‘ವ್ಯಾಲೆಂಟೈನ್ಸ್ ಡೇ’ ನಿಮಿತ್ತ ಪಾರ್ಟಿ ಆಯೋಜಿಸಲಾಗಿತ್ತು !

ಅಹಲ್ಯಾನಗರ – ನಗರದ ಟೈಟನ್ ಶೋರೂಮ್ ಹತ್ತಿರವಿರುವ ‘ಶಾರ್ಟ್ ಬ್ರೇಕ್ ಕೆಫೆ’ಯಲ್ಲಿ ಫೆಬ್ರವರಿ 14 ರ ‘ವ್ಯಾಲೆಂಟೈನ್ಸ್ ಡೇ’ ನಿಮಿತ್ತ ಆಯೋಜಿಸಿದ್ದ ‘ಸನ್ ಡೌನರ್ ಕಾಫಿ ರೇವ್ ಪಾರ್ಟಿ’ ಕಾರ್ಯಕ್ರಮಕ್ಕೆ ಹಿಂದೂ ಜನಜಾಗೃತಿ ಸಮಿತಿ ಸೇರಿದಂತೆ ವಿವಿಧ ಹಿಂದುತ್ವನಿಷ್ಠ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಇದರ ಪರಿಣಾಮವಾಗಿ ಈ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಸಂಬಂಧಿತ ಇನ್ ಸ್ಟಾಗ್ರಾಮ್ ಪುಟದಿಂದ ಕಾರ್ಯಕ್ರಮದ ಜಾಹೀರಾತನ್ನು ತೆಗೆದುಹಾಕಲಾಗಿದೆ. ‘ಇದು ಹಿಂದೂಗಳ ಒಗ್ಗಟ್ಟಿನ ವಿಜಯವಾಗಿದೆ. ಸಮಾಜಘಾತುಕ ಕಾರ್ಯಕ್ರಮಗಳನ್ನು ತಡೆಯುವುದು ಸಂಸ್ಕೃತಿ ರಕ್ಷಣೆಯಾಗಿದೆ’, ಎಂದು ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕ ಶ್ರೀ. ರಾಮೇಶ್ವರ ಭುಕನ ಅವರು ಅಭಿಪ್ರಾಯಪಟ್ಟಿದ್ದಾರೆ.

1. ಹಿಂದೂ ಜನಜಾಗೃತಿ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಅಹಲ್ಯಾನಗರದ ಜಿಲ್ಲಾಧಿಕಾರಿ ಡಾ. ಪಂಕಜ ಆಶಿಯಾ ಮತ್ತು ಪೊಲೀಸ ಅಧೀಕ್ಷಕ ಸೋಮನಾಥ ಘಾರ್ಗೆ ಅವರಿಗೆ ಮನವಿ ಸಲ್ಲಿಸಿ, ‘ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು ಅಥವಾ ನೀಡಿರುವ ಅನುಮತಿಯನ್ನು ರದ್ದುಗೊಳಿಸಬೇಕು’ ಎಂದು ಒತ್ತಾಯಿಸಿದರು.

2. ರೇವ್ ಪಾರ್ಟಿಗಳಲ್ಲಿ ಗಾಂಜಾ, ಚರಸ್ ಮತ್ತು ಕೊಕೇನ್ ನಂತಹ ಮಾದಕ ವಸ್ತುಗಳನ್ನು ಬಳಸಲಾಗುತ್ತದೆ. ಕಾನೂನುಬದ್ಧವಾಗಿ ಇಂತಹ ಪದಾರ್ಥಗಳ ಮೇಲೆ ನಿಷೇಧವಿದ್ದರೂ ಇಂತಹ ಕಾರ್ಯಕ್ರಮಗಳ ಮೂಲಕ ಮಾದಕ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ. ಅಹಲ್ಯಾನಗರವು ಶಿಕ್ಷಣದ ಕೇಂದ್ರವಾಗಿದ್ದು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವಾಸಿಸುತ್ತಿದ್ದಾರೆ. ರೇವ್ ಪಾರ್ಟಿಗಳಿಂದ ಯುವಕರಲ್ಲಿ ವ್ಯಸನಾಧೀನತೆ ಹೆಚ್ಚಾಗಿ ಅವರ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಮದ್ಯ ಮತ್ತು ಮಾದಕ ವಸ್ತುಗಳ ಪ್ರಭಾವದಿಂದ ಮಹಿಳೆಯರನ್ನು ಚುಡಾಯಿಸುವುದು, ಬಲಾತ್ಕಾರ ಅಥವಾ ಅಶ್ಲೀಲ ಚಿತ್ರೀಕರಣದಂತಹ ಕೃತ್ಯಗಳು ನಡೆದು ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರಬಹುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.
3. ಮನವಿ ಸಲ್ಲಿಸುವ ಸಂದರ್ಭದಲ್ಲಿ ಬಜರಂಗ ದಳದ ಶ್ರೀ. ನಾನಾ ಮೋರೆ, ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಶ್ರೀ. ಅಜಿಂಕ್ಯ ಗಾಯಕ್ವಾಡ, ‘ಹಿಂದೂ ಟೈಮ್ಸ್’ ಸಂಪಾದಕಿ ಸೌ. ಸ್ನೇಹಾ ಜೋಶಿ, ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯ ಶ್ರೀ. ರಾಮೇಶ್ವರ ಭುಕನ, ಸಮಿತಿಯ ಜಿಲ್ಲಾ ಹಿಂದೂ ಸಂಘಟಕ ಶ್ರೀ. ಬಾಪು ಠಾಣಗೆ, ಭಾಜಪ ಮಹಿಳಾ ಮೋರ್ಚಾದ ರಾಜ್ಯ ಕಾರ್ಯದರ್ಶಿ ಸೌ. ಗೀತಾ ಗಿಲ್ಡಾ, ಭಾಜಪ ಕಾರ್ಯಾಲಯ ಮಂತ್ರಿ ಶ್ರೀ. ಮುಕುಲ ಗಂಧೆ, ಮಹಾರಾಷ್ಟ್ರ ಮಂದಿರ ಮಹಾಸಂಘದ ಶ್ರೀ. ಭರತ ಶಿಂದೆ, ಶ್ರೀ. ಸುನೀಲ ಶಿಂದೆ, ರಣರಾಗಿಣಿ ಶಾಖೆಯ ಸೌ. ಸುಲೇಖಾ ವಿದ್ಯೆ, ಸಾಮಾಜಿಕ ಕಾರ್ಯಕರ್ತ ಶ್ರೀ. ದಿನೇಶ ಜೋಶಿ, ಶ್ರೀ. ರವಿ ಗಾಲಿ ಮುಂತಾದವರು ಉಪಸ್ಥಿತರಿದ್ದರು.
4. ಮನವಿಯನ್ನು ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ ಅಧೀಕ್ಷಕರು ಸರಕಾರದ ನಿಯಮಗಳನ್ವಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಹಿಂದುತ್ವನಿಷ್ಠ ಸಂಘಟನೆಗಳ ಪ್ರಯತ್ನದಿಂದ ರೇವ್ ಪಾರ್ಟಿ ರದ್ದಾಗಿದ್ದಕ್ಕಾಗಿ ಎಲ್ಲಾ ಸಂಘಟನೆಗಳಿಗೆ ಕೃತಜ್ಞತೆ ಸಲ್ಲಿಸಿ ಈಶ್ವರನ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸಲಾಯಿತು.
ಸಂಪಾದಕೀಯ ನಿಲುವು
|
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!
‘ ಮಹಾತ್ಮ ಫುಲೆ ವಾಡಾ’ ಆವರಣದಲ್ಲಿ ವಟಪೂಜೆ ನಿಷೇಧ ವಾಪಸ್!
ದೇಶದ 3 ರಾಜ್ಯಗಳಲ್ಲಿ ಲವ್ ಜಿಹಾದ್ನ 4 ಘಟನೆಗಳು ಬೆಳಕಿಗೆ!
ಮಧ್ಯಪ್ರದೇಶದ ಬಡನಗರದಲ್ಲಿ ಕ್ರೇನ್ ಮೂಲಕ ಕಾರನ್ನು ಎತ್ತಿ ಉದ್ದೇಶಪೂರ್ವಕವಾಗಿ ಸ್ಫೋಟಿಸಲಾಯಿತು ! : Ujjain Muharram