
ಪೇಶಾವರ (ಪಾಕಿಸ್ತಾನ) – ಭಾರತಕ್ಕೆ ಬೇಕಾಗಿದ್ದ ಭಯೋತ್ಪಾದಕ ಮಹಮ್ಮದ್ ಕಾಸಿಮ್ ಗುಜ್ಜರ್, ಅಲಿಯಾಸ್ ಸಲ್ಮಾನ್ ಅಲಿಯಾಸ್ ಸುಲೇಮಾನ್ ಎಂಬಾತನನ್ನು ಪಾಕಿಸ್ತಾನದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಫೆಬ್ರವರಿ ೧೩ ರ ಸಂಜೆ ಪೇಶಾವರದಲ್ಲಿ ಅಪರಿಚಿತರು ಆತನ ಮೇಲೆ ಗುಂಡಿನ ದಾಳಿ ನಡೆಸಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಭಾರತದ ಮಾಜಿ ‘ರಾ’ ಅಧಿಕಾರಿ ಮತ್ತು ಎನ್.ಎಸ್.ಜಿ. (ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ – ರಾಷ್ಟ್ರೀಯ ಭದ್ರತಾ ಪಡೆ) ಕಮಾಂಡೋ ಲಕ್ಷ್ಮಣ್ ಅಲಿಯಾಸ್ ಲಕ್ಕಿ ಬಿಷ್ಟ್ ಅವರು ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈ ಬಗ್ಗೆ ಒಂದು ವಿಡಿಯೋ ಪ್ರಸಾರ ಮಾಡಿದ್ದಾರೆ. ಅದರಲ್ಲಿ ಬೈಕ್ ಸವಾರನೊಬ್ಬ ರಸ್ತೆಯಲ್ಲಿ ಬಹಿರಂಗವಾಗಿ ಗುಜ್ಜರ್‌ನನ್ನು ಹೇಗೆ ಗುರಿಯಾಗಿಸಿದ್ದನು ಎಂಬುದು ಕಂಡುಬರುತ್ತದೆ.
ಮಹಮ್ಮದ್ ಕಾಸಿಮ್ ಗುಜ್ಜರ್ ಹೆಸರು ದೀರ್ಘಕಾಲದವರೆಗೆ ಭಾರತದ ಪಟ್ಟಿಯಲ್ಲಿತ್ತು. ಈತ ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದೊಂದಿಗೆ ಸಂಬಂಧ ಹೊಂದಿದ್ದನು ಮತ್ತು ಭಾರತದ ಅನೇಕ ಭಯೋತ್ಪಾದಕ ಸಂಚುಗಳಲ್ಲಿ ಭಾಗಿಯಾಗಿದ್ದನು. ಎರಡು ವರ್ಷಗಳ ಹಿಂದೆ ಕೇಂದ್ರ ಗೃಹ ಸಚಿವಾಲಯವು ಈತನನ್ನು ‘ಭಯೋತ್ಪಾದಕ’ ಎಂದು ಘೋಷಿಸಿತ್ತು. ಈತನ ಹತ್ಯೆಯ ಕುರಿತು ಇದುವರೆಗೂ ಪಾಕಿಸ್ತಾನದ ಪೊಲೀಸರು, ಸೇನೆ ಅಥವಾ ಗುಪ್ತಚರ ಸಂಸ್ಥೆ ಐ.ಎಸ್.ಐ. (ಇಂಟರ್ ಸರ್ವಿಸ್ ಇಂಟೆಲಿಜೆನ್ಸ್) ಅಂತರ ಸೇವಾ ಗುಪ್ತಚರ ಸಂಸ್ಥೆ’ ನಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಂದಿಲ್ಲ ಎನ್ನಲಾಗಿದೆ.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು