
೧. ಸಾಧನೆಯ ಆರಂಭಿಕ ಹಂತದಲ್ಲಿ ವ್ಯಕ್ತಿಯು ಯೋಗ್ಯ ಮತ್ತು ಅಯೋಗ್ಯದಲ್ಲಿರುವ ಭೇದವನ್ನು ಇನ್ನೊಬ್ಬರಿಗೆ ಕೇಳಬೇಕು !
ಒಂದೊಮ್ಮೆ ನಿಮಗೆ ಒಳಗಿನಿಂದ ಮಾರ್ಗದರ್ಶನ ಸಿಗುತ್ತಿದ್ದರೆ, ‘ಆ ಮಾರ್ಗದರ್ಶನ ಯಾರು ಮಾಡುತ್ತಿದ್ದಾರೆ ? ಎನ್ನುವುದು ಆರಂಭಿಕ ಹಂತದಲ್ಲಿ ನಿಮಗೆ ಗೊತ್ತಿರುವುದಿಲ್ಲ. ನಿಮಗೆ ಸಿಗುತ್ತಿರುವ ಮಾರ್ಗದರ್ಶನ ‘ಸತ್ಯವೋ ಅಥವಾ ಅಸತ್ಯವೋ ?’ ಅನ್ನುವುದು ಯಾರಿಗೂ ಕೇಳಲು ಸಾಧ್ಯವಾಗದಿದ್ದರೆ, ಸಿಕ್ಕಿರುವ ಮಾರ್ಗದರ್ಶನವನ್ನು ನೀವೇ ೨-೩ ಬಾರಿ ಆಚರಣೆ ಮಾಡಿ ನೋಡಿ. ಅದರಿಂದ ಸಕಾರಾತ್ಮಕ ಪರಿಣಾಮವಾದರೆ, ಅದರಂತೆ ಪ್ರಯತ್ನ ಮುಂದುವರೆಸಿ; ಆದರೆ ಪರಿಣಾಮ ನಕಾರಾತ್ಮಕವಾಗಿದ್ದರೆ ಆ ಮಾರ್ಗದರ್ಶನ ಅಲ್ಲೇ ಮರೆತುಬಿಡಿ. ಯಾರಾದರು ವ್ಯಕ್ತಿ ಅಥವಾ ಸಾಧಕನಿಗೆ ಕೇಳಿ ನೀವು ಆ ಮಾರ್ಗದರ್ಶದ ಸತ್ಯವನ್ನು ಪರಿಶೀಲಿಸಿ ಅದರಂತೆ ಕೃತಿ ಮಾಡಬಹುದು. ಸಾಧನೆಯ ಆರಂಭಿಕ ಹಂತದಲ್ಲಿ ಯೋಗ್ಯ ಮತ್ತು ಅಯೋಗ್ಯದಲ್ಲಿನ ಭೇದ ಗುರುತಿಸುವ ಕ್ಷಮತೆ ನಿಮ್ಮಲ್ಲಿ ಇರುವುದಿಲ್ಲ. ಆದ್ದರಿಂದ ಬೇರೆಯವರಿಗೆ ಕೇಳುವುದು ಉತ್ತಮವಾಗಿದೆ. ಅದರಿಂದ ನೀವು ಸರಿಯಾದ ಮಾರ್ಗದಲ್ಲಿ ಇರುತ್ತೀರಿ. ನಿಮಗೆ ಸಿಗುವ ಮಾರ್ಗದರ್ಶನದಂತೆ ನೇರವಾಗಿ ಕೃತಿ ಮಾಡಬೇಡಿ. ಏಕೆಂದರೆ ಸಾಧನೆಯ ಆರಂಭದ ಹಂತದಲ್ಲಿ ಒಂದೊಮ್ಮೆ ನೀವು ಒಳಗಿನಿಂದ ಸಿಗುವ ಮಾರ್ಗದರ್ಶನವನ್ನು ಕೇಳಲು ಪ್ರಾರಂಭಿಸಿದಾಗ, ಕೆಟ್ಟ ಶಕ್ತಿಗಳು ಅದರಲ್ಲಿ ಹಸ್ತಕ್ಷೇಪ ಮಾಡಬಹುದು. ‘ಪ.ಪೂ. ಭಕ್ತರಾಜ ಮಹರಾಜರೇ ನಿಮಗೆ ಮಾರ್ಗದರ್ಶನ ಮಾಡುತ್ತಿದ್ದಾರೆ’, ಎಂದು ಕೆಟ್ಟ ಶಕ್ತಿ ನಿಮಗೆ ಆಭಾಸ ಮಾಡಬಹುದು. ಆದ್ದರಿಂದ ಪ್ರತಿಬಾರಿ ವಸ್ತುನಿಷ್ಠವಾಗಿ ‘ನನಗೆ ಈ ರೀತಿಯಾಗಿ ಮಾರ್ಗದರ್ಶನ ಸಿಕ್ಕಿದೆ, ಅದರಂತೆ ನಾನು ಆಚರಣೆ ಮಾಡಲೋ ಅಥವಾ ಬೇಡ’ ಎಂದು ಯಾರಿಗಾದರು ಕೇಳುವುದು ಒಳ್ಳೆಯದು.
೨. ಸಾಧನೆಯಲ್ಲಿ ಪ್ರಗತಿ ಆದ ಮೇಲೆ ವ್ಯಕ್ತಿಯ ಮನೋಲಯ ಆಗುವುದರಿಂದ ಅವನ ಮನಸ್ಸಿನಲ್ಲಿ ಬರುವ ಪ್ರತಿಯೊಂದು ವಿಚಾರವು ದೇವರ ವಿಚಾರ ಆಗಿರುತ್ತದೆ. ಆ ವ್ಯಕ್ತಿಗೆ ಯಾವುದೇ ಪ್ರಶ್ನೆ ಕೇಳಿದರೂ, ಅವನಿಗೆ ನೇರವಾಗಿ ವಿಶ್ವಬುದ್ಧಿಯಿಂದ ಉತ್ತರ ಸಿಗುತ್ತದೆ
ಒಮ್ಮೆ ನಿಮ್ಮ ಮನೋಲಯವಾದರೆ ನಂತರ ಮನಸ್ಸಿನಲ್ಲಿ ಬರುವ ಪ್ರತಿಯೊಂದು ವಿಚಾರ ದೇವರ ವಿಚಾರ ಆಗಿರುತ್ತದೆ. ಮೊದಲಿಗೆ ನಮ್ಮ ಮನಸ್ಸಿನಲ್ಲಿ ಬರುವ ವಿಚಾರಗಳು ‘ದೇವರ ಪ್ರೇರಣೆಯಿಂದ’, ಬಂದಿವೆ ಎಂದು ಅನಿಸುತ್ತದೆ. ಆದರೆ ಹಾಗಿರುವುದಿಲ್ಲ. ಅಧ್ಯಾತ್ಮದಲ್ಲಿ ಏನು ಆಗುತ್ತೆ ? ಯಾವಾಗ ನೀವು ತಳಮಳದಿಂದ ಸಾಧನೆ ಮಾಡಿ ಆಧ್ಯಾತ್ಮಿಕ ಪ್ರಗತಿ ಮಾಡುತ್ತೀರ, ‘ಇಂದಲ್ಲ ನಾಳೆ ಈ ದೇಹ ಇಲ್ಲೇ ಬಿಟ್ಟು ಹೋಗುವುದಿದೆ’, ಈ ವಿಚಾರ ಬಂದು ನಿಮಗೆ ಈ ದೇಹದ ಚಿಂತೆ ಅನಿಸುವುದಿಲ್ಲ, ಆಗ ಮೊದಲ ಹಂತದಲ್ಲಿ ನಿಧಾನವಾಗಿ ವ್ಯಕ್ತಿಯ ಮನೋಲಯ ಆಗಲು ಆರಂಭವಾಗುತ್ತದೆ. ಯಾವಾಗ ವ್ಯಕ್ತಿ ಶೇ. ೬೦ ರಷ್ಟು ಆಧ್ಯಾತ್ಮಿಕ ಮಟ್ಟ ಪಡೆಯುತ್ತಾನೋ, ಆಗ ಮನೋಲಯದ ವೇಗ ಹೆಚ್ಚುತ್ತದೆ. ಸಾಧನೆಯಲ್ಲಿ ಮನೋಲಯವು ಏಕೆ ಮಹತ್ವದ್ದಾಗಿದೆ ?
ಸಾಧನೆಗೆ ಆರಂಭ ಮಾಡಿದ ವ್ಯಕ್ತಿಯು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆ ಮಾಡುತ್ತಾನೆ, ಆಗ ಕ್ರಮೇಣ ಮನೋಲಯವಾಗಲು ಆರಂಭವಾಗಿಯೇ ಇರುತ್ತದೆ. ಆಗ ಅವನಿಗೆ ಆಧ್ಯಾತ್ಮಿಕ ಪ್ರಗತಿಯ ಬಗ್ಗೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ; ಹೀಗಿದ್ದರೂ ವ್ಯಕ್ತಿಯ ಮನಸ್ಸು ಕಾರ್ಯನಿರತವಾಗಿರುತ್ತದೆ. ಆದ್ದರಿಂದ ಯಾವಾಗ ವ್ಯಕ್ತಿಯ ಮನೋಲಯವಾಗುತ್ತದೆ, ಆಗ ವ್ಯಕ್ತಿಗೆ ವಿಶ್ವಮನಸ್ಸಿನ ಜೊತೆ ಅಂದರೆ ದೇವರ ಮನಸ್ಸಿನ ಜೊತೆಗೆ ಸಂವಾದ ಸಾಧಿಸಲು ಬರುತ್ತದೆ. ಅದೇರೀತಿ ಉಚ್ಚ ಆಧ್ಯಾತ್ಮಿಕ ಮಟ್ಟ ತಲುಪಿದ ಮೇಲೆ ನಿಮ್ಮ ಬುದ್ಧಿಯ ಲಯವಾಗಿ ನಿಮ್ಮ ಬುದ್ಧಿ ದೇವರ ಬುದ್ಧಿಯ ಜೊತೆಗೆ ಅಂದರೆ ವಿಶ್ವಬುದ್ಧಿಯ ಜೊತೆಗೆ ಏಕರೂಪವಾಗುತ್ತದೆ. ನಂತರ ಆ ವ್ಯಕ್ತಿಗೆ ಯಾರು ಯಾವುದೇ ಪ್ರಶ್ನೆ ಕೇಳಿದರೂ, ಅವನಿಗೆ ನೇರವಾಗಿ ವಿಶ್ವಬುದ್ಧಿಯಿಂದ ಉತ್ತರ ಸಿಗುತ್ತದೆ.
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಸನಾತನವು ಪ್ರಕಾಶಿಸಿದ ಗ್ರಂಥಗಳಲ್ಲಿ ಭಕ್ತಿಯೋಗದ ಬಗ್ಗೆ ಗ್ರಂಥಗಳ ಸಂಖ್ಯೆಯು ಕಡಿಮೆ ಇರಲು ಕಾರಣ
‘ಸಮಾಜದಲ್ಲಿ ಹೆಚ್ಚಿನ ಜನರು ಭಕ್ತಿಯೋಗಕ್ಕನುಸಾರ ಸಾಧನೆ ಮಾಡುವವರಿರುತ್ತಾರೆ. ಆದ್ದರಿಂದ ಆ ಸಂದರ್ಭದಲ್ಲಿ ಮಾರ್ಗದರ್ಶನ ಮಾಡುವ ಸಂತರಿದ್ದಾರೆ ಮತ್ತು ಮಾರ್ಗದರ್ಶಕ ಅನೇಕ ಗ್ರಂಥಗಳೂ ಲಭ್ಯಗಳಿವೆ. ಅದಕ್ಕೆ ಹೋಲಿಸಿದರೆ ಇತರ ಸಾಧನಾಮಾರ್ಗಗಳ ಸಂದರ್ಭದಲ್ಲಿ ಮಾರ್ಗದರ್ಶಕ ಸಂತರು ಅಥವಾ ಗ್ರಂಥಗಳ ಲಭ್ಯತೆ ಕಡಿಮೆ ಇದೆ. ಈ ಸಾಧನಾಮಾರ್ಗದಲ್ಲಿ ಸಾಧಕರಿಗೆ ಸಾಧನೆಯ ಸಂದರ್ಭದಲ್ಲಿ ಮಾರ್ಗದರ್ಶನ ದೊರಕಬೇಕೆಂದು, ಸನಾತನವು ಇದುವರೆಗೆ ಭಕ್ತಿಯೋಗಕ್ಕೆ ಆದ್ಯತೆ ನೀಡದೇ ಇತರ ಸಾಧನಾಮಾರ್ಗಗಳ ಸಂದರ್ಭದ ಗ್ರಂಥಗಳನ್ನು ಪ್ರಕಟಿಸಲು ಆದ್ಯತೆ ನೀಡಿದೆ. ಮುಂದಿನ ದಿನಗಳಲ್ಲಿ ಭಕ್ತಿಯೋಗದ ಕುರಿತು ಗ್ರಂಥಗಳನ್ನು ಪ್ರಕಟಿಸಲು ಆದ್ಯತೆ ನೀಡಲಾಗುವುದು.’
ಕಾಲಕ್ಕನುಸಾರವಾಗಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ವಿಚಾರಪ್ರಕ್ರಿಯೆಯಲ್ಲಿ ಆದ ಬದಲಾವಣೆ !
‘ಕಳೆದ ೪೦ ವರ್ಷಗಳಲ್ಲಿ ಸಮಾಜಕ್ಕೆ ಅಧ್ಯಾತ್ಮದ ಸಂದರ್ಭದಲ್ಲಿನ ಜ್ಞಾನವು ಒಂದೇ ಸ್ಥಳದಲ್ಲಿ ಮತ್ತು ಯೋಗ್ಯ ರೀತಿಯಲ್ಲಿ ದೊರಕಬೇಕೆಂಬ ಉದ್ದೇಶದಿಂದ ನಾನು ಲೇಖನಗಳನ್ನು ಸಂಕಲನ ಮಾಡುವುದು ಮತ್ತು ಅವುಗಳ ಆಧಾರದಲ್ಲಿ ಗ್ರಂಥಗಳನ್ನು ಪ್ರಕಟಿಸುವ ಕಾರ್ಯವನ್ನು ಮಾಡುತ್ತ ಬಂದಿದ್ದೇನೆ. ಆದ್ದರಿಂದ ಇದುವರೆಗೆ ೩೬೯ ಗ್ರಂಥಗಳು ಪ್ರಕಟಿಸಲಾಗಿವೆ ಮತ್ತು ಇನ್ನೂ ೫೦೦೦ ಗ್ರಂಥಗಳಷ್ಟು ಲೇಖನಗಳು ಸಂಗ್ರಹವಾಗಿವೆ. ಹಿಂದೆ ನನಗೆ, ‘ನಾನು ದೇಹತ್ಯಾಗ ಮಾಡುವ ಮೊದಲೇ ಹೆಚ್ಚೆಚ್ಚು ಗ್ರಂಥಗಳನ್ನು ಪ್ರಕಟಿಸಬೇಕು,’ ಎಂದು ಅನಿಸುತ್ತಿತ್ತು; ಆದರೆ ಈಗ ಹಾಗೇನು ಅನಿಸುವುದಿಲ್ಲ. ದೇವರ ಇಚ್ಛೆಯಂತೆ ಎಲ್ಲವೂ ನಡೆಯುತ್ತದೆ !’, ಎಂದು ಅನಿಸುತ್ತಿದೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !