|

ನವದೆಹಲಿ – ದೆಹಲಿಯ ಹಳೆಯ ದೆಹಲಿ ಪ್ರದೇಶದ ಮುಸಲ್ಮಾನ ಬಹುಸಂಖ್ಯಾತ ತುರ್ಕಮನ್ ಗೇಟ್ ಸಮೀಪದ ಫೈಜ್-ಎ-ಇಲಾಹಿ ಮಸೀದಿ ಪರಿಸರದಲ್ಲಿ ಜನವರಿ ೬ರ ಮಧ್ಯರಾತ್ರಿ ಪುರಸಭೆಯು ಬುಲ್ಡೋಜರ್ ಮೂಲಕ ಕ್ರಮ ಕೈಗೊಂಡಿದೆ. ದೆಹಲಿ ಉಚ್ಚ ನ್ಯಾಯಾಲಯದ ಆದೇಶದಂತೆ ಈ ಸಂಪೂರ್ಣ ಪ್ರದೇಶದಲ್ಲಿನ ಅಕ್ರಮ ನಿರ್ಮಾಣಗಳನ್ನು ಧ್ವಂಸಗೊಳಿಸಲಾಯಿತು. ಈ ಪ್ರದೇಶವು ಪ್ರಸಿದ್ಧ ರಾಮಲೀಲಾ ಮೈದಾನದ ಹತ್ತಿರದಲ್ಲಿದೆ. ಈ ಕಾರ್ಯಾಚರಣೆಯ ಸಮಯದಲ್ಲಿ ಮತಾಂಧ ಮುಸಲ್ಮಾನರು ಪಾಲಿಕೆ ಸಿಬ್ಬಂದಿ ಮತ್ತು ದೆಹಲಿ ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದರು. ಇದರಲ್ಲಿ ೫ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಮೊದಲು ಲಾಠಿ ಪ್ರಹಾರ ನಡೆಸಿದರು ಮತ್ತು ನಂತರ ಅಶ್ರುವಾಯು ಪ್ರಯೋಗಿಸಿದರು.
Stone-Pelters Challenge the Indian State
MCD acted against encroachments near Faiz-e-Elahi Masjid, Turkman Gate- and was met with stone-pelting.
5 police injured, 10 detained.
Reminder: Red Fort suicide bomber Umar Nabi had earlier visited this mosque.
🎥 Courtesy: @NewsSetu1 pic.twitter.com/Ns3pFO7ZVy
— Sanatan Prabhat (@SanatanPrabhat) January 7, 2026
ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆದಿಲ್ ಕಾಸಿಫ್, ಮಹಮ್ಮದ್ ಕೈಫ್, ಮಹಮ್ಮದ್ ಆರಿಬ್, ಉಜೈಫ್, ಅಜೀಮ್ ಮತ್ತು ಇರ್ಫಾನ್ ಎಂಬುವವರನ್ನು ಬಂಧಿಸಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ‘ಮಸೀದಿಯ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂಬ ವದಂತಿ ಹಬ್ಬಿಸಿದವರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಅದ್ನಾನ ಮತ್ತು ಸಮೀರ ಎಂಬ ಇಬ್ಬರು ವ್ಯಕ್ತಿಗಳು ವಿಡಿಯೋ ಮತ್ತು ಧ್ವನಿಮುದ್ರಣಗಳನ್ನು ಪ್ರಸಾರ ಮಾಡಿರುವುದು ತಿಳಿದುಬಂದಿದೆ. ಇವರೆಲ್ಲರ ವಿರುದ್ಧ ಕಾನೂನು ಕ್ರಮ ಜರುಗಿಸುವ ಪ್ರಕ್ರಿಯೆ ನಡೆಯುತ್ತಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಜನವರಿ ೭ರ ಮಧ್ಯಾಹ್ನ ಪೊಲೀಸರು ಧ್ವಜ ಮೆರವಣಿಗೆಯನ್ನು ನಡೆಸಿದರು.
೧. ಪುರಸಭೆಯು ಮಧ್ಯರಾತ್ರಿ ೩೦ ಬುಲ್ಡೋಜರ್‌ಗಳ ಸಹಾಯದಿಂದ ಈ ಅತಿಕ್ರಮಣವನ್ನು ತೆರವುಗೊಳಿಸಿದೆ. ಸುಮಾರು ೨೦೦ ಟ್ರಕ್‌ಗಳ ಮೂಲಕ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ಪೊಲೀಸರು ಈ ಭಾಗದ ಎಲ್ಲಾ ರಸ್ತೆಗಳಿಗೆ ಬ್ಯಾರಿಕೇಡ್ ಅಳವಡಿಸಿ ಸಂಚಾರ ಸ್ಥಗಿತಗೊಳಿಸಿದ್ದಾರೆ.
೨. ಜನವರಿ ೬ರಂದು ದೆಹಲಿ ಉಚ್ಚ ನ್ಯಾಯಾಲಯವು ಇಲ್ಲಿನ ಮಸೀದಿ ಮತ್ತು ಸ್ಮಶಾನಕ್ಕೆ ಹೊಂದಿಕೊಂಡಿರುವ ಭೂಮಿಯ ಮೇಲಿನ ಅತಿಕ್ರಮಣವನ್ನು ತೆರವುಗೊಳಿಸಲು ನೋಟಿಸ್ ನೀಡಿತ್ತು. ಇದು ‘ವಕ್ಫ್’ ಸ್ವತ್ತು ಎಂದು ಅರ್ಜಿದಾರ ಸಮಿತಿಯು ವಾದಿಸಿತ್ತು.
೩. ಆದರೆ, ಈ ಹೆಚ್ಚುವರಿ ಭೂಮಿಯ ಮೇಲೆ ಮಾಲೀಕತ್ವ ಅಥವಾ ಕಾನೂನುಬದ್ಧ ನಿಯಂತ್ರಣ ಹೊಂದಿರುವ ಯಾವುದೇ ದಾಖಲೆಗಳನ್ನು ಸಲ್ಲಿಸಿಲ್ಲ ಎಂದು ಪಾಲಿಕೆಯು ಸ್ಪಷ್ಟಪಡಿಸಿದೆ. ಇದೇ ಅಂಶವನ್ನು ನ್ಯಾಯಾಲಯದಲ್ಲಿ ಸವಾಲು ಮಾಡಲಾಗಿತ್ತು. ಅಂತಿಮವಾಗಿ ಅತಿಕ್ರಮಣ ತೆರವುಗೊಳಿಸಲು ನಮಗೆ ಯಾವುದೇ ಆಕ್ಷೇಪವಿಲ್ಲ ಎಂದು ಮುಸ್ಲಿಂ ಪಕ್ಷದ ಸಮಿತಿಯು ನ್ಯಾಯಾಲಯದಲ್ಲಿ ತಿಳಿಸಿದ ನಂತರವೇ ಈ ಕ್ರಮ ಕೈಗೊಳ್ಳಲಾಗಿದೆ.
ಅರ್ಜಿದಾರ ಪ್ರೀತ್ ಸರೋಹಿ ಅವರಿಂದ ಭೀತಿ ವ್ಯಕ್ತ
ಪೊಲೀಸರ ಮೇಲೆ ದಾಳಿ ಮಾಡುವ ಗುಂಪು ನನ್ನನ್ನು ಕೊಲ್ಲಬಹುದು!ಯಾವ ಅರ್ಜಿಯ ಆಧಾರದ ಮೇಲೆ ದೆಹಲಿ ಉಚ್ಚ ನ್ಯಾಯಾಲಯವು ತುರ್ಕಮನ್ ಗೇಟ್ ಬಳಿಯ ಅತಿಕ್ರಮಣವನ್ನು ತೆರವುಗೊಳಿಸಲು ಆದೇಶ ನೀಡಿತ್ತೋ, ಆ ಅರ್ಜಿಯನ್ನು ಪ್ರೀತ್ ಸರೋಹಿ ಸಲ್ಲಿಸಿದ್ದರು. ನ್ಯಾಯಾಲಯದ ಆದೇಶದ ನಂತರ ಕ್ರಮ ಕೈಗೊಳ್ಳುತ್ತಿದ್ದ ಪೊಲೀಸರ ಮೇಲೆ ಮುಸ್ಲಿಂ ಮೂಲಭೂತವಾದಿಗಳು ಕಲ್ಲು ತೂರಾಟ ನಡೆಸಿದರು. ಇದರ ಬಗ್ಗೆ ಪ್ರೀತ್ ಸರೋಹಿ ಅವರು ‘ಎಕ್ಸ್’ (ಟ್ವಿಟರ್) ನಲ್ಲಿ ಹೀಗೆ ಬರೆದುಕೊಂಡಿದ್ದಾರೆ: “ಹನುಮಾನ್ ಜೀ, ನನ್ನನ್ನು ರಕ್ಷಿಸು. ಪೊಲೀಸರ ಮೇಲೆಯೇ ದಾಳಿ ಮಾಡುವವರು ನನ್ನನ್ನು ಬಿಡುತ್ತಾರೆಯೇ? ಈ ಗುಂಪು ನನ್ನನ್ನು ಕೊಂದು ಹಾಕುತ್ತದೆ ಎಂದು ನನಗನ್ನಿಸುತ್ತಿದೆ.” |
ಸಂಪಾದಕೀಯ ನಿಲುವು
|
ಮಹಿಳಾ ಸದಸ್ಯರ ಸಮಿತಿಯ ಮೂಲಕ ಲೈಂಗಿಕ ಶೋಷಣೆ ವಿರೋಧಿ ಕಾಯ್ದೆಗಳ ಮರುಪರಿಶೀಲನೆ ನಡೆಸಬೇಕು!
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!