
೧. ಸಂತರ ಸಹವಾಸದ ಮಹತ್ವ ಮತ್ತು ಲಾಭ !
‘ಸಾಧಕರ ಜೀವನದಲ್ಲಿ ಸಂತರ ಸಹವಾಸವು ಮಹತ್ವದ್ದಾಗಿರುತ್ತದೆ. ಸಂತರ ಸಹವಾಸದಿಂದ ಸಾಧಕನಲ್ಲಿನ ದೈವತ್ವವು ಹೆಚ್ಚಾಗುತ್ತದೆ. ಮನುಷ್ಯನಿಗೆ ಬುದ್ಧಿಯಿರುವುದರಿಂದ ಅವನು ಆ ಸಹವಾಸದ ಯೋಗ್ಯ ಲಾಭವನ್ನು ಪಡೆಯಬಹುದು. ಅನೇಕ ಬಾರಿ ಅವನ ಅಹಂವು ಅವನ ಪ್ರಗತಿಗೆ ಅಡ್ಡಿಯಾಗುತ್ತದೆ. ವಸ್ತುಗಳಿಗೆ ಮಾತ್ರ ಭಾವ-ಭಾವನೆ ಮತ್ತು ಅಹಂ ಇರುವುದಿಲ್ಲ. ವಸ್ತುಗಳು ಸಂತರ ಸಹವಾಸದಲ್ಲಿ ತಕ್ಷಣ ಚೈತನ್ಯ ಭರಿತವಾಗುತ್ತವೆ ಮತ್ತು ಅವುಗಳಲ್ಲಿ ಬದಲಾವಣೆ ಆಗಿರುವುದು ಕಂಡುಬರುತ್ತದೆ. ಸಂತರ ಸಹವಾಸದಿಂದ ಸಾಧಕನ ಮಾಯೆಯಲ್ಲಿನ ವಿಚಾರಗಳು ಕಡಿಮೆಯಾಗುತ್ತವೆ. ಸಾಧಕನ ದೈವೀ ಅನುಸಂಧಾನವು ಹೆಚ್ಚಾಗತೊಡಗುತ್ತದೆ. ಸಂತರ ಸಹವಾಸದಿಂದ ಸಾಧಕನ ಪ್ರಾರಬ್ಧಭೋಗಗಳು ಕಡಿಮೆಯಾಗುತ್ತವೆ.
೨. ದೇವಸ್ಥಾನದ ಹತ್ತಿರವಿರುವ ಮಾರಾಟಗಾರರಲ್ಲಿನ ಪೂಜಾಸಾಮಗ್ರಿಗಳು ಅಲ್ಲಿನ ದೇವತೆಗಳ ಚೈತನ್ಯದಿಂದ ಭರಿತವಾಗಿರುವುದು ಮತ್ತು ಭಾವಿಕರು ಆ ಸಾಮಗ್ರಿಗಳನ್ನು ಕೊಂಡುಕೊಳ್ಳುವುದರಿಂದ ಪೂಜೆಯಲ್ಲಿ ಅದರ ಲಾಭವಾಗುವುದು ಮತ್ತು ಸಾಮಗ್ರಿಗಳನ್ನು ಮಾರಾಟ ಮಾಡುವವರಿಗೂ ಆರ್ಥಿಕ ಲಾಭವಾಗುವುದು
ಒಮ್ಮೆ ನಾವು ತಲಕಾವೇರಿ (ಕೊಡಗು)ಗೆ ಕಾವೇರಿ ನದಿಯ ಪೂಜೆಯನ್ನು ಮಾಡಲು ಹೋಗಿದ್ದೆವು. ನಾವು ಪಟ್ಟಣದಿಂದ ಆ ಕಡೆಗೆ ಹೋಗುವಾಗ ‘ದಾರಿಯಲ್ಲಿನ ಅಂಗಡಿಗಳಿಂದ ಪೂಜೆಗಾಗಿ ಮಾಲೆ-ಹೂವು ತೆಗೆದುಕೊಳ್ಳೋಣ’, ಎಂಬ ವಿಚಾರ ಮಾಡಿದೆನು. ಆಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು, “ನಗರದಲ್ಲಿನ ಅಂಗಡಿಯಿಂದ ಹಾರ-ಹೂವುಗಳನ್ನು ತೆಗೆದುಕೊಳ್ಳುವುದು ಬೇಡ. ಕಾವೇರಿ ದೇವಸ್ಥಾನದ ಹತ್ತಿರವಿರುವ ಅಂಗಡಿಯಿಂದ ಹಾರ-ಹೂವುಗಳನ್ನು ತೆಗೆದುಕೊಳ್ಳೋಣ. ಆ ಜನರು ತುಂಬಾ ಕಷ್ಟಪಟ್ಟು ಪೂಜೆಯ ಸಾಮಗ್ರಿಗಳನ್ನು ತಂದಿರುತ್ತಾರೆ. ದೇವಸ್ಥಾನದ ಹೊರಗಡೆ ಇರುವ ಮಾರಾಟಗಾರರಿಂದ ಪೂಜೆಯ ಸಾಮಗ್ರಿಗಳನ್ನು ತೆಗೆದುಕೊಂಡರೆ ಅವರಿಗೆ ಆರ್ಥಿಕ ಸಹಾಯವಾಗುತ್ತದೆ. ದೇವಸ್ಥಾನದ ಪರಿಸರದಲ್ಲಿನ ಸಾಮಗ್ರಿಗಳು ದೇವತೆಯ ಚೈತನ್ಯದಿಂದ ಭರಿತವಾಗಿರುತ್ತವೆ. ಪೂಜೆಯಲ್ಲಿ ಅದರ ಹೆಚ್ಚು ಲಾಭವಾಗುತ್ತದೆ,” ಎಂದು ಹೇಳಿದರು.
– ಸಂಗ್ರಹಕಾರರು : ಓರ್ವ ಸಾಧಕ
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!
ದೇಶದ ದೇವಾಲಯಗಳಿಗಾಗಿ ಪ್ರತ್ಯೇಕ ‘ಸನಾತನ ಸಂರಕ್ಷಣಾ ಮಂಡಳಿ’ ಅಥವಾ ಸಮಿತಿಯನ್ನು ಸ್ಥಾಪಿಸಬೇಕು! : Shankaracharya Sadanand Saraswati
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !