ಜೈಶ್-ಎ-ಮಹಮ್ಮದ್ ಮುಖ್ಯಸ್ಥ ಮಸೂದ ಅಜಹರ್ ನ ಧ್ವನಿಸಂದೇಶ

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮಹಮ್ಮದ್ ನ ಮುಖ್ಯಸ್ಥ ಮೌಲಾನಾ ಮಸೂದ್ ಅಜಹರ್ ನ ಧ್ವನಿಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ‘ಈ ಸಂದೇಶವು ನಿಖರವಾಗಿ ಯಾವಾಗ ಮತ್ತು ಎಲ್ಲಿ ಪ್ರಸಾರವಾಯಿತು ?’ ಎಂಬುದು ದೃಢಪಟ್ಟಿಲ್ಲ. ಈ ಸಂದೇಶದಲ್ಲಿ ಮಸೂದ್ ಅಜಹರ್ ತನ್ನ ಸಂಘಟನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಆತ್ಮಾಹುತಿ ದಾಳಿಕೋರರಿದ್ದಾರೆ ಎಂದು ಪ್ರತಿಪಾದಿಸುತ್ತಿದ್ದಾನೆ. ಮಸೂದ್ ಅಜಹರ್ ಪ್ರಕಾರ, ಈ ಭಯೋತ್ಪಾದಕರು ಯಾವಾಗಲೂ ದಾಳಿಗೆ ಸಿದ್ಧರಾಗಿರುತ್ತಾರೆ. ಈ ಜನರು ೧-೨ ಅಥವಾ ೧೦೦ ಅಲ್ಲ, ಸಾವಿರವೂ ಅಲ್ಲ, ಅವರ ಒಟ್ಟು ಸಂಖ್ಯೆಯನ್ನು ಹೇಳಿದರೆ ಜಗತ್ತಿನಾದ್ಯಂತ ಮಾಧ್ಯಮಗಳಲ್ಲಿ ತಲ್ಲಣ ಮೂಡುತ್ತದೆ. ನಮ್ಮ ಜನರು ಯಾವುದೇ ಭೌತಿಕ ಬೇಡಿಕೆಗಳನ್ನು ಇಡುವುದಿಲ್ಲ. ಅವರಿಗೆ ವಾಹನ, ಹಣ, ಮಕ್ಕಳ ಶಿಕ್ಷಣ, ಸಾಲ ತೀರಿಸುವುದು, ದೂರದರ್ಶನ ಅಥವಾ ಯುರೋಪ್, ಅಮೆರಿಕಾದ ವೀಸಾ (ಒಂದು ದೇಶವನ್ನು ಪ್ರವೇಶಿಸಲು ಅಥವಾ ಅಲ್ಲಿಂದ ಪ್ರಯಾಣಿಸಲು ನೀಡುವ ಅನುಮತಿ ಪತ್ರ) ಇವುಗಳಲ್ಲಿ ಯಾವುದೂ ಬೇಡ. ಅವರಿಗೆ ಕೇವಲ ಹುತಾತ್ಮರಾಗುವುದು ಮಾತ್ರ ಬೇಕಿದೆ ಎಂದು ಅವನು ಹೇಳಿದ್ದಾನೆ.
ಭೀತಿಯಿಂದ ಮಸೂದ್ ಸಂದೇಶ ನೀಡುತ್ತಿದ್ದಾನೆ ! – ರಕ್ಷಣಾ ತಜ್ಞರು
ರಕ್ಷಣಾ ತಜ್ಞರ ಪ್ರಕಾರ, ಈ ಸಂದೇಶವು ಮಸೂದ್ ಅಜಹರ್ ನ ಭಯವನ್ನು ತೋರಿಸುತ್ತದೆ. ‘ಆಪರೇಷನ್ ಸಿಂದೂರ’ ಅಡಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಜೈಶ್-ಎ-ಮೊಹಮ್ಮದ್ ನ ಅನೇಕ ಅಡಗುತಾಣಗಳು ನಾಶವಾಗಿದ್ದವು. ಈ ಕಾರ್ಯಾಚರಣೆಯಲ್ಲಿ ಮಸೂದ್ ಅಜಹರ್ ಕುಟುಂಬದ ಸುಮಾರು ೧೦ ಸದಸ್ಯರು ಹತರಾಗಿದ್ದಾರೆ ಎಂಬ ಸುದ್ದಿಗಳೂ ಹೊರಬಂದಿದ್ದವು. ಬಹವಲ್ಪುರದಲ್ಲಿನ ಅವನ ಅಡಗುತಾಣದ ಮೇಲೆ ಭೀಕರ ಸ್ಫೋಟ ನಡೆದಿತ್ತು ಮತ್ತು ಅವನು ಕೂದಲೆಳೆ ಅಂತರದಲ್ಲಿ ಬದುಕುಳಿದಿದ್ದನು. ಅದಾದ ನಂತರ ಅವನು ಸಾರ್ವಜನಿಕ ಜೀವನದಿಂದ ನಾಪತ್ತೆಯಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಅವನು ಯಾವುದೋ ರಹಸ್ಯ ಸ್ಥಳದಲ್ಲಿ ಕುಳಿತು ಇಂತಹ ಧ್ವನಿಸಂದೇಶಗಳನ್ನು ಪ್ರಸಾರ ಮಾಡುತ್ತಿರುತ್ತಾನೆ. ಇದರ ಹಿಂದಿನ ಉದ್ದೇಶ ಭಯವನ್ನು ಹರಡುವುದು, ತನ್ನ ಬೆಂಬಲಿಗರ ಮನೋಬಲವನ್ನು ಹೆಚ್ಚಿಸುವುದು ಮತ್ತು ತನ್ನ ದುರ್ಬಲ ಸ್ಥಿತಿಯನ್ನು ಮರೆಮಾಚುವುದೇ ಆಗಿದೆ ಎಂದು ನಂಬಲಾಗಿದೆ. ಭಾರತೀಯ ಭದ್ರತಾ ಸಂಸ್ಥೆಗಳು ಇಂತಹ ಹೇಳಿಕೆಗಳ ಮೇಲೆ ನಿರಂತರ ನಿಗಾ ಇಟ್ಟಿದ್ದು, ಯಾವುದೇ ಸಂಭವನೀಯ ಅಪಾಯವನ್ನು ಎದುರಿಸಲು ಸನ್ನದ್ಧವಾಗಿವೆ.
ಸಂಪಾದಕೀಯ ನಿಲುವುಮಸೂದನ ಬಳಿ ಈಗ ಭಯೋತ್ಪಾದಕರೇ ಉಳಿದಿಲ್ಲ ಎಂಬುದು ಅವನ ಈ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ ! |
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !