ಅಸದುದ್ದೀನ್ ಓವೈಸಿ ಅವರ ಅತಿರೇಕದ ಹೇಳಿಕೆ!

ಭಾಗ್ಯನಗರ (ತೆಲಂಗಾಣ) – ಟಿಪ್ಪು ಸುಲ್ತಾನ್ ವರ್ಷ ೧೭೯೯ ರಲ್ಲಿ ‘ಶಹೀದ್’ (ಹುತಾತ್ಮ) ಆದರು. ಬ್ರಿಟಿಷರ ವಿರುದ್ಧ ಹೋರಾಡುವಾಗ ಅವರು ಬಲಿದಾನ ನೀಡಿದರು. ಟಿಪ್ಪು ಸೆರೆಮನೆಯಲ್ಲಿ ಕುಳಿತು ನಿಮ್ಮ ವೀರ ಸಾವರ್ಕರ್ ಅವರಂತೆ ಬ್ರಿಟಿಷರಿಗೆ ೬-೬ ಪ್ರೇಮ ಪತ್ರಗಳನ್ನು ಬರೆದು ‘ನೀವು ಹೇಳಿದಂತೆ ಮಾಡುತ್ತೇನೆ’ ಎಂದು ಹೇಳಿ ಕ್ಷಮೆಯಾಚಿಸಲಿಲ್ಲ. ಟಿಪ್ಪು ಸುಲ್ತಾನ್ ಕೈಯಲ್ಲಿ ಕತ್ತಿ ಹಿಡಿದು ದೇಶವನ್ನು ಬ್ರಿಟಿಷರಿಂದ ಮುಕ್ತಗೊಳಿಸಲು ಹೋರಾಡಿದರು ಮತ್ತು ಶಹೀದ್ ಆದರು ಎಂದು ಎ.ಐ.ಎಮ್.ಐ.ಎಮ್. (ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್) ಮುಖ್ಯಸ್ಥ ಅಸದುದ್ದೀನ್ ಓವೈಸಿ ಅವರು ಇಲ್ಲಿನ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದಾರೆ. ಮಾಲೆಗಾಂವ್ ನಗರಸಭೆಯ ಕೊಠಡಿಯೊಂದರಲ್ಲಿ ಟಿಪ್ಪುವಿನ ಭಾವಚಿತ್ರವನ್ನು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಈ ಹೇಳಿಕೆ ನೀಡಿದ್ದಾರೆ.
ಸಂಸದ ಓವೈಸಿ ಮುಂದುವರಿದು ಮಾತನಾಡುತ್ತಾ, ಎ.ಪಿ.ಜೆ. ಅಬ್ದುಲ್ ಕಲಾಂ ಅವರು ತಮ್ಮ ‘ವಿಂಗ್ಸ್ ಆಫ್ ಫೈರ್’ ಪುಸ್ತಕದಲ್ಲಿ, ‘ಇಂದು ಭಾರತದ ಬಳಿ ಇರುವ ಕ್ಷಿಪಣಿ ಮತ್ತು ರಾಕೆಟ್ ತಂತ್ರಜ್ಞಾನವು ಟಿಪ್ಪುವಿನ ಕನಸುಗಳ ಪೂರೈಕೆಯಾಗಿದೆ’ ಎಂದು ಬರೆದಿದ್ದಾರೆ. ಇದು ಸುಳ್ಳೇ? ಹಾಗೆಯೇ ಮಹಾತ್ಮಾ ಗಾಂಧಿಯವರು ತಮ್ಮ ‘ಯಂಗ್ ಇಂಡಿಯಾ’ ಪತ್ರಿಕೆಯಲ್ಲಿ ‘ಟಿಪ್ಪು ಸುಲ್ತಾನ್ ಹಿಂದೂ-ಮುಸ್ಲಿಂ ಐಕ್ಯತೆಯ ಪ್ರತೀಕ’ ಎಂದು ಬರೆದಿದ್ದರು ಎಂದು ಹೇಳಿದರು. (ಮಹಾತ್ಮಾ ಗಾಂಧಿಯವರ ಇಂತಹ ಮಾನಸಿಕತೆಯಿಂದಲೇ ಮುಂದೆ ಭಾರತದ ವಿಭಜನೆಯಾಯಿತು ಎಂಬ ಸತ್ಯವನ್ನು ಓವೈಸಿ ಏಕೆ ಹೇಳುತ್ತಿಲ್ಲ? ಟಿಪ್ಪು ಒಂದೇ ದಿನದಲ್ಲಿ ೧ ಲಕ್ಷ ಹಿಂದೂಗಳನ್ನು ಮತಾಂತರ ಮಾಡಿದ್ದ ಇತಿಹಾಸವನ್ನು ಓವೈಸಿ ಏಕೆ ಹೇಳುತ್ತಿಲ್ಲ? – ಸಂಪಾದಕರು)
ಹಾಗೆಯೇ ವೀರ ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವ ಬೇಡಿಕೆಯನ್ನು ಟೀಕಿಸಿದ ಅವರು, ನ್ಯಾಯಮೂರ್ತಿ ಕಪೂರ್ ಆಯೋಗವು ಮಹಾತ್ಮಾ ಗಾಂಧಿ ಹತ್ಯೆ ಪ್ರಕರಣದಲ್ಲಿ ಸಾವರ್ಕರ್ ಅವರನ್ನು ಸಂಚಿನಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿತ್ತು ಎಂದು ಉಲ್ಲೇಖಿಸಿದರು. (ನ್ಯಾಯಾಲಯವು ಈ ಪ್ರಕರಣದಲ್ಲಿ ಸಾವರ್ಕರ್ ಅವರನ್ನು ನಿರ್ದೋಷಿ ಎಂದು ಬಿಡುಗಡೆ ಮಾಡಿತ್ತು ಎಂಬುವುದೇ ನೈಜ ಇತಿಹಾಸವಾಗಿದೆ! – ಸಂಪಾದಕರು)
ಸಂಪಾದಕೀಯ ನಿಲುವು
|
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ