ಜಾತ್ಯತೀತ ದೇಶದಲ್ಲಿ ಕಾಂಗ್ರೆಸ್‌ನ ಮತಾಂಧತೆಯನ್ನು ತಿಳಿಯಿರಿ !

ಕರ್ನಾಟಕದಲ್ಲಿ ರಂಜಾನ್ ತಿಂಗಳನ್ನು ಗಮನದಲ್ಲಿಟ್ಟುಕೊಂಡು ಉರ್ದು ಮಾಧ್ಯಮ ಶಾಲೆಗಳ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಕಿರಿಯ, ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳು ಬೆಳಗ್ಗೆ ೮ ರಿಂದ ಮಧ್ಯಾಹ್ನ ೧೨.೪೫ ರ ವರೆಗೆ ನಡೆಯಲಿವೆ. ಈ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

೨. ಇಂತಹ ವಿಕೃತ ವ್ಯಕ್ತಿಗಳಿಗೆ ಮರಣದಂಡನೆ ವಿಧಿಸಬೇಕು !

ಮಧ್ಯಪ್ರದೇಶದ ದಾಮಜಿಪುರ ಗ್ರಾಮದಲ್ಲಿ ಅಬ್ಬು ಖಾನ್ ಎಂಬಾತ ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಂತರ, ಆಕ್ರೋಶಗೊಂಡ ಗ್ರಾಮಸ್ಥರು ಖಾನ್‌ನ ಅಂಗಡಿ ಸೇರಿದಂತೆ ಇತರ ೩ ಅಂಗಡಿಗಳಿಗೆ ಬೆಂಕಿ ಹಚ್ಚಿದರು. ಪೊಲೀಸರು ಖಾನ್‌ನನ್ನು ಬಂಧಿಸಿದ್ದಾರೆ

೩. ದೇಶಾದ್ಯಂತದ ಎಲ್ಲಾ ಮದರಸಾ ಮಂಡಳಿಗಳನ್ನು ವಿಸರ್ಜಿಸಿ !

ಉತ್ತರಾಖಂಡದ ಭಾಜಪ ಸರಕಾರವು ಮದರಸಾ ಮಂಡಳಿಯನ್ನು ವಿಸರ್ಜಿಸಲು ನಿರ್ಧರಿಸಿದೆ. ಮದರಸಾ ಮಂಡಳಿಯ ಬದಲಿಗೆ ಹೊಸ ಪ್ರಾಧಿಕಾರವನ್ನು ಸ್ಥಾಪಿಸಲಾಗಿದೆ. ರಾಜ್ಯಪಾಲರ ಒಪ್ಪಿಗೆಯ ನಂತರ ‘ರಾಜ್ಯ ಅಲ್ಪಸಂಖ್ಯಾತ ಶಿಕ್ಷಣ ಪ್ರಾಧಿಕಾರ’ವನ್ನು ಸ್ಥಾಪಿಸಲಾಗಿದೆ.

೪. ಇಂತಹ ದೇಶದ್ರೋಹಕ್ಕೆ ಗಲ್ಲು ಶಿಕ್ಷೆಯನ್ನೇ ನೀಡಬೇಕು !

ಯವತಮಾಳ್ ಜಿಲ್ಲೆಯ ಉಮರಖೇಡ್‌ನಲ್ಲಿರುವ ನಗರಸಭೆಯ ಅಬ್ದುಲ್ ಗಫೂರ್ ಶಾ ಉರ್ದು ಶಾಲೆ ಸಂಖ್ಯೆ ೨ ರಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ, ವಿದ್ಯಾರ್ಥಿಗಳಿಂದ ಪಾಕಿಸ್ತಾನದ ಗೀತೆಗೆ ನೃತ್ಯ ಮಾಡಿಸಲಾಗಿದೆ.

೫. ಇದು ಹಿಂದೂಗಳಿಗೆ ಅವಮಾನಕರ !

ಉತ್ತರಪ್ರದೇಶದ ಬಾರಾಬಾಂಕಿ ಜಿಲ್ಲೆಯ ಪ್ರಸಿದ್ಧ ’ದೇವಾ ಶರೀಫ್’ ದರ್ಗಾದಲ್ಲಿ ಹಿಂದೂ ಯುವಕನೊಬ್ಬ ಹಣೆಯ ಮೇಲೆ ತಿಲಕ ಇಟ್ಟುಕೊಂಡಿದ್ದ ಎಂಬ ಕಾರಣಕ್ಕೆ ಆತನ ಮೇಲೆ ಹಲ್ಲೆ ನಡೆಸಲಾಗಿದೆ. ಮುಸಲ್ಮಾನ ವ್ಯಾಪಾರಿಗಳು ಬಲವಂತವಾಗಿ ಯುವಕನ ತಿಲಕವನ್ನು ಅಳಿಸಿ ಹಾಕಿ, ಆತನನ್ನು ಅಮಾನುಷವಾಗಿ ಥಳಿಸಿದ್ದಾರೆ.

೬. ಕಾಂಗ್ರೆಸ್ ಸರಕಾರಕ್ಕೆ ನ್ಯಾಯಾಲಯದ ಚಾಟಿ !

ಹಿಂದುತ್ವನಿಷ್ಠ ಕಾರ್ಯಕರ್ತರ ವಿರುದ್ಧ ಈ ಹಿಂದೆ ದಾಖಲಾದ ಅಪರಾಧಗಳ ಆಧಾರದ ಮೇಲೆ, ಪೊಲೀಸರು ಅವರನ್ನು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಷಣ ಮಾಡದಂತೆ ತಡೆಯಲು ಸಾಧ್ಯವಿಲ್ಲ ಎಂದು ಕರ್ನಾಟಕ ಉಚ್ಚ ನ್ಯಾಯಾಲಯವು ತೀರ್ಪು ನೀಡುವ ಮೂಲಕ ರಾಜ್ಯದ ಕಾಂಗ್ರೆಸ್ ಸರಕಾರದ ಪೊಲೀಸರಿಗೆ ಚಾಟಿ ಬೀಸಿದೆ.

೭. ಮುಂಗಡಪತ್ರದಲ್ಲಿ ಹಿಂದೂಗಳಿಗಾಗಿ ಹಣವೇಕೆ ಇಲ್ಲ ?

ಕೇಂದ್ರ ಬಜೆಟ್‌ನಲ್ಲಿ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯಕ್ಕಾಗಿ ಒಟ್ಟು ೩ ಸಾವಿರದ ೪೦೦ ಕೋಟಿ ರೂಪಾಯಿಗಳ ಅನುದಾನವನ್ನು ಮೀಸಲಿಡಲಾಗಿದೆ. ಕಳೆದ ವರ್ಷ ಈ ಮೊತ್ತವು ೩ ಸಾವಿರದ ೩೯೫ ಕೋಟಿ ೬೨ ಲಕ್ಷ ರೂಪಾಯಿಗಳಷ್ಟಿತ್ತು.