ಆರೋಗ್ಯಕರ ಜೀವನಕ್ಕಾಗಿ ವ್ಯಾಯಾಮ – ೩೫

ಆಧುನಿಕ ಜೀವನಶೈಲಿಯಿಂದ ಉಂಟಾಗುವ ದೈಹಿಕ ಸಮಸ್ಯೆಗಳಿಗೆ ‘ವ್ಯಾಯಾಮ’ ಒಂದು ಪರಿಣಾಮಕಾರಿ ಪರಿಹಾರವಾಗಿದೆ. ಪ್ರಾಚೀನ ಗ್ರಂಥಗಳಲ್ಲಿನ ವ್ಯಾಯಾಮದ ತತ್ತ್ವಗಳು ಇಂದಿಗೂ ಅಷ್ಟೇ ಉಪಯುಕ್ತವಾಗಿದ್ದು, ನಾವು ಅವುಗಳಿಂದ ಪ್ರೇರಣೆ ಪಡೆಯಬಹುದು. ಈ ಲೇಖನಮಾಲೆಯಲ್ಲಿ ನಾವು ವ್ಯಾಯಾಮದ ಮಹತ್ವ, ವ್ಯಾಯಾಮದ ಬಗ್ಗೆ ಇರುವ ಸಂದೇಹ ನಿವಾರಣೆ, ‘ಎರ್ಗೊನಾಮಿಕ್ಸ್’ ತತ್ವ ಮತ್ತು ಕಾಯಿಲೆಗಳಿಗೆ ಅನುಗುಣವಾದ ಸರಿಯಾದ ವ್ಯಾಯಾಮದ ಮಾಹಿತಿಯನ್ನು ನೀಡುತ್ತೇವೆ.
ವ್ಯಾಯಾಮದ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಈ ಪಯಣವು ಸ್ಫೂರ್ತಿದಾಯಕವಾಗಲಿದೆ. ‘ಉತ್ತಮ ರೀತಿಯಲ್ಲಿ ಜೀರ್ಣವಾಗಲು ವ್ಯಾಯಾಮವು ಹೇಗೆ ಸಹಾಯ ಮಾಡುತ್ತದೆ ?’, ಎಂಬುದನ್ನು ಈ ಲೇಖನದಲ್ಲಿ ನೋಡೋಣ. (ಭಾಗ ೨)
೬. ವ್ಯಾಯಾಮ ಮಾಡುವ ವ್ಯಕ್ತಿಗಳಲ್ಲಿ ಊರಿಯುತ-ಪ್ರತಿಬಂಧಕ ಬೆಕ್ಟೆರಿಯಾಗಳ (‘Roseburia’ ಮತ್ತು Faecalibacterium’) ಮಟ್ಟವು ಅಧಿಕವಾಗಿರುತ್ತವೆ ಎಂದು ಸಂಶೋಧನೆಯಿಂದ ಕಂಡುಬಂದಿದೆ.
೭. ಊರ್ಜೆ ಮತ್ತು ಪುನರ್ನಿರ್ಮಿತಿ ಮಾಡುವುದು
ಕರುಳಿಗಳಿಗಾಗಿ ಅಗತ್ಯವಿರುವ ರಸಾಯನಗಳನ್ನು ನಿರ್ಮಾಣ ಮಾಡುವುದೊಂದಿಗೆ ಅಲ್ಲಿನ ಕೋಶಗಳಿಗೆ ಅಗತ್ಯವಿದ್ದಷ್ಟು ಊರ್ಜೆ ಯನ್ನು ನೀಡುವ ಕಾರ್ಯವನ್ನೂ ಈ ಸೂಕ್ಷ್ಮ ಜೀವಾಣುಗಳು ಮಾಡುತ್ತವೆ, ಹಾಗೆಯೇ ಆ ಕೋಶಗಳಿಗೆ ಹಾನಿಯಾಗಿದ್ದರೆ (ಗಾಯವಾಗಿದ್ದರೆ) ಅವುಗಳ ಪುನರ್ನಿರ್ಮಿತಿ ಮಾಡುವ ಕಾರ್ಯವನ್ನೂ ಮಾಡುತ್ತವೆ.
೮. ಹಾರ್ಮೋನ್ಸಗಳನ್ನು (Hormone) ಉತ್ಪಾದಿಸುವುದು
ಸೂಕ್ಷ್ಮ ಜೀವಾಣುಗಳಿಂದ ಕರುಳುಗಳಲ್ಲಿನ ಕೋಶಗಳಲ್ಲಿ ‘PYY ಮತ್ತು GLP-1’ ಹೆಸರಿನ ಹಾರ್ಮೋನ್ಸಗಳು ತಯಾರಾಗುತ್ತವೆ. ಈ ಹಾರ್ಮೋನ್ಸಗಳು ಮೆದುಳಿಗೆ ವಿವಿಧ ಸಂದೇಶಗಳನ್ನು ಕಳುಹಿಸುತ್ತವೆ. ಅವುಗಳ ಪರಿಣಾಮವು ನಮ್ಮ ಮನಸ್ಸಿನ ಸ್ಥಿತಿ, ಕಲಿಯುವ ಕ್ಷಮತೆ ಮತ್ತು ಸ್ಮರಣಶಕ್ತಿಯ ಮೇಲಾಗುತ್ತದೆ.

೯. ಸೂಕ್ಷ್ಮ ಜೀವಾಣುಗಳು ದೇಹದಲ್ಲಿನ ಜೀರ್ಣಕ್ರಿಯೆ (ಮೆಟಾಬಾಲಿಸಮ್) ಕ್ರಿಯೆ ಸುಧಾರಿಸಲು ಸಹಾಯ ಮಾಡುವುದು
ಸೂಕ್ಷ್ಮ ಜೀವಾಣುಗಳು ದೇಹದಲ್ಲಿನ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತವೆ, ಉದಾ. ಅದನ್ನು ಉತ್ಪತ್ತಿ ಮಾಡುತ್ತಿರುವ ‘ಪ್ರೊಪಿಯೋನೆಟ್’ ಎಂಬ ಹೆಸರಿನ ರಸಾಯನವು ಯಕೃತದಲ್ಲಿ (‘ಲಿವರ್’ನಲ್ಲಿ) ಸಕ್ಕರೆ (ಗ್ಲುಕೋಸ್) ತಯಾರಿಸುವುದು, ‘ಪ್ರೋಟಿನ್’ಅನ್ನು ತಯಾರಿಸುವುದು ಮತ್ತು ಕೊಬ್ಬು ಸಂಗ್ರಹಿಸುವುದಕ್ಕಾಗಿ ಉಪಯುಕ್ತವಾಗಿದೆ. ಆದ್ದರಿಂದ ಒಟ್ಟಿನಲ್ಲಿ ಶಾರೀರಿಕ ಸ್ಥಿತಿಯು ಸುಧಾರಿಸುತ್ತದೆ.
೧೦. ಕರುಳುಗಳಲ್ಲಿನ ರೋಗನಿರೋಧಕ ಶಕ್ತಿ ಹೆಚ್ಚುವುದು
ಸೂಕ್ಷ್ಮ ಜೀವಾಣುಗಳು ನಿರ್ಮಿಸಿದ ರಸಾಯನಗಳಿಂದ ಒಳ್ಳೆಯ ಜೀವಾಣುಗಳಿಗಾಗಿ (commensal bacteria) ) ವಾತಾವರಣವು ಉತ್ತಮವಾಗಿರುತ್ತದೆ ಮತ್ತು ಕೆಟ್ಟ ಜೀವಾಣುಗಳ ಬೆಳವಣಿಗೆಯ ಮೇಲೆ ನಿಯಂತ್ರಣವಿಡುತ್ತದೆ. ಈ ರೀತಿ ಕರುಳುಗಳಲ್ಲಿನ ರೋಗನಿರೋಧಕಶಕ್ತಿ ಹೆಚ್ಚಾಗತೊಡಗುತ್ತದೆ. ಮೇಲೆ ಹೇಳಿದಂತೆ ಸೂಕ್ಷ್ಮ ಜೀವಿಗಳು ಅನೇಕ ರೀತಿಯಲ್ಲಿ ವಿವಿಧ ಕಾರ್ಯಗಳನ್ನು ಮಾಡುತ್ತವೆ. ಸೂಕ್ಷ್ಮ ಜೀವಗಳಲ್ಲಿ ವೈವಿಧ್ಯತೆ ಇರುವುದು, ಆರೋಗ್ಯಕರ ಜೀವನದ ಲಕ್ಷಣವಾಗಿದೆ ಎಂದು ಪರಿಗಣಿಸಲಾಗುತ್ತದೆ. ನಿಯಮಿತ ಶಾರೀರಿಕ ಚಟುವಟಿಕೆಗಳಿಂದ ಸೂಕ್ಷ್ಮ ಜೀವಗಳ ವೈವಿಧ್ಯತೆ ಹೆಚ್ಚಾಗುತ್ತದೆ ಮತ್ತು ಇವುಗಳಿಂದ ವ್ಯಕ್ತಿಯು ಆರೋಗ್ಯಶಾಲಿಯಾಗುತ್ತಾನೆ.
೧೧. ಪಾಚಕ ರಸಗಳ ಸ್ರವಿಸುವಿಕೆ ಹೆಚ್ಚಾಗುವುದು
ವ್ಯಾಯಾಮದಿಂದ ದೇಹದ ಶಕ್ತಿ ಹೆಚ್ಚಾಗುತ್ತದೆ, ಉದಾ. ಬೆವರಿನ ಮೂಲಕ ನೀರು ಹೊರಗೆ ಬರುವುದರಿಂದ ಬಾಯಾರಿಕೆ ಹೆಚ್ಚಾಗುತ್ತದೆ. ನಿಯಂತ್ರಿತ ಶ್ರಮದಿಂದ (ಸಾಧ್ಯವಾದಷ್ಟು ವ್ಯಾಯಾಮ ಮಾಡುವುದರಿಂದ) ಹಸಿವು ಹೆಚ್ಚಾಗತೊಡಗುತ್ತದೆ. ಇದರಿಂದ ತನ್ನಿಂದತಾನೆ ದೇಹದಲ್ಲಿ ಪಾಚಕ ರಸಗಳ ಸ್ರವಿಸುವಿಕೆ ಹೆಚ್ಚಾಗಿ ಆಹಾರವು ಉತ್ತಮ ರೀತಿಯಲ್ಲಿ ಜೀರ್ಣವಾಗುತ್ತದೆ.
೧೨. ಆಹಾರದ ಚಲನಶೀಲತೆ ಹೆಚ್ಚಾಗುವುದು
ವ್ಯಾಯಾಮದಿಂದ ಆಹಾರ ಮುಂದಕ್ಕೆ ದೂಡಲ್ಪಡುತ್ತದೆ. ಇದರಿಂದ ಅದು ಉತ್ತಮ ರೀತಿಯಲ್ಲಿ ಜೀರ್ಣವಾಗುತ್ತದೆ. ಆಹಾರದ ಚಲನೆಯು ನಿಧಾನವಾದರೆ ಹಸಿವು ಕಡಿಮೆ ಆಗುವುದು, ಮಲಬದ್ಧತೆ ಮತ್ತು ಅಜೀರ್ಣ ಮುಂತಾದ ಸಮಸ್ಯೆಗಳು ಉದ್ಭವಿಸುತ್ತವೆ.
ಈ ರೀತಿ ಜೀರ್ಣದ ಸಂದರ್ಭದಲ್ಲಿ ವ್ಯಾಯಾಮದಿಂದ ಆಗುವ ವಿವಿಧ ಅಂಗಗಳ ಲಾಭವನ್ನು ಗಮನದಲ್ಲಿಟ್ಟುಕೊಂಡು ಪ್ರಕೃತಿ ಸುಧಾರಿಸಲು ನಿಯಮಿತವಾಗಿ ವ್ಯಾಯಾಮ ಮಾಡುವುದು ಆವಶ್ಯಕವಾಗಿದೆ.
– ಶ್ರೀ. ನಿಮಿಷ ಮ್ಹಾತ್ರೆ, ಭೌತಿಕೋಪಚಾರ ತಜ್ಞ, ಫೋಂಡಾ, ಗೋವಾ. (೭.೧೨.೨೦೨೪)
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಬಿಳಿ ಸೆರಗಿನ ಸಮಸ್ಯೆ (ಲ್ಯುಕೋರಿಯಾ) ಮತ್ತು ಆಯುರ್ವೇದ
ವ್ಯಾಯಾಮದಲ್ಲಿ ನೈಸರ್ಗಿಕ ಗುಣಗಳ ಮಹತ್ವ !
ಮಕ್ಕಳ ಅನಾರೋಗ್ಯದ ಬಗ್ಗೆ ವಹಿಸಬೇಕಾದ ಮುನ್ನೆಚ್ಚರಿಕೆಗಳು !
ಟ್ರೆಂಡ್ – ತೂಕ ಇಳಿಸುವ ಸೆಳೆತ ಮತ್ತು ನಾವು !
ಬೇಸಿಗೆಯಲ್ಲಿ ತೊಂದರೆಯಾಗಬಾರದೆಂದು ಮುಂದಿನ ಕಾಳಜಿ ವಹಿಸಿ !