ಮೈಸೂರಿನಲ್ಲಿ ಆಯೋಜಿಸಲಾದ ಧರ್ಮಸಭೆಯಲ್ಲಿ ಹಿಂದೂ ನಾಯಕರಿಗೆ ದ್ವೇಷಪೂರಿತ ಭಾಷಣ ಮಾಡದಂತೆ ಪೊಲೀಸರ ನೋಟಿಸ್ Mysore Police Notice Hate Speech Dharma Sabhe

ಬೆಂಗಳೂರು – ರಾಜ್ಯದಲ್ಲಿ ಆಯೋಜಿಸಲಾದ ಹಿಂದೂ ಧರ್ಮಸಭೆಯಲ್ಲಿ ಹಿಂದೂ ನಾಯಕರು ದ್ವೇಷಪೂರಿತ ಭಾಷಣಗಳನ್ನು ಮಾಡಬಾರದು ಎಂದು ಪೊಲೀಸ್ ಇಲಾಖೆಯಿಂದ ನೋಟಿಸ್ ಜಾರಿ ಮಾಡಲಾಗುತ್ತಿದೆ. ‘ದ್ವೇಷಪೂರಿತ ಭಾಷಣ ವಿಧೇಯಕ 2025’ (ಹೇಟ್ ಸ್ಪೀಚ್ ಬಿಲ್ 2025) ಇನ್ನೂ ಜಾರಿಗೆ ಬರದಿದ್ದರೂ, ಕಾರ್ಯಕ್ರಮಕ್ಕೂ ಮುನ್ನವೇ ಹಿಂದೂ ನಾಯಕರಿಗೆ ನೋಟಿಸ್ ನೀಡುತ್ತಿರುವುದು ವಿವಾದಕ್ಕೆ ಕಾರಣವಾಗಿದೆ. ರಾಜ್ಯ ಸರಕಾರವು ಕಾರ್ಯಕ್ರಮಗಳಲ್ಲಿ ದ್ವೇಷಪೂರಿತ ಭಾಷಣಗಳನ್ನು ತಡೆಯಲು ಈ ಮಸೂದೆಯನ್ನು ಸಿದ್ಧಪಡಿಸಿ ವಿಧಾನಸಭೆಯಲ್ಲಿ ಅಂಗೀಕರಿಸಿದೆ; ಆದರೆ ಈ ಮಸೂದೆಗೆ ಇನ್ನೂ ರಾಜ್ಯಪಾಲರ ಅಂಕಿತ ಬಿದ್ದಿಲ್ಲದ ಕಾರಣ ಅದು ಕಾನೂನಾಗಿ ರೂಪಾಂತರಗೊಂಡಿಲ್ಲ. ಹೀಗಿದ್ದರೂ, ಪೊಲೀಸರು ಧರ್ಮಸಭೆ ನಡೆಯುವ ಮೊದಲೇ ಅದರಲ್ಲಿ ಭಾಷಣ ಮಾಡುವ ಹಿಂದುತ್ವನಿಷ್ಠ ನಾಯಕರಿಗೆ ವಿವಿಧ ಷರತ್ತುಗಳನ್ನು ವಿಧಿಸಿ ನೋಟಿಸ್ ಜಾರಿ ಮಾಡಿದ್ದಾರೆ.

ಹಿಂದೂ ಜನಜಾಗೃತಿ ಸಮಿತಿಯಿಂದ ವಿರೋಧ

ಈ ವಿಷಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಮೋಹನ್ ಗೌಡ ಅವರು ‘ಎಕ್ಸ್’ (X) ನಲ್ಲಿ ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸರು ಹಿಂದುತ್ವನಿಷ್ಠ ನಾಯಕರಿಗೆ ನೀಡಿದ ನೋಟಿಸ್‌ನ ಭಾವಚಿತ್ರವನ್ನು ಹಂಚಿಕೊಂಡಿದ್ದಾರೆ. ಗೌಡ ಅವರು ಮಾತನಾಡುತ್ತಾ, ‘ಮೈಸೂರಿನ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಆಯೋಜಿಸಲಾದ ಹಿಂದೂ ಧರ್ಮಸಭೆಗೆ ಮಾರ್ಗದರ್ಶನ ನೀಡುವ ಹಿಂದುತ್ವನಿಷ್ಠರಿಗೆ ಪೊಲೀಸರು ‘ದ್ವೇಷಪೂರಿತ ಭಾಷಣ’ ಮಾಡದಂತೆ ಎಚ್ಚರಿಕೆ ನೀಡುವ ನೋಟಿಸ್ ನೀಡಿದ್ದಾರೆ. ಇಂತಹದೇ ನೋಟಿಸ್ ಅನ್ನು ಮೌಲ್ವಿಗಳು, ಪಾದ್ರಿಗಳು ಮತ್ತು ದ್ವೇಷ ಹರಡುವ ರಾಜಕಾರಣಿಗಳಿಗೆ ನೀಡಲಾಗುತ್ತದೆಯೇ?’ ಎಂದು ಪ್ರಶ್ನಿಸಿದ್ದಾರೆ.

‘ಹಿಂದೆ ನಾವು ಕೇವಲ ಕಾರ್ಯಕ್ರಮದ ಮಾಹಿತಿಯನ್ನು ಪೊಲೀಸರಿಗೆ ನೀಡುತ್ತಿದ್ದೆವು. ಪ್ರತಿಭಟನೆಗಳಿದ್ದರೆ ಮಾತ್ರ ಪೊಲೀಸರು ಷರತ್ತುಗಳನ್ನು ವಿಧಿಸುತ್ತಿದ್ದರು. ಆದರೆ ಈಗ ಹೊಸದಾಗಿ ‘ದ್ವೇಷಪೂರಿತ ಭಾಷಣ ಮಾಡಬೇಡಿ’ ಎಂದು ಉಲ್ಲೇಖಿಸಿ ನೋಟಿಸ್ ನೀಡಲಾಗುತ್ತಿದೆ. ಕಾನೂನು ಜಾರಿಗೆ ಬರುವ ಮೊದಲೇ ಇಂತಹ ನೋಟಿಸ್‌ಗಳನ್ನು ಏಕೆ ನೀಡಲಾಗುತ್ತಿದೆ?’ ಎಂದು ನೋಟಿಸ್ ಪಡೆದ ಹಿಂದೂ ಜನಜಾಗೃತಿ ಸಮಿತಿಯ ಶರತ್ ಕುಮಾರ್ ಅವರು ಪ್ರಶ್ನಿಸಿದ್ದಾರೆ.

ನೋಟಿಸ್‌ನಲ್ಲಿ ಪೊಲೀಸರು ವಿಧಿಸಿರುವ ಕೆಲವು ಷರತ್ತುಗಳು

1. ಕಾರ್ಯಕ್ರಮದಲ್ಲಿ ಯಾವುದೇ ಧರ್ಮ ಅಥವಾ ಜಾತಿಯ ಜನರ ಭಾವನೆಗಳಿಗೆ ಧಕ್ಕೆ ಬರದಂತೆ ಎಚ್ಚರಿಕೆ ವಹಿಸಬೇಕು. ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ದ್ವೇಷಪೂರಿತ ಭಾಷಣ ಅಥವಾ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಬಾರದು.

2. ಧ್ವನಿವರ್ಧಕಗಳ (Loudspeakers) ಬಳಕೆ ಮಾಡುವುದಿದ್ದರೆ, ವಿಭಾಗೀಯ ಕಚೇರಿಯಿಂದ ರಸೀದಿ ಪಡೆದು ಪೊಲೀಸ್ ಠಾಣೆಗೆ ಸಲ್ಲಿಸಬೇಕು ಮತ್ತು ಅಧಿಕೃತ ಅನುಮತಿ ಪಡೆಯಬೇಕು.

3. ಸಾರ್ವಜನಿಕ ಸಾರಿಗೆ ಅಥವಾ ವಾಹನ ಸಂಚಾರಕ್ಕೆ ಅಡ್ಡಿಯಾಗದ ರೀತಿಯಲ್ಲಿ ಮೆರವಣಿಗೆ ನಡೆಸಬೇಕು.

4. ಮೇಲಿನ ಸೂಚನೆಗಳನ್ನು ಪಾಲಿಸದಿದ್ದರೆ ಮತ್ತು ಕಾನೂನು ಉಲ್ಲಂಘನೆಯಾದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

5. ಕಾರ್ಯಕ್ರಮದ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ವಯಂಸೇವಕರನ್ನು ನೇಮಿಸಬೇಕು. ಅಲ್ಲದೆ ಕಾರ್ಯಕ್ರಮ ಆರಂಭವಾಗುವ 2 ಗಂಟೆಗಳ ಮೊದಲು ಸಂಬಂಧಪಟ್ಟ ಪೊಲೀಸ್ ಠಾಣೆಗೆ ದೂರವಾಣಿ ಮೂಲಕ ಮಾಹಿತಿ ನೀಡಬೇಕು.

ಸಂಪಾದಕೀಯ ನಿಲುವು

  • ಹಿಂದೂ ವಿರೋಧಿ ಕಾಂಗ್ರೆಸ್ ಸರಕಾರದ ಪೊಲೀಸರ ತುಘಲಕ್ ಆದೇಶ! ಇದು ಹಿಂದೂಗಳ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನವಾಗಿದ್ದು, ಮುಸ್ಲಿಮರ ಓಲೈಕೆಗಾಗಿಯೇ ಹಿಂದುತ್ವನಿಷ್ಠರಿಗೆ ಇಂತಹ ನೋಟಿಸ್‌ಗಳನ್ನು ನೀಡಲಾಗುತ್ತಿದೆ. ಹಿಂದೂಗಳು ಕಾನೂನುಬದ್ಧವಾಗಿ ಈ ಬಗ್ಗೆ ಪೊಲೀಸರನ್ನು ಪ್ರಶ್ನಿಸುವುದು ಅಗತ್ಯ!
  • ಕಾಂಗ್ರೆಸ್ ಆಡಳಿತದಲ್ಲಿ ‘ಹಿಂದೂಗಳಿಗೆ ಕಾನೂನು ಮತ್ತು ಮುಸ್ಲಿಮರಿಗೆ ಲಾಭ’ ಎನ್ನುವಂತಹ ವಾತಾವರಣ ನಿರ್ಮಾಣವಾಗಿದ್ದು, ಇದನ್ನು ತಡೆಯಬೇಕಾದರೆ ಹಿಂದೂಗಳು ಕಾಂಗ್ರೆಸ್‌ನ ರಾಜಕೀಯ ಅಸ್ತಿತ್ವವನ್ನು ಅಂತ್ಯಗೊಳಿಸುವುದು ಅನಿವಾರ್ಯ!