(ಮೌಲಾನಾ ಎಂದರೆ ಇಸ್ಲಾಂ ಧರ್ಮದ ವಿದ್ವಾಂಸ)

ಸೀಹೋರ್ (ಮಧ್ಯಪ್ರದೇಶ) – ಸೀಹೋರ್ ಜಿಲ್ಲೆಯ ಮದರಸಾವೊಂದರಲ್ಲಿ ಕುರಾನ್ ಜೊತೆಗೆ ಶ್ರೀಮದ್ಭಗವದ್ಗೀತೆಯ ಪಠಣವನ್ನು ಪ್ರಾರಂಭಿಸಲು ಸಲಹೆ ನೀಡಲಾಗಿತ್ತು. ಈ ಸಲಹೆಗೆ ಅಲ್ಲಿ ಸಮ್ಮತಿಯೂ ಸಿಕ್ಕಿದೆ; ಆದರೆ ಈಗ ಕಾಂಗ್ರೆಸ್ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ.
🕌📖 Sehore, Madhya Pradesh | Truth Exposed
✅ A madarsa in Sehore allows recitation of the Shrimad Bhagavad Gita to promote moral values & national harmony.
❌ Yet, Congress objects!
📖 On Republic Day, Sr IPS officer Raja Babu Singh explained the Gita’s values, encouraging… pic.twitter.com/oBT3b4FKBJ
— Sanatan Prabhat (@SanatanPrabhat) January 29, 2026
ಗಣರಾಜ್ಯೋತ್ಸವದಂದು ಭಾರತೀಯ ಪೊಲೀಸ್ ಸೇವೆಯ ಅಧಿಕಾರಿ ರಾಜಾ ಬಾಬು ಸಿಂಗ್ ಅವರು ‘ಇಸ್ಲಾಮಿಯಾ ಮದೀನಾ-ತುಲ್-ಉಲೂಮ್’ ಸಂಸ್ಥೆಯ ವಿದ್ಯಾರ್ಥಿಗಳಿಗೆ ಗೀತೆಯಲ್ಲಿನ ಕರ್ಮಯೋಗ ಮತ್ತು ನೈತಿಕ ಮೌಲ್ಯಗಳ ಮಹತ್ವವನ್ನು ವಿವರಿಸಿದರು. ಈ ಬೋಧನೆಯಿಂದ ಸಕಾರಾತ್ಮಕ ಚಿಂತನೆ ಮತ್ತು ಜವಾಬ್ದಾರಿಯುತ ನಾಗರಿಕತೆಯ ಪ್ರಜ್ಞೆ ಮೂಡುತ್ತದೆ ಎಂದು ಅವರು ಹೇಳಿದರು.

ಗೀತಾ ಬೋಧನೆಗೆ ಮದರಸಾ ಸಂಚಾಲಕರ ಸಮ್ಮತಿ
ಪೊಲೀಸ್ ಅಧಿಕಾರಿಯ ಸಲಹೆಯ ಕುರಿತು ಮದರಸಾದ ಸಂಚಾಲಕ ಅಮೀನ್ ಉಲ್ಲಾ ಅವರು ಮಾತನಾಡುತ್ತಾ, “ಯಾವ ಗ್ರಂಥವು ಸಮಾಜ ಮತ್ತು ದೇಶದ ಪ್ರಗತಿಗೆ ಸಹಾಯ ಮಾಡುತ್ತದೆಯೋ ಮತ್ತು ಸಕಾರಾತ್ಮಕ ಸಂದೇಶವನ್ನು ನೀಡುತ್ತದೆಯೋ, ಅದನ್ನು ಓದುವಲ್ಲಿ ಯಾವುದೇ ತೊಂದರೆಯಿಲ್ಲ” ಎಂದು ಹೇಳಿದರು. ಮೊದಲು ತಾವೇ ಗೀತೆಯನ್ನು ಓದಿ, ನಂತರ ವಿದ್ಯಾರ್ಥಿಗಳಿಗೆ ಅದರ ಬೋಧನೆಯನ್ನು ನೀಡಲು ಸಿದ್ಧರಿರುವುದಾಗಿ ಅವರು ತಿಳಿಸಿದರು. ರಾಜಾ ಬಾಬು ಸಿಂಗ್ ಅವರ ಈ ಸಲಹೆಗೆ ಬಿಜೆಪಿ ಸ್ಥಳೀಯ ಶಾಸಕ ರಾಮೇಶ್ವರ ಶರ್ಮಾ ಬೆಂಬಲ ನೀಡಿದ್ದಾರೆ. “ಮದರಸಾದಲ್ಲಿ ಹಿಂದೂ ವಿದ್ಯಾರ್ಥಿಗಳೂ ಶಿಕ್ಷಣ ಪಡೆಯುತ್ತಿದ್ದಾರೆ ಮತ್ತು ಅವರು ಕುರಾನ್ ಓದಬಲ್ಲರು ಎಂದಾದರೆ, ಎಲ್ಲಾ ವಿದ್ಯಾರ್ಥಿಗಳು ಗೀತೆಯನ್ನು ಏಕೆ ಓದಬಾರದು?” ಎಂದು ಅವರು ಪ್ರಶ್ನಿಸಿದರು.
‘ಮದರಸಾದ ಮೌಲಾನಾಗಳಿಗೆ ಜ್ಞಾನ ನೀಡುವ ಅಗತ್ಯವಿಲ್ಲ!’ – ಕಾಂಗ್ರೆಸ್ ನಾಯಕ ಅಬ್ಬಾಸ್ ಹಫೀಜ್
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕ ಅಬ್ಬಾಸ್ ಹಫೀಜ್, ಮದರಸಾಗಳಲ್ಲಿ ಶಿಕ್ಷಣ ನೀಡುವ ಕೆಲಸವನ್ನು ಮೌಲಾನಾಗಳು ಸರಿಯಾಗಿ ಮಾಡುತ್ತಿದ್ದಾರೆ, ಅವರಿಗೆ ಜ್ಞಾನ ನೀಡುವ ಆವಶ್ಯಕತೆಯಿಲ್ಲ ಎಂದು ಕಿಡಿಕಾರಿದ್ದಾರೆ. ಪೊಲೀಸ್ ಅಧಿಕಾರಿಗಳು ಕಾನೂನು ಮತ್ತು ಸುವ್ಯವಸ್ಥೆಯನ್ನು ಸುಧಾರಿಸುವುದರ ಕಡೆಗೆ ಗಮನ ಹರಿಸಲಿ; ಪ್ರದೇಶದಲ್ಲಿ ಲೂಟಿ ಮತ್ತು ಅಪರಾಧಗಳು ಹೆಚ್ಚಾಗಿವೆ, ಅದನ್ನು ಕಡಿಮೆ ಮಾಡುವ ಬಗ್ಗೆ ಯೋಚಿಸಲಿ ಎಂದು ಹಫೀಜ್ ಟೀಕಿಸಿದರು. (ದೇಶದಲ್ಲಿ ಅಪರಾಧ ಮತ್ತು ಲೂಟಿ ಹೆಚ್ಚಾಗಲು ಅಪರಾಧ ಪ್ರವೃತ್ತಿಯ ಕೆಲವು ಮುಸ್ಲಿಮರೂ ಕಾರಣವಾಗಿದ್ದಾರೆ. ಜಿಹಾದಿ ಭಯೋತ್ಪಾದಕರು ಮದರಸಾಗಳಿಂದಲೇ ಹುಟ್ಟುತ್ತಿದ್ದಾರೆ ಎಂಬ ಚಿತ್ರಣವಿದೆ. ಇಂತಹ ಮದರಸಾಗಳಲ್ಲಿ ಗೀತೆಯ ಬೋಧನೆ ನೀಡಿದರೆ, ಅದರ ಪರಿಣಾಮವಾಗಿ ದೇಶದ ಕಾನೂನು ಮತ್ತು ಸುವ್ಯವಸ್ಥೆ ಸುಧಾರಿಸಲು ಸಹಾಯವಾಗುತ್ತದೆ! – ಸಂಪಾದಕರು).
ಸಂಪಾದಕೀಯ ನಿಲುವುಭಾರತದ ವಿಭಜನೆಗೆ ಕಾಂಗ್ರೆಸ್ ಕಾರಣ ಹಾಗೂ ಇಂದು ದೇಶದಲ್ಲಿ ಎರಡನೇ ವಿಭಜನೆಯಂತಹ ಪರಿಸ್ಥಿತಿ ಕಾಂಗ್ರೆಸ್‌ನಿಂದಲೇ ನಿರ್ಮಾಣವಾಗಿದೆ. ಆದ್ದರಿಂದ ಭಾರತದ ಹಿತದೃಷ್ಟಿಯಿಂದ ‘ಕಾಂಗ್ರೆಸ್ ಮುಕ್ತ ಭಾರತ’ವಾಗುವುದು ಎಷ್ಟು ಅಗತ್ಯ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ! |
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ