ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಕೊಲ್ಲುವ ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂಬುದಕ್ಕೆ ಮತ್ತೊಂದು ಉದಾಹರಣೆ!

ಢಾಕಾ (ಬಾಂಗ್ಲಾದೇಶ): ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆಗಳು ಮುಂದುವರಿಯುತ್ತಿರುವ ಬೆನ್ನಲ್ಲೇ, ಇದೀಗ ಜೈಲಿನಲ್ಲಿದ್ದ ಹಿಂದೂ ಗಾಯಕ ಪ್ರೊಲಯ ಚಾಕಿ ಎಂಬವರು ಯೋಗ್ಯ ಚಿಕಿತ್ಸೆ ಸಿಗದ ಕಾರಣ ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ. ಜನವರಿ 11ರ ರಾತ್ರಿ ರಾಜ್‌ಶಾಹಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಾಕಿ ಅವರು ಕೊನೆಯುಸಿರೆಳೆದರು.
ಅವರು ಪಾಬನಾ ಜಿಲ್ಲಾ ಕಾರಾಗೃಹದಲ್ಲಿದ್ದರು. ಜನವರಿ 9 ರಂದು ಹೃದಯಾಘಾತ ಸಂಭವಿಸಿದ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೊದಲು ಅವರನ್ನು ಪಾಬನಾ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ನಂತರ ರಾಜ್‌ಶಾಹಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ವರ್ಗಾಯಿಸಲಾಯಿತು. ಅವರಿಗೆ ತಕ್ಕ ಚಿಕಿತ್ಸೆ ನೀಡಿಲ್ಲ ಎಂದು ಅವರ ಕುಟುಂಬದವರು ಗಂಭೀರ ಆರೋಪ ಮಾಡಿದ್ದಾರೆ. ಪ್ರೊಲಯ ಚಾಕಿ ಅವರು ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಕಾರ್ಯದರ್ಶಿಯಾಗಿದ್ದರು. ಅವರನ್ನು ಡಿಸೆಂಬರ್ 16, 2025 ರಂದು ಅವರ ಮನೆಯಿಂದ ಬಂಧಿಸಲಾಗಿತ್ತು.
🚨 Bangladesh: Hindu Singer Dies in Jail
Hindu singer Prolay Chaki died in custody due to lack of medical treatment.
He was the district Cultural Secretary of Awami League and was lodged in Pabna District Jail.
Another chilling example of the targeted persecution of Hindus in… pic.twitter.com/2khgBqxk7x
— Sanatan Prabhat (@SanatanPrabhat) January 12, 2026
ಜೈಲು ಅಧೀಕ್ಷಕರಿಂದ ಆರೋಪ ನಿರಾಕರಣೆ!
ಪಾಬನಾ ಜಿಲ್ಲಾ ಕಾರಾಗೃಹದ ಅಧೀಕ್ಷಕ ಮೊಹಮ್ಮದ್ ಓಮರ್ ಫಾರೂಕ್ ಈ ಬಗ್ಗೆ ಮಾತನಾಡಿ, “ಪ್ರೊಲಯ ಚಾಕಿ ಅವರಿಗೆ ಮೊದಲೇ ಮಧುಮೇಹ ಸೇರಿದಂತೆ ಹಲವು ಕಾಯಿಲೆಗಳಿದ್ದವು. ಅವರ ಆರೋಗ್ಯ ಹದಗೆಡುತ್ತಿದ್ದಂತೆಯೇ ಚಿಕಿತ್ಸಾ ಪ್ರಕ್ರಿಯೆಯನ್ನು ಪ್ರಾರಂಭಿಸಲಾಯಿತು. ಯಾವುದೇ ವಿಳಂಬ ಮಾಡಲಾಗಿಲ್ಲ”.
ಆದರೆ ಚಾಕಿ ಅವರ ಪುತ್ರ ಮತ್ತು ಸಂಗೀತ ನಿರ್ದೇಶಕ ಸಾನಿ ಚಾಕಿ ಅವರು ಈ ಆರೋಪವನ್ನು ತಳ್ಳಿಹಾಕಿದ್ದಾರೆ. “ನನ್ನ ತಂದೆಯನ್ನು ಪಾಬನಾ ಜನರಲ್ ಆಸ್ಪತ್ರೆಗೆ ಕರೆದೊಯ್ದಾಗ ಅಲ್ಲಿ ಹೃದ್ರೋಗಕ್ಕೆ ಸಂಬಂಧಿಸಿದ ಯಾವುದೇ ಸೌಲಭ್ಯಗಳಿರಲಿಲ್ಲ. ಆದರೂ ಅವರನ್ನು ಅಲ್ಲೇ ಇರಿಸಲಾಗಿತ್ತು. ನಂತರ ಮತ್ತೆ ಜೈಲಿಗೆ ಕಳುಹಿಸಲಾಯಿತು ಮತ್ತು ಆ ಬಳಿಕ ರಾಜ್‌ಶಾಹಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು. ಈ ವಿಳಂಬದಿಂದಾಗಿಯೇ ಅವರ ಸ್ಥಿತಿ ಮತ್ತಷ್ಟು ಹದಗೆಟ್ಟಿತು” ಎಂದು ಅವರು ಆರೋಪಿಸಿದ್ದಾರೆ.
ಕಳೆದ ವರ್ಷ ಬಾಂಗ್ಲಾದೇಶದ ಜೈಲುಗಳಲ್ಲಿ ಒಟ್ಟು 107 ಜನರ ಸಾವು!
ಮಾನವ ಹಕ್ಕುಗಳ ಸಂಘಟನೆ ‘ಐನ್ ಓ ಸಲಿಶ್ ಕೇಂದ್ರ’ದ ಪ್ರಕಾರ, 2025 ರಲ್ಲಿ ಬಾಂಗ್ಲಾದೇಶದ ಜೈಲುಗಳಲ್ಲಿ ಒಟ್ಟು 107 ಜನರು ಸಾವನ್ನಪ್ಪಿದ್ದಾರೆ. 69 ವಿಚಾರಣಾಧೀನ ಕೈದಿಗಳು ಮತ್ತು 38 ಶಿಕ್ಷೆಗೊಳಗಾದ ಕೈದಿಗಳು ಮೃತ ಕೈದಿಗಳಾಗಿದ್ದಾರೆ. 2024 ರಲ್ಲಿ ಕಸ್ಟಡಿ ಸಾವುಗಳ ಸಂಖ್ಯೆ 65 ಎಂದು ವರದಿಯಾಗಿತ್ತು.
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಮುಂಬಯಿ ಮೇಲಿನ ೨೬/೧೧ ರ ಉಗ್ರ ದಾಳಿಯನ್ನು ಕಾಂಗ್ರೆಸ್ ಮತ್ತು ಐ.ಎಸ್.ಐ. ಒಟ್ಟಿಗೆ ಸೇರಿ ನಡೆಸಿದ್ದವು! : 26/11 Attack Claim
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ
ರಾಜಕೀಯ ಮಾಡಬೇಕೆಂದರೆ, ಸಮವಸ್ತ್ರ ಕಳಚಿ ಚುನಾವಣೆಯಲ್ಲಿ ಭಾಗವಹಿಸಿ! : Maulana Fazlur Rehman