ಶಿವೋಪಾಸನೆ ಹೇಗೆ ಮಾಡುವುದು ?

ಶಿವನಿಗೆ ದುಗ್ಧಾಭಿಷೇಕ ಮಾಡುವ ಮಹತ್ವ !

ಶಿವನಿಗೆ ಹಾಲಿನ ಅಭಿಷೇಕವನ್ನು ಮಾಡಬೇಕು; ಏಕೆಂದರೆ ಹಾಲಿನಲ್ಲಿ ಶಿವನ ತತ್ತ್ವವನ್ನು ಆಕರ್ಷಿಸುವ ಸಾಮರ್ಥ್ಯವು ಹೆಚ್ಚಿರುತ್ತದೆ. ಹಾಲಿನ ಅಭಿಷೇಕದ ಮೂಲಕ ಶಿವತತ್ತ್ವವು ಶೀಘ್ರವಾಗಿ ಜಾಗೃತವಾಗುತ್ತದೆ. ತದನಂತರ ಆ ಹಾಲನ್ನು ತೀರ್ಥ ಎಂದು ಪ್ರಸಾದ ರೂಪದಲ್ಲಿ ಸ್ವೀಕರಿಸುವುದರಿಂದ ಶಿವತತ್ತ್ವದ ಹೆಚ್ಚಿನ ಲಾಭ ದೊರೆಯುತ್ತದೆ.

ಶಿವನಿಗೆ ಬಿಲ್ವಪತ್ರೆ ಅರ್ಪಿಸುವುದು

ಯಾವ ವಸ್ತುಗಳಲ್ಲಿ ನಿರ್ದಿಷ್ಟ ದೇವತೆಯ ಪವಿತ್ರಕಗಳನ್ನು ಆಕರ್ಷಿಸುವ ಸಾಮರ್ಥ್ಯವು ಇತರ ವಸ್ತುಗಳಿಗಿಂತ ಹೆಚ್ಚು ಇರುತ್ತದೆಯೋ, ಅಂತಹ ವಸ್ತುಗಳನ್ನು ದೇವರಿಗೆ ಅರ್ಪಿಸಿದಾಗ ದೇವತೆಯ ತತ್ತ್ವವು ಮೂರ್ತಿಯಲ್ಲಿ ಆಕರ್ಷಿತವಾಗುತ್ತದೆ. ಇದರಿಂದ ಮೂರ್ತಿಯಲ್ಲಿರುವ ಚೈತನ್ಯದ ಲಾಭ ನಮಗೆ ಬೇಗನೆ ಸಿಗುತ್ತದೆ. ಇದೇ ಕಾರಣಕ್ಕಾಗಿ ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸಬೇಕು.

ಶಿವನ ತಾರಕ ಮತ್ತು ಮಾರಕ ತತ್ತ್ವಕ್ಕಾಗಿ ಬಳಸಬೇಕಾದ ಊದುಬತ್ತಿಗಳು !

ಶಿವನ ಪೂಜೆ ಮಾಡುವಾಗ ಆತನ ತಾರಕ ತತ್ತ್ವವನ್ನು ಹೆಚ್ಚಾಗಿ ಆಕರ್ಷಿಸಲು ಕೇದಿಗೆ ಅಥವಾ ಜಾಜಿ ಸುಗಂಧದ ಊದುಬತ್ತಿಗಳನ್ನು ಬಳಸಬೇಕು. ಅದೇ ರೀತಿ ಶಿವನ ಮಾರಕ ತತ್ತ್ವವನ್ನು ಆಕರ್ಷಿಸಲು ಹೀನಾ ಅಥವಾ ದರ್ಬಾರ್ ಸುಗಂಧದ ಊದುಬತ್ತಿಗಳನ್ನು ಬಳಸಬೇಕು.

ಶಿವನಿಗೆ ಬಿಳಿ ಬಣ್ಣದ ಹೂವುಗಳನ್ನು ಅರ್ಪಿಸಿ !

ವಿಶಿಷ್ಟ ಪುಷ್ಪಗಳಲ್ಲಿ ವಿಶಿಷ್ಟ ದೇವತೆಗಳ ತತ್ತ್ವಗಳನ್ನು ಆಕರ್ಷಿಸುವ ಕ್ಷಮತೆಯು ಇತರ ಪುಷ್ಪಗಳ ತುಲನೆಯಲ್ಲಿ ಅಧಿಕ ಇರುತ್ತದೆ. ದತ್ತೂರಿ, ಶ್ವೇತಕಮಲ, ಬಿಳಿ ಕಣಗಿಲೆ, ಚಮೇಲಿ, ಮಂದಾರ, ನಾಗಸಂಪಿಗೆ, ಪುನ್ನಾಗ, ನಾಗಕೇಶರ, ರಾತ್ರಿರಾಣಿ, ದುಂಡುಮಲ್ಲಿಗೆ, ಜಾಜಿಮಲ್ಲಿಗೆ ಹಾಗೂ ಬಿಳಿ ಹೂವುಗಳನ್ನು ಅರ್ಪಿಸಬೇಕು. ಈ ಹೂವುಗಳ ಗಂಧದಿಂದ ಶಿವನ ತತ್ತ್ವ ಶಿವಲಿಂಗದಲ್ಲಿ ಅಧಿಕ ಪ್ರಮಾಣದಲ್ಲಿ ಆಕರ್ಷಿತಗೊಳ್ಳುತ್ತದೆ ಹಾಗೂ ನಮಗೆ ದೇವತೆಯ ತತ್ತ್ವದ ಲಾಭವಾಗುತ್ತದೆ. ದೇವತೆಯ ಚರಣಗಳಿಗೆ ಹೂವುಗಳನ್ನು ವಿಶಿಷ್ಟ ಸಂಖ್ಯೆಯಲ್ಲಿ ಅರ್ಪಿಸಿದಲ್ಲಿ, ಹೂವುಗಳೆಡೆಗೆ ಆಯಾ ದೇವತೆಯ ತತ್ತ್ವ ಶೀಘ್ರವಾಗಿ ಆಕರ್ಷಿಸಲ್ಪಡುತ್ತದೆ. ಈ ತತ್ತ್ವಕ್ಕನುಸಾರ ಶಿವನಿಗೆ ೧೦ ಹೂವುಗಳನ್ನು ಅರ್ಪಿಸಬೇಕು. ಹೂವುಗಳ ಬಳಿಕ ತೊಟ್ಟು ನಮ್ಮೆಡೆಗೆ ಮುಖಮಾಡಿಟ್ಟು ಬಿಲ್ವಪತ್ರೆ ಅರ್ಪಿಸಬೇಕು. (ನಿತ್ಯಪೂಜೆಯಲ್ಲಿ ಎಲೆಗಳನ್ನು ಮೊದಲು ಮತ್ತು ಪುಷ್ಪಗಳನ್ನು ಬಳಿಕ ಅರ್ಪಿಸುತ್ತಾರೆ)

(ಆಧಾರ : ಸನಾತನ ನಿರ್ಮಿತ ಗ್ರಂಥ ‘ಶಿವನ ಉಪಾಸನೆಯ ಹಿಂದಿನ ಶಾಸ್ತ್ರ’)