ಭಾರತವು ಶಕ್ತಿ ಪ್ರದರ್ಶನ ಮಾಡದಿದ್ದರೆ, ಬಾಂಗ್ಲಾದೇಶದಲ್ಲಿ ಹಿಂದೂಗಳು ಉಳಿಯಲಾರರು !

ಕಳೆದ ಕೆಲವು ದಿನಗಳಲ್ಲಿ ಬಾಂಗ್ಲಾದೇಶದಲ್ಲಿ ಏನಾಯಿತು ಎಂಬುದು ನಮಗೆ ತಿಳಿದಿದೆ. ಇದು ಕೇವಲ ಭಾರತೀಯ ರಾಯಭಾರ ಕಚೇರಿಯ ಮೇಲೆ ನಡೆದ ಕಲ್ಲು ತೂರಾಟದ ವಿಷಯ ಮಾತ್ರವಲ್ಲ. ಒಬ್ಬ ಹಿಂದೂ ವ್ಯಕ್ತಿಯು ಪ್ರವಾದಿ ಮೊಹಮ್ಮದ್‌ ಅವರ ಬಗ್ಗೆ ಏನೋ ಮಾತನಾಡಿದ್ದಾನೆ ಎಂದು ಆರೋಪಿಸಿ ಬಾಂಗ್ಲಾದೇಶದ ಪೊಲೀಸರು ಆತನನ್ನು ಬಂಧಿಸುತ್ತಾರೆ. ದೊಡ್ಡ ಜನಸಮೂಹ ಅಲ್ಲಿ ಜಮಾಯಿಸುತ್ತದೆ. ‘ಇವನು ಇಸ್ಲಾಂನ ಅಪರಾಧಿ, ಇವನನ್ನು ನಮ್ಮ ವಶಕ್ಕೆ ನೀಡಿ’ ಎಂದು ಕೂಗುತ್ತಾರೆ. ಬಾಂಗ್ಲಾದೇಶದ ಪೊಲೀಸರು ಅತ್ಯಂತ ಸುಲಭವಾಗಿ ಆ ಹಿಂದೂ ವ್ಯಕ್ತಿಯನ್ನು ಹಿಂಸಾತ್ಮಕ ಜಿಹಾದಿ ಗುಂಪಿನ ವಶಕ್ಕೆ ಒಪ್ಪಿಸುತ್ತಾರೆ. ಆ ಗುಂಪು ಆ ವ್ಯಕ್ತಿಯನ್ನು ಅಮಾನವೀಯವಾಗಿ ಥಳಿಸಿ, ಆತ ಅರೆಜೀವವಾದಾಗ ಮರವೊಂದಕ್ಕೆ ನೇತುಹಾಕಿ ಜೀವಂತವಾಗಿ ಸುಟ್ಟು ಹಾಕುತ್ತದೆ.

ಭಾರತವು ರಾಜತಾಂತ್ರಿಕತೆಯ ಜೊತೆ ಶಕ್ತಿ ಪ್ರದರ್ಶನ ತೋರುವ ಅಗತ್ಯವಿದೆ!

ಇದು ಸನಾತನಿ ಹಿಂದೂಗಳ ಸಹನೆಯ ಮಿತಿಯಲ್ಲವೇ ? ಇದು ‘ಜಮಾತ್-ಎ-ಇಸ್ಲಾಮಿ’ಯ ಪಾಕಿಸ್ತಾನಿ ಅಥವಾ ಅಫ್ಘಾನಿ ‘ಫಾರ್ಮುಲಾ’ (ಪದ್ಧತಿ) ಅಲ್ಲವೇ ? ಬಂಧನವಿಲ್ಲ,  ಕಾನೂನುಕ್ರಮವಿಲ್ಲ, ನೇರವಾಗಿ ರಸ್ತೆಯಲ್ಲೇ ಮರಣದಂಡನೆ. ಯಾವುದೇ ವಿಚಾರಣೆಯೂ ಇಲ್ಲ. ಭವಿಷ್ಯದಲ್ಲಿ ನಡೆಯಲಿರುವ ಇಂತಹ ಘಟನೆಗಳಿಗೆ ಇದೊಂದು ಪರೀಕ್ಷೆಯಲ್ಲವೇ ? ಭಾರತ ಏನು ಮಾಡುತ್ತದೆ ಎಂದು ಅವರು ನೋಡುತ್ತಿದ್ದಾರೆ !

     ಈಗ ಸಮಯ ಬಂದಿದೆ. ಪ್ರತಿಯೊಂದು ವಿಷಯವನ್ನು ರಾಜತಾಂತ್ರಿಕತೆಯಿಂದಲೇ ಪರಿಹರಿಸಲು ಸಾಧ್ಯವಿಲ್ಲ. ಶಕ್ತಿ ಪ್ರದರ್ಶನ ಬೇಕೇ ಬೇಕು. ಮೂರ್ಖ ಭಾರತೀಯ ‘ಸೆಕ್ಯುಲರ್‌’ (ಜಾತ್ಯತೀತ) ಹಿಂದೂಗಳು ಇನ್ನೂ ಪಕ್ಷ ರಾಜಕಾರಣದಲ್ಲಿ ಸಿಲುಕಿಕೊಂಡಿದ್ದಾರೆ. ಇಸ್ರೇಲ್‌ ಗಾಜಾಪಟ್ಟಿಯಲ್ಲಿ ಸಿಡಿದೆದ್ದಾಗ ಭಯೋತ್ಪಾದಕರು ಕತಾರ್‌, ಈಜಿಪ್ಪ್ಟ್ಪ್, ಇರಾಕ್‌ ಮತ್ತು ಲೆಬನಾನ್‌ಗೆ ಓಡಿ ಹೋದರು. ಬಾಂಗ್ಲಾದೇಶದವರೂ ಹೀಗೆಯೇ ಇಸ್ಲಾಮಿಕ್‌ ರಾಷ್ಟ್ರಗಳಿಗೆ ಹೋಗಬಹುದು; ಆದರೆ ಹಿಂದೂಗಳು ಎಲ್ಲಿಗೆ ಹೋಗುವುದು ? ಹಿಂದೂಗಳಿಗೆ ಆಶ್ರಯ ನೀಡುವ ಒಂದಾದರೂ ದೇಶವಿದೆಯೇ ? ೧೯೯೮ ರಲ್ಲಿ ಭಾರತವು ಪೋಖ್ರಾನ್‌ನಲ್ಲಿ ಅಣು ಪರೀಕ್ಷೆ ನಡೆಸಿದಾಗ ಅಮೆರಿಕ ಮತ್ತು ವಿಶ್ವಸಂಸ್ಥೆ ನಿರ್ಬಂಧಗಳನ್ನು ಹೇರಿದ್ದವು ಅಲ್ಲವೇ ? ಆದರೆ ಅಂದಿನ ಭಾಜಪ ಸರಕಾರದ ಪ್ರಧಾನಿ ವಾಜಪೇಯಿ ಅವರು ಅದನ್ನು ಧೈರ್ಯದಿಂದ ಎದುರಿಸಿ, ಅಮೆರಿಕವು ಆ ನಿರ್ಬಂಧಗಳನ್ನು ಹಿಂತೆಗೆದುಕೊಳ್ಳುವಂತೆ ಮಾಡಿದ್ದನ್ನು ನೆನಪಿಸಿಕೊಳ್ಳಿ.

ಬಾಂಗ್ಲಾದೇಶದಲ್ಲಿ ಹಿಂದೂಗಳು ಉಳಿಯಬೇಕಾದರೆ ಇದನ್ನು ಮಾಡಲೇಬೇಕು !

ಯಹೂದಿಗಳನ್ನು ಕೊಂದಿದ್ದಕ್ಕಾಗಿ ಇಸ್ರೇಲ್‌ ಗಾಜಾಪಟ್ಟಿಯನ್ನು ನಾಶಮಾಡಬಲ್ಲದು. ಕ್ರಿಶ್ಚಿಯನ್‌ ಅಮೆರಿಕದಲ್ಲಿ ಯಾರನ್ನಾದರೂ ಇಸ್ಲಾಮಿಕ್‌ ಭಯೋತ್ಪಾದಕರು ಕೊಂದರೆ, ಅಮೆರಿಕವು ಲೆಬನಾನ್‌ ಮೇಲೆ ೧೦೦ ಕ್ಷಿಪಣಿಗಳಿಂದ ದಾಳಿ ಮಾಡಬಲ್ಲದು, ಹಾಗಾದರೆ ಭಾರತವು ಬಾಂಗ್ಲಾದೇಶದ ಮೇಲೆ ಏಕೆ ದಾಳಿ ಮಾಡಬಾರದು ? ಭಾರತೀಯ ಶಕ್ತಿಯ ಭಯ ಅವರಿಗೆ ಬೇಡವೇ ? ಅಂತಾರಾಷ್ಟ್ರೀಯ ಅಭಿಪ್ರಾಯ ಅಥವಾ ವಿರೋಧದ ಬಗ್ಗೆ ಯೋಚಿಸಬಾರದು. ಇದು ಭಾರತದ ಪ್ರಶ್ನೆಯಾಗಿದೆ. ಇದೇ ಭಾರತವು ೬ ಸಾವಿರ ಸೈನಿಕರ ಬಲಿದಾನ ನೀಡಿ ಬಾಂಗ್ಲಾದೇಶವನ್ನು ನಿರ್ಮಿಸಿತು. ಆದ್ದರಿಂದ ಬಾಂಗ್ಲಾದೇಶವನ್ನು ದಂಡಿಸುವ ಪೂರ್ಣ ಅಧಿಕಾರ ಭಾರತಕ್ಕಿದೆ. ಬಾಂಗ್ಲಾದೇಶವನ್ನು ಬಗ್ಗುಬಡಿಯುವ ಸಮಯ ಬಂದಿದೆ. ಇಂದು ಭಾರತವು ೧೯೭೧ ಮತ್ತು ೧೯೯೯ ಕ್ಕಿಂತ ೫೦ ಪಟ್ಟು ಹೆಚ್ಚು ಶಕ್ತಿಶಾಲಿಯಾಗಿದೆ. ಇಂತಹ ಸಂದರ್ಭದಲ್ಲಿಯೂ ಕೆಲಸಕ್ಕೆ ಬರದಿದ್ದರೆ ‘ತೇಜಸ್‌’ ಮತ್ತು ‘ರಫೇಲ್‌’ ಯುದ್ಧ ವಿಮಾನಗಳು, ‘ಪಿನಾಕಾ’ ಯುದ್ಧ ಹೆಲಿಕಾಪ್ಟರ್‌, ‘ಆಕಾಶ’ ಮತ್ತು ‘ಎಸ್‌-೪೦೦’ ಕ್ಷಿಪಣಿ ರಕ್ಷಣಾ ವ್ಯವಸ್ಥೆ; ‘ಆಕಾಶ’, ‘ಪೃಥ್ವಿ’ ಮತ್ತು ‘ಬ್ರಹ್ಮೋಸ್‌’ ಕ್ಷಿಪಣಿಗಳು ಯಾವುದಕ್ಕೆ ಬೇಕು ?

ಬಾಂಗ್ಲಾದೇಶವನ್ನು ಹತ್ತಿಕ್ಕುವುದು, ಅಲ್ಲಿ ದೊಡ್ಡ ಹಿಂದೂ ಭೂಮಿಯನ್ನು ಸಿದ್ಧಪಡಿಸುವುದು ಮತ್ತು ಬಾಂಗ್ಲಾದೇಶದ ಹಿಂದೂಗಳನ್ನು ಅಲ್ಲಿಗೆ ಸ್ಥಳಾಂತರಿಸುವುದನ್ನು ಹೊರತುಪಡಿಸಿ ಬೇರೆ ದಾರಿ ಕಾಣುತ್ತಿಲ್ಲ. ಇಂದು ಶಕ್ತಿ ಪ್ರದರ್ಶನ ಮಾಡದಿದ್ದರೆ, ಬಾಂಗ್ಲಾದೇಶದಲ್ಲಿ ಹಿಂದೂಗಳು ಉಳಿಯುವುದಿಲ್ಲ. ಅಷ್ಟೇ ಅಲ್ಲ, ಭವಿಷ್ಯದಲ್ಲಿ ಪಾಕಿಸ್ತಾನದಂತೆಯೇ ಮತ್ತೊಂದು ಶತ್ರು ಭೂಮಿಯನ್ನು ನಾವು ಪೋಷಿಸಿದಂತಾಗುತ್ತದೆ.

– ಸಂಜಯ ವೈದ್ಯ, ಜಳಗಾವ, ಮಹಾರಾಷ್ಟ್ರ (21.12.2025)