ಅಮೆರಿಕದ ವಾಣಿಜ್ಯ ಸಚಿವ ಹಾವರ್ಡ್ ಲುಟ್ನಿಕ್ ಅವರ ಹೇಳಿಕೆ

ವಾಷಿಂಗ್ಟನ್ (ಅಮೆರಿಕ) – ಭಾರತ-ಅಮೆರಿಕ ವ್ಯಾಪಾರ ಒಪ್ಪಂದವು ಯಾವುದೇ ಕಾರ್ಯತಂತ್ರದ ಭೇದಗಳಿಂದಾಗಲ್ಲ, ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಫೋನ್ ಮಾಡದ ಕಾರಣ ಸ್ಥಗಿತಗೊಂಡಿದೆ ಎಂದು ಅಮೆರಿಕದ ವಾಣಿಜ್ಯ ಸಚಿವ ಹೊವಾರ್ಡ್ ಲುಟ್ನಿಕ್ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದಾರೆ. ಇದರಿಂದಾಗಿ ಟ್ರಂಪ್ ಅವರ ಅಹಂಕಾರಕ್ಕೆ ದಕ್ಕೆಯಾಗಿದೆ ಎಂದು ಲುಟ್ನಿಕ್ ಹೇಳಿದರು.
So Howard Lutnick claims the India-U.S. trade deal stalled because Narendra Modi didn’t call Donald Trump.
Does Washington really believe India must flatter Trump to avoid arbitrary 50% tariffs?
India is a sovereign nation, not a vassal state.
Given Trump’s erratic,… pic.twitter.com/LzdorIcsdg
— Sanatan Prabhat (@SanatanPrabhat) January 9, 2026
ಲುಟ್ನಿಕ್ ಮುಂದೆ ಮಾತನಾಡಿ,
1. ಎರಡೂ ದೇಶಗಳ ನಡುವಿನ ವ್ಯಾಪಾರ ಒಪ್ಪಂದವು ಬಹುತೇಕ ಅಂತಿಮ ಹಂತದಲ್ಲಿತ್ತು. ಚರ್ಚೆಯನ್ನು ಪೂರ್ಣಗೊಳಿಸಲು ಭಾರತಕ್ಕೆ ‘ಮೂರು ವಾರಗಳ’ ಗಡುವನ್ನು ನೀಡಲಾಗಿತ್ತು. ಟ್ರಂಪ್ ಈ ಒಪ್ಪಂದವನ್ನು ಸ್ವತಃ ಅಂತಿಮಗೊಳಿಸಲು ಬಯಸಿದ್ದರು; ಆದರೆ ನರೇಂದ್ರ ಮೋದಿಯವರು ಅವರಿಗೆ ನೇರವಾಗಿ ಫೋನ್ ಮಾಡದ ಕಾರಣ ಒಪ್ಪಂದವು ಮುಂದೆ ಸಾಗಲಿಲ್ಲ.
2. ಇದರ ಪರಿಣಾಮವಾಗಿ ಅಮೆರಿಕ ಇಂಡೋನೇಷ್ಯಾ, ಫಿಲಿಪೈನ್ಸ್ ಮತ್ತು ವಿಯೆಟ್ನಾಂ ದೇಶಗಳೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಂಡಿತು. ಇದಕ್ಕೆ ವಿರುದ್ಧವಾಗಿ, ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಟ್ರಂಪ್‌ಗೆ ಫೋನ್ ಮಾಡಿದ ತಕ್ಷಣ ಅಮೆರಿಕ ಮತ್ತು ಬ್ರಿಟನ್ ನಡುವೆ ಒಪ್ಪಂದ ಏರ್ಪಟ್ಟಿತು.
3. ಭಾರತಕ್ಕಾಗಿ ಈ ಹಿಂದೆ ನಿರ್ಧರಿಸಲಾದ ಷರತ್ತುಗಳು ಇನ್ನು ಮುಂದೆ ಅನ್ವಯಿಸುವುದಿಲ್ಲ. ಭವಿಷ್ಯದಲ್ಲಿ ಒಂದು ವೇಳೆ ಎರಡೂ ದೇಶಗಳ ನಡುವೆ ಒಪ್ಪಂದ ನಡೆದರೂ ಸಹ, ಭಾರತವು ಹೊಸ ಮತ್ತು ಕಠಿಣ ಷರತ್ತುಗಳನ್ನು ಎದುರಿಸಬೇಕಾಗಬಹುದು.
ರಷ್ಯಾದಿಂದ ತೈಲ ಖರೀದಿಸಿದ ಕಾರಣಕ್ಕಾಗಿ ಅಮೆರಿಕ ಭಾರತದ ಮೇಲೆ ಒಟ್ಟು ಶೇಕಡಾ 50% ರಷ್ಟು ಸುಂಕವನ್ನು ಹೇರಿದೆ. ಭಾರತವು ಈ ನಿರ್ಧಾರ ತಪ್ಪೆಂದು ಹೇಳುತ್ತಾ ಸುಂಕವನ್ನು ತಕ್ಷಣವೇ ರದ್ದುಗೊಳಿಸುವಂತೆ ಒತ್ತಾಯಿಸಿದೆ. ಈ ವಿಷಯದ ಬಗ್ಗೆ ಎರಡೂ ದೇಶಗಳ ನಡುವೆ ಚರ್ಚೆಗಳು ನಡೆಯುತ್ತಿದ್ದರೂ, ವ್ಯಾಪಾರ ಒಪ್ಪಂದವು ಇಂದಿಗೂ ಬಾಕಿ ಉಳಿದಿದೆ.
ಸಂಪಾದಕೀಯ ನಿಲುವುಟ್ರಂಪ್ ತಮಗೆ ಅನಿಸಿದಾಗ ಭಾರತದ ಮೇಲೆ ಶೇ. 50% ರಷ್ಟು ಆಮದು ಸುಂಕ ಹೇರುತ್ತಾರೆ. ಅವರ ಮರ್ಜಿಯನ್ನು ಕಾಯ್ದುಕೊಳ್ಳಲು ಭಾರತ ಅವರನ್ನು ಓಲೈಸಬೇಕೆಂದು ಲುಟ್ನಿಕ್ ಅವರಿಗೆ ಏಕೆ ಅನಿಸುತ್ತಿದೆಯೇ? ಟ್ರಂಪ್ ಅವರ ವಿಚಿತ್ರ ಸ್ವಭಾವವನ್ನು ಗಮನದಲ್ಲಿಟ್ಟುಕೊಂಡು, ಈ ಒಪ್ಪಂದದ ವಿಷಯದಲ್ಲಿ ಭಾರತ ಬಹಳ ಜಾಣ್ಮೆಯಿಂದ ಹೆಜ್ಜೆ ಇಡುವ ಅವಶ್ಯಕತೆಯಿದೆ! |
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು