ಕರ್ಪೂರದ ಲಾಭಗಳು

ಕರ್ಪೂರವನ್ನು ಬಹಳಷ್ಟು ಸಲ ಪೂಜೆ ಮಾಡುವಾಗ ಅಥವಾ ಹವನ ಮಾಡುವಾಗ ಬಳಸಲಾಗುತ್ತದೆ; ಆದರೆ ನಮಗಾಗಿ ಒಂದು ಚಿಟಿಕೆಯಷ್ಟು ಕರ್ಪೂರವು ತುಂಬಾ ಲಾಭದಾಯಕವಾಗಿದೆ. ಕರ್ಪೂರದಲ್ಲಿ ಅನೇಕ ಔಷಧಿ ಗುಣಗಳಿವೆ, ಅದರ ಬಗ್ಗೆ ನಮಗೆ ಗೊತ್ತಿರುವುದಿಲ್ಲ. ಕರ್ಪೂರವು ‘ಆಂಟಿ-ಬ್ಯಾಕ್ಟೇರಿಯಲ್’ (ಜೀವಾಣುರೋಧಕ) ಗುಣಗಳಿಂದ ತುಂಬಿದೆ. ನೈಸರ್ಗಿಕ ಕರ್ಪೂರವು ಅನೇಕ ಸಮಸ್ಯೆಗಳನ್ನು ಪರಿಹರಿಸುತ್ತದೆ. ಇಂತಹ ಕರ್ಪೂರವನ್ನು ಯಾವ ಸಮಸ್ಯೆಗಳನ್ನು ಪರಿಹರಿಸಲು ಉಪಯೋಗಿಸಲಾಗುತ್ತದೆ, ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ಕೊಡುತ್ತಿದ್ದೇವೆ.

೧. ಶೀತ ಮತ್ತು ಕೆಮ್ಮಿಗೆ ಲಾಭದಾಯಕ 

ಶೀತ ಮತ್ತು ಕೆಮ್ಮು ಆಗಿದ್ದರೆ ಕರ್ಪೂರವು ತುಂಬಾ ಲಾಭದಾಯಕವಾಗಿದೆ. ಶೀತ ಅಥವಾ ಕೆಮ್ಮು ಇದ್ದರೆ ಬೆಚ್ಚಗಿನ ಸಾಸಿವೆ ಎಣ್ಣೆಯಲ್ಲಿ ಕರ್ಪೂರವನ್ನು ಸೇರಿಸಿ ಮಸಾಜ್ ಮಾಡ ಬೇಕು. ಕರ್ಪೂರವನ್ನು ಬಿಸಿ ನೀರಿನಲ್ಲಿ ಹಾಕಿ ಆವಿಯನ್ನು ತೆಗೆದು ಕೊಂಡರೆ ಕಟ್ಟಿಕೊಂಡ ಮೂಗು ತೆರೆಯುತ್ತದೆ ಮತ್ತು ಶೀತದಿಂದ ಆರಾಮ ಸಿಗುತ್ತದೆ.

೨. ನೋವಿಗೆ ಪರಿಹಾರ

ಕಾಲು ನೋವು ಮತ್ತು ಕಾಲಿಗೆ ಬಾವು ಬರುವ ಸಮಸ್ಯೆಯಿದ್ದರೆ ಎಣ್ಣೆಯಲ್ಲಿ ಕರ್ಪೂರವನ್ನು ಸೇರಿಸಿ ಮಾಲಿಶ್ ಮಾಡುವುದರಿಂದ ನೆಮ್ಮದಿ ಸಿಗುತ್ತದೆ. ದಣಿವು ಅನಿಸಿದರೆ ಎಳ್ಳು ಅಥವಾ ಸಾಸಿವೆ ಎಣ್ಣೆಯಲ್ಲಿ ಕರ್ಪೂರವನ್ನು ಸೇರಿಸಿ ಶರೀರಕ್ಕೆ ಮಾಲಿಶ್ ಮಾಡಬೇಕು.

೩. ಆರೋಗ್ಯಕರ ಕೂದಲಿಗಾಗಿ ಉಪಯುಕ್ತ 

ಕರ್ಪೂರವು ಕೂದಲುಗಳಲ್ಲಿನ ಹೊಟ್ಟು, ಶುಷ್ಕತೆ, ಕೂದಲು ಉದುರುವುದು ಇಂತಹ ಸಮಸ್ಯೆಗಳನ್ನು ದೂರಗೊಳಿಸುತ್ತದೆ. ಕೊಬ್ಬರಿಎಣ್ಣೆಯಲ್ಲಿ ಕರ್ಪೂರವನ್ನು ಸೇರಿಸಿ ಹಚ್ಚುವುದರಿಂದ ಕೂದಲುಗಳು ಉದುರುವುದು ನಿಲ್ಲುತ್ತದೆ ಮತ್ತು ಕೂದಲುಗಳು ಹೊಳೆಯುತ್ತವೆ. ದಪ್ಪ ಮತ್ತು ಉದ್ದ ಕೂದಲುಗಳು ಬೇಕೆನಿಸಿದರೆ, ತೆಂಗಿನಎಣ್ಣೆಯಲ್ಲಿ ಕರ್ಪೂರವನ್ನು ಸೇರಿಸಿ ಹಚ್ಚುವುದರಿಂದ ಲಾಭವಾಗುತ್ತದೆ.

೪. ತ್ವಚೆಗಾಗಿ ಲಾಭದಾಯಕ 

ಕರ್ಪೂರದಲ್ಲಿ ಜೀವಾಣುವಿರೋಧಕ ಗುಣಗಳಿರುತ್ತವೆ. ಕರ್ಪೂರವನ್ನು ಬಳಸುವುದರಿಂದ ಮೊಡವೆಗಳು ದೂರವಾಗುತ್ತವೆ. ಇದು ‘ಬೆಕ್ಟೇರಿಯಾ’ಗಳನ್ನು ದೂರವಿಡುತ್ತದೆ, ಅಂದರೆ ಮೊಡವೆಗಳ ಬೆಳವಣಿಗೆ ಆಗುವುದಿಲ್ಲ.

೫. ಕಲೆಗಳು ದೂರವಾಗುತ್ತವೆ !

ಯಾರಿಗಾದರೂ ಮುಖದ ಮೇಲೆ ಮೊಡವೆಗಳ-ಉಗುರುಗಳ ಕಲೆಗಳಿದ್ದರೆ, ಅದನ್ನು ಕರ್ಪೂರವನ್ನು ಹಚ್ಚಿ ತೆಗೆಯಬಹುದು. ತೆಂಗಿನ ಎಣ್ಣೆಯಲ್ಲಿ ಕರ್ಪೂರವನ್ನು ಸೇರಿಸಿ ಮುಖಕ್ಕೆ ಹಚ್ಚಬೇಕು. ಅದರಿಂದ ಕಲೆಗಳು ಕಡಿಮೆಯಾಗುತ್ತವೆ ಮತ್ತು ತ್ವಚೆ ನುಣುಪಾಗುತ್ತದೆ.

೬. ತಲೆನೋವಿಗೆ ಸುಖಕರ

ಕರ್ಪೂರವುತುಂಬಾ ತಂಪು ನೀಡುತ್ತದೆ. ತಲೆನೋವಿನ ತೊಂದರೆಯಿದ್ದರೆ ಅರ್ಜುನ ವನಸ್ಪತಿಯ ತೊಗಟು, ಬಿಳಿ ಗಂಧ ಮತ್ತು ಶುಂಠಿಯಲ್ಲಿ ಕರ್ಪೂರವನ್ನು ಸೇರಿಸಿ ತಲೆಗೆ ಹಚ್ಚುವುದರಿಂದ ತಲೆನೋವು ಕಡಿಮೆಯಾಗಿ ನೆಮ್ಮದಿ ಸಿಗುತ್ತದೆ.

(ಆಧಾರ : ದೈನಿಕ ‘ಮಹಾರಾಷ್ಟ್ರ’)

(ಕರ್ಪೂರದಿಂದ ವಿವಿಧ ಲಾಭಗಳಾಗುತ್ತಿದ್ದರೂ, ಪ್ರಕೃತಿಗನುಸಾರ ವೈದ್ಯರನ್ನು ಕೇಳಿಯೇ ಅದನ್ನು ಉಪಯೋಗಿಸಬೇಕು. – ಸಂಪಾದಕರು)