ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಅಮೂಲ್ಯ ವಿಚಾರಸಂಪತ್ತು

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ

೧. ಪರಿಪೂರ್ಣ ಸೇವೆಯ ತಳಮಳ ಹೇಗಿರಬೇಕು ?

೧ ಅ. ಪ್ರತಿಯೊಂದು ಕೃತಿಯನ್ನು ಸಾಧನೆಯ ಸ್ತರದಲ್ಲಿ ಮಾಡಿದರೆ ಮಾತ್ರ ಅದು ನಿಜವಾದ ಅರ್ಥದಲ್ಲಿ ಸೇವೆ ಆಗುತ್ತದೆ ! :  ‘ಸಾಧಕರು ಯಾವುದೇ ಕೃತಿಯನ್ನು ಮಾಡಿದರೆ ಮತ್ತು ಇಷ್ಟು ಗಂಟೆ ಸೇವೆ ಆಯಿತು, ಅಂದರೆ ಅದು ಸೇವೆ ಆಗುವುದಿಲ್ಲ. ಅದು ಕೆಲಸವಾಗುತ್ತದೆ. ಆಗ ಸಾಧಕನು ‘ನಾನು ಸಾಧನೆ ಮಾಡಿದೆ ಅಥವಾ ಸೇವೆ ಮಾಡಿದೆ?, ಎಂದು ಹೇಳಲು ಸಾಧ್ಯವಿಲ್ಲ. ಸೇವೆ ಮಾಡುವ ತಳಮಳವೇ ಇರಬೇಕು. ‘ಯಾವುದೇ ಕೃತಿಯನ್ನು ಮಾಡಿದ ಮೇಲೆ ಆ ಮಾಧ್ಯಮದಿಂದ ನನ್ನ ಸಾಧನೆ ಆಯಿತೇ ?’ ಇದರ ಕುರಿತು ಸತತವಾಗಿ ಚಿಂತನೆ ಮಾಡಬೇಕು. ಇಂತಹ ಚಿಂತನೆ ಮಾಡುವ ಅಭ್ಯಾಸವನ್ನು ತನಗೆ ತಾನೇ ಮಾಡಿಕೊಳ್ಳಬೇಕು. ಪ್ರತಿಯೊಂದು ಕೃತಿಯನ್ನು ಸಾಧನೆಯ ಸ್ತರದಲ್ಲಿ ಮಾಡಿದರೆ, ಆಗಲೇ ಅದು ನಿಜವಾದ ಅರ್ಥದಲ್ಲಿ ಸೇವೆ ಆಯಿತು. ‘ಇಂದು ನನ್ನ ಎಷ್ಟು ಶೇಕಡಾ ಸೇವೆ ಸಾಧನೆಯ ಸ್ತರದಲ್ಲಾಯಿತು ?’ ಎಂದು ವಿಚಾರ ಮಾಡಬೇಕು. ಪರಿಪೂರ್ಣ ಸೇವೆಗೆ ಶೇ. ೧೦೦ ರಷ್ಟು ಅಂಕಗಳೆಂದು ತಿಳಿದರೆ, ಸೇವೆಯ ವರದಿಯನ್ನು ತೆಗೆದುಕೊಳ್ಳುವಾಗ ಮನಸ್ಸಿಗೆ ಕೇಳಬೇಕು, ‘ನಿನಗೆ ಸೇವೆ ಮಾಡುವಾಗ ಎಷ್ಟು ಶೇಕಡಾ ಅಂಕಗಳು ದೊರೆತವು ?’

ಮನಸ್ಸಿಗೆ ಅಂಕಗಳನ್ನು ನೀಡುವಾಗ ಮುಂದಿನ ಎಲ್ಲ ವಿಷಯಗಳನ್ನು ವಿಚಾರಕ್ಕೆ ತೆಗೆದುಕೊಳ್ಳಬೇಕು.

೧. ನಾನು ಸೇವೆ ಮಾಡುವಾಗ ಪ್ರಾರ್ಥನೆ ಮಾಡಿದ್ದೇನೆಯೇ ?

೨. ನನ್ನ ಗಮನವು ಸೇವೆಯಲ್ಲಿತ್ತೇ ?

೩. ನಾನು ಸೇವೆಯನ್ನು ಆನಂದದಿಂದ ಮಾಡಿದ್ದೇನೆಯೇ ?

೪. ನಾನು ಇಂದು ಮಾಡಿದ ಸೇವೆಯಿಂದ ಏನಾದರೂ ಕಲಿತಿದ್ದೇನೆಯೇ ?

೫. ನಾನು ‘ಸೇವೆಯನ್ನು ಮಾಡಿದ ನಂತರ ಪುನಃ ಆ ಸೇವೆಯನ್ನು ಯಾರಿಗೂ ಮತ್ತೊಮ್ಮೆ ಮಾಡಬೇಕಾದ ಪ್ರಮೇಯ ಬರಬಾರದು?, ಹೀಗೆ ಆಯತೆಂದರೇ ಆ ಸೇವೆ ಪರಿಪೂರ್ಣ ಮಾಡಿದ್ದೇನೆ ಎಂದು ಅರ್ಥವಾಗುತ್ತದೆ.

೬. ‘ನನ್ನಿಂದ ಸೇವೆ ಸ್ವೇಚ್ಛೆಯಿಂದ ಆಗುವುದಿಲ್ಲವಲ್ಲ ?’, ಎಂಬುದನ್ನೂ ನೋಡಬೇಕು.

೧ ಆ. ದೇವರನ್ನು ಸ್ಮರಿಸಿ ಮಾಡಿದ ಪ್ರತಿಯೊಂದು ಉತ್ತಮ ಕೃತಿ, ಅಂದರೆ ಪರಿಪೂರ್ಣ ಸೇವೆ ಆಗಿರುತ್ತದೆ ಮತ್ತು ಪರಿಪೂರ್ಣ ಸೇವೆಯಿಂದಲೇ ಸಾಧನೆಯ ಹೆಚ್ಚು ಫಲಶೃತಿ ದೊರಕುತ್ತದೆ ! : ಸಾಧಕರು ಸೇವೆಯನ್ನು ಮಾಡಿ ಜವಾಬ್ದಾರ ಸಾಧಕರ ಮನಸ್ಸನ್ನು ಗೆಲ್ಲಬೇಕು. ಜವಾಬ್ದಾರ ಸಾಧಕರು ಪುನಃ ಸೇವೆಯನ್ನು ಕೊಡುವಾಗ, ”ಅರೆ ಈ ಸಾಧಕನು ತುಂಬಾ ಚೆನ್ನಾಗಿ ಸೇವೆ ಮಾಡುತ್ತಾನೆ. ಅವನು ಮಾಡಿದ ಸೇವೆಯನ್ನು ನನಗೆ ಮತ್ತೇ ನೋಡಬೇಕಾಗುವುದಿಲ್ಲ?’ ಎಂದು ಹೇಳಬೇಕು. ಈ ರೀತಿ ಜವಾಬ್ದಾರ ಸಾಧಕರು ನಮಗೆ ಶೇ. ೧00 ರಷ್ಟು ಅಂಕಗಳನ್ನು ನೀಡಿ ಸೇವಾರೂಪಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತೆ ಮಾಡಬೇಕು. ಸೇವೆಯಲ್ಲಿ ಫಲಶೃತಿ ಹೆಚ್ಚಾಗಲು ವಿವಿಧ ಸೇವೆಯ ಧ್ಯೇಯವನ್ನು ಹಿಂದಿನ ದಿನವೇ ಇಟ್ಟುಕೊಳ್ಳಬೇಕು ಮತ್ತು ಆ ರೀತಿ ಪ್ರಯತ್ನಿಸಬೇಕು. ಸೇವೆಯು ಪರಿಪೂರ್ಣವಾಗಬೇಕು. ದೇವರನ್ನು ಸ್ಮರಿಸಿ ಮಾಡಿದ ಪ್ರತಿಯೊಂದು ಕೃತಿ, ಅಂದರೆ ಪರಿಪೂರ್ಣ ಸೇವೆ ಆಗಿದೆ. ಪರಿಪೂರ್ಣ ಸೇವೆಯಿಂದಲೇ ಸಾಧನೆಯ ಹೆಚ್ಚು ಫಲಶೃತಿ ದೊರಕುತ್ತದೆ.

೨. ಅಧ್ಯಾತ್ಮದ ನಡೆದಾಡುವ ಶಾಲೆ !

‘ನಮ್ಮೊಂದಿಗೆ ಇರುವ ಸಹಸಾಧಕರೆಂದರೆ ಅವರಿಂದ ಕಲಿಯಲು ದೇವರು ನೀಡಿದ ಒಂದು ಅವಕಾಶವಾಗಿದೆ?, ಎಂದು ತಿಳಿಯಬೇಕು. ಅನೇಕ ಬಾರಿ ಆ ಸಾಧಕನೇ ನಮಗೆ ಗುರು ಆಗುತ್ತಾನೆ. ಅವನಿಂದ ಕಲಿಯುವಂತಹ ಅನೇಕ ಗುಣಗಳನ್ನು ದೇವರು ನಮ್ಮ ಗಮನಕ್ಕೆ ತಂದು ಕೊಡುತ್ತಾನೆ. ನಾವು ನಮ್ಮ ಸಹಸಾಧಕರ ಕಡೆಗೆ ಅದೇ ಭಾವದಿಂದ ನೋಡಬೇಕು. ದೇವರು ಒಬ್ಬ ಸಾಧಕನನ್ನು  ನಮ್ಮ ಸಂಪರ್ಕಕ್ಕೆ ಕಳುಹಿಸಿದ್ದಾಗ, ಪ್ರಸಂಗ ಬಂದಾಗ ಅವನ ಸಾಧನೆಯ ಸಂಪೂರ್ಣ ಜವಾಬ್ದಾರಿಯನ್ನೂ ನಮಗೆ ತೆಗೆದುಕೊಳ್ಳಲು ಸಾಧ್ಯವಾಗಬೇಕು. ‘ನಾವೇ ಒಬ್ಬರನ್ನೊಬ್ಬರಲ್ಲಿ ಜವಾಬ್ದಾರಿ ಸಾಧಕರಾಗಿದ್ದೇವೆ’, ಎಂಬ ನಮ್ಮ ಭಾವವಿರಬೇಕು, ಆಗಲೇ ನಾವು ಎಲ್ಲಿ ಹೋದರೂ, ಅದೊಂದು ಅಧ್ಯಾತ್ಮದ ನಡೆದಾಡುವ ಶಾಲೆಯೇ ಆಗುತ್ತದೆ. ಹೀಗೆ ಆದರೆ, ಎಲ್ಲಿದ್ದರೂ ಪ್ರಗತಿ ಆಗುತ್ತದೆ.

೩. ಸಾಧಕರು, ಶಿಷ್ಯರು, ಸಂತರು, ಗುರುಗಳು ಮತ್ತು ಸದ್ಗುರುಗಳು ಇವರೆಲ್ಲರೂ ಮೋಕ್ಷಪ್ರಾಪ್ತಿಯ ಧ್ಯೇಯದಲ್ಲಿನ ನಮಗೆ ಕಲಿಸುವ ಹಂತಗಳಾಗಿದ್ದಾರೆ. ನಮ್ಮ ಸಾಧನಾಪ್ರವಾಸದಲ್ಲಿ ಅವರು ವಿವಿಧ ಹಂತಗಳಿಂದ ನಮ್ಮ ಸಂಪರ್ಕಕ್ಕೆ ಬರುತ್ತಾರೆ; ಆದರೆ ನಮ್ಮ ಮುಖ್ಯ ಧ್ಯೇಯ ಮಾತ್ರ ಈಶ್ವರಪ್ರಾಪ್ತಿಯೇ ಆಗಿದೆ, ಇದನ್ನು ಪ್ರತಿಯೊಬ್ಬರೂ ಗಮನದಲ್ಲಿಡಬೇಕು.’

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ