ದೇವದ (ಪನವೇಲ)ದಲ್ಲಿನ ಸನಾತನದ ಆಶ್ರಮದಲ್ಲಿ ಆನಂದೋತ್ಸವ

ದೇವದ (ಪನವೇಲ) – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮೇಲೆ ಅಪಾರ ಶ್ರದ್ಧೆಯಿರುವ ಹಾಗೆಯೇ ಸನಾತನದ ೧೦೩ ನೇ ದಿವಗಂತ ಪೂ. ಸದಾಶಿವ ಸಾಮಂತ ಅಜ್ಜನವರ ಪತ್ನಿ ಶ್ರೀಮತಿ ದಿನಪ್ರಭಾ ಸಾಮಂತಅಜ್ಜಿ (ವಯಸ್ಸು ೮೩ ವರ್ಷ) ಇವರು ಶೇ. ೭೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿ ಸನಾತನ ಸಂಸ್ಥೆಯ ೧೩೭ ನೇ ವ್ಯಷ್ಟಿ ಸಂತಪದವಿಯಲ್ಲಿ ವಿರಾಜಮಾನರಾದರು, ಈ ಆನಂದದಾಯಕ ಸುದ್ದಿಯನ್ನು ಸನಾತನದ ಪೂ. (ಸೌ.) ಅಶ್ವಿನಿ ಪವಾರ ಇವರು ೩ ಫೆಬ್ರುವರಿಯಂದು ನಡೆದ ಒಂದು ಅನೌಪಚಾರಿಕ ಕಾರ್ಯಕ್ರಮದಲ್ಲಿ ಉಪಸ್ಥಿತ ಸಾಧಕರಿಗೆ ನೀಡಿದರು. ಆ ಸಮಯದಲ್ಲಿ ಎಲ್ಲ ಸಾಧಕರ ಭಾವಜಾಗೃತವಾಯಿತು. ಪೂ. (ಸೌ.) ಅಶ್ವಿನಿ ಪವಾರ ಇವರು ಪೂ. (ಶ್ರೀಮತಿ) ದಿನಪ್ರಭಾ ಸಾಮಂತಅಜ್ಜಿಯವರಿಗೆ ಪುಷ್ಪಹಾರವನ್ನು ಅರ್ಪಿಸಿ ಶ್ರೀಫಲ ಮತ್ತು ಉಡುಗೊರೆಯನ್ನು ನೀಡಿ ಅವರನ್ನು ಸನ್ಮಾನಿಸಿದರು. ಆಶ್ರಮಜೀವನದಲ್ಲಿನ ಹಾಗೆಯೇ ಪೂರ್ವಜೀವನದ ಪ್ರಸಂಗಗಳನ್ನು ಹೇಳಿ ‘ಆ ಪ್ರಸಂಗಗಳಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೃಪೆಯನ್ನು ಹೇಗೆ ಅನುಭವಿಸಿದರು’, ಎಂಬುದನ್ನು ಎಲ್ಲರಿಗೂ ಹೇಳಿದರು. ಈ ಕಾರ್ಯಕ್ರಮದಿಂದ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯು ಸಮತೋಲನದಲ್ಲಿಟ್ಟು ಆಧ್ಯಾತ್ಮಿಕ ಪ್ರಗತಿಯನ್ನು ಹೇಗೆ ಮಾಡಬೇಕು ? ಎಂಬುದು ಸಾಧಕರಿಗೆ ಕಲಿಯಲು ಸಿಕ್ಕಿತು.
ಋಷಿಋಣ ತೀರಿಸುವ ಸುಲಭ ಮಾರ್ಗವೆಂದರೆ ಋಷಿಗಳ ಆಜ್ಞಾಪಾಲನೆ ಮಾಡುವುದು !
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
ಸಾಧನೆಯ ಅತ್ಯಾವಶ್ಯಕತೆ !