಮಾಡಿ ಪೂಜಿಸಬೇಕು ಮತ್ತು ನೈವೇದ್ಯವನ್ನು ಅರ್ಪಿಸಬೇಕು. ನಂತರ ‘ಹೋಲಿಕಾಯೈ ನಮಃ’ ಎಂದು ಹೇಳುತ್ತಾ ಹೋಳಿಯನ್ನು ಹಚ್ಚಬೇಕು. ಹೋಳಿ ಹೊತ್ತಿದ ನಂತರ ಅದಕ್ಕೆ ಪ್ರದಕ್ಷಿಣೆ ಹಾಕಬೇಕು ಮತ್ತು ಬಾಯಿಯ ಮೇಲೆ ಉಲ್ಟಾ ಕೈ ಇಟ್ಟುಕೊಂಡು ಬೊಬ್ಬೆ ಹೊಡೆಯಬೇಕು. ಶ್ರೀ ಹೋಲಿಕಾ ದೇವತೆಗೆ ‘ಹೋಳಿಗೆ’ ನೈವೇದ್ಯ ಮತ್ತು ತೆಂಗಿನಕಾಯಿಯನ್ನು ಅರ್ಪಿಸಬೇಕು. ನಂತರ ನೆರೆದ ಜನರಿಗೆ ಅದರ ಪ್ರಸಾದವನ್ನು ನೀಡಬೇಕು. ಹೋಳಿಯು ಪೂರ್ಣವಾಗಿ ಉರಿದ ನಂತರ, ಹಾಲು ಮತ್ತು ತುಪ್ಪವನ್ನು ಚಿಮುಕಿಸಿ ಅದನ್ನು ಶಾಂತಗೊಳಿಸಬೇಕು. ಇದು ಹೋಳಿಯ ಶಾಸ್ತ್ರೋಕ್ತ ವಿಧಿಯಾಗಿದೆ.
(ಸಂದರ್ಭ : ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ)
ಧರ್ಮಶಾಸ್ತ್ರ ಮತ್ತು ಅಧ್ಯಾತ್ಮಶಾಸ್ತ್ರ
’ಮೈಮೇಲೆ ಹಲ್ಲಿ ಬೀಳುವುದು ಅಥವಾ ಮೈಮೇಲೆ ಓತಿಕ್ಯಾತ ಹತ್ತುವುದು’, ಇವುಗಳ ಫಲ ಮತ್ತು ಅಶುಭ ಫಲವಿದ್ದರೆ ಮಾಡಬೇಕಾದ ಉಪಾಯ !
ಪ್ರದಕ್ಷಿಣೆಯ ಶಾಸ್ತ್ರವನ್ನು ತಿಳಿದುಕೊಂಡು ಪ್ರದಕ್ಷಿಣೆಗಳನ್ನು ಹಾಕಿ ಮತ್ತು ಚೈತನ್ಯ ಪಡೆಯಿರಿ !
ಆಭರಣಗಳನ್ನು ಉಪಯೋಗಿಸುವ ಮಹತ್ವ
ಅಕ್ಷಯ ತದಿಗೆಯ ದಿನ ಪುಣ್ಯವನ್ನು ಹೇಗೆ ಪಡೆಯುವಿರಿ ?
ಅಕ್ಷಯ ತದಿಗೆಯ ಶುಭ ಮುಹೂರ್ತದ ಮಹತ್ವ !