
೧. ಸದ್ಗುರು ರಾಜೇಂದ್ರ ಶಿಂದೆ ಇವರಿಗೆ ತೀವ್ರ ಶಾರೀರಿಕ ತೊಂದರೆಗಳಿದ್ದರೂ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಅವರನ್ನು ನಿರಂತರ ಸೇವೆಯಲ್ಲಿರಿಸುವುದು
೧ ಅ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸದ್ಗುರು ರಾಜೇಂದ್ರ ಶಿಂದೆ ಇವರಿಗೆ ಸೊಂಟ ನೋವಿನ ತೊಂದರೆ ಇದ್ದರೂ, ಅವರಿಂದ ಸತತವಾಗಿ ೨ ವರ್ಷಗಳ ಕಾಲ ದಕ್ಷಿಣ ಭಾರತದಲ್ಲಿ ಪ್ರಸಾರ ಸೇವೆಯನ್ನು ಮಾಡಿಸಿಕೊಳ್ಳುವುದು : ‘ವರ್ಷ ೨೦೦೯ ರಿಂದ ನನಗೆ ಸೊಂಟನೋವಿನ ತೊಂದರೆ ಹೆಚ್ಚಾಗಿತ್ತು. ಆ ಸಮಯದಲ್ಲಿ ನನಗೆ ದಕ್ಷಿಣ ಭಾರತದ ೪ ರಾಜ್ಯಗಳಲ್ಲಿ ಪ್ರಸಾರದ ಸೇವೆ ಇತ್ತು. ಮಹಾರಾಷ್ಟ್ರಕ್ಕೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಪ್ರಸಾರ ಕೇಂದ್ರಗಳು ದೂರ ದೂರ ಇವೆ. ಆದ್ದರಿಂದ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಹೋಗಲು ನನಗೆ ಹೆಚ್ಚು ಪ್ರಯಾಣ ಮಾಡಬೇಕಾಗುತ್ತಿತ್ತು. ಹೆಚ್ಚಿನ ಬಾರಿ ನನಗೆ ರಾತ್ರಿಯ ಸಮಯದಲ್ಲಿ ಬಸ್ಸಿನಲ್ಲಿ ಪ್ರಯಾಣಿಸಬೇಕಾಗುತ್ತಿತ್ತು ಮತ್ತು ಹಗಲಿನಲ್ಲಿ ಪ್ರಸಾರಕ್ಕೆ ಸಂಬಂಧಿಸಿದಂತೆ ಸಭೆಗಳು, ಅಭ್ಯಾಸ ವರ್ಗಗಳು, ಸಂಪರ್ಕ ಇತ್ಯಾದಿ ಸೇವೆಗಳಿರುತ್ತಿದ್ದವು. ಈ ರೀತಿ ನಾನು ಅಲ್ಲಿ ೨ ವರ್ಷಗಳ ಕಾಲ ಪ್ರಸಾರ ಸೇವೆಯನ್ನು ಮಾಡಿದೆ. ನನಗೆ ಸೊಂಟದ ನೋವಿನ ತೊಂದರೆ ಇದ್ದರೂ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನನಗೆ ಶಕ್ತಿಯನ್ನು ನೀಡಿ ನನ್ನಿಂದ ಸೇವೆಯನ್ನು ಮಾಡಿಸಿಕೊಂಡರು.

೧ ಆ. ಸೇವೆಯಿಂದಾಗಿ ಸಾಕಷ್ಟು ವಿಶ್ರಾಂತಿ ಸಿಗದಿರುವುದು : ಡಿಸೆಂಬರ್ ೨೦೧೦ ರಲ್ಲಿ ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದಲ್ಲಿ ವಿದೇಶಿ ಸಾಧಕರಿಗಾಗಿ ಶಿಬಿರವನ್ನು ಆಯೋಜಿಸಲಾಗಿತ್ತು. ಆಗ ನನಗೆ ಸೊಂಟ ಮತ್ತು ಕುತ್ತಿಗೆ ನೋವು ಹೆಚ್ಚಾಗಿತ್ತು. ನಾನು ಶಿಬಿರದ ಆಯೋಜನೆಯ ಸೇವೆಯಲ್ಲಿದ್ದ ಕಾರಣ ನನಗೆ ವಿಶ್ರಾಂತಿಗೆ ಸಮಯ ಸಿಗುತ್ತಿರಲಿಲ್ಲ. ಆಗ ಮಧ್ಯಾಹ್ನದ ಮಹಾಪ್ರಸಾದದ ನಂತರ ನಾನು ವಿದೇಶಿ ಸಾಧಕರಿಗಾಗಿ ಅರ್ಧ ಗಂಟೆ ನಾಮಜಪಾದಿ ಉಪಾಯಗಳನ್ನು ಮಾಡುತ್ತಿದ್ದೆ. ದಿನವಿಡಿ ಶಿಬಿರ ಮತ್ತು ನಂತರ ರಾತ್ರಿ ಶಿಬಿರದ ಸಿದ್ಧತೆ ಇತ್ಯಾದಿಗಳಿಂದಾಗಿ ನನಗೆ ರಾತ್ರಿ ಮಲಗಲು ತಡವಾಗುತ್ತಿತ್ತು. ಈ ಎಲ್ಲಾ ಸೇವೆಗಳು ಗುರುಕೃಪೆಯಿಂದ ನಿರ್ವಿಘ್ನವಾಗಿ ನೆರವೇರಿದವು.
೧ ಇ. ಶಾರೀರಿಕ ತೊಂದರೆ ಹೆಚ್ಚಾದ ಕಾರಣ ಪ.ಪೂ. ಡಾಕ್ಟರರು ದೇವದ್‌ನ ಸನಾತನದ ಆಶ್ರಮಕ್ಕೆ ಕಳುಹಿಸುವುದು : ಏಪ್ರಿಲ್ ೨೦೧೧ ರಿಂದ ನನ್ನ ಮಹಾರಾಷ್ಟ್ರದ ಜಿಲ್ಲೆಗಳಲ್ಲಿನ ಪ್ರಸಾರ ಸೇವೆಯು ಪ್ರಾರಂಭವಾಯಿತು. ನವೆಂಬರ್ ೨೦೧೧ ರಿಂದ ನನ್ನ ಶಾರೀರಿಕ ತೊಂದರೆ ತುಂಬಾ ಹೆಚ್ಚಾಯಿತು. ಅದರಿಂದ ನನಗೆ ಕುಳಿತುಕೊಳ್ಳಲೂ ಬರುತ್ತಿರಲಿಲ್ಲ. ಆಗ ಪ.ಪೂ. ಡಾಕ್ಟರರು ನನ್ನ ಜಿಲ್ಲೆಗಳಲ್ಲಿನ ಪ್ರಸಾರ ಸೇವೆಯನ್ನು ನಿಲ್ಲಿಸಿ ನನ್ನನ್ನು ದೇವದ (ಪನವೇಲ್) ನಲ್ಲಿರುವ ಸನಾತನದ ಆಶ್ರಮಕ್ಕೆ ಕಳುಹಿಸಿದರು.
‘ಸದ್ಗುರು ರಾಜೇಂದ್ರ ಶಿಂದೆ ಇವರು ‘ತಮ್ಮ ತೊಂದರೆಗಳ ಕಡೆಗೆ ಯಾವ ದೃಷ್ಟಿಯಿಂದ ನೋಡಬೇಕು ಮತ್ತು ಸಾಧನೆಯನ್ನು ಹೇಗೆ ಮಾಡಬೇಕು ?’ ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯನ್ನು ಇಲ್ಲಿ ನೀಡಿದ್ದಾರೆ. ಅನೇಕ ಪ್ರಸಂಗಗಳಲ್ಲಿ ‘ಸನಾತನ ಪ್ರಭಾತ’ದಲ್ಲಿ ಮತ್ತು ಪ್ರತ್ಯಕ್ಷದಲ್ಲಿಯೂ ‘ಸಾಧನೆ ಮತ್ತು ಸೇವೆಯ ಬಗ್ಗೆ ಯಾವ ದೃಷ್ಟಿಕೋನವನ್ನು ಇಟ್ಟುಕೊಳ್ಳಬೇಕು ಮತ್ತು ಅದನ್ನು ಹೇಗೆ ಪರಿಪೂರ್ಣ ಮಾಡಬೇಕು ?’ ಎಂಬ ಬಗ್ಗೆ ನಾನು ಮಾರ್ಗದರ್ಶನ ಮಾಡಿದ್ದೇನೆ. ಸದ್ಗುರು ರಾಜೇಂದ್ರ ಶಿಂದೆ ಇವರು ಅದರ ಉತ್ತಮ ರೀತಿಯಲ್ಲಿ ಲಾಭ ಪಡೆದುಕೊಂಡಿದ್ದಾರೆ. ಅದಕ್ಕಾಗಿ ನಾನು ಅವರ ಬಗ್ಗೆ ಕೃತಜ್ಞನಾಗಿದ್ದೇನೆ ಮತ್ತು ಅವರ ಪ್ರಶಂಸೆಯನ್ನು ಎಷ್ಟು ಮಾಡಿದರೂ ಕಡಿಮೆಯೇ ಆಗಿದೆ ! ತೊಂದರೆ ಇರುವ ಎಲ್ಲಾ ಸಾಧಕರು ಅವರ ಆದರ್ಶವನ್ನು ತಮ್ಮ ಮುಂದಿಟ್ಟುಕೊಂಡು ಸಾಧನೆಯಲ್ಲಿ ಲಾಭ ಮಾಡಿಕೊಳ್ಳಬೇಕು.’ – ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ (೩೦.೧೦.೨೦೨೫)
೧ ಈ. ಶುದ್ಧೀಕರಣ ಸತ್ಸಂಗ ತೆಗೆದುಕೊಳ್ಳುವ ಸಂದೇಶ ಬಂದಾಗ, ಕುಳಿತುಕೊಳ್ಳಲು ಸಾಧ್ಯವಾಗದ ಕಾರಣ ಮಲಗಿಕೊಂಡೇ ಸತ್ಸಂಗ ಗಳನ್ನು ತೆಗೆದುಕೊಳ್ಳುವುದು : ದೇವದ್ (ಪನವೇಲ್)ನ ಸನಾತನದ ಆಶ್ರಮವನ್ನು ತಲುಪಿದಾಗ ನನಗೆ, ‘ದೇವದ್ ಆಶ್ರಮದ ಸಾಧಕರಿಗಾಗಿ ಶುದ್ಧೀಕರಣ ಸತ್ಸಂಗ ಪ್ರಾರಂಭಿಸಬೇಕು’, ಎಂಬ ಸಂದೇಶ ಬಂದಿತು. ಅದರಂತೆ ನಾನು ದೇವದ ಆಶ್ರಮಕ್ಕೆ ತಲುಪಿದ ತಕ್ಷಣ ಈ ಶುದ್ಧೀಕರಣ ಸತ್ಸಂಗಗಳನ್ನು (ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಗೆ ಸಂಬಂಧಿಸಿದಂತೆ ಸಾಧಕರ ಸತ್ಸಂಗ) ಪ್ರಾರಂಭಿಸಿದೆ. ಈ ಸತ್ಸಂಗಗಳು ಬೆಳಗ್ಗೆ ೯ ರಿಂದ ರಾತ್ರಿ ೮ ಗಂಟೆಯ ವರೆಗೆ ಇರುತ್ತಿದ್ದವು. ಕೆಲವು ಬಾರಿ ರಾತ್ರಿ ಊಟದ ನಂತರವೂ ಕೆಲವು ತುರ್ತು ಸತ್ಸಂಗಗಳನ್ನು ತೆಗೆದುಕೊಳ್ಳಬೇಕಾಗುತ್ತಿತ್ತು. ನನಗೆ ಸ್ವಲ್ಪವೂ ಕುಳಿತುಕೊಳ್ಳಲು ಸಾಧ್ಯವಾಗದ ಕಾರಣ ನಾನು ಎಲ್ಲಾ ಸತ್ಸಂಗಗಳನ್ನು ಮಲಗಿಕೊಂಡೇ ತೆಗೆದುಕೊಳ್ಳುತ್ತಿದ್ದೆ. ಈ ಸತ್ಸಂಗಗಳು ೪-೫ ತಿಂಗಳುಗಳ ಕಾಲ ನಡೆದವು.
೧ ಉ. ಶಾರೀರಿಕ ಕ್ಷಮತೆ ಕಡಿಮೆಯಾಗುವುದು : ದಿನಗಳು ಕಳೆದಂತೆ ನನ್ನ ಶಾರೀರಿಕ ಸ್ಥಿತಿ ತುಂಬಾ ಕ್ಷೀಣಿಸಿತು. ನನಗೆ ಊಟ ಮಾಡಲು ಕುಳಿತುಕೊಳ್ಳಲು ಸಹ ಸಾಧ್ಯವಾಗುತ್ತಿರಲಿಲ್ಲ. ದಿನಪತ್ರಿಕೆ ‘ಸನಾತನ ಪ್ರಭಾತ’ವನ್ನು ಕೈಯಲ್ಲಿ ಹಿಡಿದು ಓದಲು ಸಹ ಆಗುತ್ತಿರಲಿಲ್ಲ. ನನ್ನ ಕುತ್ತಿಗೆ ನೋವು ಸಹ ತುಂಬಾ ಹೆಚ್ಚಾಗಿತ್ತು.
೧ ಊ. ಕುತ್ತಿಗೆ ಮತ್ತು ಸೊಂಟ ನೋವು ತೀವ್ರವಾಗಿದ್ದರೂ, ಸನಾತನ ಚೈತನ್ಯ ವಾಹಿನಿಯ ಸೇವೆಯನ್ನು ಸತತ ೩-೪ ವರ್ಷಗಳ ಕಾಲ ಮಾಡುವುದು : ಆ ಸಮಯದಲ್ಲಿ ನನಗೆ ಸನಾತನ ಚೈತನ್ಯವಾಹಿನಿಯ ಸೇವೆ ಇತ್ತು. ಇದಕ್ಕೆ ಸಂಬಂಧಿಸಿದಂತೆ ‘ಎಲ್ಲಾ ಜಿಲ್ಲೆಗಳಿಂದ ಪ್ರಸಾರದ ಮಾಹಿತಿಯನ್ನು ಪಡೆಯುವುದು, ಅದರ ಸಂಕಲನ ಮಾಡುವುದು ಮತ್ತು ಅದರ ಅಧ್ಯಯನ ಮಾಡಿ ಅದರ ವಿಡಿಯೋಗಳನ್ನು ತಯಾರಿಸಿ ಪ್ರಸಾರ ಮಾಡುವುದು’ ಈ ರೀತಿಯ ಸೇವೆ ಇತ್ತು. ಈ ಪ್ರಸಾರವು ಎಲ್ಲಾ ಜಿಲ್ಲೆಗಳಿಗಾಗಿ ವಾರಕ್ಕೊಮ್ಮೆ ೩ ಗಂಟೆಗಳ ಕಾಲ ಇರುತ್ತಿತ್ತು. ಚಿತ್ರೀಕರಣ ಮಾಡಲು ೨-೩ ದಿನಗಳು ಬೇಕಾಗುತ್ತಿದ್ದವು. ಅದಕ್ಕಾಗಿ ನನಗೆ ಬಹಳಷ್ಟು ಗಂಟೆಗಳ ಕಾಲ ಕುಳಿತುಕೊಳ್ಳಬೇಕಾಗುತ್ತಿತ್ತು. ನನ್ನ ಕುತ್ತಿಗೆಗೆ ಮತ್ತು ಸೊಂಟಕ್ಕೆ ಪಟ್ಟಿಯನ್ನು ಕಟ್ಟಿ, ನಾನು ನಡುನಡುವೆ ಮಲಗಿಕೊಂಡು ಮತ್ತು ಸ್ವಲ್ಪ ಕುಳಿತುಕೊಂಡು ಈ ಸೇವೆಯನ್ನು ಮಾಡುತ್ತಿದ್ದೆ. ಈ ರೀತಿ ಈ ಸೇವೆಯು ಸತತ ೩-೪ ವರ್ಷಗಳ ಕಾಲ ನಡೆಯಿತು.
೧ ಎ. ಮಾತನಾಡಲು ಬೇಕಾದ ಶಕ್ತಿ ಇಲ್ಲದ ಕಾರಣ ‘ಹೆಚ್ಚು ಮಾತನಾಡಬಾರದು’ ಎಂದು ಆಧುನಿಕ ವೈದ್ಯರು ಹೇಳುವುದು : ಇದೇ ಸಮಯದಲ್ಲಿ ನನ್ನ ದಣಿವು ತುಂಬಾ ಹೆಚ್ಚಾಯಿತು. ನನ್ನ ದೇಹದ ಸ್ನಾಯುಗಳ ಸಾಮರ್ಥ್ಯ ತುಂಬಾ ಕಡಿಮೆಯಾಯಿತು. ಆಗ ಆಧುನಿಕ ವೈದ್ಯರು ನನಗೆ, “ಮಾತನಾಡಲು ಬೇಕಾದ ಶಕ್ತಿ ನಿಮ್ಮಲ್ಲಿ ಇಲ್ಲದ ಕಾರಣ ಈಗ ನೀವು ಹೆಚ್ಚು ಮಾತನಾಡಬಾರದು, ಹಾಗೆಯೇ ನಿಮ್ಮ ಹೊಟ್ಟೆಯ ಸ್ನಾಯುಗಳು ತುಂಬಾ ದುರ್ಬಲ ವಾಗಿವೆ”, ಎಂದು ಹೇಳಿದರು.
೧ ಏ. ದೂರವಾಣಿಯ ಮೂಲಕ ಸತ್ಸಂಗ ತೆಗೆದುಕೊಳ್ಳುವಾಗ ಜೋರಾಗಿ ಮಾತನಾಡಲು ಹೆಚ್ಚು ಶಕ್ತಿ ಬೇಕಾಗುವುದು : ಆಗ ನನಗೆ ಮಹಾರಾಷ್ಟ್ರದ ಎಲ್ಲಾ ಜಿಲ್ಲೆಗಳಿಗಾಗಿ ದೂರವಾಣಿಯ ಮೂಲಕ ಶುದ್ಧೀಕರಣ ಸತ್ಸಂಗ ತೆಗೆದುಕೊಳ್ಳಲು ಹೇಳಿದ್ದರು. ಪ್ರತಿದಿನ ಆ ಸತ್ಸಂಗಗಳು ೪-೫ ಗಂಟೆಗಳ ಕಾಲ ಇರುತ್ತಿದ್ದವು. ಈ ರೀತಿ ೫-೬ ತಿಂಗಳುಗಳ ಕಾಲ ನಡೆಯಿತು. ಆಗ ‘ಸ್ಮಾರ್ಟ್‌ಫೋನ್’ ಇಲ್ಲದ ಕಾರಣ ಸಾದಾ ದೂರವಾಣಿ ಉಪಕರಣದಲ್ಲಿ ಜೋರಾಗಿ ಮಾತನಾಡಬೇಕಾಗುತ್ತಿತ್ತು. ಅದಕ್ಕಾಗಿ ಹೆಚ್ಚು ಶಕ್ತಿ ಬೇಕಾಗುತ್ತಿತ್ತು.
೧ ಐ. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯ ಸತ್ಸಂಗಗಳನ್ನು ತೆಗೆದುಕೊಳ್ಳುವುದು : ಇದೇ ಸಮಯದಲ್ಲಿ ಕೆಲವು ಜಿಲ್ಲೆಗಳಿಂದ ಸಾಧಕರು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯನ್ನು ಕಲಿಯಲು ದೇವದ ಆಶ್ರಮಕ್ಕೆ ಬರುತ್ತಿದ್ದರು. ಅವರ ನಿಯಮಿತ ಸತ್ಸಂಗಗಳನ್ನು ತೆಗೆದುಕೊಳ್ಳುವ ಸೇವೆಯೂ ನನ್ನ ಬಳಿಯಿತ್ತು.
೨. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸದ್ಗುರು ರಾಜೇಂದ್ರ ಶಿಂದೆ ಇವರ ಶಾರೀರಿಕ ತೊಂದರೆಯ ತೀವ್ರತೆಯನ್ನು ಕಡಿಮೆ ಮಾಡಿ, ಪ್ರಾರಬ್ಧವನ್ನು ಸಹಿಸಲು ಮಾಡಿದ ಕೃಪೆ !
ಅ. ಸಚ್ಚಿದಾನಂದ ಪರಬ್ರಹ್ಮ ಗುರುದೇವರು ತಮ್ಮ ಕೃಪಾಶೀರ್ವಾದರೂಪಿ ಚೈತನ್ಯಮಯ ಪ್ರಸಾದವನ್ನು ನನಗೆ ನಿಯಮಿತವಾಗಿ ಕಳುಹಿಸುತ್ತಿದ್ದರು. ಅದರಿಂದ ನನಗೆ ಹೋರಾಡಲು ಬಲ ದೊರೆತು ನನ್ನ ಪ್ರಾರಬ್ಧವು ಸಹನೀಯವಾಯಿತು.
ಆ. ನನಗೆ ಆಗುತ್ತಿದ್ದ ಎಲ್ಲಾ ರೀತಿಯ ತೊಂದರೆಗಳನ್ನು ದೂರ ಮಾಡಲು ಮತ್ತು ನನಗೆ ಚೈತನ್ಯ ದೊರೆಯಬೇಕೆಂದು ಸಚ್ಚಿದಾನಂದ ಪರಬ್ರಹ್ಮ ಗುರುದೇವರು ತಮ್ಮ ಕೈಬರಹದ ಚೈತನ್ಯಮಯ ಹಸ್ತಪ್ರತಿಗಳನ್ನು ನನಗೆ ಕಳುಹಿಸಿದ್ದರು.
ಇ. ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಉಪಯೋಗಿಸಿದ ಮರದ ಮಂಚದ ೩ ದೊಡ್ಡ ಹಲಗೆಗಳನ್ನು ಅವರು ಆಧ್ಯಾತ್ಮಿಕ ಸ್ತರದ ಉಪಾಯಗಳಿಗಾಗಿ ನನಗೆ ಕಳುಹಿಸಿದ್ದರು. ಆ ಹಲಗೆಗಳನ್ನು ನಾನು ಈಗಲೂ ನನ್ನ ಮಂಚದ ಹಾಸಿಗೆಯ ಕೆಳಗೆ ಇಟ್ಟುಕೊಂಡಿದ್ದೇನೆ.
ಈ. ಸೆಪ್ಟೆಂಬರ್ ೨೦೧೨ ರಲ್ಲಿ ನನ್ನ ೫೦ ನೇ ಹುಟ್ಟುಹಬ್ಬದ ನಿಮಿತ್ತ ಸಚ್ಚಿದಾನಂದ ಪರಬ್ರಹ್ಮ ಗುರುದೇವರು ನನಗಾಗಿ ಗುರುಕೃಪಾಯೋಗದ ಚಿಹ್ನೆಯ ಚಿನ್ನದ ‘ಲೋಗೋ’ ಮತ್ತು ಅವರ ಛಾಯಾಚಿತ್ರದ ಒಂದು ‘ಫ್ರೇಮ್’ ಕಳುಹಿಸಿದ್ದರು.
ಆ. ‘ಲೋಗೋ’ವನ್ನು ನಾನು ಕುತ್ತಿಗೆಯಲ್ಲಿ ಧರಿಸಿದ್ದರಿಂದ ನನ್ನ ಸುತ್ತಲೂ ರಕ್ಷಣಾ ಕವಚವು ನಿರ್ಮಾಣವಾಯಿತು. ಅವರು ಕಳುಹಿಸಿದ ‘ಫ್ರೇಮ್’ಅನ್ನು ನಾನು ವಾಸಿಸುತ್ತಿರುವ ಕೋಣೆಯ ದೇವರಕೋಣೆಯಲ್ಲಿ ಇರಿಸಿದ್ದರಿಂದ ನನಗೆ ತಾನಾಗಿಯೇ ಅವರ ಅನುಸಂಧಾನದಲ್ಲಿರಲು ಸಾಧ್ಯವಾಯಿತು.
ಉ. ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಆಗಾಗ ಸಾಧಕರ ಬಳಿ ನನ್ನ ಕುಶಲೋಪರಿಯನ್ನು ಕೇಳುತ್ತಿದ್ದರು. ಇದರಿಂದ ‘ಅವರು ನನ್ನ ಕಡೆಗೆ ಸತತ ಗಮನ ಇಟ್ಟಿದ್ದಾರೆ’ ಎಂದು ನನ್ನ ಗಮನಕ್ಕೆ ಬರುತ್ತಿತ್ತು. ‘ಸಚ್ಚಿದಾನಂದ ಪರಬ್ರಹ್ಮ ಗುರುದೇವರು ನನ್ನನ್ನು ನೆನಪಿಸಿಕೊಳ್ಳುತ್ತಾರೆ’ ಎಂಬುದು ನನಗೆ ಹೆಚ್ಚು ಪ್ರೇರಣಾದಾಯಕ ವಾಗಿತ್ತು ಮತ್ತು ಸಾಧನೆ ಮಾಡಲು ಬಲ ನೀಡುತ್ತಿತ್ತು.
ಊ. ಯಾವಾಗ ಸಚ್ಚಿದಾನಂದ ಪರಬ್ರಹ್ಮ ಗುರುದೇವರು ದೂರವಾಣಿಯ ಮೂಲಕ ನನ್ನೊಂದಿಗೆ ಮಾತನಾಡುತ್ತಿದ್ದರೋ, ಆಗ ಪ್ರತಿ ಬಾರಿ ಅವರು ಏನಾದರೊಂದು ಹೊಸ ಅಂಶವನ್ನು ಹೇಳಿ ನನ್ನನ್ನು ಪ್ರೋತ್ಸಾಹಿಸುತ್ತಿದ್ದರು. ಅವರ ಕೆಲವೇ ನಿಮಿಷಗಳ ಮಾತುಗಳಿಂದ ನನ್ನ ಉತ್ಸಾಹ ತುಂಬಾ ಹೆಚ್ಚಾಗುತ್ತಿತ್ತು. ಅದರಿಂದ ನಾನು ತೊಂದರೆಗಳ ಕಡೆಗೆ ಸುಲಭವಾಗಿ ನಿರ್ಲಕ್ಷಿಸುತ್ತಿದ್ದೆ. ಇದರಿಂದ ‘ಅವರು ನನಗೆ ಪ್ರಾರಬ್ಧವನ್ನು ಭೋಗಿಸಲು ಶಕ್ತಿಯನ್ನು ನೀಡುತ್ತಿದ್ದರು ಮತ್ತು ಅದನ್ನು ಸಹನೀಯ ಮಾಡುತ್ತಿದ್ದರು’ ಎಂದು ನನ್ನ ಗಮನಕ್ಕೆ ಬರುತ್ತಿತ್ತು.
ಎ. ಇದೇ ಅವಧಿಯಲ್ಲಿ ಪರಾತ್ಪರ ಗುರು ಪಾಂಡೆ ಮಹಾರಾಜರಂತಹ ಉಚ್ಚ ಕೋಟಿಯ ಸಂತರಿಂದ ಪ್ರತಿದಿನ ನನಗಾಗಿ ಆಧ್ಯಾತ್ಮಿಕ ಸ್ತರದ ಉಪಾಯಗಳನ್ನು ಮಾಡಲಾಗುತ್ತಿತ್ತು. ಅವರು ಕೇವಲ ನನಗಾಗಿ ಕೆಲವು ತಿಂಗಳುಗಳ ಕಾಲ ಪ್ರತ್ಯಕ್ಷ ಉಪಾಯಗಳನ್ನು ಮಾಡದಿದ್ದರೂ, ಕಾಲಕಾಲಕ್ಕೆ ನನಗೆ ಮಂತ್ರಜಪವನ್ನು ನೀಡಿ ನನ್ನ ನೋವನ್ನು ಸಹಿಸಿಕೊಳ್ಳುವಂತೆ ಮಾಡಲು ಪ್ರಯತ್ನಿಸಿದರು. ಈ ಅವಧಿಯಲ್ಲಿ ನನಗೆ ಅವರ ಅಪಾರ ಪ್ರೀತಿ ಲಭಿಸಿತು. ಈ ಬಗ್ಗೆ ಅವರ ಚರಣಗಳಲ್ಲಿ ಎಷ್ಟು ಕೃತಜ್ಞತೆ ವ್ಯಕ್ತಪಡಿಸಿದರೂ ಕಡಿಮೆಯೇ ಆಗಿದೆ. ‘ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಪರಾತ್ಪರ ಗುರು ಪಾಂಡೆ ಮಹಾರಾಜರಂತಹ ಮಹಾನ ಸಂತರ ಸತ್ಸಂಗ ನಿರಂತರ ಸಿಗುವುದು’ ಇದು ಸಚ್ಚಿದಾನಂದ ಪರಬ್ರಹ್ಮ ಗುರುದೇವರಿಗೆ ನನ್ನ ಮೇಲಿರುವ ಅಪಾರ ಕೃಪೆಯೇ ಆಗಿದೆ.
ಏ. ನನ್ನ ಶಾರೀರಿಕ ತೊಂದರೆಯ ತೀವ್ರತೆಯನ್ನು ಸಹಿಸಿ ಕೊಳ್ಳುವಂತೆ ಮಾಡಲು ಆಶ್ರಮದ ವೈದ್ಯರ ಮೂಲಕ ನನಗೆ ಔಷಧೋಪಚಾರವು ದೊರೆತವು, ದೇಹದ ಮಸಾಜ್ ಮಾಡಲು ಸಾಧಕರಿಗೆ ಅಂತಹ ಶಕ್ತಿ ಮತ್ತು ಬುದ್ಧಿಯನ್ನು ನೀಡಿ ಪ್ರತಿದಿನ ಮಸಾಜ್ ಮಾಡುವ ಸೌಕರ್ಯವನ್ನು ಆಶ್ರಮದಲ್ಲಿಯೇ ಒದಗಿಸಲಾಯಿತು.
ಐ. ಪ್ರತಿದಿನ ಚೈತನ್ಯ ವಾಹಿನಿಯ ಸೇವೆ ಮಾಡುವಾಗ ಪ್ರತಿವಾರ ಒಂದು ಲೇಖನವನ್ನು ಬರೆಯಬೇಕಾಗಿತ್ತು. ಅದಕ್ಕಾಗಿ ನನಗೆ ಒಬ್ಬ ಸಾಧಕರ ಸಹಾಯ ಸಿಕ್ಕಿತು. ನಾನು ಮಲಗಿಕೊಂಡು ಏನು ಹೇಳುತ್ತೇನೋ, ಅವರು ಅದನ್ನು ಬರೆದುಕೊಂಡು ಕಂಪ್ಯೂಟರ್‌ನಲ್ಲಿ ಲೇಖನ ತಯಾರಿಸುತ್ತಿದ್ದರು. ಈ ರೀತಿ ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಈ ಜೀವದಿಂದ ಶೇ. ೫೦ ಕ್ಕಿಂತ ಹೆಚ್ಚು ಲೇಖನಗಳನ್ನು ಬರೆಸಿಕೊಂಡರು.
೩. ಅನಾರೋಗ್ಯದಿಂದ ಬಳಲುತ್ತಿರುವಾಗ ಸೇವೆ ಮಾಡಲು ತಪ್ಪಿಸಿಕೊಳ್ಳುವ ಸಾಧಕರೇ, ಮುಂದಿನ ದೃಷ್ಟಿಕೋನವನ್ನು ಗಮನದಲ್ಲಿಡಿ !
ಇದೆಲ್ಲವನ್ನು ಬರೆಯುವ ಉದ್ದೇಶವೆಂದರೆ, ಕೆಲವು ಸಾಧಕರು ಅನಾರೋಗ್ಯ ಪೀಡಿತರಾದರೆ ಸೇವೆ ಮಾಡುವುದನ್ನು ತಪ್ಪಿಸುತ್ತಾರೆ. ಅವರು ಮುಂದಿನ ದೃಷ್ಟಿಕೋನಗಳನ್ನು ಗಮನದಲ್ಲಿಡಬೇಕು:
೩ ಅ. ನಮಗೆ ಬರುವ ರೋಗಗಳು ನಮ್ಮ ಪ್ರಾರಬ್ಧಕ್ಕನುಸಾರ ಇರುತ್ತವೆ ! : ನಮಗೆ ಬರುವ ಸಣ್ಣಪುಟ್ಟ ಕಾಯಿಲೆಗಳು ಅಥವಾ ದೀರ್ಘಕಾಲದ ಅನಾರೋಗ್ಯವು ನಮ್ಮ ಪ್ರಾರಬ್ಧಕ್ಕನುಸಾರ ಬರುತ್ತಿರುತ್ತವೆ. ‘ದೀರ್ಘಕಾಲದ ಕಾಯಿಲೆಗಳಲ್ಲಿ ನಾವು ಮಲಗಿರ ಬೇಕಾಗುತ್ತದೆ ಅಥವಾ ಯಾವುದೇ ಸೇವೆಯನ್ನು ಮಾಡಲು ಆಗುವುದಿಲ್ಲ’ ಎಂದು ನಮಗೆ ಅನಿಸುತ್ತದೆ. ಇಂತಹ ಅಥವಾ ವಯಸ್ಸಿಗೆ ಅನುಗುಣವಾಗಿ ಬರುವ ಕಾಯಿಲೆಗಳೆಲ್ಲವೂ ನಮ್ಮ ಪ್ರಾರಬ್ಧದ ಭಾಗವಾಗಿರುತ್ತದೆ.
೩ ಆ. ತೀವ್ರ ಪ್ರಾರಬ್ಧ ಸಹನೀಯವಾಗಲು ತೀವ್ರ ಸಾಧನೆ ಮತ್ತು ಅದರೊಂದಿಗೆ ಗುರುಗಳ ಕೃಪೆ ಆವಶ್ಯಕ ! : ಅಧ್ಯಾತ್ಮಶಾಸ್ತ್ರದ ಪ್ರಕಾರ ಪ್ರಾರಬ್ಧವು ಎಷ್ಟು ತೀವ್ರವೋ, ಅಷ್ಟು ಅದು ಸಹನೀಯವಾಗಲು ಅಥವಾ ನಾಶ ಮಾಡಲು ತೀವ್ರ ಸಾಧನೆ ಮಾಡಬೇಕಾಗುತ್ತದೆ. ಅದರೊಂದಿಗೆ ನಮ್ಮ ಮೇಲೆ ಗುರುಗಳ ಕೃಪೆ ಇರುವುದು ಆವಶ್ಯಕವಾಗಿರುತ್ತದೆ; ಇಲ್ಲದಿದ್ದರೆ ಪ್ರಾರಬ್ಧದ ತೀವ್ರ ಸಂಕಷ್ಟಗಳನ್ನು ನಾವು ಸಹಿಸಬೇಕಾಗಬಹುದು.
೩ ಇ. ಕಾಯಿಲೆಯ ಬಗ್ಗೆ ವಿಚಾರ ಮಾಡುವುದಕ್ಕಿಂತ ದೇವರ ಅನುಸಂಧಾನದಲ್ಲಿ ಅಥವಾ ಸೇವೆಯಲ್ಲಿರುವುದು ಆವಶ್ಯಕವಾಗಿದೆ ! :
ತೀವ್ರ ರೋಗದಿಂದ ಬಳಲುತ್ತಿರುವ ವ್ಯಕ್ತಿಯ ಮನಸ್ಸಿನಲ್ಲಿ ತನ್ನ ಕಾಯಿಲೆಯ ಬಗ್ಗೆ ವಿಚಾರಗಳು ನಿರಂತರ ಬರುತ್ತಿರುತ್ತವೆ, ಅಂದರೆ ಆ ವ್ಯಕ್ತಿಯು ದೇಹದ ದೃಷ್ಟಿಯಿಂದ ನೋಡುತ್ತಾನೆ ಮತ್ತು ದುಃಖಿತನಾಗುತ್ತಾನೆ. ಅದರ ಬದಲು ದೇವರ ಅನುಸಂಧಾನದಲ್ಲಿ ಅಥವಾ ಸೇವೆಯಲ್ಲಿ ಇದ್ದರೆ, ಆ ವ್ಯಕ್ತಿಗೆ ಆ ಸ್ಥಿತಿಯಲ್ಲಿಯೂ ಆನಂದ ಸಿಗಬಹುದು.
೪. ಸದ್ಗುರು ರಾಜೇಂದ್ರ ಶಿಂದೆ ಇವರ ಜಾತಕದಲ್ಲಿ ತೀವ್ರ ದೇಹಪ್ರಾರಬ್ಧವನ್ನು ತೋರಿಸುವ ಯೋಗಗಳು ಇರುವುದು
ನಾನು ವಿಶ್ರಾಂತಿ ತೆಗೆದುಕೊಳ್ಳದೆ ಪ್ರಸಾರ ಸೇವೆಯನ್ನು ಮಾಡುತ್ತಿದ್ದೇನೆ, ಆದ್ದರಿಂದ ನನ್ನ ಸ್ಥಿತಿ ಹೀಗಾಗಿದೆ ಎಂದು ಕೆಲವರಿಗೆ ಅನಿಸುತ್ತಿತ್ತು. ನನ್ನ ಜಾತಕದಲ್ಲಿ ‘ಶನಿ ಮತ್ತು ಕೇತು ಈ ಗ್ರಹಗಳ ಸಂಯೋಗ ಇದ್ದು, ಶನಿ ಮತ್ತು ಕೇತು ಇವುಗಳ ರವಿ ಮತ್ತು ಮಂಗಳ ಈ ಗ್ರಹಗಳೊಂದಿಗೆ ‘ಷಡಾಷ್ಟಕಯೋಗ’ (ಅಶುಭಯೋಗ) ಇದೆ’, ಈ ಯೋಗವು ತೀವ್ರ ದೇಹಪ್ರಾರಬ್ಧವನ್ನು ತೋರಿಸುತ್ತದೆ. ಆದ್ದರಿಂದ ‘ಈ ತೊಂದರೆಗಳು ಬರುವುದು’ ಇದು ನನ್ನ ಪ್ರಾರಬ್ಧದ ಒಂದು ಭಾಗವಾಗಿದೆ.
೫. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನನ್ನ ತೀವ್ರ ಪ್ರಾರಬ್ಧದಲ್ಲಿಯೂ ಕಠಿಣ ಸಾಧನೆಯನ್ನು ಮಾಡಿಸಿಕೊಂಡಿದ್ದರಿಂದ ಕೇವಲ ೬ ವರ್ಷಗಳಲ್ಲಿ ಸಂತ ಪದವಿಯಿಂದ ಸದ್ಗುರು ಪದವಿಯಲ್ಲಿ ವಿರಾಜಮಾನ ಮಾಡುವುದು
೫ ಅ. ಪ್ರತಿಕೂಲ ಪರಿಸ್ಥಿತಿಯಲ್ಲಿ ಸಾಧನೆ ವೇಗವಾಗಿ ಆಗುವುದು : ನಾನು ಈ ಅವಧಿಯಲ್ಲಿ ‘ಸಾಧನೆ ಮಾಡಲು ಪರಿಸ್ಥಿತಿ ಎಷ್ಟು ಪ್ರತಿಕೂಲವೋ, ಅಷ್ಟೇ ಹೆಚ್ಚು ದೇವರ ಸಹಾಯ ಲಭಿಸಿ ಸಾಧನೆ ವೇಗವಾಗಿ ಆಗುತ್ತದೆ’ ಎಂಬ ಅನುಭೂತಿಯನ್ನು ಪಡೆದೆ.
೫ ಆ. ತೀವ್ರ ಪ್ರಾರಬ್ಧದಲ್ಲಿ ಕಠಿಣ ಸಾಧನೆಯನ್ನು ಮಾಡಿಸಿಕೊಂಡು ಸದ್ಗುರು ಪದವಿಯಲ್ಲಿ ವಿರಾಜಮಾನ ಮಾಡುವುದು : ದೈಹಿಕ ಅಸ್ವಸ್ಥತೆ ಇರುವಾಗ ಸಚ್ಚಿದಾನಂದ ಪರಬ್ರಹ್ಮ ಗುರುದೇವರು ನನ್ನಿಂದ ಮೇಲಿನಂತೆ ಕಠಿಣ ಸಾಧನೆಯನ್ನು ಮಾಡಿಸಿಕೊಂಡರು. ಆದುದರಿಂದ ಸಂತನಾದ ಕೇವಲ ೬ ವರ್ಷಗಳಲ್ಲಿ, ಅಂದರೆ ಜುಲೈ ೨೦೧೬ ರಲ್ಲಿ ಅವರು ನನ್ನನ್ನು ಸದ್ಗುರು ಪದವಿಯಲ್ಲಿ ವಿರಾಜಮಾನಗೊಳಿಸಿದರು.
೬. ಕೃತಜ್ಞತೆ
ನನ್ನ ಶಾರೀರಿಕ ಸಾಮರ್ಥ್ಯ ತುಂಬಾ ಕಡಿಮೆಯಾದ ಕಾರಣ ದಿನವಿಡೀ ನನ್ನ ಶರೀರ ತುಂಬಾ ನೋಯುತ್ತಿತ್ತು. ನನಗೆ ಆ ನೋವನ್ನು ಸಹಿಸುವುದು ಅಸಾಧ್ಯವಾಗಿತ್ತು. ಆಗ ಸಚ್ಚಿದಾನಂದ ಪರಬ್ರಹ್ಮ ಗುರುದೇವರು ನನಗೆ ದಿನವಿಡೀ ಸೇವೆಯನ್ನು ನೀಡಿ ಆ ನೋವನ್ನು ನಿರ್ಲಕ್ಷಿಸಲು ಕಲಿಸಿದರು. ‘ನನ್ನ ನೋವು ತೀವ್ರವಾಗುತ್ತಾ ಹೋದಷ್ಟು, ಅವರು ನನಗೆ ಹೆಚ್ಚೆಚ್ಚು ಸೇವೆಗಳನ್ನು ನೀಡಿ ನನ್ನಿಂದ ಕಠಿಣ ಸಾಧನೆಯನ್ನು ಮಾಡಿಸಿಕೊಂಡರು. ಈ ಮೂಲಕ ಅವರು ನನ್ನ ಮೇಲೆ ಅನಂತ ಕೃಪೆ ಮಾಡಿ ನನ್ನ ಪ್ರಾರಬ್ಧವನ್ನು ತುಂಬಾ ಸಹಿಸುವಂತೆ ಮಾಡಿದರು, ಬಹುಶಃ ನಾಶ ಮಾಡಿದರು’, ಈ ಬಗ್ಗೆ ಅವರ ಚರಣಗಳಲ್ಲಿ ಎಷ್ಟು ಕೃತಜ್ಞತೆ ವ್ಯಕ್ತಪಡಿಸಿದರೂ ಕಡಿಮೆಯೇ ಆಗಿದೆ.
ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಬರೆಸಿಕೊಂಡ ಈ ಶಬ್ದಪುಷ್ಪಗಳನ್ನು ಕೃತಜ್ಞತಾಭಾವದಿಂದ ಅವರ ಚರಣಗಳಲ್ಲಿ ಅರ್ಪಿಸುತ್ತೇನೆ !
ಶ್ರೀಗುರುಚರಣಾರ್ಪಣಮಸ್ತು ಇದಂ ನ ಮಮ |’
– ಸದ್ಗುರು ರಾಜೇಂದ್ರ ಶಿಂದೆ, ಸನಾತನ ಆಶ್ರಮ, ದೇವದ, ಪನವೇಲ್. (೧೨.೯.೨೦೨೫)
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !