
೩.೧.೨೦೨೬ ರಂದು ಮಧ್ಯಾಹ್ನ ೩.೩೦ ಗಂಟೆಗೆ ದಕ್ಷಿಣ ಕನ್ನಡದ ಶ್ರೀಮತಿ ಉಷಾ ಕಾಮತ ಇವರ ನಿಧನವಾಯಿತು. ಅವರ ಮಗಳು ಸೌ. ಪೂರ್ಣಿಮಾ ಪೈ ಅವರಿಗೆ ಅರಿವಾದ ತನ್ನ ತಾಯಿಯ ಗುಣವೈಶಿಷ್ಟ್ಯಗಳು ಮುಂದಿನಂತಿವೆ.
೧. ಸಾಧನೆಯ ಆರಂಭ ಮತ್ತು ಸೇವೆ
‘ಕರ್ನಾಟಕ ರಾಜ್ಯದಲ್ಲಿ ಸನಾತನ ಸಂಸ್ಥೆಯ ಪ್ರಸಾರದ ಕಾರ್ಯವು ದಕ್ಷಿಣ ಕನ್ನಡ ಜಿಲ್ಲೆಯಿಂದ ಆರಂಭವಾಯಿತು. ನವೆಂಬರ್-ಡಿಸೆಂಬರ್ ೧೯೯೬ ರ ಮಧ್ಯದಲ್ಲಿ ಗೋವಾದಿಂದ ಸನಾತನ ಸಂಸ್ಥೆಯ ಸಾಧಕರು ದಕ್ಷಿಣ ಕನ್ನಡಕ್ಕೆ ಬಂದಿದ್ದರು. ಆಗ ನನ್ನ ತಾಯಿ ಶ್ರೀಮತಿ ಉಷಾ ಕಾಮತ ಅವರು ಸಾಧನೆಯನ್ನು ಆರಂಭಿಸಿದರು. ನಮ್ಮ ಮನೆಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಬರುತ್ತಿದ್ದರು. ನಮ್ಮ ಮನೆಯಲ್ಲಿ ಸನಾತನದ ಮೊದಲನೆಯ ಸತ್ಸಂಗ ನಡೆಯಿತು. ಅಮ್ಮ ಮನೆಯನ್ನು ಆಶ್ರಮವನ್ನಾಗಿ ಪರಿವರ್ತಿಸಿದ್ದರು. ಅವರು ಸತತವಾಗಿ ನಾಮಜಪ ಮತ್ತು ಪ್ರಾರ್ಥನೆ ಮಾಡುತ್ತಿದ್ದರು ಮತ್ತು ಸತ್ಸಂಗಕ್ಕೂ ನಿಯಮಿತವಾಗಿ ಹೋಗುತ್ತಿದ್ದರು. ಅವರು ಗ್ರಂಥ ಪ್ರದರ್ಶನದ ಸೇವೆಯನ್ನೂ ಮಾಡುತ್ತಿದ್ದರು.
೨. ಅಮ್ಮ ಪ್ರತಿಯೊಂದು ಕೆಲಸ ತತ್ಪರತೆಯಿಂದ ಪೂರ್ಣ ಮಾಡುತ್ತಿದ್ದರು. ಅವರಿಗೆ ಗಿಡ-ಮರಗಳನ್ನು ಬೆಳಸುವುದರಲ್ಲಿ ಬಹಳ ಆಸಕ್ತಿ ಇತ್ತು.

೩. ಪ್ರೇಮಭಾವ
ಅಮ್ಮ ಎಲ್ಲ ಸಾಧಕರಿಗೆ ಬಹಳ ಪ್ರೀತಿಯಿಂದ ತಿಂಡಿ ಮತ್ತು ಊಟ ತಯಾರಿ ಮಾಡಿಕೊಡುತ್ತಿದ್ದರು. ಮನೆಗೆ ಬಂದ ಎಲ್ಲರ ಆದರಾತಿಥ್ಯವನ್ನು ಬಹಳ ಆನಂದದಿಂದ ಮಾಡುತ್ತಿದ್ದರು.
೪. ನಾವು ಅವರ ಹತ್ತಿರ ಇರುವಾಗ ನಮಗೆ ಅವರು ಬಹುದೊಡ್ಡ ಆಧಾರ ಅನಿಸುತ್ತಿತ್ತು.
೫. ತಾನು ಮಾಡಿದ ತಪ್ಪುಗಳನ್ನು ನಿರೀಕ್ಷಿಸಿ ‘ಆ ತಪ್ಪುಗಳು ಮತ್ತೆ ಆಗಬಾರದು ಎಂದು ಎಚ್ಚರ ವಹಿಸುತ್ತಿದ್ದರು’.
೬. ಇತರರ ವಿಚಾರ ಮಾಡುವುದು
ಅ. ತನ್ನ ಅನಾರೋಗ್ಯದಲ್ಲೂ ಅಮ್ಮ ಇತರರ ವಿಚಾರ ಮಾಡುತ್ತಿದ್ದರು. ನಾವೆಲ್ಲರೂ ಆರೋಗ್ಯವಾಗಿದ್ದೇವಲ್ಲ ? ನಾವು ಊಟ ಮಾಡಿದೆವಲ್ಲ ? ಎಂದು ಅವರು ಕೇಳುತ್ತಿದ್ದರು.
ಆ. ತನ್ನಿಂದ ‘ಯಾರಿಗೂ ತೊಂದರೆ ಆಗಬಾರದು’ ಆ ರೀತಿಯ ನಡೆ ನುಡಿ ಅಮ್ಮನದಿತ್ತು. ತನ್ನ ಮಾತಿನಿಂದ ಯಾರಿಗೂ ನೋವಾಗಬಾರದು ಎಂದು ಎಚ್ಚರಿಕೆ ವಹಿಸುತ್ತಿದ್ದರು.
೭. ಅನಾರೋಗ್ಯ ಹೆಚ್ಚಾದರೂ ಅವರ ಸಾಧನೆ ನಡೆದಿತ್ತು.
೨ ವರ್ಷಗಳ ಹಿಂದೆ ಅಮ್ಮ ಕುರ್ಚಿಯಿಂದ ಬಿದ್ದ ಕಾರಣ ಅವರು ಓಡಾಡುತ್ತಿರಲಿಲ್ಲ. ಅವರಿಗೆ ಓಡಾಡಲು ವೀಲ್ ಚೇರ್ (ಗಾಲಿಕುರ್ಚಿ) ಬೇಕಾಗುತ್ತಿತ್ತು. ಕಳೆದ ೩ ವರ್ಷಗಳಿಂದ ಅಮ್ಮನ ಶಾರೀರಿಕ ಕ್ಷಮತೆ ಕಡಿಮೆ ಆಗಿತ್ತು, ಆದರೂ ಅವರ ಸಾಧನೆ ನಡೆದಿತ್ತು. ಅವರು ಸತತವಾಗಿ ನಾಮಜಪ ಮಾಡುತ್ತಿದ್ದರು.
೮. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರಲ್ಲಿ ಶ್ರದ್ಧೆ
ಅಮ್ಮನಿಗೆ ಪ.ಪೂ. ಗುರುದೇವರಲ್ಲಿ ತುಂಬಾ ಶ್ರದ್ಧೆ ಇತ್ತು. ಅವರಲ್ಲಿ ‘ಪ.ಪೂ. ಗುರುದೇವರು ತನ್ನ ಜೊತೆಯಲ್ಲಿಯೇ ಇದ್ದಾರೆ’, ಎಂಬ ದೃಢ ಶ್ರದ್ಧೆ ಇತ್ತು. ಅವರು ಇಡೀ ದಿನ ಗುರುದೇವರ ಮುಂದೆ ಆತ್ಮನಿವೇದನೆ ಮಾಡಿ ಮನಸ್ಸಿನಲ್ಲಿ ಎಲ್ಲ ವಿಚಾರಗಳನ್ನು ಹೇಳುತ್ತಿದ್ದರು.
‘ಇಂತಹ ತಾಯಿಯನ್ನು ನಮಗೆ ನೀಡಿದ’ ಗುರುದೇವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು’ !
ಸೌ. ಪೂರ್ಣಿಮಾ ವೆಂಕಟೇಶ ಪೈ. (ದಿ. ಉಷಾ ಕಾಮತ ಇವರ ಮಗಳು) ಮಂಗಳೂರು (೧೧.೧.೨೦೨೬)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !