|

ಪನ್ವೇಲ್ – ಮುಂಬಯಿ-ಗೋವಾ ಹೆದ್ದಾರಿಯಲ್ಲಿರುವ ಶಿರಢೋಣ ಗ್ರಾಮದ ‘ದಿ ಪೆಂಟೆಕೋಸ್ಟಲ್ ಕನ್ವೆನ್ಷನ್ ಗ್ರೌಂಡ್’ನಲ್ಲಿ ಜನವರಿ 29 ರಿಂದ ಫೆಬ್ರವರಿ 1 ರವರೆಗೆ ಆಯೋಜಿಸಲಾಗಿದ್ದ ಮತಾಂತರ ಕಾರ್ಯಕ್ರಮಕ್ಕೆ ಸ್ಥಳೀಯ ಗ್ರಾಮಸ್ಥರು ಬಲವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಮುಂಬಯಿಲ್ಲಿನ ‘ದ ಪೆಂಟೆಕೋಸ್ಟಲ್ ಮಿಷನ್’ ಸಂಸ್ಥೆಯ ವತಿಯಿಂದ ಇಲ್ಲಿ 4 ದಿನಗಳ ಕಾಲ ‘ವಾರ್ಷಿಕ ಸ್ನೇಹಸಮ್ಮೇಳನ ಮತ್ತು ರೋಗ ನಿವಾರಣಾ ಸಭೆ’ ಎಂಬ ಹೆಸರಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಗ್ರಾಮಸ್ಥರು ಪ್ರವೇಶ ದ್ವಾರದಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದರೂ, ಒಳಗೆ ಮಾತ್ರ ಕಾರ್ಯಕ್ರಮ ನಡೆಯುತ್ತಲೇ ಇತ್ತು. ಈ ಕಾರ್ಯಕ್ರಮದ ಕುರಿತಾದ ಸುದ್ದಿ ಜನವರಿ 30 ರಂದು ‘ಸನಾತನ ಪ್ರಭಾತ’ ದಿನಪತ್ರಿಕೆಯಲ್ಲಿ ಪ್ರಕಟವಾಗಿದ್ದು, ಈ ಸುದ್ದಿಯಿಂದ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿದೆ. ಈ ಸಂಪೂರ್ಣ ಘಟನೆಯ ವಿಡಿಯೋ ‘ಸನಾತನ ಪ್ರಭಾತ’ ಕೈಸೇರಿದೆ. ಈ ಕುರಿತು ಗ್ರಾಮಸ್ಥರು ಪೊಲೀಸ್ ಠಾಣೆಗೆ ಮನವಿಯನ್ನೂ ಸಲ್ಲಿಸಿದ್ದಾರೆ.

ಕಾರ್ಯಕ್ರಮಕ್ಕೆ ಬಂದವರ ಧರ್ಮದ ಉಲ್ಲೇಖದೊಂದಿಗೆ ಹೆಸರು ನೀಡಲು ಮತ್ತು ಪ್ರವೇಶ ದ್ವಾರದಲ್ಲಿ ‘ಅನ್ಯಧರ್ಮೀಯರಿಗೆ ಪ್ರವೇಶ ನಿಷೇಧ’ ಎಂಬ ಫಲಕ ಹಾಕಲು ಗ್ರಾಮಸ್ಥರ ಆಗ್ರಹ!1. ಚರ್ಚ್ ಪ್ರತಿನಿಧಿಯು ಗ್ರಾಮಸ್ಥರಿಗೆ ‘ಈ ಕಾರ್ಯಕ್ರಮಕ್ಕೆ ನಾವು ಯಾರಿಗೂ ಆಮಂತ್ರಣ ನೀಡಿಲ್ಲ’ ಎಂದು ಹೇಳಿದನು. ಇದಕ್ಕೆ ಗ್ರಾಮಸ್ಥರು ಚರ್ಚ್ ಪ್ರಸಾರ ಮಾಡಿದ್ದ ‘ಎಲ್ಲರಿಗೂ ಪ್ರೀತಿಯ ಆಮಂತ್ರಣ’ ಎಂದು ಬರೆದಿದ್ದ ಜಾಹೀರಾತು ಪತ್ರಿಕೆಯನ್ನು ತೋರಿಸಿ ಚರ್ಚ್ ಪ್ರತಿನಿಧಿಯ ಸುಳ್ಳನ್ನು ಬಯಲಿಗೆಳೆದರು. 2. ಇದಕ್ಕೆ ಚರ್ಚ್ ಪ್ರತಿನಿಧಿಯು ‘ಮದುವೆಯ ಆಮಂತ್ರಣದಂತೆ ಇದು ವೈಯಕ್ತಿಕ ಆಮಂತ್ರಣವಾಗಿದೆ’ ಎಂದು ಗ್ರಾಮಸ್ಥರಿಗೆ ಹೇಳಿದನು. ಇದಕ್ಕೆ ಗ್ರಾಮಸ್ಥರು ಅವನಿಗೆ ‘ನಿಮ್ಮ ಬಳಿ ಈಗ ಇಲ್ಲಿ ಬಂದಿರುವ ಎಲ್ಲಾ ಜನರ ಹೆಸರು, ಸಂಪರ್ಕ ಸಂಖ್ಯೆ, ಅವರು ಎಲ್ಲಿಂದ ಬಂದಿದ್ದಾರೆ? ಮತ್ತು ಅವರ ಧರ್ಮ ಯಾವುದು?, ಇದರ ಪಟ್ಟಿಯನ್ನು ನಮಗೆ ಬರೆದುಕೊಡಿ. ಹಾಗೆಯೇ ‘ಅನ್ಯಧರ್ಮೀಯರಿಗೆ ಇಲ್ಲಿ ಪ್ರವೇಶವಿಲ್ಲ’ ಎಂಬ ಫಲಕವನ್ನು ಪ್ರವೇಶ ದ್ವಾರದಲ್ಲಿ ಹಾಕಿ’, ಎಂದು ತಿಳಿಸಿದರು. 3. ಸಂಬಂಧಪಟ್ಟ ಪ್ರತಿನಿಧಿಯು ಎಲ್ಲಾ ಗ್ರಾಮಸ್ಥರ ಅನಿರೀಕ್ಷಿತ ವಿರೋಧವನ್ನು ಕಂಡು ‘ನಮ್ಮ ತಪ್ಪಾಗಿದ್ದರೆ ವಿನಮ್ರತೆಯಿಂದ ಕ್ಷಮೆ ಕೇಳುತ್ತೇವೆ’ ಎಂದು ಮೇಲ್ನೋಟಕ್ಕೆ ಹೇಳಿ ಸಮಯ ಸಾಧಿಸಲು ಪ್ರಯತ್ನಿಸಿದನು. |
ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿಯ ಅನುಮತಿ ಇಲ್ಲ!
ಹಿಂದುತ್ವನಿಷ್ಠರು ಚರ್ಚ್ ಪ್ರತಿನಿಧಿಗೆ ‘ಈ ಕಾರ್ಯಕ್ರಮಕ್ಕೆ ಸರ್ಪಂಚ್ ಮತ್ತು ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದಿದ್ದೀರಾ?’ ಎಂದು ಕೇಳಿದಾಗ, ಪ್ರತಿನಿಧಿಯು ಕಾರ್ಯಕ್ರಮಕ್ಕೆ ಅನುಮತಿ ಪಡೆದಿಲ್ಲ ಎಂದು ಒಪ್ಪಿಕೊಂಡನು. ಇದನ್ನು ಸರಿಹೊಂದಿಸಲು ಪ್ರಯತ್ನಿಸುತ್ತಾ ಚರ್ಚ್ ಪ್ರತಿನಿಧಿಯು ‘ಇಲ್ಲಿ ಮತಾಂತರ ನಡೆಯುತ್ತಿಲ್ಲ’ ಎಂದು ಪತ್ರ ಬರೆದುಕೊಡಲು ಸಿದ್ಧನಾದನು. ತನ್ನ ಸಂಸ್ಥೆ ನೋಂದಾಯಿತವಾಗಿದೆ ಎಂದು ಹೇಳಿದ ಅವನು ‘ಯಾರಾದರೂ ಅಂತಹ ಬೆದರಿಕೆ ಹಾಕಲು ಬಂದರೆ ನಾವು ಅವರೊಂದಿಗೆ ಮಾತನಾಡುತ್ತೇವೆ. ಗ್ರಾಮದ ಯಾರಾದರೂ ಬಂದರೆ ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ. ಗ್ರಾಮ ಪಂಚಾಯಿತಿಯ ಅನುಮತಿ ಪಡೆಯುವುದು ಅಗತ್ಯ ಎಂದು ನಾವು ನಮ್ಮ ಮೇಲಧಿಕಾರಿಗಳಿಗೆ ತಿಳಿಸುತ್ತೇವೆ. ಈ ಬಾರಿ ತಪ್ಪಾಗಿದೆ, ಮುಂದಿನ ಬಾರಿ ನೆನಪಿಟ್ಟುಕೊಳ್ಳುತ್ತೇವೆ’ ಎಂದನು.
ಗ್ರಾಮಸ್ಥರು ಮತಾಂತರದ ಬಗ್ಗೆ ಹೇಳಿದಾಗ ಕಪಟಿ ಚರ್ಚ್ ಪ್ರತಿನಿಧಿಯಿಂದ ಸಭೆ ನಡೆಸುವ ಪಟ್ಟು!
1. ‘30 ವರ್ಷಗಳ ಹಿಂದೆ ಈ ಚರ್ಚ್ ಕಟ್ಟುವಾಗ ನೀವು ಯಾರ ಅನುಮತಿ ಪಡೆದಿದ್ದಿರಿ?’, ‘ನಿಮ್ಮ ಪ್ರವೇಶ ದ್ವಾರದಲ್ಲೇ ಹೆಸರುಗಳ ನೋಂದಣಿ ಪುಸ್ತಕ ಇರಬೇಕು’, ಮುಂತಾದ ಅನೇಕ ವಿಚಾರಗಳನ್ನು ಗ್ರಾಮಸ್ಥರು ಮಂಡಿಸಿದರು. ನಂತರ ಪ್ರತಿನಿಧಿಯು ಎಲ್ಲವನ್ನೂ ಒಪ್ಪಿಕೊಂಡು ಅವರೊಂದಿಗೆ ಒಂದು ಸಭೆ ನಡೆಸುವಂತೆ ಒತ್ತಾಯಿಸಿದನು. (ಕ್ರೈಸ್ತರ ಧೂರ್ತತನವನ್ನು ಅರಿಯಿರಿ! – ಸಂಪಾದಕರು)
2. ಚರ್ಚ್‌ನ ಇನ್ನೊಬ್ಬ ಪ್ರತಿನಿಧಿಯು ‘ನಾವು ಕೇವಲ ನಮ್ಮ ಬಳಿ ಬಂದವರಿಗೆ ಸಹಾಯ ಮಾಡುತ್ತೇವೆ’ ಎಂದು ಹೇಳಿದಾಗ, ‘ಅಡ್ಡಾದಿಡ್ಡಿ ಮಾತನಾಡಬೇಡಿ, ನಾವು ತಿಳುವಳಿಕೆ ನೀಡಲು ಬಂದಿದ್ದೇವೆ’ ಎಂದು ಗ್ರಾಮಸ್ಥರು ಅವರನ್ನು ಗದರಿಸಿದರು. ಅಲ್ಲದೆ ‘ನೀವು ಗ್ರಾಮಕ್ಕೆ ಬಂದು ಮತಾಂತರ ಮಾಡುತ್ತೀರಿ ಎಂಬ ಅರಿವು ನಮಗಿದೆ. ನಾವು ಎಷ್ಟೋ ಬಾರಿ ನಿಮ್ಮನ್ನು ಓಡಿಸಿದ್ದೇವೆ. ನಿಮ್ಮ ಉದ್ದೇಶ ಶುದ್ಧವಾಗಿದ್ದರೆ, ನಮ್ಮನ್ನು ಒಳಗೆ ಹೋಗದಂತೆ ಏಕೆ ತಡೆದಿದ್ದೀರಿ?’ ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಗ್ರಾಮಸ್ಥರ ವಿರೋಧ ತೀವ್ರವಾಗುತ್ತಿರುವುದನ್ನು ಕಂಡು ‘ಎಲ್ಲಾ ಜನರ ಮುಂದೆ ಬೇಡ, ಎಲ್ಲಾದರೂ ಕುಳಿತು ಮಾತನಾಡೋಣ’ ಎಂದು ಇನ್ನೊಬ್ಬ ಪ್ರತಿನಿಧಿ ಹೇಳಿದನು.
3. ‘ನಮ್ಮದು ಕ್ರಾಂತಿಕಾರಿಗಳ ಗ್ರಾಮವಾಗಿದ್ದು ನಿಮ್ಮಿಂದಾಗಿ ಅದಕ್ಕೆ ಕೆಟ್ಟ ಹೆಸರು ಬರುತ್ತಿದೆ. ಪತ್ರಿಕೆಗಳಲ್ಲಿ ನಿಮ್ಮ ಕಾರ್ಯಕ್ರಮದ ಸುದ್ದಿ ಬಂದಿದೆ’, ಎಂದು ಗ್ರಾಮಸ್ಥರು ಅವರಿಗೆ ತಿಳಿಸಿದರು. ಆ ಸಮಯದಲ್ಲಿ ‘ಈ ಸ್ಥಳದಲ್ಲಿ ನಿಲ್ಲಬೇಡಿ’ ಎಂದು ಚರ್ಚ್ ಆವರಣದಲ್ಲಿದ್ದ ಧ್ವನಿವರ್ಧಕದ ಮೂಲಕವೂ ಹೇಳಲಾಯಿತು. ‘ನಮ್ಮದು ಮುಂಬಯಿ ಸೇರಿದಂತೆ ಮಹಾರಾಷ್ಟ್ರದಲ್ಲಿ ಒಟ್ಟು 40 ಚರ್ಚ್‌ಗಳಿದ್ದು, ಇದು ಇಲ್ಲಿನ ಮುಖ್ಯ ಚರ್ಚ್ ಆಗಿದೆ’, ಎಂದು ಚರ್ಚ್ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಗ್ರಾಮಸ್ಥರಿಗೆ ತಿಳಿಸಿದರು.
ಹಿಂದುತ್ವನಿಷ್ಠ ಸಂಘಟನೆಗಳಿಂದ ಪೊಲೀಸರಿಗೆ ಮನವಿ: ಕಠಿಣ ಕ್ರಮಕ್ಕೆ ಆಗ್ರಹ!
ಇಂತಹ ಬೇಡಿಕೆಯನ್ನು ಏಕೆ ಇಡಬೇಕಾಗುತ್ತದೆ? ಪೊಲೀಸರು ಸ್ವತಃ ಏಕೆ ಕ್ರಮ ಕೈಗೊಳ್ಳುವುದಿಲ್ಲ? ಘಟನಾ ಸ್ಥಳಕ್ಕೆ ಹೋಗುವ ಮೊದಲು ಸಮಸ್ತ ಹಿಂದುತ್ವನಿಷ್ಠ ಸಂಘಟನೆಗಳ ವತಿಯಿಂದ ಪನ್ವೇಲ್‌ನಲ್ಲಿ ಹಿರಿಯ ಪೊಲೀಸ್ ನಿರೀಕ್ಷಕರಿಗೆ ಶಿರಢೋಣದಲ್ಲಿ ನಡೆಯುತ್ತಿರುವ ಮತಾಂತರದ ಪಿತೂರಿಯ ಬಗ್ಗೆ ಮನವಿ ಸಲ್ಲಿಸಲಾಗಿತ್ತು. ಮೇಲಿನ ಕಾರ್ಯಕ್ರಮದಲ್ಲಿ ರೋಗ ನಿವಾರಣೆಯ ಹೆಸರಿನಲ್ಲಿ ನಡೆಯುವ ಮತಾಂತರದ ಸಾಧ್ಯತೆಯ ಬಗ್ಗೆ ಈ ಮನವಿಯಲ್ಲಿ ಉಲ್ಲೇಖಿಸಲಾಗಿದೆ, ಹಾಗೆಯೇ ಸಂಬಂಧಪಟ್ಟ ಕಾರ್ಯಕ್ರಮದ ಜಾಹೀರಾತಿನಲ್ಲಿ ಬರೆದಿರುವಂತೆ ಚಿಕಿತ್ಸೆ ನೀಡುತ್ತಿದ್ದರೆ ‘ವೈದ್ಯಕೀಯ ಚಿಕಿತ್ಸೆಯ ಬದಲಿಗೆ ಚಮತ್ಕಾರದಿಂದ ಚಿಕಿತ್ಸೆ ನೀಡಿ ಜನರನ್ನು ವಂಚಿಸುವುದು’, ಮೂಢನಂಬಿಕೆ ವಿರೋಧಿ ಕಾಯ್ದೆಯಡಿ ಅಪರಾಧವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಇದರಿಂದ ಪ್ರದೇಶದ ಶಾಂತಿ ಮತ್ತು ಧಾರ್ಮಿಕ ಸೌಹಾರ್ದತೆ, ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವ ಸಾಧ್ಯತೆಯಿದೆ ಎಂದೂ ಹೇಳಲಾಗಿದೆ. ಈ ಕಾರ್ಯಕ್ರಮದ ಮೇಲೆ ನಿಗಾ ಇಡಲು, ಇದರ ವಿಡಿಯೋ ಚಿತ್ರೀಕರಣ ಮಾಡಲು ಮತ್ತು ಮತಾಂತರ ನಡೆಯುತ್ತಿದ್ದರೆ ಕಾರ್ಯಕ್ರಮವನ್ನು ತಕ್ಷಣ ನಿಲ್ಲಿಸಿ ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳಲು ಈ ಮನವಿಯ ಮೂಲಕ ಆಗ್ರಹಿಸಲಾಗಿದೆ. ಈ ಮನವಿಗೆ ವಿವಿಧ ಹಿಂದುತ್ವನಿಷ್ಠ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಶಿರಢೋಣದ ಉಪಸರಪಂಚರೂ ಸಹಿ ಹಾಕಿದ್ದಾರೆ. |
ಸಂಪಾದಕೀಯ ನಿಲುವು
|

ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ