
ನವ ದೆಹಲಿ – ನಾವು ಎಲ್ಲಾ ರಾಜಕೀಯ ಪಕ್ಷಗಳಿಗೆ ಮನವಿ ಮಾಡುವುದೇನೆಂದರೆ, ನೀವು ಸಾಂವಿಧಾನಿಕ ನೈತಿಕತೆ, ಮೌಲ್ಯಗಳು, ಪರಸ್ಪರ ಗೌರವ ಮತ್ತು ಆತ್ಮಗೌರವದ ತತ್ವಗಳನ್ನು ಪಾಲಿಸಿ. ನೀವು ವೈಚಾರಿಕ ತತ್ವಗಳ ಆಧಾರದ ಮೇಲೆ ಚುನಾವಣೆಗಳನ್ನು ಎದುರಿಸುತ್ತೀರಿ, ಅದು ಸರಿ; ಆದರೆ ಪರಸ್ಪರ ಗೌರವಿಸುವುದು ಅಷ್ಟೇ ಮುಖ್ಯವಾಗಿದೆ. ನಾಯಕರು ದೇಶದಲ್ಲಿ ಭಾತೃತ್ವವನ್ನು ಬೆಳೆಸಬೇಕು. ದ್ವೇಷಪೂರಿತ ಭಾಷಣಗಳನ್ನು ತಡೆಯುವ ಮುನ್ನ ನಮ್ಮ ವಿಚಾರಗಳನ್ನು ಸುಧಾರಿಸುವ ಅಗತ್ಯವಿದೆ; ಏಕೆಂದರೆ ಭಾಷಣದ ಮೊದಲು ವಿಚಾರಗಳು ಬರುತ್ತವೆ. ನಿಮ್ಮಂತಹವರಿಂದ ಇಂತಹ ವರ್ತನೆಯನ್ನು ನಿರೀಕ್ಷಿಸುವುದಿಲ್ಲ, ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಅವರು ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಅವರಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಕಿವಿಮಾತು ಹೇಳಿದರು.
೧. ಸರ್ವೋಚ್ಚ ನ್ಯಾಯಾಲಯವು ೯ ಜನರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿತ್ತು. ಈ ಅರ್ಜಿಯು ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಅವರ ಇತ್ತೀಚಿನ ಭಾಷಣಗಳು ಮತ್ತು ಆಸ್ಸಾಂ ಭಾಜಪ ಪ್ರಸಾರ ಮಾಡಿದ ವೀಡಿಯೊಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿತ್ತು.
೨. ಈ ವೀಡಿಯೊದಲ್ಲಿ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಲಾಗಿದೆ ಎಂದು ಆರೋಪಿಸಲಾಗಿತ್ತು. ಸಾಂವಿಧಾನಿಕ ಹುದ್ದೆಗಳಲ್ಲಿರುವ ಜನರು ನೀಡುವ ತಪ್ಪು ಮತ್ತು ದ್ವೇಷಪೂರಿತ ಭಾಷಣಗಳನ್ನು ತಡೆಯಲು ಮಾರ್ಗಸೂಚಿಗಳನ್ನು ಹೊರಡಿಸಬೇಕೆಂದು ಈ ಅರ್ಜಿಯ ಮೂಲಕ ಒತ್ತಾಯಿಸಲಾಗಿತ್ತು.
೩. ವಿಚಾರಣೆಯ ಸಮಯದಲ್ಲಿ ಸರ್ವೋಚ್ಚ ನ್ಯಾಯಾಲಯವು ಅರ್ಜಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತು. ಮುಖ್ಯ ನ್ಯಾಯಮೂರ್ತಿಗಳು, ಈ ಅರ್ಜಿಯು ಒಬ್ಬ ವ್ಯಕ್ತಿಯ ವಿರುದ್ಧವಾಗಿದೆ. ಸದ್ಯಕ್ಕೆ ಇದನ್ನು ಹಿಂಪಡೆಯಿರಿ ಮತ್ತು ಎಲ್ಲಾ ರಾಜಕೀಯ ಪಕ್ಷಗಳನ್ನು ಒಳಗೊಂಡ ಹೊಸ ಅರ್ಜಿಯನ್ನು ಸಲ್ಲಿಸಿ, ಎಂದರು.
೪. ನ್ಯಾಯಾಲಯವು ಮುಂದುವರಿದು, ಅರ್ಜಿದಾರರು ತಾವು ಯಾವುದೇ ನಿರ್ದಿಷ್ಟ ಪಕ್ಷ ಅಥವಾ ವ್ಯಕ್ತಿಯ ವಿರುದ್ಧವಾಗಿದ್ದೇವೆ ಎಂಬ ಭಾವನೆಯನ್ನು ಮೂಡಿಸಬಾರದು. ಒಂದು ವೇಳೆ ನಾವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದರೂ ಕೂಡ, ಅವುಗಳನ್ನು ಯಾರು ಪಾಲಿಸುತ್ತಾರೆ? ನಾವು ಈಗಾಗಲೇ ಎಷ್ಟೋ ಮಾರ್ಗಸೂಚಿಗಳನ್ನು ನೀಡಿದ್ದೇವೆ. ಅವುಗಳನ್ನು ಜಾರಿಗೆ ತರುವ ಜವಾಬ್ದಾರಿ ರಾಜಕೀಯ ಪಕ್ಷಗಳು ಮತ್ತು ಸರಕಾರದ್ದೇ ಆಗಿದೆ, ಎಂದು ಹೇಳಿತು.
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath